Karnataka Times
Trending Stories, Viral News, Gossips & Everything in Kannada

Voter ID: ಆನ್ಲೈನ್ ನಲ್ಲಿ ವೋಟರ್ ಐಡಿಗೆ ಮೊಬೈಲ್ ನಂಬರ್ ಲಿಂಕ್ ಮಾಡಲು ಈ ವಿಧಾನ ಅನುಸರಿಸಿ.

advertisement

ಭಾರತದ ಪ್ರಜೆಯು ಅತ್ಯಂತ ಮುಖ್ಯ ದಾಖಲೆಗಳಲ್ಲಿ ಹೊಂದಿರಬೇಕಾದ ದಾಖಲೆಗಳಲ್ಲಿ ಮತದಾರರ ಗುರುತಿನ ಚೀಟಿ (Identity Card) ಅಥವಾ ವೋಟರ್ ಐಡಿ (Voter ID) ಕೂಡ ಬಹಳಷ್ಟು ಪ್ರಮುಖವಾಗಿದೆ. ಭಾರತದ ಪ್ರಜೆ ಎಂದು ಗುರುತಿಸಿಕೊಳ್ಳಲು ಈ ದಾಖಲೆ ಬೇಕು. ಕೇವಲ ಮತದಾನ ಮಾಡಲು ಮಾತ್ರವಲ್ಲದೆ , ಕೆಲವು ದಾಖಲೆಗಳನ್ನು ಪಡೆಯಲು ಸರ್ಕಾರಿ ಸೌಲಭ್ಯ ಪಡೆಯಲು ಸಹ ಈ ದಾಖಲೆ ಬೇಕು.

ಅನ್ ಲೈನ್ ಮೂಲಕವು ಅರ್ಜಿ:

 

 

ವೋಟರ್ ಐಡಿ (Voter ID) ಗೆ ಅರ್ಜಿ ಸಲ್ಲಿಸಬೇಕಾದರೆ ನೀವು ಆನ್‌ಲೈನ್‌ನಲ್ಲೂ ರಿಜಿಸ್ಟ್ರೇಷನ್ ಮಾಡಿ ಅರ್ಜಿ ಸಲ್ಲಿಕೆ ಮಾಡಲು‌ ಅವಕಾಶ ಇದೆ.‌ ಆನ್‌ಲೈನ್‌ನಲ್ಲಿ ನೀವು ವೋಟರ್ ಐಡಿ ಗೆ ಅರ್ಜಿ ಸಲ್ಲಿಸುದಾದರೆ WWW.NVSP.IN ಈ ಲಿಂಕ್ ಗೆ ಭೇಟಿ ನೀಡಿ, ನಿಮ್ಮ‌ ಇಮೇಲ್ ಐಡಿ (Email ID) ಹಾಕಿ ಸೈನ್ ಅಪ್ ಆಗುವ ಮೂಲಕ ಅರ್ಜಿ ಹಾಕಬಹುದು.

advertisement

ಮೊಬೈಲ್ ನಂ ಸಲ್ಲಿಸಿ:

 

 

ಮೊದಲಿಗೆ ನೀವು ರಾಷ್ಟ್ರೀಯ ಮತದಾರರ ಸೇವಾ ಪೋರ್ಟಲ್ (NVSP) ಲಿಂಕ್ ಗೆ ಭೇಟಿ ನೀಡಿ ಲಾಗಿನ್ ಆಗಿ ವೆಬ್‌ಸೈಟ್ ಅನ್ನು ತೆರೆಯಿರಿ. ಇಲ್ಲಿ ಎಲೆಕ್ಟ್ರೋಲ್‌ ರೋಲ್‌ ಸರ್ಚ್‌ (Electrol roll) ಆಯ್ಕೆ ಇರಲಿದ್ದು ಹೊಸ ವೆಬ್‌ಪೇಜ್‌ ಮತದಾರರ ಪಟ್ಟಿಯಲ್ಲಿ ಹೆಸರನ್ನು ಪರಿಶೀಲಿಸಲು ನೀವು ನಿಮ್ಮ ಹೆಸರು, ತಂದೆಯ / ಗಂಡನ ಹೆಸರು, ವಯಸ್ಸು, ಹುಟ್ಟಿದ ದಿನಾಂಕ ಇತ್ಯಾದಿ ಮಾಹಿತಿಯನ್ನು ಪರಿಶೀಲನೆ ನಡೆಸಬಹುದು‌. ನಂತರ EPIC ಸಂಖ್ಯೆ ನಮೂದಿಸಿ. ಕೊನೆಯಲ್ಲಿ ಕ್ಯಾಪ್ಚಾ ಕೋಡ್ ಅನ್ನು ನಮೂದಿಸುವ ಮೂಲಕ ನಿಮ್ಮ‌ಮೊಬೈಲ್ ನಂ. ಹಾಕಿದ್ರೆ ಅದಕ್ಕೆ ಓಟಿಪಿ ಬರಲಿದೆ.‌ಒಟಿಪಿ ಯನ್ನು ಸಲ್ಲಿಸಿ‌ ನಿಮ್ಮ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ ಇತ್ಯಾದಿ ಸೇರಿಸಬಹುದು ಅಥವಾ ಬದಲಾವಣೆ ಮಾಡಬಹುದು.

Voter ID ಪಡೆಯಲು ಈ ನಿಯಮ ಅನ್ವಯ:

ಈ ಕಾರ್ಡ್‌ ಪಡೆಯಬೇಕು ಅಂದ್ರೆ, ನಿಮಗೆ 18 ವರ್ಷ ತುಂಬಿರಬೇಕು ಹಾಗಿದ್ದಲ್ಲಿ ಈ ಕಾರ್ಡ್ ಪಡೆಯಬಹುದು. ಅಷ್ಟೆ ‌ಅಲ್ಲದೆ ಭಾರತದ ಪ್ರಜೆ ಆಗಿದ್ದು ಕರ್ನಾಟಕದಲ್ಲಿ ವಾಸ ವಿರಬೇಕು.ನಿಮ್ಮ ವಯಸ್ಸು 18 ವರ್ಷ ಮೀರಿದೆ ಎಂದು ಖಚಿತ ಪಡಿಸಲು ‌ SSLC Marks Card ಅನ್ನು ನೀವು ಸಲ್ಲಿಸಬಹುದಾಗಿದೆ. ಒಟ್ಟಿನಲ್ಲಿ 18ವರ್ಷ ತುಂಬಿದ ನಂತರ ಮತದಾರರ ಚೀಟಿಗೆ ಅರ್ಜಿ ಸಲ್ಲಿಕೆ ಮಾಡುವುದು ಕಡ್ಡಾಯ ವಾಗಿದೆ.

advertisement

Leave A Reply

Your email address will not be published.