Karnataka Times
Trending Stories, Viral News, Gossips & Everything in Kannada

Vehicle Rules: ಭಾರತ ಸರ್ಕಾರದ ಹೊಸ ರೂಲ್ಸ್! ಶೀಘ್ರವೇ ದೇಶದ ಎಲ್ಲಾ ಕಾರುಗಳಿಗೆ ಈ ಸಾಧನ ಇರಲೇಬೇಕು

advertisement

ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ರಸ್ತೆ ಅಪಘಾತಗಳ ಸಂಖ್ಯೆ ಹೆಚ್ಚಾಗ್ತಿದೆ. ಲಕ್ಷಾಂತರ ಮಂದಿ ಪ್ರತಿ ವರ್ಷ ಈ ಅಪಘಾತಕ್ಕೆ ಬಲಿಯಾಗ್ತಿದ್ದಾರೆ. ರಸ್ತೆ ಅಪಘಾತ ತಡೆಗೆ ಸಂಬಂಧಿಸಿದಂತೆ ಸರ್ಕಾರ ಹಲವು ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ತಿದೆ. ನಿಯಮ ಮೀರಿದವರಿಗೆ ದಂಡ, ಶಿಕ್ಷೆಗಳನ್ನು ವಿಧಿಸುತ್ತಿದೆ. ಆದರೂ ಕೂಡ ಅಪಘಾತದ ಸಂಖ್ಯೆ ಕಡಿಮೆ ಆಗ್ತಿಲ್ಲ. ರಸ್ತೆ (Road) ಅಪಘಾತ (Accident) ಕ್ಕೆ ಒಂದು ಚಾಲಕರ ನಿರ್ಲಕ್ಷ್ಯ, ಕಳಪೆ ರಸ್ತೆ ಕಾರಣವಾದ್ರೆ ಇನ್ನೊಂದು ಪ್ರಯಾಣಿಕ (Passenger) ರ ನಿರ್ಲಕ್ಷ್ಯವೂ ಸಹ ಕಂಡು ಬಂದಿದೆ.

ಕಡ್ಡಾಯವಾಗಿ ಸೀಟ್ ಬೆಲ್ಟ್ ಧರಿಸಲೇ ಬೇಕು:

 

Image Source: TPM Blegal

 

ಸಾಮಾನ್ಯವಾಗಿ ದೂರದ ಊರಿಗೆ ಕಾರುಗಳಲ್ಲಿ ಸಂಚಾರ ಮಾಡುವ ಪ್ರಯಾಣಿಕರಿಗೆ ಸೀಟ್ ಬೆಲ್ಟ್ (Seat Belt) ವರದಾನವಾಗಿದೆ. ಚಾಲಕ ಹಾಗೂ ಮುಂದಿನ ಸೀಟ್ ನಲ್ಲಿ ಕುಳಿತುಕೊಳ್ಳುವ ವ್ಯಕ್ತಿ ಸೀಟ್ ಬೆಲ್ಟ್ ಧರಿಸುವುದು ಕಡ್ಡಾಯ. ಸೀಟ್ ಬೆಲ್ಟ್ (Seat Belt) ಧರಿಸಿದ್ದರೆ ಅಪಘಾತದ ಸಂದರ್ಭದಲ್ಲಿ ಏರ್ ಬ್ಯಾಗ್ (Airbag) ಓಪನ್ ಆಗುವ ಕಾರಣ ಅನೇಕರ ಜೀವ ಉಳಿಯುತ್ತದೆ. ಈ ಸೀಟ್ ಬೆಲ್ಟ್ ಧರಿಸದೆ ಕಾರು ಚಲಾಯಿಸಿದ್ರೆ ಚಾಲಕನಿಗೆ ಕಾರ್ ಎಚ್ಚರಿಕೆ ನೀಡುತ್ತದೆ. ಸೈರನ್ ಒಂದೇ ಸಮನೆ ಹೊಡೆದುಕೊಳ್ಳುವ ಕಾರಣ ಚಾಲಕ ಹಾಗೂ ಮುಂಬದಿ ಪ್ರಯಾಣಿಕ ಸೀಟ್ ಬೆಲ್ಟ್ ಕಡ್ಡಾಯವಾಗಿ ಧರಿಸುತ್ತಾರೆ. ದಂಡ ವಿಧಿಸುವ ಭಯ ಕೂಡ ಅವರನ್ನು ಕಾಡುತ್ತದೆ ಹಾಗಾಗಿ ಮುಂಬದಿಯಲ್ಲಿ ಕುಳಿತುಕೊಳ್ಳುವ ಪ್ರಯಾಣಿಕರು ಧರಿಸಿರುತ್ತಾರೆ.

ಹಿಂದಿನ ಸೀಟ್ ಅಲ್ಲಿ ಕುಳಿತು ಕೊಳ್ಳುವವರಿಗೂ ಸೀಟ್ ಬೆಲ್ಟ್ ಕಡ್ಡಾಯ:

advertisement

ಕಾರಿನಲ್ಲಿ ಪ್ರಯಾಣಿಸುವ ಬಹುತೇಕರು ಹಿಂದಿನ ಸೀಟ್ ನಲ್ಲಿ ಕುಳಿತುಕೊಂಡಾಗ ಸೀಟ್ ಬೆಲ್ಟ್ ಧರಿಸುವುದಿಲ್ಲ. ಹಿಂದೆ ಆರಾಮವಾಗಿ ಕುಳಿತುಕೊಳ್ಳಲು ಸೀಟ್ ಬೆಲ್ಟ್ ಅಡ್ಡಿಯಾಗುತ್ತದೆ ಎನ್ನುವ ಕಾರಣಕ್ಕೆ ಅನೇಕರು ಸೀಟ್ ಬೆಲ್ಟ್ ಧರಿಸುವುದಿಲ್ಲ. ಹಿಂಬದಿ ಪ್ರಯಾಣಿಕರಿಗೆ ಸೀಟ್ ಬೆಲ್ಟ್ ಅಗತ್ಯವಿಲ್ಲವೆಂದು ಪರಿಗಣಿಸಿಬಿಡುತ್ತಾರೆ. ಆದ್ರೆ ಇದು ತಪ್ಪು. ಈ ಸೀಟ್ ಬೆಲ್ಟ್ ಹಿಂಬದಿ ಸವಾರರ ಜೀವ ಉಳಿಸುತ್ತೆ ಎನ್ನುವ ಸತ್ಯ ಅನೇಕರಿಗೆ ತಿಳಿದಿಲ್ಲ.

 

Image Source: CarDekho

 

ಪ್ರಯಾಣಿಕರ ಜೀವ ಉಳಿಸಲು ಈಗ ರಸ್ತೆ ಸಾರಿಗೆ ಸಚಿವಾಲಯ ಮಹತ್ವದ ತೀರ್ಮಾನ ಕೈಗೊಂಡಿದೆ. ಏಪ್ರಿಲ್ 1, 2025 ರಿಂದ ತಯಾರಿಸಲಾಗುವ ಎಲ್ಲಾ ಕಾರುಗಳಲ್ಲಿ ಹಿಂಬದಿ ಸೀಟ್ ಬೆಲ್ಟ್ ಅಲಾರಂ (Rear Seat Belt Alarm) ಒದಗಿಸಬೇಕೆಂದು ನಿಯಮ ಜಾರಿಗೆ ತಂದಿದೆ.  ಹಿಂಬದಿ ಸೀಟಿನಲ್ಲಿ ಕುಳಿತವರು ಸೀಟ್ ಬೆಲ್ಟ್ ಧರಿಸದಿದ್ದರೆ ಕಾರಿನಲ್ಲಿ ಅಲಾರಾಂ ಸದ್ದು ಮಾಡುತ್ತದೆ. ಇದು ಪ್ರಯಾಣಿಕರನ್ನು ಎಚ್ಚರಿಸುತ್ತದೆ. ಜೊತೆಗೆ ಟ್ರಾಫಿಕ್ ಪೊಲೀಸರಿಗೂ ಸೂಚನೆ ನೀಡುವ ಕಾರಣ ದಂಡ ವಿಧಿಸುವುದು ಸುಲಭವಾಗುತ್ತದೆ. ಕಳೆದ ವರ್ಷ ಈ ಕುರಿತು ಕರಡು ಅಧಿಸೂಚನೆ ಹೊರಡಿಸಲಾಗಿತ್ತು. ಈಗ ಸರ್ಕಾರ ಅದನ್ನು ಜಾರಿಗೆ ತರಲು ಹೊರಟಿದೆ. ಹೆಚ್ಚುತ್ತಿರುವ ರಸ್ತೆ ಅಪಘಾತಗಳನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಹಿಂಬದಿಯ ಸೀಟ್ ಬೆಲ್ಟ್ ಧರಿಸದ ಪ್ರಯಾಣಿಕರಿಗೆ ದಂಡ:

ಸದ್ಯ ಮುಂದಿನ ಸೀಟಿನಲ್ಲಿ ಕುಳಿತುಕೊಳ್ಳುವವರು ಸೀಟ್ ಬೆಲ್ಟ್ ಧರಿಸದೆ ಹೋದ್ರೆ ದಂಡ ವಿಧಿಸಲಾಗುತ್ತದೆ. ಆರಂಭದಲ್ಲಿ ದಂಡ ನೂರು ರೂಪಾಯಿ ಇತ್ತು. ಅದನ್ನು ಸಾವಿರ ರೂಪಾಯಿಗೆ ಹೆಚ್ಚಿಸಲಾಗಿದೆ. ವಾಹನವನ್ನು ವಶಕ್ಕೆ ಪಡೆಯುವುದಲ್ಲದೆ ಚಾಲನಾ ಪರವಾನಿಗೆ ರದ್ದುಪಡಿಸುವ ನಿಯಮ ಕೂಡ ಇದೆ. ಈ ನಿಯಮಗಳು (Vehicle Rules) ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿದೆ.

ಕೆಲ ರಾಜ್ಯದಲ್ಲಿ ಮೂರು ತಿಂಗಳು ಜೈಲು ಶಿಕ್ಷೆ ವಿಧಿಸಲಾಗುತ್ತದೆ. ರಸ್ತೆ ಸಾರಿಗೆ ಸಚಿವಾಲಯದ ಹೊಸ ನಿಯಮ ಜಾರಿಯಾದ ನಂತರ ಕಾರಿನಲ್ಲಿ ಹಿಂದೆ ಕುಳಿತವರು ಸೀಟ್ ಬೆಲ್ಟ್ ಧರಿಸದೇ ಹೋದಲ್ಲಿ ಅವರಿಗೂ ದಂಡ ವಿಧಿಸಲಾಗುವುದು. ಸುಮಾರು 1000 ರೂಪಾಯಿ ದಂಡ ವಿಧಿಸುವ ನಿರೀಕ್ಷೆ ಇದೆ. ಮುಂದಿನ ದಿನಗಳಲ್ಲಿ ಇದು ಜಾರಿಯಾಗುತ್ತದೆ ಎಂದಿದೆ ರಸ್ತೆ ಸಾರಿಗೆ ಸಚಿವಾಲಯ.

advertisement

Leave A Reply

Your email address will not be published.