Karnataka Times
Trending Stories, Viral News, Gossips & Everything in Kannada

HSRP: HSRP ಚೆಕ್ ಮಾಡುವಾಗ ಕಡ್ಡಾಯವಾಗಿ ಈ 2 ದಾಖಲೆ ಕೇಳಲಿದ್ದಾರೆ ಪೊಲೀಸರು! ಹೊಸ ರೂಲ್ಸ್

advertisement

ಇತ್ತೀಚಿನ ದಿನಗಳಲ್ಲಿ 2019 ಕ್ಕಿಂತ ಮುಂಚೆ ಖರೀದಿ ಮಾಡಿರುವಂತಹ ವಾಹನಗಳಲ್ಲಿ ಕಡ್ಡಾಯವಾಗಿ HSRP ನಂಬರ್ ಪ್ಲೇಟ್ಗಳು ಇರಲೇಬೇಕು ಎಂಬುದಾಗಿ ಕಡ್ಡಾಯ ಕಾನೂನು ನಿಯಮ ಸಾರಿಗೆ ಸಂಸ್ಥೆಯನ್ನು ಹೊರ ಬಿದ್ದಿದೆ. ಅಧಿಕೃತ ವೆಬ್ ಸೈಟ್ ಮೇಲೆ ರಿಜಿಸ್ಟ್ರೇಷನ್ ಮಾಡಿಸಿಕೊಳ್ಳುವ ಮೂಲಕ ತಾವು ವಾಹನವನ್ನು ಖರೀದಿ ಮಾಡಿರುವಂತಹ ಶೋರೂಮ್ ಗಳಲ್ಲಿ ಹೋಗಿ ಈ ನಂಬರ್ ಪ್ಲೇಟ್ ಗಳನ್ನು ಕಲೆಕ್ಟ್ ಮಾಡಿಕೊಂಡು ತಮ್ಮ ವಾಹನಗಳಿಗೆ ಅಳವಡಿಸಿಕೊಳ್ಳಬೇಕು. ಇನ್ನು ಹೊಸ ವಾಹನಗಳಿಗೆ ಖರೀದಿ ಮಾಡುವಾಗಲೇ ಅದರ ಜೊತೆಗೆ ಸಿಗುತ್ತದೆ ಅನ್ನೋದನ್ನ ಕೂಡ ಸಾರಿಗೆ ಇಲಾಖೆ ಸ್ಪಷ್ಟಪಡಿಸಿದೆ.

HSRP ನಂಬರ್ ಪ್ಲೇಟ್ ಮಾತ್ರವಲ್ಲದೇ ಅದರ ಜೊತೆಗೆ ಎರಡು ಬೇರೆ ದಾಖಲೆಗಳು ಕೂಡ ಕಡ್ಡಾಯವಾಗಿ ವಾಹನದಲ್ಲಿ ಇರಲೇಬೇಕು ಇಲ್ಲವಾದಲ್ಲಿ ಟ್ರಾಫಿಕ್ ಪೊಲೀಸರು ನಿಮ್ಮನ್ನು ಹಿಡಿದಾಗ ಖಂಡಿತವಾಗಿ ಫೈನ್ ಹಾಕ್ತಾರೆ. ಇದರಲ್ಲಿ ಯಾವುದೇ ಅನುಮಾನವಿಲ್ಲ. ಹಾಗಿದ್ದರೆ ದಂಡದಿಂದ ತಪ್ಪಿಸಿಕೊಳ್ಳಲು ನೀವು ವಾಹನದಲ್ಲಿ ಇಟ್ಟುಕೊಳ್ಳಬೇಕಾಗಿರುವಂತಹ ದಾಖಲೆಗಳು ಯಾವುದು ಅನ್ನುವುದನ್ನು ತಿಳಿಯೋಣ ಬನ್ನಿ.

ಈ ಎರಡು ದಾಖಲೆಗಳು ವಾಹನದಲ್ಲಿ ಇರಲೇಬೇಕು.

PUC ಸರ್ಟಿಫಿಕೇಟ್

advertisement

ಸಾಮಾನ್ಯವಾಗಿ ನಿಮ್ಮ ವಾಹನದ ಎಮಿಷನ್ ಅಂದರೆ ಹೋಗಿ ಚೆಕ್ ಮಾಡಿಸಿಕೊಳ್ಳಲೇಬೇಕು. ಅದಕ್ಕೂ ಕೂಡ ನಿಗದಿತ ದಿನಾಂಕ ಹಾಗೂ ಆ ನಿಗದಿತ ದಿನಾಂಕ ಮುಗಿದ ನಂತರ ಮತ್ತೆ ನವೀಕರಣ ಮಾಡಿಸಿಕೊಳ್ಳಬೇಕಾಗಿರುತ್ತದೆ. ಯಾಕೆಂದ್ರೆ ವಾಹನಗಳಿಂದ ವಾಯುಮಾಲಿನ್ಯವನ್ನು ತಪ್ಪಿಸಲು ಸರ್ಕಾರ ಹಾಗೂ ಸಾರಿಗೆ ಇಲಾಖೆ ಈ ನಿಯಮವನ್ನು ಸಾಕಷ್ಟು ವರ್ಷಗಳಿಂದ ಪಾಲಿಸಿಕೊಂಡು ಬರುತ್ತಿದೆ. ಹೀಗಾಗಿ ತಪ್ಪದೆ PUC ಸರ್ಟಿಫಿಕೇಟ್ ಅನ್ನು ನೀವು ವಾಹನದಲ್ಲಿ ಎಲ್ಲಿಗೇ ತಿರುಗಲು ಹೋದಾಗ್ಲು ಕೂಡ ನಿಮ್ಮ ಜೊತೆಗೆ ಹೊಂದಿರಬೇಕು ಇಲ್ಲವಾದಲ್ಲಿ ಪೊಲೀಸರು ಈ ವಿಚಾರದಲ್ಲೂ ನಿಮ್ಮ ಮೇಲೆ ಸಾವಿರಾರು ರೂಪಾಯಿಗಳ ಫೈನ್ ಹಾಕೋದ್ರಲ್ಲಿ ಯಾವುದೇ ಅನುಮಾನವಿಲ್ಲ ಎಂಬುದಾಗಿ ಈ ಮೂಲಕ ತಿಳಿದುಕೊಳ್ಳಬಹುದು.

Image Source: Paytm

ಫಿಟ್ನೆಸ್ ಸರ್ಟಿಫಿಕೇಟ್(Fitness Certificate)

ಪ್ರತಿಯೊಂದು ವಾಹನಗಳ ಫಿಟ್ನೆಸ್ ಸರಿಯಾಗಬೇಕು ಇಲ್ಲವಾದಲ್ಲಿ ವಾಹನಗಳನ್ನು ಸರ್ಕಾರಿ ಸಂಸ್ಥೆಗಳು ಪರಿಶೀಲಿಸಿ, ಗುಜರಿಗೆ ಹಾಕುತ್ತವೆ ಎನ್ನುವಂತಹ ನಿಯಮಗಳನ್ನು ಕೂಡ ಈಗಾಗಲೇ ಜಾರಿಗೆ. ಇದೇ ಕಾರಣಕ್ಕಾಗಿ ನಿಮ್ಮ ವಾಹನಗಳ ಸರ್ಟಿಫಿಕೇಟ್ ಅನ್ನು ನಿಮ್ಮ ಜೊತೆಗೆ ಇಟ್ಟುಕೊಳ್ಳುವುದು ಅತ್ಯಂತ ಅಗತ್ಯವಾಗಿರುತ್ತದೆ. ಸರಕಾರಿ ನಿಯಮಗಳ ಪ್ರಕಾರ 15 ವರ್ಷಗಳ ನಂತರ ವಾಹನಗಳನ್ನು ಪರಿಶೀಲಿಸಿ ಅವುಗಳು ಸರಿಯಾಗಿದೆ ಎಂಬುದನ್ನು ದೃಢಪಡಿಸಿಕೊಂಡು ಸ್ಕ್ರಾಪ್ ಗೆ ಹಾಕುವಂತಹ ನಿಯಮ ಈಗಾಗಲೇ ಇದೆ. ಈ ರೀತಿ ಗುಜರಿಗೆ ಹಾಕುವಾಗ ಆ ವಾಹನಗಳ ಮೌಲ್ಯಕ್ಕೆ ತಕ್ಕಂತೆ ಹಣವನ್ನ ಗ್ರಾಹಕರ ಖಾತೆಗೆ ವರ್ಗಾವಣೆ ಮಾಡಲಾಗುತ್ತದೆ. ಹೀಗಾಗಿ ನಿಮ್ಮ ವಾಹನದ ಫಿಟ್ನೆಸ್ ಸರ್ಟಿಫಿಕೇಟ್ ಅನ್ನು ಹೊಂದಿರಬೇಕಾಗಿರುವುದು ಅತ್ಯಂತ ಪ್ರಮುಖವಾಗಿರುತ್ತದೆ.

Image Source: Paytm

advertisement

Leave A Reply

Your email address will not be published.