Karnataka Times
Trending Stories, Viral News, Gossips & Everything in Kannada

Ration Card: ಬಡವನಾದರೂ ಕೂಡ ಇಂತಹವರ ರೇಷನ್ ಕಾರ್ಡ್ ನ್ನು ರದ್ದು ಮಾಡಲಿದೆ ಸರ್ಕಾರ! ಹೊಸ ರೂಲ್ಸ್

advertisement

ರಾಜ್ಯದಲ್ಲಿ ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಅನ್ನಭಾಗ್ಯ ಯೋಜನೆ ಅಡಿಯಲ್ಲಿ ರೇಷನ್ ಕಾರ್ಡ್ (Ration Card) ಹೊಂದಿರುವವರಿಗೆ ಅವರ ಅರ್ಹತೆಗೆ ಅನುಸಾರವಾಗಿ ಉಚಿತ ಪಡಿತರವನ್ನು ವಿತರಿಸುವಂತಹ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಆದರೆ ಈ ಸಂದರ್ಭದಲ್ಲಿ ಕೆಲವರು ಸಿಕ್ಕಿರುವಂತಹ ಉಚಿತವಾದ ಪಡಿತರವನ್ನು ಹಣಕ್ಕಾಗಿ ಮಾರಾಟ ಮಾಡುತ್ತಿರುವುದು ಕೂಡ ಕೇಳಿಬಂದಿದೆ. ವಿಶೇಷವಾಗಿ ಈ ವಿಚಾರದ ಬಗ್ಗೆ ಮೈಸೂರಿನ ಡಿಸಿ ಆಗಿರುವಂತಹ ಕೆ ವಿ ರಾಜೇಂದ್ರ ಅವರು ತಿಳಿದುಕೊಂಡಿದ್ದು ಇದರ ಬಗ್ಗೆ ವಾರ್ನಿಂಗ್ ಅನ್ನು ಕೂಡ ನೀಡಿದ್ದಾರೆ.

Ration Card ರದ್ದು:

ಜನರಿಗಾಗಿ ನೀಡುವಂತಹ PDS ಅಂದರೆ ಪಡಿತರ ಆಹಾರವನ್ನು ಪಡಿತರ ನೀಡುವಂತಹ ನ್ಯಾಯಬೆಲೆ ಅಂಗಡಿಯವರೇ ಬ್ಲಾಕ್ ಮಾರ್ಕೇಟ್ಟಿನಲ್ಲಿ ಮಾರಾಟ ಮಾಡುತ್ತಿರುವಂತಹ ವಿಚಾರದ ಬಗ್ಗೆ ಜಿಲ್ಲಾಧಿಕಾರಿಗಳು ತಮ್ಮ ಅಸಮಾಧಾನವನ್ನು ಹೊರ ವ್ಯಕ್ತಪಡಿಸಿದ್ದು ಈ ರೀತಿ ಮಾರಾಟ ಮಾಡಿದರೆ Essential Commodities Act 1955. ಪ್ರಕಾರ ಕಾನೂನಾತ್ಮಕ ಕ್ರಮಗಳನ್ನು ಕೈ ತೆಗೆದುಕೊಳ್ಳಲಾಗುತ್ತದೆ ಎಂಬುದಾಗಿ ಅವರು ಹೇಳಿದ್ದಾರೆ. ಇನ್ನು ಈ ರೀತಿ ಮಾರುಕಟ್ಟೆಯಲ್ಲಿ ಮಾರಾಟ ಮಾಡುವವರ ರೇಷನ್ ಕಾರ್ಡ್(Ration Card)  ಅನ್ನು ಕೂಡ ರದ್ದುಗೊಳಿಸಲಾಗುತ್ತದೆ ಎಂಬುದಾಗಿ ಅವರು ಸ್ಪಷ್ಟಪಡಿಸಿದ್ದಾರೆ. ಕರ್ನಾಟಕ ಸರ್ಕಾರದ Directive-1977 ಕಾನೂನು ನಿಯಮ ಅಡಿಯಲ್ಲಿ ರೇಷನ್ ಕಾರ್ಡ್ ರದ್ಧತಿಯ ನಿಯಮವನ್ನು ಈ ವಿಚಾರದಲ್ಲಿ ಬಳಸಿಕೊಳ್ಳಲಾಗುತ್ತದೆ.

advertisement

Image Source: India Tv News

ಯಾವುದೇ ನೋಟಿಸ್ ಇಲ್ಲದೆ ನೇರವಾಗಿ ಈ ವಿಚಾರದಲ್ಲಿ ಕ್ರಮವನ್ನು ಕೈ ತೆಗೆದುಕೊಳ್ಳಲಾಗುತ್ತದೆ. ಕೇಳಿ ಬಂದಿರುವಂತಹ ಆರೋಪಗಳ ಪ್ರಕಾರ ಸಮಾಜದಲ್ಲಿ ಇರುವಂತಹ ಕೆಲವೊಂದು ಪ್ರತಿಷ್ಠಿತ ವ್ಯಕ್ತಿಗಳು ಈ ರೀತಿ ಬಡವರಿಂದ ಕಡಿಮೆ ಬೆಲೆಯಲ್ಲಿ ಪಡಿತರ ಆಹಾರವನ್ನು ಪಡೆದುಕೊಂಡು ಅದನ್ನು ಪಾಲಿಶ್ ಮಾಡಿ ನಂತರ ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿದೆ ಎಂಬುದಾಗಿ ತಿಳಿದು ಬಂದಿದೆ. ಸಾಮಾನ್ಯ ನಾಗರಿಕರಿಗೆ ಮೋಸ ಮಾಡುವ ನಿಟ್ಟಿನಲ್ಲಿ ಪಡಿತರದಲ್ಲಿ ಸಿಗುವಂತಹ ರಾಗಿ ಹಾಗೂ ಅಕ್ಕಿಯನ್ನು ಪಾಲಿಶ್ ಮಾಡಿ ಸಂಗ್ರಹಿಸಿ ನಂತರ ಅದನ್ನು ದೊಡ್ಡ ಮೊತ್ತದ ಬೆಲೆಗೆ ಮಾರಾಟ ಮಾಡುವಂತಹ ಮೋಸದ ಆಟಗಳು ಇತ್ತೀಚಿನ ದಿನಗಳಲ್ಲಿ ಪ್ರಭಾವಿ ವ್ಯಕ್ತಿಗಳಿಂದ ಬೆಳಕಿಗೆ ಬಂದಿದೆ.

ಈಗಾಗಲೇ ಈ ವಿಚಾರದಲ್ಲಿ ಮೂರು ಜನರ ವಿರುದ್ಧ ಪ್ರಕರಣವನ್ನು ದಾಖಲಿಸಿ FIR ಅನ್ನು ದಾಖಲಿಸಿರುವ ಬಗ್ಗೆ ಕೂಡ ಮಾಹಿತಿ ದೊರಕಿದೆ. ಹೀಗಾಗಿ ಒಂದು ವೇಳೆ ನಿಮ್ಮಲ್ಲಿ ಕೂಡ ಯಾರಾದ್ರೂ ಈ ರೀತಿ ಮಾಡ್ತಾ ಇದ್ರೆ ಖಂಡಿತವಾಗಿ ಮುಂದಿನ ದಿನಗಳಲ್ಲಿ ಆಹಾರ ಇಲಾಖೆಯ ಅಧಿಕಾರಿಗಳಿಂದ ಕಾನೂನು ಸಮಸ್ಯೆಗೆ ಒಳಗಾಗಬೇಕಾಗಿ ಬರಬಹುದಾಗಿದ್ದು ದಯವಿಟ್ಟು ಈ ರೀತಿ ಕೆಲಸವನ್ನು ಮಾಡುವುದಕ್ಕೆ ಹೋಗಬೇಡಿ. ಅದರಲ್ಲೂ ವಿಶೇಷವಾಗಿ ಎಲ್ಲವನ್ನು ಹೊಂದಿದ ನಂತರವೂ ಕೂಡ ಬಡತನದ ರೇಖೆಗಿಂತ ಮೇಲಿರುವಂತಹ ವ್ಯಕ್ತಿಗಳು ಈ ರೀತಿಯ ಕೆಲಸಕ್ಕೆ ಕೈ ಹಾಕುತ್ತಿರುವುದು ಸ್ವಲ್ಪ ಮಟ್ಟಿಗೆ ಯೋಚಿಸ ಬೇಕಾಗಿರುವಂತಹ ವಿಚಾರವಾಗಿದೆ.

advertisement

Leave A Reply

Your email address will not be published.