Karnataka Times
Trending Stories, Viral News, Gossips & Everything in Kannada

Electric Truck: ಬಡವರಿಗೆ ಟಾಟಾ ಕಂಪನಿಯಿಂದ ಬಂಪರ್ ಆಫರ್, 154 km ರೇಂಜ್ ನೀಡುವ ಎಲೆಕ್ಟ್ರಿಕ್ ಮಿನಿ ಟ್ರಕ್ ಅಗ್ಗದ ದರದಲ್ಲಿ ಲಭ್ಯ!

advertisement

TATA ACE EV: ಭಾರತೀಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳ ಡಿಮ್ಯಾಂಡ್ ಹೆಚ್ಚಾಗುತ್ತಿರುವ ಕಾರಣ ಎಲ್ಲಾ ವಾಹನ ತಯಾರಿಕಾ ಕಂಪನಿಗಳು ವಿಶಿಷ್ಟ ವೈಶಿಷ್ಟ್ಯತೆಗಳನ್ನು ಅಳವಡಿಸಿ, ಅದ್ಭುತ ರೇಂಜ್ ನೀಡುವ ವಾಹನಗಳನ್ನು ತಯಾರು ಮಾಡುತ್ತಿದ್ದಾರೆ. ಅದರಂತೆ ಸಾಕಷ್ಟು ಸೈಕಲ್, ಬೈಕ್, ಸ್ಕೂಟರ್ ಆಟೋ ಹಾಗೂ ಕಾರುಗಳು ಇವಿ ರೂಪದಲ್ಲಿ ಮಾರುಕಟ್ಟೆಯನ್ನು ಆವರಿಸಿಕೊಂಡಿದೆ. ಇದೀಗ ಟಾಟಾ ಕಂಪನಿಯು (TATA COMPANY) ಕೂಡ ಬಡ ಗ್ರಾಹಕರ ಕೈಗೆಟುಕುವ ಬೆಲೆಗೆ ಎಲೆಕ್ಟ್ರಿಕ್ ಟ್ರಕ್ಗಳನ್ನು (Electric Truck) ಮಾರಲು ಮುಂದಾಗಿದೆ.

Tata Ace EV-ಫೀಚರ್ಸ್

ಹೌದು ಗೆಳೆಯರೇ ನೀವೇನಾದರೂ ಕಡಿಮೆ ಬೆಲೆಯಲ್ಲಿ ಅದ್ಭುತ ರೇಂಜ್ ನಲ್ಲಿ ಮೈಲೇಜ್ ನೀಡುವ ಮಿನಿ ಟ್ರಕ್(Mini Truck) ಖರೀದಿಸಲು ಯೋಚಿಸುತ್ತಿದ್ದರೆ ಟಾಟಾ ಮೋಟಾರ್ಸ್ ಕಂಪನಿಯ ಟಾಟಾ ಏಸ್ ಎಲೆಕ್ಟ್ರಿಕ್ ಟ್ರಕ್ (Tata Ace EV) ನಿಮ್ಮ ಅತ್ಯುತ್ತಮ ಆಯ್ಕೆಯಾಗಿರಲಿದೆ. ಒಮ್ಮೆ ಚಾರ್ಜ್ ಮಾಡಿದ್ರೆ ಬರೋಬ್ಬರಿ 154 km ನಷ್ಟು ಮೈಲೇಜ್ ನೀಡುವ ಕೆಪ್ಯಾಸಿಟಿಯನ್ನು ಹೊಂದಿರುವ ಈ ಮಿನಿ ಟ್ರಕ್ ನಲ್ಲಿ ಆರಾಮದಾಯಕವಾಗಿ ಕೂರಬಹುದಾದಂತಹ ಸೀಟ್ಗಳು, 7 ಇಂಚಿನ ಇಂಪಾರ್ಟೆಂಟ್ ಸಿಸ್ಟಮ್, ಟಯರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಮ್, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಟೆಲಿ ಮ್ಯಾಟ್ರಿಕ್ಸ್ ಸ್ಮಾರ್ಟ್ ಕನೆಕ್ಟಿವಿಟಿ, ಯು ಎಸ್ ಬಿ ಚಾರ್ಜಿಂಗ್ ಪೋರ್ಟ್(USB charging port) ಹಾಗೂ ಮುಂತಾದ ಹಲವಾರು ನೂತನ ವೈಶಿಷ್ಟ್ಯತೆಗಳಿದೆ.

Image Source: Trucksdekho

advertisement

ಬ್ಯಾಟರಿ ಮತ್ತು ರೇಂಜ್

21.3kWh ಲಿತಿಯಂ ಅಯಾನ್ ಬ್ಯಾಟರಿ(Lithium Ion Battery) ಪ್ಯಾಕನ್ನು ಮಿನಿ ಟ್ರಕ್ ನಲ್ಲಿ ಅಳವಡಿಕೆ ಮಾಡಲಾಗಿದ್ದು, ಇದು ಬರೋಬ್ಬರಿ 27 kW ಪವರ್ ಮತ್ತು 130 nm ಟಾರ್ಕನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ‌. ಅದರಂತೆ ಈ ಟ್ರಕ್ ಅನ್ನು ಒಮ್ಮೆ ಸಂಪೂರ್ಣವಾಗಿ ಚಾರ್ಜ್ ಮಾಡಿದರೆ 154 km ವ್ಯಾಪ್ತಿಯನ್ನು ತಲುಪುವ ಸಾಮರ್ಥ್ಯ ಹೊಂದಿದೆ.

ತೀರ ಕಡಿಮೆ ಬೆಲೆಗೆ ನಿಮ್ಮದಾಗಲಿದೆ ಟಾಟಾ ಏಸ್

ಬಡ ಉದ್ಯಮಿಗಳ ಕೈಗೆಟ್ಟುಕುವ ಬೆಲೆಗೆ ಅತ್ಯಾಕರ್ಷಕ ವೈಶಿಷ್ಟತೆಗಳನ್ನು ಒಳಗೊಂಡಿರುವ ಮಿನಿ ಟ್ರಕ್ ಅನ್ನು ಟಾಟಾ ಕಂಪನಿ ತಯಾರು ಮಾಡಿ ಭಾರತೀಯ ಎಕ್ಸ್ ಶೋರೂಮ್ ನಲ್ಲಿ ಕೇವಲ 9.20 ಲಕ್ಷಕ್ಕೆ ಮಾರಾಟ ಮಾಡುತ್ತಿದ್ದಾರೆ.

advertisement

Leave A Reply

Your email address will not be published.