Karnataka Times
Trending Stories, Viral News, Gossips & Everything in Kannada

Aadhaar Card: ಆಧಾರ್ ವಿಳಾಸ ನವೀಕರಣ ತಿರಸ್ಕರಿಸಲಾಗಿದೆಯೇ? ಹಾಗಿದ್ರೆ ಈ ರೀತಿ ಮಾಡಬಹುದು!

advertisement

ಇಂದು ಆಧಾರ್ ಕಾರ್ಡ್ (Aadhaar Card) ಅನ್ನೋದು ಎಲ್ಲ ಸೌಲಭ್ಯ ಗಳನ್ನು ಪಡೆಯಲು ಬಹು ಮುಖ್ಯ ವೆನಿಸಿದೆ. ಎನೇ ಸೌಲಭ್ಯ ಪಡೆಯುದಾದರೂ ನಮ್ಮ ಇತರ ದಾಖಲೆಗಳಾದ ರೇಷನ್ ಕಾರ್ಡ್, ಬ್ಯಾಂಕ್ ಪುಸ್ತಕ ಇತ್ಯಾದಿ ಗಳಿಗೆ ಈ ಕಾರ್ಡ್ ಲಿಂಕ್ ಮಾಡಿಸಲೇ ಬೇಕು. ಅದೇ ರೀತಿ ನಮ್ಮಲ್ಲಿದ್ದ ಆಧಾರ್ ಅನ್ನು ನವೀಕರಣ ಮಾಡುವುದು ಸಹ ಅಷ್ಡೆ ಮುಖ್ಯ ವಾಗುತ್ತದೆ. 10 ವರ್ಷಗಳ ಹಿಂದೆ ಆಧಾರ್‌ ಕಾರ್ಡ್‌ ಮಾಡಿಸಿದ್ದರೆ, ಅದನ್ನು ಕೂಡಲೇ ನವೀಕರಣ ಮಾಡುವಂತೆ UIDAI ಈಗಾಗಲೇ ತಿಳಿಸಿದೆ. ಇಲ್ಲದಿದ್ದಲ್ಲಿ ನಮ್ಮ‌ ಆಧಾರ್ ನಿಷ್ಕ್ರಿಯ ಕೂಡ ಆಗಬಹುದು.‌ ಒಂದು ವೇಳೆ ನೀವು ನವೀಕರಣ ಮಾಡಿದ್ದರೂ ಅದು ಸಲ್ಲಿಕೆ ಯಾಗದ್ದಿದ್ದರೆ ಏನು ಮಾಡಬೇಕು ಎಂಬ ಮಾಹಿತಿ ಇಲ್ಲಿದೆ.

ಏನೆಲ್ಲಾ ನವೀಕರಣ ಮಾಡಬೇಕು

ಜನರು ತಮ್ಮ ವಿಳಾಸ, ಮೊಬೈಲ್ ಸಂಖ್ಯೆ, ಇತ್ಯಾದಿ ಮತ್ತು ಬಯೋಮೆಟ್ರಿಕ್‌ಗಳಂತಹ ವಿವರಗಳನ್ನು ನವೀಕರಣ ಮಾಡಬಹುದಾಗಿದೆ.‌ಆದರೆ ಕೆಲವು ನವೀಕರಣ ಮಾಡಿದ್ದರೂ ಇದು ಸಲ್ಲಿಕೆ ಯಾಗುವುದಿಲ್ಲ.ಇದಕ್ಕೆ ಮುಖ್ಯ ಕಾರಣ ಅವರು ನೀಡಿದ ಮಾಹಿತಿಗಳು ಲಿಂಕ್ ಆಗದೇ ಇರುವುದು ಆಗಿದೆ.

ಏನು ಮಾಡಬೇಕು?

ಮೊದಲಿಗೆ ಆನ್‌ಲೈನ್‌ನಲ್ಲಿ ಮೈ ಆಧಾರ್ ಪೋರ್ಟಲ್ ಗೆ ಹೋಗಿ‌ ಲಾಗ್ ಇನ್ ಮಾಡಿ ಅಲ್ಲಿ ಹೆಸರು/ಲಿಂಗ/ಹುಟ್ಟಿದ ದಿನಾಂಕ ಮತ್ತು ವಿಳಾಸ ನವೀಕರಣ ಇದರಲ್ಲಿ ನಿಮ್ಮ‌ ಆಯ್ಕೆಯನ್ನು ಆರಿಸಿ. ತದನಂತರದಲ್ಲಿ ಆನ್‌ಲೈನ್ ಫಾರ್ಮ್‌ನಲ್ಲಿ ಬೇಕಾಗಿರುವ ಮಾಹಿತಿಯನ್ನು ದಾಖಲಿಸಿ‌ ಸ್ಕ್ಯಾನ್ ಮಾಡಿದ ಪ್ರತಿಯನ್ನು ಅಪ್‌ಲೋಡ್ ಮಾಡಿ.

advertisement

ನವೀಕರಣ ಆಗದಿರಲು ಕಾರಣ

ಆಧಾರ್ ನವೀಕರಣ ಮಾಡುವಾಗ ‌ಸರಿಯಾದ ದಾಖಲೆ ನೀಡಬೇಕು. ನವೀಕರಣ ವಿನಂತಿಯನ್ನು ಸಲ್ಲಿಸಿದ ನಿವಾಸಿಯ ಹೆಸರಿನಲ್ಲಿ ವಿಳಾಸ, ಮೊಬೈಲ್ ಸಂಖ್ಯೆ ಮಾಹಿತಿ ಸರಿ ಇರಬೇಕು. ನಮೂದಿಸಿದ ವಿಳಾಸ ವಿವರಗಳು ಡಾಕ್ಯುಮೆಂಟ್‌ನಲ್ಲಿ ನಮೂದಿಸಲಾದ ವಿಳಾಸಕ್ಕೆ ಮ್ಯಾಚ್ ಆಗಬೇಕು. ಡಾಕ್ಯುಮೆಂಟ್‌ನ ಸ್ಪಷ್ಟ ಮತ್ತು ಸ್ಕ್ಯಾನ್ ಆಗಿರಬೇಕು ಹಾಗಿದ್ದರೆ ಮಾತ್ರ ನಿಮ್ಮ ಆಧಾರ್ ವಿಳಾಸ ಆಪ್ ಡೇಟ್ ಆಗಲು ಸಾಧ್ಯ. ಹಾಗಾಗಿ ಇದನ್ನು ಚೆಕ್ ಮತ್ತೆ ನವೀಕರಣ ಮಾಡಬಹುದು.

ಕೊನೆಯ ದಿನಾಂಕ ನಿಗದಿ

ಆಧಾರ್ ಕಾರ್ಡನ್ನು ನವೀಕರಣ ಮಾಡಿಕೊಳ್ಳಲು ಡಿಸೆಂಬರ್ 14 ಕೊನೆಯ ದಿನಾಂಕ ಎಂದು ಹೇಳಿತ್ತು, ಆದರೆ ಈಗ ಡಿಸೆಂಬರ್ 31ರ ತನಕ ಸಮಯ ನೀಡಲಾಗಿದ್ದು ಹತ್ತು ವರ್ಷ ಆದ ಆಧಾರ್ ಕಾರ್ಡನ್ನು ನವೀಕರಣ ಮಾಡಿಲ್ಲದಿಂದರೆ ನವೀಕರಣ ಮಾಡಿಸಿಕೊಳ್ಳುವುದು ಉತ್ತಮ.

ಇಲ್ಲಿ ನವೀಕರಣ ಮಾಡಿ

ಆಧಾರ್ ಕಾರ್ಡ್ ಅನ್ನು ನೀವು https://ssup.uidai.gov.in/ssup ಗೆ ಭೇಟಿ ನೀಡಿ ‌ಆಧಾರ್‌ಗೆ ಸಂಬಂಧಿಸಿದ ಯಾವುದೇ ವಿವರಗಳನ್ನು ನವೀಕರಿಸಲು ಇಲ್ಲಿ ಸಾಧ್ಯ.ಒಟ್ಟಿನಲ್ಲಿ ಯಾರೆಲ್ಲ ಆಧಾರ್ ಕಾರ್ಡ್ ನವೀಕರಣ ಮಾಡಿಲ್ಲವೋ ಅವರು ತಕ್ಷಣ ಮಾಡಿಸಿ.

advertisement

Leave A Reply

Your email address will not be published.