Karnataka Times
Trending Stories, Viral News, Gossips & Everything in Kannada

Budget Car: 35Km ಮೈಲೇಜ್ ನೀಡುವ ಕಡಿಮೆ ಬೆಲೆಯ ಸ್ಟೈಲಿಶ್ ಕಾರು! ಮುಗಿಬಿದ್ದು ಖರೀದಿ ಮಾಡುತ್ತಿರುವ ಬಡವರು

advertisement

Maruti Suzuki Ignis: ಭಾರತೀಯ ಆಟೋ ಮೊಬೈಲ್ ಮಾರುಕಟ್ಟೆಯಲ್ಲಿ ಕಾರುಗಳ ಹಾವಳಿ ಹೆಚ್ಚಾಗಿದ್ದು, ಪ್ರತಿದಿನ ಒಂದಲ್ಲ ಒಂದು ವಿಶೇಷತೆಗಳನ್ನು ಒಳಗೊಂಡಿರುವ ಹೈಟೆಕ್ ಕಾರು(Hitech Car) ಗಳು ಲಗ್ಗೆ ಇಡುತ್ತಲೇ ಇರುತ್ತದೆ. ಹೀಗಿರುವಾಗ ಮಾರುತಿ ಸುಜುಕಿ ಕಂಪನಿಯ ಇಗ್ನಿಸ್ ಕಾರು ಗ್ರಾಹಕರ ಆಕರ್ಷಣೆಗೆ ಗುರಿಯಾಗಿದೆ ಎಂದರೆ ತಪ್ಪಾಗಲಾರದು. ಹೌದು ಸ್ನೇಹಿತರೆ ಬಜೆಟ್ ಫ್ರೆಂಡ್ಲಿ ಕಾರ್ (Budget Car) ಇದಾಗಿದ್ದು, ತನ್ನ ಕ್ಲಾಸಿಕ್ ಡಿಸೈನ್(Classic Design) ಮತ್ತು ಲುಕ್ ನಿಂದ ಗ್ರಾಹಕರನ್ನು ತನ್ನತ ಆಕರ್ಷಿಸಿಕೊಳ್ಳುವಲ್ಲಿ ಮಾರುತಿ ಸುಜುಕಿ ಇಗ್ನಿಸ್ ಯಶಸ್ವಿಯಾಗಿದೆ. ಹೀಗೆ ನೀವೇನಾದರೂ ಸ್ಟೈಲಿಶ್ ಆಗಿರುವ ಸಣ್ಣ ಕಾರ್ ಖರೀದಿ ಮಾಡಲು ಯೋಚಿಸುತ್ತಿದ್ದಾರೆ ಮಾರುತಿ ಇಗ್ನಿಸ್(Maruthi Ignis) ನಿಮ್ಮ ಅತ್ಯುತ್ತಮ ಆಯ್ರ್ಕೆಯಾಗಿರಲಿದೆ.

ವಿನ್ಯಾಸ

ನೋಡಲು ಬಹಳನೇ ಆಕರ್ಷಕವಾಗಿರುವ ಮಾರುತಿ ಸುಜುಕಿ ಇಗ್ನಿಸ್(Maruthi Suzuki Ignis) ಕಾರು ಬಾಕ್ಸ್ ಆಕಾರದಲ್ಲಿದ್ದು, ಯುನಿಕ್ ಗ್ರಿಲ್(Unique Grille) ಹಾಗೂ ಬೋಲ್ಡ್ ಡಿಸೈನ್(Bold Design)ನಂತಹ ಅಂಶಗಳು ಕಾರಿನ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿದೆ. ಕೆಲವರಿಗೆ ಇದರ ಆಕಾರ ಇಷ್ಟವಾದರೆ ಮತ್ತು ಹಲವರಿಗೆ ಇದರ ಡಿಸೈನ್ ಸ್ವಲ್ಪ ಅಸಂಪ್ರದಾಯಕವೆನಿಸಬಹುದು.

ವಿಶಾಲವಾದ ಒಳಗಿನ ಸ್ಥಳ

ಮಾರುತಿ ಸುಜುಕಿ ಇಗ್ನಿಸ್ ನಲ್ಲಿ ವಿಶಾಲವಾದ ಕ್ಯಾಬಿನ್ ಇದ್ದು, ಕಾರ್ ಒಳಗಿನ ರೂಫ್ ಲೈನ್ ಕೂಡ ಮೇಲಿನ ಹಂತದಲ್ಲಿ ಇರುವುದರಿಂದ ಬಹಳ ಎತ್ತರ ಇರುವಂತಹ ವ್ಯಕ್ತಿಗಳು ಆರಾಮದಾಯಕವಾಗಿ ಕೂರಬಹುದು. ನಾಲ್ಕು ಜನ ವಯಸ್ಕರರು ಕುಳಿತು ಪ್ರಯಾಣಿಸಬಹುದಾದ ಸೌಲಭ್ಯವನ್ನು ಒದಗಿಸುತ್ತದೆ. ಕಾರ್ ಒಳಗಿನ ಡ್ಯಾಶ್ ಬೋರ್ಡ್(dashboard), ಕ್ಲೀನ್ ಅದ ವಿನ್ಯಾಸವನ್ನು ಹೊಂದಿದೆ.

Image Source: CarDekho

ಮಾರುತಿ ಸುಜುಕಿ ಇಗ್ನಿಸ್ನ ವೈಶಿಷ್ಟ್ಯತೆಗಳು

ಕಾರಿನಲ್ಲಿ ಆಂಡ್ರಾಯ್ಡ್ ಅಥವಾ ಆಪಲ್ ಆಟೋ ಕಾರ್ ಪ್ಲೇ ಜೊತೆಗೆ ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ಆಟೋಮೆಟಿಕ್ ಕ್ಲೈಮೇಟ್ ಕಂಟ್ರೋಲರ್, ಕೀ ಇಲ್ಲದ ಎಂಟ್ರಿ ಹಾಗೂ ಇತರೆ ರೂಪಾಂತರಗಳಲ್ಲಿ ಪುಷ್ ಸ್ಟಾರ್ಟ್ ಬಟನ್(Push Start Button) ನಂತಹ ವಿಶೇಷ ಫೀಚರ್ಸ್ಗಳಿವೆ.

advertisement

ಅತ್ಯುತ್ತಮ ಇಂಜಿನ್ ಮತ್ತು ಪರ್ಫಾರ್ಮೆನ್ಸ್

ಮಾರುತಿ ಸುಜುಕಿ ಇಗ್ನಸ್ 1.2L K12 ಪೆಟ್ರೋಲ್ ಇಂಧನದ ಮೂಲಕ ಚಾಲಿತಗೊಳ್ಳುವುದರಿಂದ ಇದು ತನ್ನ ಪೆಪ್ಪಿ ಹೈ ಪರ್ಫಾರ್ಮೆನ್ಸ್(High Performance) ಮತ್ತು ಇಂಧನ ಸಾಂದ್ರತೆಗೆ ಹೆಸರುವಾಸಿಯಾಗಿದೆ. ಅಲ್ಲದೆ ಬರೋಬ್ಬರಿ 82hp ಪವರ್ ಹಾಗೂ 112Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವಿರುವ ಇಗ್ನೀಸ್ ನಲ್ಲಿ ಆಟೋಮೆಟಿಕ್ ಗೇರ್ ಶಿಫ್ಟ್ ಟ್ರಾನ್ಸ್ಮಿಷನ್ ಆಯ್ಕೆಗಳಿದೆ.

ವಿಭಿನ್ನ ರೂಪಾಂತರಗಳಲ್ಲಿ ಮಾರುತಿ ಇಗ್ನಿಸ್ ಲಭ್ಯ

ಸಿಗ್ಮ, ಡೆಲ್ಟಾ, ಜೀಟಾ ಮತ್ತು ಆಲ್ಫಾ ಎಂಬ ನಾಲ್ಕು ವಿಶೇಷ ವೇರಿಯಂಟ್ ಗಳಲ್ಲಿ ಕಾರು ಲಭ್ಯವಿದೆ. ಮತ್ತಷ್ಟು ವಿಶೇಷತೆಗಳಾದ ಎಲ್ಇಡಿ ಪ್ರೋಜೆಕ್ಟರ್ ಹೆಡ್ ಲ್ಯಾಂಪ್, ಅಲಾಯ್ ಚಕ್ರಗಳು(Alloy Wheels) ಹಾಗೂ ಮುಂತಾದ ವಿಶೇಷಣಗಳನ್ನು ಅಳವಡಿಸಿರುತ್ತಾರೆ.

ಬೆಲೆ

ಗ್ರಾಹಕರ ಬಜೆಟ್ ಸ್ನೇಹಿ ಮಾರುತಿ ಸುಜುಕಿ ಇಗ್ನೀಸ್ ಕಾರನ್ನು ಕೇವಲ 4.4 ಲಕ್ಷದಿಂದ 8 ಲಕ್ಷಕ್ಕೆ ವಿಭಿನ್ನ ರೂಪಾಂತರಗಳಲ್ಲಿ ಖರೀದಿಸಬಹುದು.

ಮೈಲೇಜ್ ಸಾಮಥ್ಯ

ಪೆಟ್ರೋಲ್ ಹಾಗೂ ಸಿಎನ್‌ಜಿಯಂತ 2 ಇಂಜಿನ್ ಆಯ್ಕೆಗಳಲ್ಲಿ ಲಭ್ಯವಿರುವ ಮಾರುತಿ ಸುಜುಕಿ ಇಗ್ನಿಸ್ ಪೆಟ್ರೋಲ್ ಇಂಧನದಲ್ಲಿ ಪ್ರತಿ ಲೀಟರ್ಗೆ 20.89 km ಮೈಲೇಜ್ ನೀಡಲಿದೆ, ಅದರಂತೆ CNG ಇಂಜಿನ್ ಉಪಯೋಗಿಸಿದರೆ 35.32 km ಮೈಲೇಜ್ ನೀಡುವ ಸಾಮರ್ಥ್ಯವನ್ನು ಹೊಂದಿದೆ

advertisement

Leave A Reply

Your email address will not be published.