Karnataka Times
Trending Stories, Viral News, Gossips & Everything in Kannada

PAN Card: 18 ವರ್ಷಕ್ಕಿಂತ ಮೊದಲೇ ಪಡೆಯಬಹುದು ಪ್ಯಾನ್ ಕಾರ್ಡ್, ಅರ್ಜಿ ಸಲ್ಲಿಸುವ ವಿಧಾನ ಇಲ್ಲಿದೆ!

advertisement

ಭಾರತೀಯ ಪ್ರಜೆ ಆಗಿದ್ದರೆ ಪ್ರತಿಯೊಬ್ಬರಿಗೂ ಆಧಾರ್ ಕಾರ್ಡ್ (Aadhaar Card) ಪ್ಯಾನ್ ಕಾರ್ಡ್ (PAN Card), ವೋಟರ್ ಐಡಿ (Voter ID) ಮೊದಲಾದ ಗುರುತಿನ ಚೀಟಿ ಹೊಂದಿರುವುದು ಕಡ್ಡಾಯ ಆಗಿರುತ್ತದೆ. ಈ ಗುರುತಿನ ಚೀಟಿಯನ್ನು ಕೊಟ್ಟು ನಮ್ಮ ಕೆಲಸ ಮಾಡಿಕೊಳ್ಳಬೇಕಾಗುತ್ತದೆ. ಉದಾಹರಣೆಗೆ ಬ್ಯಾಂಕಿಂಗ್ ಕೆಲಸ ಇರಬಹುದು ಅಥವಾ ಶಾಲಾ-ಕಾಲೇಜುಗಳಿಗೆ ಮಕ್ಕಳ ಹೆಸರನ್ನು ಸೇರಿಸುವುದಿರಬಹುದು. ಬ್ಯಾಂಕಿನಲ್ಲಿ ಖಾತೆ ತೆರೆಯುವುದಕ್ಕೆ ಇರಬಹುದು, ಅಥವಾ ಸರ್ಕಾರದ ಯಾವುದೇ ಯೋಜನೆಯ ಪ್ರಯೋಜನ ಪಡೆದುಕೊಳ್ಳುವುದಕ್ಕೆ ಇರಬಹುದು. ಒಟ್ಟಿನಲ್ಲಿ ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ (PAN Card) ಅನ್ನು ಪ್ರತಿಯೊಬ್ಬರು ಹೊಂದಿರುವುದು ಕಡ್ಡಾಯ.

18 ವರ್ಷ ಕಡಿಮೆ ವಯಸ್ಸಿಗೆ ಪ್ರತ್ಯೇಕ PAN Card:

 

 

advertisement

18 ವರ್ಷ ಆದ ಪ್ರತಿಯೊಬ್ಬರು ಪಾನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಹೊಂದಿರುವುದು ಕಡ್ಡಾಯವಾಗಿದೆ. ಇದರ ಜೊತೆಗೆ ಪ್ಯಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಲಿಂಕ್ ಕೂಡ ಆಗಿರಬೇಕು. ಆದರೆ ಈಗ 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಕೂಡ ಪ್ಯಾನ್ ಕಾರ್ಡ್ ಪಡೆದುಕೊಳ್ಳಲು ಸಾಧ್ಯವಿದೆ. ಹಣಕಾಸಿನ ವ್ಯವಹಾರಕ್ಕೆ ಅಥವಾ ಆದಾಯ ತೆರಿಗೆ ಪಾವತಿಗೆ ಪಾನ್ ಕಾರ್ಡ್ ಬಹಳ ಮುಖ್ಯವಾಗಿರುವ ದಾಖಲೆಯಾಗಿರುವುದರಿಂದ ಇದನ್ನ ಪ್ರತಿಯೊಬ್ಬರೂ ಮಾಡಿಸಿಕೊಳ್ಳುತ್ತಾರೆ. ಆದರೆ ಪಾನ್ ಕಾರ್ಡ್ (PAN Card) ಮಾಡಿಸಿಕೊಳ್ಳುವುದಕ್ಕೆ ಯಾವುದೇ ವಯಸ್ಸಿನ ಮಿತಿ ಇಲ್ಲ ಅಂದರೆ 18 ವರ್ಷ ವಯಸ್ಸಿನ ಒಳಗಿನವರು ಕೂಡ ಪಾನ್ ಕಾರ್ಡ್ ಪಡೆದುಕೊಳ್ಳಬಹುದು. ಆದರೆ ಇದಕ್ಕೆ ಪ್ರತ್ಯೇಕ ನಿಯಮಗಳು ಇವೆ. 18 ವರ್ಷದ ಒಳಗಿನವರು ಪ್ಯಾನ್ ಕಾರ್ಡ್ ತೆಗೆದುಕೊಳ್ಳುವುದಕ್ಕೆ ಪೋಷಕರ ಉಪಸ್ಥಿತಿ ಕಡ್ಡಾಯವಾಗಿದೆ.

18 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಪಾನ್ ಕಾರ್ಡ್ ಗೆ ಅರ್ಜಿ ಸಲ್ಲಿಸುವುದು ಹೇಗೆ?

https://nsdl.co.in/ ಈ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ ಇಲ್ಲಿ ಹೊಸ ಪಾನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಆಯ್ಕೆಗಳು ಇರುತ್ತವೆ. 18 ವರ್ಷಕ್ಕಿಂತ ಕಡಿಮೆ ಅಂದ್ರೆ ಅಪ್ರಾಪ್ತ ವಯಸ್ಸಿನವರು ಪ್ಯಾನ್ ಕಾರ್ಡ್ (PAN Card) ಗೆ ಅರ್ಜಿ ಸಲ್ಲಿಸಲು ಪಾಲಕರ ಆಧಾರ್ ಕಾರ್ಡ್ ಮೊದಲಾದ ದಾಖಲೆಗಳನ್ನು ಸಲ್ಲಿಸುವುದು ಕಡ್ಡಾಯವಾಗಿದೆ. ಈ ಎಲ್ಲ ದಾಖಲೆಗಳಿಗೂ ಪೋಷಕರ ಸಹಿ ಇರುವುದು ಕಡ್ಡಾಯ.

ದಾಖಲೆಗಳ ಸಲ್ಲಿಕೆ ಆದ ನಂತರ 107 ರೂಪಾಯಿಗಳ ಶುಲ್ಕವನ್ನು ಪಾವತಿಸಬೇಕು. ಆನ್ಲೈನ್ ನಲ್ಲಿ ಡಿಮಾಂಡ್ ಡ್ರಾಫ್ಟ್ ಅಥವಾ ನೆಟ್ ಬ್ಯಾಂಕಿಂಗ್ ಮೂಲಕ ಶುಲ್ಕ ಪಾವತಿ ಮಾಡಬಹುದು. ನೀವು ಕೊಟ್ಟಿರುವ ಎಲ್ಲಾ ಮಾಹಿತಿ ಮತ್ತು ದಾಖಲೆಗಳು ಸರಿಯಾಗಿ ಇದ್ದರೆ ಕೇವಲ 15 ದಿನಗಳಲ್ಲಿ ಪಾನ್ ಕಾರ್ಡ್ ನಿಮ್ಮ ಮನೆಯ ಬಾಗಿಲಿಗೆ ಪೋಸ್ಟ್ ಮುಖಾಂತರ ಬರಲಿದೆ.

advertisement

Leave A Reply

Your email address will not be published.