Karnataka Times
Trending Stories, Viral News, Gossips & Everything in Kannada

RBI: ಅತೀ ಹೆಚ್ಚು ಚಲಾವಣೆಯಲ್ಲಿರುವ ಈ ಮುಖಬೆಲೆಯ ನೋಟಿನ ಮೇಲೆ ರಿಸರ್ವ್ ಬ್ಯಾಂಕ್ ಹೊಸ ಸ್ಪಷ್ಟನೆ

advertisement

ಇಂದು ಹಣದ ವ್ಯವಹಾರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.‌ಹೆಚ್ಚಿನ ಜನರು ಲೆಕ್ಕಮೀರಿ ಹೂಡಿಕೆ ಮಾಡುವ ತಂತ್ರಕ್ಕೆ ಒಳಗಾಗುತ್ತಿದ್ದಾರೆ.ಇದಕ್ಕೆ ಕಡಿವಾಣ ಹಾಕಲು ಅರ್ ಬಿ ಐ ಕೂಡ ಹಣಕಾಸಿನ ವ್ಯವಹಾರ ದ ಬಗ್ಗೆ ಕಟ್ಟು ನಿಟ್ಟಿನ‌ಕ್ರಮಗಳನ್ನು ಜಾರಿಗೆ ತರುತ್ತದೆ. ಅದೇ ರೀತಿ ಕಪ್ಪು ಹಣ ತಡೆಗಟ್ಟಲು, ನಕಲಿ ನೋಟುಗಳಿಗೆ ಕಡಿವಾಣ ಹಾಕಲು ಅಕ್ರಮ ಹಣವ ವರ್ಗಾವಣೆ ತಡೆಯುವ ನಿಟ್ಟಿನಲ್ಲಿ ನೋಟು ಬ್ಯಾನ್ ತಂತ್ರ ಅಳವಡಿಕೆ ಮಾಡಿತ್ತು.

ನೋಟು ಬ್ಯಾನ್ ಅಳವಡಿಕೆ

2016 ರಲ್ಲಿ, ಭಾರತ ಸರ್ಕಾರವು ತನ್ನ ಕರೆನ್ಸಿ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲು ಕರೆನ್ಸಿಗಳಾದ 500 ಮತ್ತು 1000 ರೂಪಾಯಿ ನೋಟುಗಳನ್ನು ಅಮಾನ್ಯಗೊಳಿಸಿತು.ಅದೇ ರೀತಿ ಮೊನ್ನೆ ಯಷ್ಟೆ ಹೊಸ ನೋಟು 2000 ರೂ. ಮುಖಬೆಲೆಯ ನೋಟ್‌ಗಳನ್ನು ಬದಲಾವಣೆ ಮಾಡಿಕೊಳ್ಳಲು ಅವಕಾಶವನ್ನು ನೀಡಿತ್ತು.

10ರೂ ನೋಟಿನ ಬಗ್ಗೆ ಸ್ಪಷ್ಟನೆ

ಇಂದು ಜನಸಾಮಾನ್ಯರಿಗೆ 10 ರೂಪಾಯಿ ಮುಖಬೆಲೆಯ ನೋಟುಗಳು ಹೆಚ್ಚಾಗಿ ಸಿಗುತ್ತಿಲ್ಲ. ಭಾರತೀಯ ರಿಸರ್ವ್ ಬ್ಯಾಂಕ್ (RBI)ನಿಂದ 10 ರೂಪಾಯಿ ನೋಟುಗಳ ಮುದ್ರಣ ಪ್ರಮಾಣ ದಿನದಿಂದ ದಿನಕ್ಕೆ ಇಳಿಕೆಯಾಗುತ್ತಿದೆ. ಭಾರತದಲ್ಲಿ ನೋಟು ಮುದ್ರಣವು ರಿಸರ್ವ್ ಬ್ಯಾಂಕ್ ನೋಟ್ ಪ್ರಿಂಟ್ ಪ್ರೈವೇಟ್ ಲಿಮಿಟೆಡ್ ಮತ್ತು ಸೆಕ್ಯುರಿಟಿ ಪ್ರಿಂಟಿಂಗ್ ಮತ್ತು ಮಿಂಟಿಂಗ್ ಕಾರ್ಪೊರೇಶನ್ ಆಫ್ ಇಂಡಿಯಾದ ಕೆಲಸವಾಗಿದ್ದು ಈಗ ಹತ್ತು ರೂ ನೋಟಿನ ಇಳಿಕೆಗೆ ಕಾರಣ ನೀಡಿದೆ.

advertisement

ಕಾರಣವೇನು?

ಇತ್ತೀಚೆಗೆ ಭಾರತದಲ್ಲಿ ಹಳೆಯ ಹತ್ತು ರೂಪಾಯಿ ನೋಟುಗಳು ಕಡಿಮೆ ಚಾಲ್ತಿಯಲ್ಲಿ ಇದೆ. ಇದಕ್ಕೆ ಕಾರಣವನ್ನು ಕೂಡ ಅರ್ ಬಿ ಐ (RBI) ನೀಡಿದ್ದು 2019-20ರ ಆರ್ಥಿಕ ವರ್ಷದಲ್ಲಿ ರೂ.147 ಕೋಟಿ ರೂ.10 ರೂ ನೋಟುಗಳನ್ನು ಬಿಡುಗಡೆ ಮಾಡಿದ್ದು ನಂತರದ ಆರ್ಥಿಕ ವರ್ಷಕ್ಕೆ ರೂ. 128 ಕೋಟಿ 40 ಲಕ್ಷ ನೋಟುಗಳನ್ನು ಮುದ್ರಿಸಲಾಗಿದೆ. ನಂತರ 2021-22 ರ ವರ್ಷ ರೂ. 75 ಕೋಟಿ ನೋಟುಗಳನ್ನು ಮಾತ್ರ ಮುದ್ರಿಸಲಾಗಿದೆ.ಹೀಗಾಗಿ ಹತ್ತು ರೂಪಾಯಿ ನೋಟುಗಳು ಕಡಿಮೆಯಾಗಿದೆ.

ತಗಲುವ ವೆಚ್ಚ ಹೆಚ್ಚು

ಅದೇ ರೀತಿ ಇಂದು 20 ರೂ ನೋಟಿನ ಚಾಲ್ತಿ ಬಹಳಷ್ಟು ಹೆಚ್ಚಾಗಿದೆ. ಇದಕ್ಕೆ ಕಾರಣವು ಇದೆ. ಮನಿ ಕಂಟ್ರೋಲ್ ವರದಿ ಪ್ರಕಾರ 20 ನೋಟುಗಳ ಮುದ್ರಣಕ್ಕಿಂತ 10 ನೋಟುಗಳ ಮುದ್ರಣಕ್ಕೆ ತಗಲುವ ವೆಚ್ಚ ಹೆಚ್ಚು ಇದೆ.ಹಾಗಾಗಿ ಇಂದು 20 ರೂ ನೋಟು ಹೆಚ್ಚು ಚಾಲ್ತಿಯಲ್ಲಿದೆ

advertisement

Leave A Reply

Your email address will not be published.