Karnataka Times
Trending Stories, Viral News, Gossips & Everything in Kannada

Budget Car: 34Km ಮೈಲೇಜ್ ಕೊಡುವ ಈ 5 ಲಕ್ಷದೊಳಗಿನ ಕಾರ್! ಇದೀಗ ಎಲ್ಲರ ಫೆವರಿಟ್

advertisement

ಇಂದು ಪ್ರತಿಯೊಬ್ಬರಿಗೂ ಕೂಡ ತನ್ನಲ್ಲಿ ಹೊಸದಾದ ಕಾರು ಇರಬೇಕು, ಪ್ಯಾಮಿಲಿ ಜೊತೆ ಟ್ರಿಪ್ ಹೋಗಬೇಕು ಇತ್ಯಾದಿ ಆಸೆ, ಕನಸು ಬಹಳಷ್ಟು ಇದ್ದೆ ಇರುತ್ತದೆ.ಆದರೆ ಇಂದು ಮಾರುಕಟ್ಟೆಗೂ ನಾನಾ ಕಂಪನಿಯ ಕಾರುಗಳು ಎಂಟ್ರಿ ನೀಡಿದ್ದು ಪೀಚರ್ಸ್ ಉತ್ತಮ ವಾಗಿದ್ದರೂ ಬೆಲೆ ಹೆಚ್ಚಾಗಿಯೇ ಇದೆ. ಮಧ್ಯಮ ವರ್ಗದ ಜನರಿಗೆ ಖರೀದಿ ಕಷ್ಟವೇ ಸಹಿ.‌ ಹೀಗಾಗಿ ಕಾರು ಖರೀದಿ ಮಾಡಲು ಹಿಂದೇಟು ಹಾಕುವ ಜನರು ಇದ್ದಾರೆ‌‌‌. ಆದ್ರೆ ಕೆಲವೊಂದು ಕಾರು ಕಂಪನಿಗಳು ಕಡಿಮೆ ಬೆಲೆಯಲ್ಲಿ ಉತ್ತಮ ಪೀಚರ್ಸ್ ಹೊಂದಿರುವ ಕಾರನ್ನು ಸಹ ಬಿಡುಗಡೆ ಮಾಡಿದೆ.

ಯಾವುದು ಕಾರು?

2014 ರಲ್ಲಿ ಬಿಡುಗಡೆಯಾದ ಈ‌ಕಾರು ಉತ್ತಮ ಬೇಡಿಕೆಯನ್ನು ಹೊಂದಿದೆ. ಉತ್ತಮ ಗುಣಮಟ್ಟ, ವಿಭಿನ್ನ ವೈಶಿಷ್ಟ್ಯ, ಬೆಲೆ,ಮೈಲೇಜ್ ಎಲ್ಲ ಪೀಚರ್ಸ್ ನಲ್ಲಿಯು ಈ ಕಾರು ಗ್ರಾಹಕರಿಗೆ ಹಿತ ವೆನಿಸಿದೆ. ಹೌದು ಪ್ರತಿಷ್ಠಿತ ಕಂಪನಿಯ ಕಾರು ಇದಾಗಿದ್ದು ಮಾರುತಿ ಸುಜುಕಿ ಸೆಲೆರಿಯೊ (Maruti Suzuki Celerio) ಇದೀಗ ಹೆಚ್ಚು ಮಾರಾಟ ವಾಗಿದ್ದು ಕಾರು ಪ್ರಿಯರನ್ನು ಮತ್ತಷ್ಟು ಸೆಳೆದಿದೆ

Image Source: CarDekho

ವೈಶಿಷ್ಟ್ಯ ಹೇಗಿದೆ?

advertisement

  • ಸೆಲೆರಿಯೊ ಕಾರು ಒಟ್ಟು ಏಳು ವೆರಿಯೆಂಟ್‌ಗಳೊಂದಿಗೆ ಲಭ್ಯ‌ಇರಲಿದ್ದು‌ ಇದು ಆಕರ್ಷಕ ವಿನ್ಯಾಸ ಹೊಂದಿದ್ದು ಆರ್ಕ್ಟಿಕ್ ವೈಟ್, ಸಿಲ್ಕಿ ಸಿಲ್ವರ್, ಗ್ಲಿಸ್ಟೆನಿಂಗ್ ಗ್ರೇ, ಸಾಲಿಡ್ ಫೈರ್ ರೆಡ್, ಸ್ಪೀಡಿ ಬ್ಲೂ ಮತ್ತು ಕೆಫೀನ್ ಬ್ರೌನ್ ಎಂಬ ಸಿಂಗಲ್ ಟೋನ್ ಬಣ್ಣಗಳ ಆಯ್ಕೆ‌ಇರಲಿದೆ.
  • ಕಾರಿನಲ್ಲಿ ಉತ್ತಮ ಗುಣಮಟ್ಟ ಇರಲಿದ್ದು ಕಾರಿನಲ್ಲಿ ಫ್ರಂಟ್ ಗ್ರಿಲ್, ಕ್ರೋಮ್ ಹೊಸ ಫಾಗ್ ಲ್ಯಾಂಪ್, ಕಾರಿನ ಒಳಗಡೆ ಹೊಸ ಬ್ಲ್ಯಾಕ್ ಇಂಟಿರಿಯರ್, ಪ್ರೀಮಿಯಂ ಸೀಟು ವ್ಯವಸ್ಥೆಗಳು ಕೂಡ ಇರಲಿದೆ.
  • ಹಾಗೆಯೇ ಈ ಕಾರು ಸಿಂಗಲ್ ಪಾಡ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಹಾಗೂ ಸರ್ಕ್ಯುಲರ್ ಡಿಜಿಟಲ್ ಸ್ಕ್ರೀನ್ ಅನ್ನು ಹೊಂದಿದೆ
  • ಕಾರಿನಲ್ಲಿ ಆಪಲ್ ಕಾರ್‌ಪ್ಲೇ, ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಐಡಲ್ ಸ್ಟಾರ್ಟ್, ಸ್ಟಾಪ್ ಫಕ್ಷನ್ ಫೀಚರ್ ಇದೆ.

ಮೈಲೇಜ್ ಎಷ್ಟು?

ಈ ಮಾರುತಿ ಸುಜುಕಿ ಸೆಲೆರಿಯೊ ಉತ್ತಮ ಮೈಲೇಜ್ ನೀಡುವ ಜೊತೆಗೆ ಆರಾಮದಾಯಕ ಪ್ರಯಾಣದ ಅನುಭವವನ್ನು ನೀಡಲಿದೆ.ಡ್ರೈವ್ ಮಾಡಲು ಬಹಳಷ್ಟು ಹಿತ ವೆನಿಸಿದ್ದು CNG ರೂಪಾಂತರದ ಮೈಲೇಜ್ 34.43 km/kg ಆಗಿದ್ದು ಪೆಟ್ರೋಲ್‌ನಲ್ಲಿ 25.17 kmpl ನಿಂದ 26.23 kmpl ನಡುವೆ ಮೈಲೇಜ್ ನೀಡಲಿದೆ.

Image Source: CarTrade

ಬೆಲೆ ಎಷ್ಟು?

ಈ ಕಾರು ಈಗ 5.36 ಲಕ್ಷ ರೂ.ಗಳ ಆರಂಭಿಕ ಬೆಲೆಯಲ್ಲಿ ಇರಲಿದ್ದು ಮದ್ಯಮ ವರ್ಗದ ಜನತೆಯು ಈ ಕಾರನ್ನು ಖರೀದಿ ಮಾಡಲು ಉತ್ತಮ ಆಯ್ಕೆ ಯಾಗಿದೆ. ಹಾಗಾಗಿ ಕಡಿಮೆ ದರದ ಆರಂಭಿಕ ಬೆಲೆಯಲ್ಲೂ ನೀವು ಖರೀದಿಸಬಹುದು.

advertisement

Leave A Reply

Your email address will not be published.