Karnataka Times
Trending Stories, Viral News, Gossips & Everything in Kannada

Best Mileage Cars: CNG ಗಿಂತ ಹೆಚ್ಚು ಮೈಲೇಜ್ ಕೊಡುತ್ತಿವೆ ಈ 5 ಕಾರುಗಳು! 28Km ಫಿಕ್ಸ್

advertisement

ಅಧಿಕ ಮೈಲೇಜ್ ನೀಡುವ ಜೊತೆಗೆ ಇಂಧನ ದಕ್ಷತೆ ಹೊಂದಿರುವ ಒಂದೊಳ್ಳೆ ಬಜೆಟ್ ಫ್ರೆಂಡ್ಲಿ ಕಾರನ್ನು ನೀವು ಹುಡುಕುತ್ತಿದ್ದರೆ ಮಾರುಕಟ್ಟೆಯಲ್ಲಿ ಅನೇಕ ಆಪ್ಶನ್ ನಿಮಗೆ ಸಿಗಲಿದೆ. ಎಲ್ಲವೂ ಒಂದಕ್ಕಿಂತ ಒಂದು ಭಿನ್ನವಾಗಿದ್ದು ಮೈಲೇಜ್ ಹಾಗೂ ಇಂಧನ ಕಾರ್ಯಕ್ಷಮತೆ ನೀಡುವ ಒಳ್ಳೆ ಕಾರು ಯಾವುದು ಎಂಬುದೇ ಗೊಂದಲವಾಗಲಿದೆ. ಈಗ CNG ಮಾಡಲ್ ಕಾರು ಮಾರುಕಟ್ಟೆಗೆ ಲಗ್ಗೆ ಇಟ್ಟರೂ ಎಲ್ಲರಿಗೂ ಅತೀ ಹೆಚ್ಚು ಇಷ್ಟವಾಗುವುದು ಸಾಂಪ್ರದಾಯಿಕ ಇಂಧನ ಚಾಲಿತ ವಾಹನ ಎನ್ನಬಹುದು.

ಹಿಂದೆಲ್ಲ ಸಾಂಪ್ರದಾಯಿಕ ಇಂಧನ ಚಾಲಿತ ವಾಹನಗಳ ಮೈಲೇಜ್ ಬಹಳ ಕಮ್ಮಿ ಇತ್ತು ಆದರೆ ಈಗ ಅದರ ಪರಿಸ್ಥಿತಿ ಕೂಡ ಬಹುಮಟ್ಟಿಗೆ ಸುಧಾರಿಸಿದೆ. ಭಾರತೀಯ ಆಟೋಮೊಬೈಲ್ ಮಾರುಕಟ್ಟೆಯಲ್ಲಿ ಸುಧಾರಿತ ವೈಶಿಷ್ಟ್ಯ ಇರುವ ಅನೇಕ ವಾಹನಗಳನ್ನು ನಾವು ಕಾಣಬಹುದು. ಹಾಗಾಗಿ ಪ್ರತಿ ಲೀಟರ್ ಪೆಟ್ರೋಲ್ ನಲ್ಲಿ 25-27km ವರೆಗೆ ಮೈಲೇಜ್ ನೀಡುವ ಸುಧಾರಿತ ಫೀಚರ್ಸ್ ಕಾರಿನ ಬಗ್ಗೆ ನಾವಿಂದು ನಿಮಗೆ ಮಾಹಿತಿಯನ್ನು ನೀಡಲಿದ್ದೇವೆ.

ಈ ಕಾರಿನ ಖರೀದಿ ಉತ್ತಮ ಆಯ್ಕೆ ಆಗಲಿದೆ:

Maruti Suzuki Wagon R:

 

Image Source: CarWale

 

Maruti Suzuki Wagon R ನಲ್ಲಿ ದೇಶದಲ್ಲಿ ಇಂಧನ ದಕ್ಷತೆ ವಿಚಾರದಲ್ಲಿ ಈ ಕಂಪೆನಿ ಬಹಳ ಪ್ರಸಿದ್ಧಿ ಪಡೆದಿದೆ. ಪೆಟ್ರೋಲ್ ಮಾದರಿಯ ಕಾರುಗಳಲ್ಲಿ 25.19kmpl ವರೆಗೆ ಪೂರ್ತಿ ಪ್ರಮಾಣದಲ್ಲಿ ಮೈಲೇಜ್ ಅನ್ನು ಈ ಕಾರು ನೀಡುತ್ತಿದೆ.

Maruti Grand Vitara:

 

Image Source: CarWale

 

ಈ ಒಂದು ಕಾರಿನಲ್ಲಿ ಮೈಲೇಜ್ ಬಹಳ ಉತ್ತಮವಾಗಿದೆ. Maruti Grand Vitara ದಲ್ಲಿ ಸ್ಟ್ರಾಂಗ್ ಮತ್ತು ಮೈಲ್ಡ್ ಎಂಬ ಎರಡು ಆಯ್ಕೆ ಇದೆ. ಮೈಲ್ಡ್ ನಲ್ಲಿ 19.38kmpl ಮೈಲೇಜ್ ಹಾಗೂ ಸ್ಟ್ರಾಂಗ್ ನಲ್ಲಿ 27.38kmpl ಮೈಲೇಜ್ ನೀಡಲಿದೆ. ಇದು ಅತ್ಯುತ್ತಮ ಮೈಲೇಜ್ ನೀಡುವ ಜೊತೆಗೆ ಇತ್ತೀಚಿನ ಆಧುನಿಕ ಕೆಲ ಸೆಟಪ್ ಸಹ ಇದರಲ್ಲಿ ಇರಲಿದೆ.

advertisement

Maruti Suzuki Alto K10:

 

Image Source: CarLelo

 

Maruti Suzuki Alto K10 ನಲ್ಲಿ ಪೆಟ್ರೋಲ್ ರೂಪಾಂತರದ ಆಯ್ಕೆ ನಿಮಗೆ ಸಿಗಲಿದೆ. 24.9kmpl ಮೈಲೇಜ್ ಕೂಡ ನಿಮಗೆ ಸಿಗಲಿದೆ. ಇದು ಬಜೆಟ್ ಫ್ರೆಂಡ್ಲಿಯಾಗಿದ್ದು 1 ಲೀಟರ್ ನಲ್ಲಿ ತನ್ನ ಹೊಸ ಆವೃತ್ತಿಯ K ಟ್ಯಾಗ್ ಮೂಲಕ ಬಹಳ ಪ್ರಸಿದ್ಧವಾಗಿದೆ.

Toyota Urban Cruiser Hyryder:

 

Image Source: CarWale

 

Toyota Urban Cruiser Hyryder ನಲ್ಲಿ Maruti Grand Vitara ದಲ್ಲಿ ಇರುವ ಸ್ಟ್ರಾಂಗ್ ಮತ್ತು ಮೈಲ್ಡ್ (Strong and Mild) ಎಂಬ ಎರಡು ಆಯ್ಕೆ ಇಲ್ಲಿ ಇದೆ. ಇದರಲ್ಲಿ ಪೆಟ್ರೋಲ್ ಇಂಜಿನ್ ದಕ್ಷತೆ ಬಹಳ ಉತ್ತಮವಾಗಿ ಇದೆ. 27.97kmpl ಮೈಲೇಜ್ ನೀಡಲಿದೆ.

Honda City Hybrid:

 

Image Source: CarWale

 

Honda City Hybrid ನ ಈ ಒಂದು ಕಾರಿನಲ್ಲಿ 1.5ಲೀಟರ್ ಪೆಟ್ರೋಲ್ ಇಂಜಿನ್ ಹೈಬ್ರೀಡ್ ಹೊಂದಿದ್ದು. ಪ್ರತೀ ಲೀಟರ್ ಪೆಟ್ರೋಲ್ ಗೆ 27.13kmpl ವರೆಗೆ ಮೈಲೇಜ್ ಅನ್ನು ನೀಡುವುದು. ಹಾಗಾಗಿ ಬಹಳ ಉತ್ತಮ ಆಯ್ಕೆಯ ಸಾಲಿನಲ್ಲಿ ಈ ಕಾರು ಕೂಡ ಸೇರಿದೆ.

ಒಟ್ಟಾರೆಯಾಗಿ ಮಾರುಕಟ್ಟೆಯಲ್ಲಿ ಬಜೆಟ್ ಫ್ರೆಂಡ್ಲಿ ಮತ್ತು ಅಧಿಕ ಮೈಲೇಜ್ ನೀಡುವ ಕಾರನ್ನು ಹುಡುಕುತ್ತಿರುವವರಿಗೆ ಈ ಮಾಹಿತಿ ಬಹಳ ಇಷ್ಟ ಆಗಲಿದೆ. ಇದರಲ್ಲಿ ಅಧಿಕ ಮೈಲೇಜ್ ಕಂಡು ನಿಮ್ಮ ಆರ್ಥಿಕ ಸ್ಥಿತಿಗೆ ಅನುಗುಣವಾಗಿ ಕಾರನ್ನು ನೀವು ಖರೀದಿ ಮಾಡಬಹುದು.

advertisement

Leave A Reply

Your email address will not be published.