Karnataka Times
Trending Stories, Viral News, Gossips & Everything in Kannada

BS Yediyurappa: ಯದುವೀರ್ ಗೆ ಟಿಕೆಟ್ ಕೋಟ್ಟಿದ್ಯಾಕೆ ನೇರ ಉತ್ತರ ಕೊಟ್ಟ ಯಡಿಯೂರಪ್ಪ

advertisement

ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಸರ್ಕಾರವು ಬಲಿಷ್ಠ ಅಭ್ಯರ್ಥಿಗಳನ್ನು ಅಖಾಡಕ್ಕೆ ಇಳಿಸುವ ಮೂಲಕ ಮತ್ತೊಮ್ಮೆ ತನ್ನ ಆಡಳಿತವನ್ನು ಮುಂದುವರಿಸಿಕೊಂಡು ಹೋಗುವ ಆಕಾಂಕ್ಷೆಯಲ್ಲಿ ಮುಂದೆ ಸಾಗುತ್ತಿದೆ… ಮತ್ತು ಈ ಬಾರಿಯ ಅಭ್ಯರ್ಥಿಗಳ ಹೆಸರನ್ನು ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ (BS Yediyurappa) ಅವರು ಘೋಷಣೆ ಮಾಡಿದ್ದು, ಅದರಲ್ಲೂ ಪ್ರಮುಖವಾಗಿ ಕೊಡಗು ಮತ್ತು ಮೈಸೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಮೈಸೂರು ಒಡೆಯರ್ ಯದುವೀರ್ (Yaduveer Wadiyar) ಅವರು ಸ್ಪರ್ಧಿಸಲಿದ್ದಾರೆ ಎಂದು ಯಡಿಯೂರಪ್ಪ ಅವರು ಸ್ಪಷ್ಟನೆ ನೀಡಿದ್ದಾರೆ.

 

Image Source: Siasat.com

 

ಇನ್ನು ಹಲವರು ಯಡಿಯೂರಪ್ಪ (BS Yediyurappa) ಅವರ ಈ ನಡೆಯ ವಿರುದ್ಧ ಅಸಮಾಧಾನ ಹೊರ ಹಾಕಿದ್ದು… ಪ್ರತಾಪ್ ಸಿಂಹ ಅವರಿಗೆ ಲೋಕಸಭಾ ಕ್ಷೇತ್ರದ ಟಿಕೆಟ್ ಸಿಕ್ಕಬೇಕೆಂದು ಹಲವರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದರು. ಇನ್ನು ಇಷ್ಟು ಗೊಂದಲಗಳ ನಡುವೆಯೂ ಯದುವೀರ್ ಅವರಿಗೆ ಲೋಕಸಭಾ ಕ್ಷೇತ್ರದ ಟಿಕೆಟ್ ನೀಡಿರುವುದು ನೆಟ್ಟಿಗರ ಕಣ್ಣಿಗೆ ಗುರಿ ಆಗುವಂತೆ ಮಾಡಿದೆ. ಇನ್ನು ಇದರ ಕುರಿತಾಗಿ ಸ್ಪಷ್ಟನೆ ನೀಡಿದಂತಹ ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ (BS Yediyurappa) ಅವರು, ಯದುವೀರ್ (Yaduveer Wadiyar) ಅವರಿಗೆ ಲೋಕಸಭಾ ಚುನಾವಣೆಯ ಟಿಕೆಟ್ ಸಿಕ್ಕಿರುವುದಕ್ಕೆ ಎಲ್ಲರ ಒಮ್ಮತವಿದೆ ಎಂದು ತಿಳಿಸಿದ್ದಾರೆ.

ಯದುವೀರ್ ಅವರಿಗೆ ಟಿಕೆಟ್ ನೀಡಿರುವ ಉದ್ದೇಶವಾದರೂ ಏನು?

 

advertisement

Image Source: Indian Express

 

ಇನ್ನು ಯದುವೀರ್ (Yaduveer Wadiyar) ಅವರಿಗೆ ಟಿಕೆಟ್ ನೀಡಿ ಪ್ರತಾಪ್ ಸಿಂಹ (Pratap Singh) ಅವರಿಗೆ ಟಿಕೆಟ್ ನೀಡದೇ ಇರಲು ಕಾರಣ ಏನು ಎಂಬುದು ಎಲ್ಲರಲ್ಲಿಯೂ ಕುತೂಹಲ ಮೂಡಿಸಿತು. ಇನ್ನು ಇದರ ಕುರಿತಾಗಿ ಸ್ಪಷ್ಟನೆ ನೀಡಿದಂತಹ ಯಡಿಯೂರಪ್ಪ ಅವರು ಈ ಬಾರಿ ಮೈಸೂರು ಮತ್ತು ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಯದುವೀರ್ ಅವರು ಅಭ್ಯರ್ಥಿಯಾಗಿ ಸ್ಪರ್ಧಿಸುವ ಮೂಲಕ ಹೊಸ ರೀತಿಯಾದಂತಹ ಶಕ್ತಿ ಪಕ್ಷಕ್ಕೆ ಬಂದಿದೆ ಎಂದು ತಿಳಿಸಿದ್ದಾರೆ. ಮತ್ತು ಈ ವಿಷಯದ ಕುರಿತಾದ ತೀರ್ಮಾನಕ್ಕೆ ಎಲ್ಲರೂ ಸಮ್ಮತಿಯನ್ನು ನೀಡಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.

ಇನ್ನು ಈ ಬಾರಿ ಲೋಕಸಭಾ ಚುನಾವಣೆಯಲ್ಲಿ 26 ಅಥವಾ 28 ಕ್ಷೇತ್ರಗಳನ್ನು ಗೆಲ್ಲುವ ಭರವಸೆಯಲ್ಲಿ ಇರುವಂತಹ ಬಿಜೆಪಿ ಪಕ್ಷವು ಎಲ್ಲಾ ಕ್ಷೇತ್ರಗಳಲ್ಲಿಯೂ ಕೂಡ ಚಟುವಟಿಕೆಯಾಗಿ ಸ್ಪರ್ಧೆ ನೀಡುವಂತಹ ವ್ಯಕ್ತಿಗಳನ್ನು ಆರಿಸಿಕೊಂಡಿದೆ. ಇನ್ನು ಮೈಸೂರು ಕೊಡಗು ಸೇರಿದಂತೆ ಅಕ್ಕಪಕ್ಕದ ಐದಾರು ಜಿಲ್ಲೆಗಳಲ್ಲಿಯೂ ಕೂಡ ಗೆಲ್ಲುವ ಭರವಸೆಯಲ್ಲಿ ಇರುವಂತಹ ಬಿಜೆಪಿ ಪಕ್ಷವು ಇದಕ್ಕೆ ಸರಿಯಾದ ವ್ಯಕ್ತಿ ಯದುವೀರ್ ಅವರು ಆಗಿದ್ದಾರೆ, ಮತ್ತು ಅವರು ಅದಕ್ಕೆ ಬೇಕಾದಂತಹ ಸ್ಪರ್ಧೆಯ ವ್ಯಕ್ತಿತ್ವವನ್ನು ಹೊಂದಿದ್ದಾರೆ ಎಂದು ತಿಳಿಸಿದ್ದಾರೆ.

ಇನ್ನು ಪ್ರತಾಪ್ ಸಿಂಹ ಅವರು ಈ ನಿರ್ಧಾರಕ್ಕೆ ಸಮ್ಮತಿಯನ್ನು ಕೂಡ ನೀಡಿರುವುದಾಗಿ ತಿಳಿಸಿರುವ ಯಡಿಯೂರಪ್ಪ ಅವರು ಯದುವೀರ್ ಅವರು ಮೈಸೂರು ಮತ್ತು ಕೊಡಗು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದರ ಮೂಲಕ ಗೆಲುವನ್ನು ತಮ್ಮದಾಗಿಸಿಕೊಳ್ಳಲಿದ್ದಾರೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಇದರಿಂದಾಗಿ ಪಕ್ಷಕ್ಕೆ ಹೊಸ ರೀತಿಯಾದಂತಹ ಶಕ್ತಿ ಬಂದಂತಾಗಿದೆ ಎಂದು ತಿಳಿಸುತ್ತಾ ಅವರು ಯದುವೀರ್ ಅವರನ್ನು ಲೋಕಸಭಾ ಕ್ಷೇತ್ರದ ಚುನಾವಣೆಗೆ ಸ್ವಾಗತ ಮಾಡಿದ್ದಾರೆ.

advertisement

Leave A Reply

Your email address will not be published.