Karnataka Times
Trending Stories, Viral News, Gossips & Everything in Kannada

Tax Rules: 4 ಜನ ಇರುವ ಕುಟುಂಬದಲ್ಲಿ ಒಟ್ಟು ಎಷ್ಟು ಬಂಗಾರ ಇಟ್ಟುಕೊಳ್ಳುಬಹುದು ಬಂತು ಹೊಸ ರೂಲ್ಸ್!

advertisement

How Much Gold Can You Keep at Home?: ಪ್ರತಿಯೊಬ್ಬರು ಕೂಡ ಕಷ್ಟ ಕಾಲದಲ್ಲಿ ನೆರವಾಗಲಿ ಎನ್ನುವ ಕಾರಣಕ್ಕಾಗಿ ಮಧ್ಯಮ ವರ್ಗದ ಕುಟುಂಬಗಳು ತಮ್ಮ ಕೈಗೆ ಹೆಚ್ಚಿನ ಹಣ ಬಂದಾಗ ಅವುಗಳನ್ನು ಚಿನ್ನದ ಖರೀದಿಯ(Gold Purchase)  ಮೇಲೆ ಹೂಡಿಕೆ ಮಾಡುತ್ತಾರೆ. ಶ್ರೀಮಂತ್ರು ತಮ್ಮ ಪ್ರತಿಷ್ಠೆ ಹಾಗೂ ಅಂದ ಅಲಂಕಾರಕ್ಕಾಗಿ ಚಿನ್ನವನ್ನು ಖರೀದಿ ಮಾಡಿದ್ರೆ ಅದೇ ನಿಟ್ಟಿನಲ್ಲಿ ಮಧ್ಯಮ ವರ್ಗದ ಕುಟುಂಬಗಳು ಚಿನ್ನವನ್ನು ಕೇವಲ ತಮ್ಮ ಅಲಂಕಾರಕ್ಕಾಗಿ ಮಾತ್ರವಲ್ಲದೆ ಕಷ್ಟದ ಸಂದರ್ಭದಲ್ಲಿ ಅವುಗಳನ್ನು ಅಡ ಇಟ್ಟು ತಮ್ಮ ಆರ್ಥಿಕ ಸಮಸ್ಯೆಗಳನ್ನು(Economic Needs)  ನಿವಾರಿಸಿಕೊಳ್ಳಬಹುದು ಎನ್ನುವಂತಹ ಬುದ್ಧಿವಂತಿಕೆಯ ಆಲೋಚನೆಯ ನಿಟ್ಟಿನಲ್ಲಿ ಕೂಡ ಚಿನ್ನವನ್ನು ಖರೀದಿ ಮಾಡ್ತಿದ್ರು.

ಇನ್ನು ಚಿನ್ನ ಖರೀದಿ ಮಾಡುವಂತಹ ವಿಚಾರಕ್ಕೆ ಬಂದರೆ ನಮ್ಮ ಭಾರತದಲ್ಲಿ ಪ್ರತಿಯೊಬ್ಬ ವ್ಯಕ್ತಿ ಎಷ್ಟು ಚಿನ್ನವನ್ನ ಹೊಂದಿರಬೇಕು(Gold Limit In India)  ಎನ್ನುವುದರ ಬಗ್ಗೆ ಕೂಡ ಲಿಮಿಟ್ ಇದೆ. ಅದರ ಮೇಲೆ ಆತ ಚಿನ್ನವನ್ನು ಹೊಂದಿದ್ದರೆ ಅದರ ದಾಖಲೆ ಪತ್ರಗಳನ್ನು ನೀಡಬೇಕಾಗುತ್ತದೆ ಹಾಗೂ ಕೆಲವೊಮ್ಮೆ ಹೆಚ್ಚಿದ ಟ್ಯಾಕ್ಸ್ ಹಣವನ್ನು ಕೂಡ ಕಟ್ಟ ಬೇಕಾಗಿರುತ್ತದೆ ಎಂಬುದನ್ನು ನೀವು ನೆನಪಿಟ್ಟುಕೊಳ್ಳಬೇಕು. ಹಾಗಿದ್ರೆ ಯಾವ ವ್ಯಕ್ತಿ ಎಷ್ಟು ಚಿನ್ನವನ್ನು ಹೊಂದುವಂತಹ ಅರ್ಹತೆಯನ್ನು ಹೊಂದಿರುತ್ತಾರೆ ಎಂಬುದರ ಬಗ್ಗೆ ಇವತ್ತಿನ ಲೇಖನದಲ್ಲಿ ತಿಳಿದುಕೊಳ್ಳೋಣ ಬನ್ನಿ.

How much gold is legally allowed in India?Can I buy more than 2 lakhs of gold?
What is the limit of gold in Income Tax Act?
What is the cash limit for gold purchase?
Image Source: Jagran

ಕುಟುಂಬದಲ್ಲಿ ನಾಲ್ಕು ಜನ ಇದ್ರೆ ಯಾರಿಗೆ ಎಷ್ಟು ಚಿನ್ನವನ್ನು ಹೊಂದುವ ಲಿಮಿಟ್ ಇದೆ?

ಉದಾಹರಣೆಗೆ ಒಂದು ಮನೆಯಲ್ಲಿ ತಂದೆ ತಾಯಿ ಹಾಗೂ ಮದುವೆ ಆಗದೆ ಇರುವ ಮಗಳು ಮತ್ತು ಮದುವೆ ಆಗದಿರುವ ಮಗ ಇದ್ದಾನೆ ಎಂಬುದಾಗಿ ಭಾವಿಸಿ. ಆ ಸಂದರ್ಭದಲ್ಲಿ ಅವರು ಯಾವ ರೀತಿಯಲ್ಲಿ ಚಿನ್ನವನ್ನು ಹೊಂದುವಂತಹ ಅರ್ಹತೆಯನ್ನು ಹೊಂದಿರುತ್ತಾರೆ ಎಂಬುದನ್ನು ಭಾರತದ ಚಿನ್ನದ ನಿಯಮಗಳ ಪ್ರಕಾರ ಇವತ್ತಿನ ಈ ಲೇಖನದಲ್ಲಿ ತಿಳಿದುಕೊಳ್ಳೋಣ ಬನ್ನಿ.

ತಂದೆ(Married Man)

ಮನೆಯಲ್ಲಿ ತಂದೆ ಅಥವಾ ಮದುವೆ ಆಗಿರುವಂತಹ ವ್ಯಕ್ತಿ ಇದ್ರೆ ಅವರು ತಮ್ಮ ಬಳಿ ಮ್ಯಾಕ್ಸಿಮಮ್ 100 ಗ್ರಾಂ ಗಳವರೆಗೆ ಚಿನ್ನವನ್ನು ಹೊಂದುವಂತಹ ಅವಕಾಶವನ್ನು ಹೊಂದಿರುತ್ತಾರೆ. ಇದಕ್ಕಿಂತ ಹೆಚ್ಚಿನ ಚಿನ್ನವನ್ನು ಅವರು ತಮ್ಮ ಬಳಿ ಹೊಂದುವ ಹಾಗಿಲ್ಲ.

advertisement

ತಾಯಿ

ಮದುವೆ ಆಗಿರುವಂತಹ ಮಹಿಳೆ ಅಥವಾ ನಿಮ್ಮ ಮನೆಯಲ್ಲಿ ನಿಮ್ಮ ತಾಯಿ ಇರಬಹುದು ಅವರ ಬಳಿ ಹೆಚ್ಚೆಂದರೆ ನಿಯಮಗಳ ಪ್ರಕಾರ 500 ಗ್ರಾಂ ವರೆಗೆ ಚಿನ್ನವನ್ನು ತಮ್ಮಲ್ಲಿ ಇಟ್ಟುಕೊಳ್ಳಬಹುದಾಗಿದೆ.

How much gold is legally allowed in India?Can I buy more than 2 lakhs of gold?
What is the limit of gold in Income Tax Act?
What is the cash limit for gold purchase?
Image Source: Jagran

ಮಗಳು(Unmarried Women)

ಮನೆಯಲ್ಲಿ ಮದುವೆ ಆಗದಿರುವಂತಹ ಮಹಿಳೆ ಅಂದ್ರೆ ಸಾಮಾನ್ಯವಾಗಿ ಮಗಳು ತನ್ನ ಬಳಿ 250 ಗ್ರಾಮ್ ವರೆಗೆ ಚಿನ್ನವನ್ನು ಇಟ್ಟುಕೊಳ್ಳಬಹುದಾಗಿದೆ ಯಾಕೆಂದರೆ ಸಾಮಾನ್ಯವಾಗಿ ಹೆಣ್ಣು ಮಕ್ಕಳು ಅಲಂಕಾರಕ್ಕಾಗಿ ಚಿನ್ನವನ್ನು ಹೆಚ್ಚಾಗಿ ಇಷ್ಟ ಪಡ್ತಾರೆ.

ಮಗ(Unmarried Man)

ಮನೆಯಲ್ಲಿರುವಂತಹ ಅವಿವಾಹಿತ ವ್ಯಕ್ತಿ ಅಂದರೆ ಮಗ ತನ್ನ ಬಳಿ ಹೆಚ್ಚೆಂದರೆ 100 ಗ್ರಾಂ ಚಿನ್ನವನ್ನು ಇಟ್ಟುಕೊಳ್ಳಬಹುದು. ಸಾಮಾನ್ಯವಾಗಿ ಗಂಡು ಮಕ್ಕಳು ಚಿನ್ನವನ್ನು ಹೆಚ್ಚಾಗಿ ಧಾರಣೆ ಮಾಡುವುದಕ್ಕೆ ಇಷ್ಟಪಡುವುದಿಲ್ಲ ಹೀಗಾಗಿ ಮದುವೆ ಆಗಿರುವ ಗಂಡಸರಿಗೂ ಹಾಗೂ ಆಗದೇ ಇರುವಂತಹ ಗಂಡಸರಿಗೂ ಕೂಡ ಚಿನ್ನದ ಮಿತಿಯನ್ನು ಸೇಮ್ ಇರಿಸಲಾಗಿದೆ.

ನಮ್ಮ ಭಾರತದಲ್ಲಿ ಚಿನ್ನದ ಮಿತಿಯನ್ನು ಪ್ರತಿಯೊಬ್ಬ ವ್ಯಕ್ತಿಗೂ ಈ ರೀತಿಯಲ್ಲಿ ನಿರ್ಧಾರ ಮಾಡಲಾಗಿದೆ. ಹೀಗಾಗಿ ಪ್ರತಿಯೊಬ್ಬರು ಕೂಡ ಇವುಗಳನ್ನು ತಿಳಿದುಕೊಂಡು ತಾವು ಎಷ್ಟು ಚಿನ್ನವನ್ನು ಖರೀದಿಸಬೇಕು ಎನ್ನುವುದನ್ನು ಲೆಕ್ಕಾಚಾರ ಹಾಕ ಬೇಕಾಗಿರುತ್ತದೆ.

advertisement

Leave A Reply

Your email address will not be published.