Karnataka Times
Trending Stories, Viral News, Gossips & Everything in Kannada

RBI: ಬೆಳ್ಳಂಬೆಳಿಗ್ಗೆ ಈ 2 ಬ್ಯಾಂಕ್ ಗಳ ಮೇಲೆ ನಿರ್ಬಂಧ ಹೇರಿದ RBI, ಹಣ ತಗೆಯಲು ಕಂಡಿಷನ್ಸ್!

advertisement

Reserve Bank Of India: ಸರ್ವೋದಯ ಕೋ ಆಪರೇಟಿವ್ ಬ್ಯಾಂಕ್: ಇದೇ ಸೋಮವಾರದಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(Reserve Bank of India) ಮುಂಬೈನಲ್ಲಿ ಇರುವಂತಹ ಸರ್ವೋದಯ ಕೋ ಆಪರೇಟಿವ್ ಬ್ಯಾಂಕಿನ ಆರ್ಥಿಕ ಸ್ಥಿತಿಯ ಆಧಾರದ ಮೇಲೆ ಕೆಲ ದಿನಗಳ ಕಾಲ ಬ್ಯಾಂಕಿನ ಚಟುವಟಿಕೆಗಳನ್ನು ನಿಷೇಧಿಸಲಾಗುವಂತಹ ಅಧಿಕೃತ ಮಾಹಿತಿಯನ್ನು ಹೊರಡಿಸಿದೆ.

ಬ್ಯಾಂಕ್ ನಿರ್ಬಂಧ ಕಾಯ್ದೆಯ(Bank Regulation Act) ಸೆಕ್ಷನ್ 35A, 1949ರ ಅಡಿಯಲ್ಲಿ ಕೆಲ ಸೂಚನೆಗಳ ಮೇರೆಗೆ ಸರ್ವೋದಯ ಕೋ ಆಪರೇಟಿವ್ ಬ್ಯಾಂಕ್ ಮೇಲೆ ನಿರ್ಬಂಧವನ್ನು ಹೇರಲಾಗಿದ್ದು, ಇದರಿಂದಾಗಿ ಏಪ್ರಿಲ್ 15, 2024ರಿಂದ ಬ್ಯಾಂಕಿನ ಎಲ್ಲಾ ಕೆಲಸ ಕಾರ್ಯಗಳು ಸ್ಥಗಿತಗೊಳ್ಳಲಿದೆ. ಸರ್ವೋದಯ ಬ್ಯಾಂಕ್(Sarvodaya Bank) ಇನ್ಮುಂದೆ, ರಿಸರ್ವ್ ಬ್ಯಾಂಕ್ ನಿಂದ ಅನುಮೋದನೆ ದೊರಕುವವರೆಗೂ ಯಾವುದೇ ರೀತಿಯ ಲೋನ್ ಮತ್ತು ಮುಂಗಡ ಹಣವನ್ನು ನೀಡುವುದಿಲ್ಲ. ಜೊತೆಗೆ ಇದಾಗಲೇ ಹೂಡಿಕೆ ಮಾಡಿರುವ ಹಣಕ್ಕೆ ಯಾವುದೇ ರೀತಿಯ ನವೀಕರಣ ಮಾಡುವುದಿಲ್ಲ ಎಂದು ಆದೇಶಿಸಿದೆ.

Which bank banned by RBI?Which two banks are closed by RBI?
Which bank has been cancelled by RBI?
Which bank rejected by RBI?
Image Source: CNBC

ಹೂಡಿಕೆದಾರರು ಕೇವಲ ₹15,000 ಹಣವನ್ನು ಹಿಂಪಡೆಯಬಹುದು!

ಸರ್ವೋದಯ ಕೋ ಆಪರೇಟಿವ್ ಬ್ಯಾಂಕ್(Sarvodaya Co-0perative Bank) ನ ಉಳಿತಾಯ ಅಥವಾ ಚಾಲ್ತಿ ಖಾತೆಯಲ್ಲಿ ನೀವೇನಾದರೂ ಲಕ್ಷಾಂತರ ರೂಪಾಯಿ ಹಣವನ್ನು ಇರಿಸಿದ್ದರೆ RBIನ ನಿಯಮದ ಮೇರೆಗೆ ಕೇವಲ 15,000 ಹಣವನ್ನು ಹಿಂಪಡೆಯಬಹುದು(Withdrawal). ಬ್ಯಾಂಕಿನ ಆರ್ಥಿಕ ಪರಿಸ್ಥಿತಿ ಸುಗಮವಾಗುವವರೆಗೂ ಈ ನಿರ್ಬಂಧವನ್ನು ಹೇರಲಾಗಿರುತ್ತದೆ ಹೊರತು RBI ಯಾವುದೇ ಕಾರಣಕ್ಕೂ ಬ್ಯಾಂಕಿನ ಲೈಸೆನ್ಸನ್ನು ರದ್ದು ಮಾಡುವುದಿಲ್ಲ, ಇದರಿಂದಾಗಿ ನಿಮ್ಮ ಹಣಕ್ಕೆ ಸಂಪೂರ್ಣ ಸುರಕ್ಷತೆ ದೊರಕುತ್ತದೆ.

advertisement

ಪ್ರತಾಪ್ ಗರ್ ಮೂಲದ ನ್ಯಾಷನಲ್ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ಮೇಲು ನಿಷೇಧ!

ಏಪ್ರಿಲ್ 14ನೇ ತಾರೀಕು ಬಹುತೇಕ ಬ್ಯಾಂಕ್ ಗಳ ಆರ್ಥಿಕ ಸ್ಥಿತಿಯ ಕುರಿತು ಗಮನ ಹರಿಸಿದಂತಹ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(Reserve Bank of India) ಹಲವು ಬ್ಯಾಂಕ್ಗಳಿಗೆ ಕೆಲ ನಿಯಮಗಳನ್ನು ಜಾರಿಗೊಳಿಸಿದ್ದಾರೆ. ಅದರಂತೆ ಉತ್ತರ ಪ್ರದೇಶದ ಪ್ರತಾಪ್ ಘರ್ ಮೂಲದ ನ್ಯಾಷನಲ್ ಅರ್ಬನ್ ಕಾರ್ಪೊರೇಟಿವ್ ಬ್ಯಾಂಕ್ ಮೇಲು ನಿಷೇಧ ಹೇರಲಾಗಿದೆ. ಏಪ್ರಿಲ್ 15, 2023ರಂದು ಬ್ಯಾಂಕ್ ನಿರ್ಬಂಧ ಕಾಯಿದೆ ಸೆಕ್ಷನ್ 35A, 1949ರ ಅಡಿಯಲ್ಲಿ ಈ ನಿರ್ಬಂಧವನ್ನು ಜಾರಿಗೊಳಿಸಿದ್ದು, ಇನ್ಮುಂದೆ ಬ್ಯಾಂಕ್ ಯಾವುದೇ ರೀತಿಯ ಲೋನ್ ಅಥವಾ ಮುಂಗಡ ಹಣದ ನವೀಕರಣವನ್ನು ಮಾಡುವುದಿಲ್ಲ.

Which bank banned by RBI?Which two banks are closed by RBI?
Which bank has been cancelled by RBI?
Which bank rejected by RBI?
Image Source: CNBC

ಹೂಡಿಕೆದಾರರು ಕೇವಲ ₹10,000 ಹಣವನ್ನು ಹಿಂಪಡಿಯಬಹುದು!

ಇನ್ನು ಈ ಬ್ಯಾಂಕ್ ನ ಉಳಿತಾಯ ಅಥವಾ ಚಾಲ್ತಿ ಖಾತೆಯಲ್ಲಿ ಹಣವನ್ನು ಉಳಿಸಿರುವಂತಹ ಗ್ರಾಹಕರು ಸೆಂಟ್ರಲ್ ಬ್ಯಾಂಕ್(Central Bank) ನ ನಿಯಮದ ಅನುಸಾರ 10,000 ಕ್ಕಿಂತ ಮೇಲ್ಪಟ್ಟಂತಹ ಹಣವನ್ನು ಹಿಂಪಡೆಯಲು ಸಾಧ್ಯವಾಗುವುದಿಲ್ಲ. ಈ ಕಟ್ಟುನಿಟ್ಟದ ನಿಯಮವನ್ನು ಆರು ತಿಂಗಳ ಕಾಲ ಮಾತ್ರ ಬ್ಯಾಂಕಿನ ಮೇಲೆ ಹೇರಲಾಗಿರುತ್ತದೆ ಹೊರತು ಬ್ಯಾಂಕಿನ ಲೈಸೆನ್ಸ್ ಅನ್ನು ಯಾವುದೇ ಕಾರಣಕ್ಕೂ ರದ್ದು ಮಾಡುವುದಿಲ್ಲ ಎಂಬ ಭರವಸೆಯನ್ನು RBI ನೀಡಿದೆ.

advertisement

Leave A Reply

Your email address will not be published.