Karnataka Times
Trending Stories, Viral News, Gossips & Everything in Kannada

Health Insurance: ಹಿರಿಯ ನಾಗರಿಕರಿಗೆ ಗುಡ್ ನ್ಯೂಸ್, 65ವರ್ಷ ವಯಸ್ಸಿನ ನಂತರವೂ ಸಿಗಲಿದೆ ಹೆಲ್ತ್ ಇನ್ಶೂರೆನ್ಸ್!

advertisement

ಆರೋಗ್ಯವೇ ಭಾಗ್ಯ, ಎಂಬ ಮಾತಿದೆ ಆರೋಗ್ಯ ಸರಿ ಇದ್ದರೆ ಯಾವುದೇ ಕೆಲಸ ಮಾಡಿ ಹಣ ಸಂಪಾದನೆ ಮಾಡಬಹುದು. ಹಾಗಾಗಿ ಪ್ರತಿಯೊಬ್ಬ ವ್ಯಕ್ತಿಯು ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಅಷ್ಟೆ ಮುಖ್ಯ ವಾಗುತ್ತದೆ. ಸರಿಯಾದ ಸಮಯಕ್ಕೆ ಆಹಾರ ಸೇವಿಸುವುದು, ವ್ಯಾಯಾಮ ಮಾಡುವುದು ಇತ್ಯಾದಿ ಅಗತ್ಯ.‌ ಅದೇ ರೀತಿ ಆರೋಗ್ಯ ಯಾವಾಗ ಕೆಡುತ್ತದೆ ಹೇಳಲಾಗುವುದಿಲ್ಲ. ಹಾಗಾಗಿ ಆರೋಗ್ಯ ವಿಮೆ ಮಾಡಿಸಿಕೊಳ್ಳುವುದು ಸಹ ಬಹಳ ಅಗತ್ಯ. ಪ್ರತಿ ಕುಟುಂಬಕ್ಕೂ ಕೂಡ ಈ ಆರೋಗ್ಯ ವಿಮೆ ಆರ್ಥಿಕ ಭದ್ರತೆಯಾಗಿದೆ.

Health Insurance:

 

 

ನೀವು ನಿಮ್ಮ ವಯಸ್ಸಿಗೆ ಅನುಗುಣವಾಗಿ ಆರೋಗ್ಯ ವಿಮೆ (Health Insurance) ಯನ್ನು ಮಾಡಿಸಲು ಅವಕಾಶ ಇದ್ದು ಇದು ಆಸ್ಪತ್ರೆಯ ಖರ್ಚು ವೆಚ್ಚಗಳನ್ನು ಭರಿಸುತ್ತದೆ. ಅದೇ ರೀತಿ ನಿಮ್ಮ‌ ವಯಸ್ಸಿಗೆ ಅನುಗುಣವಾಗಿ ಆರೋಗ್ಯ ವಿಮೆಯ ಪ್ರೀಮಿಯಂ ಹೆಚ್ಚಾಗುತ್ತದೆ ಆಸ್ಪತ್ರೆಯಲ್ಲಿ ಸಣ್ಣಪುಟ್ಟ ಕಾಯಿಲೆ ಯಿಂದ ಹಿಡಿದು ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿಯು ಇದು‌ ನೇರವಾಗಬಹುದು.

advertisement

65 ವರ್ಷ ವಯಸ್ಸಿನ ನಂತರವೂ ಆರೋಗ್ಯ ವಿಮೆ:

ಇದೀಗ ನೀವು 65 ವರ್ಷ ವಯಸ್ಸಿನ ನಂತರವೂ ಆರೋಗ್ಯ ವಿಮೆ ಪಡೆಯಬಹುದಾಗಿದೆ. ಇದೀಗ ವಿಮಾ ನಿಯಂತ್ರಣ ಸಂಸ್ಥೆಯು ಆರೋಗ್ಯ ಪಾಲಿಸಿ ನವೀಕರಣವನ್ನು ಸುಲಭಗೊಳಿಸಲು ಸಲಹೆ ನೀಡಿದ್ದು ವಿಮಾ ಕಂಪನಿಗಳು 5 ವರ್ಷಗಳವರೆಗೆ ದೀರ್ಘಾವಧಿಯ ಆರೋಗ್ಯ ಪಾಲಿಸಿ ಸಲ್ಲಿಸಲು‌ ಅವಕಾಶ ನೀಡಿದೆ.

ಹೊಸ ಪ್ರಸ್ತಾಪ:

ಇದೀಗ 65 ವರ್ಷ ವಯಸ್ಸಿನ ನಂತರ ಆರೋಗ್ಯ ವಿಮೆ (Health Insurance) ಪ್ರಕಾರ ಇವರಿಗೆ ಅನ್ವಯ ಆಗುವುದಿಲ್ಲ ಅನ್ನೋದು ರದ್ದು ಮಾಡಲಾಗಿದ್ದು 65 ವರ್ಷಕ್ಕಿಂತ ಮೇಲ್ಪಟ್ಟ ಜನರು ಸಹ ಇನ್ಮುಂದೆ ಆರೋಗ್ಯ ವಿಮೆಯನ್ನು ಖರೀದಿಸಲು ಅವಕಾಶ ಇದೆ ಎನ್ನಲಾಗಿದೆ. ಹೌದು ಆರೋಗ್ಯ ವಿಮಾ ಪಾಲಿಸಿಯನ್ನು ಮಾಡುವ ಗರಿಷ್ಠ ವಯಸ್ಸನ್ನು ರದ್ದುಗೊಳಿಸಿ ಪ್ರಸ್ತಾಪನೆ ನೀಡಿದೆ.

ಪ್ರಸ್ತುತ ಆರೋಗ್ಯ ವಿಮೆಯನ್ನು ತೆಗೆದುಕೊಳ್ಳುವ ಗರಿಷ್ಠ ವಯಸ್ಸಿನ ಮಿತಿ 65 ವರ್ಷಗಳಾಗಿದ್ದು ಹೆಚ್ಚಿನ‌ ಸಂಖ್ಯೆ ಯಲ್ಲಿ ಈ ಆರೋಗ್ಯ ವಿಮೆಯನ್ನು ಪಡೆಯಬಹುದಾಗಿದೆ. ಭವಿಷ್ಯದಲ್ಲಿ ಇದು ಬಹಳ ಉಪಯೋಗಕ್ಕೆ ಬರಲಿದೆ

advertisement

Leave A Reply

Your email address will not be published.