Karnataka Times
Trending Stories, Viral News, Gossips & Everything in Kannada

ಮತ್ತೆ ಮಾರುಕಟ್ಟೆಗೆ ಬರಲಿದೆ 70ರ ದಶಕದ ಈ ಬೈಕ್! ಬುಲೆಟ್ ಗೆ ನೇರ ಪೈಪೋಟಿ, ಕಡಿಮೆ ಬೆಲೆ

advertisement

ಭಾರತದ ಆಟೋಮೊಬೈಲ್ ಇಂಡಸ್ಟ್ರಿಯಲ್ಲಿ ಕಂಪನಿಗಳು ಕೂಡ ಗ್ರಾಹಕರ ರುಚಿಗೆ ತಕ್ಕಂತೆ ವಾಹನಗಳನ್ನು ನಿರ್ಮಾಣ ಮಾಡಿ ಅವರಿಗೆ ತಲುಪಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಇನ್ನು ಈ ರೀತಿಯ ಪ್ರಕ್ರಿಯೆ ನಡುವೆ ಈಗ 70 ರ ದಶಕದಲ್ಲಿ ಭಾರತದ ರಸ್ತೆಗಳಲ್ಲಿ ಎಲ್ಲರ ಮನೆಗೆದ್ದಿದ್ದ ದ್ವಿಚಕ್ರ ವಾಹನ ಆಗಿರುವ Rajdoot Bike ಬಗ್ಗೆ ಇವತ್ತಿನ ಲೇಖನದಲ್ಲಿ ನಾವು ನಿಮಗೆ ಹೇಳೋದಕ್ಕೆ ಹೊರಟಿದ್ದೀವಿ.

New Rajdoot Bike Launch:

 

Image Source: Cartoq

 

Rajdoot Bike ಅನ್ನು ಒಂದು ಕಾಲದಲ್ಲಿ ಅತ್ಯಂತ ಸ್ಟೈಲಿಶ್ ಬೈಕ್ ಎನ್ನುವುದಾಗಿ ಪರಿಗಣಿಸಲಾಗುತ್ತಿತ್ತು. ಈಗ ಅದೇ ಬೈಕ್ ಹೊಸ ಲುಕ್ ಹಾಗೂ ಅಡ್ವಾನ್ಸ್ ಟೆಕ್ನಾಲಜಿ ಜೊತೆಗೆ ಭಾರತದ ರೋಡುಗಳಲ್ಲಿ ಮತ್ತೆ ತನ್ನ ಪ್ರಭಾವವನ್ನು ಬೀರುವುದಕ್ಕೆ ಬರ್ತಾ ಇದೆ. ಕಂಪನಿಯ ಕಡೆಯಿಂದ ಯಾವುದೇ ರೀತಿ ಅಧಿಕೃತ ಹೇಳಿಕೆ ಬಂದಿಲ್ಲ ಆದರೆ ಎಲ್ಲಾ ಕಡೆಗಳಲ್ಲಿ ಈ ಸುದ್ದಿ ಓಡಾಡುತ್ತಿದೆ.

advertisement

70ರ ದಶಕದ ಈ ಸೂಪರ್ ಹಿಟ್ ಬೈಕ್ ಅನ್ನು ಮುಂದಿನ ಒಂದು ವರ್ಷದ ಒಳಗಾಗಿ ಭಾರತದ ಮಾರುಕಟ್ಟೆಯಲ್ಲಿ ಕಂಪನಿ ಪ್ರಸ್ತುತ ಪಡಿಸಲಿದೆ ಎನ್ನುವಂತಹ ಮಾಹಿತಿ ಕೇಳಿ ಬರುತ್ತದೆ.

ಹೊಸ Rajdoot Bike ನಲ್ಲಿ ಈ ಹಿಂದಿಗಿಂತ ಭಾರಿ ಪವರ್ ಫುಲ್ ಇಂಜಿನ್ ಅನ್ನು ಅಳವಡಿಸಲಾಗುತ್ತದೆ ಎನ್ನುವಂತಹ ಮಾಹಿತಿ ಕೂಡ ಕೇಳಿಬಂದಿದೆ. ಸದ್ಯದ ಮಟ್ಟಿಗೆ ಭಾರತದ ಮಾರುಕಟ್ಟೆಯಲ್ಲಿ ಈ ರೀತಿ ಕಾಣಿಸಿಕೊಳ್ಳುವಂತಹ ಬೈಕುಗಳು ಅಂದ್ರೆ ಅದು ಜಾವ ಹಾಗೂ ರಾಯಲ್ ಎನ್ಫೀಲ್ಡ್ (Royal Enfield). ಹೀಗಾಗಿ ಮಾರುಕಟ್ಟೆಯಲ್ಲಿ ಇಂತಹ ಬೈಕುಗಳಿಗೆ ಪೈಪೋಟಿ ನೀಡುವುದಕ್ಕಾಗಿ ಹೊಸ Rajdoot Bike ಅನ್ನು ಮಾರುಕಟ್ಟೆಗೆ ಇಳಿಸುವಂತಹ ಯೋಜನೆಯನ್ನು ಕಂಪನಿ ಮಾಡುತ್ತಿದೆ.

 

Image Source: Bikes4Sale

 

Rajdoot Bike ಈ ಬಾರಿ ಹೊಸದಾಗಿ ಕಾಣಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಕಂಪನಿ ಅತ್ಯಂತ ಸುರಕ್ಷಿತ ಬ್ರೇಕಿಂಗ್ ಸಿಸ್ಟಮ್ ಅನ್ನು ಇದರಲ್ಲಿ ಅಳವಡಿಸುವಂತಹ ಯೋಜನೆಯನ್ನು ಹಾಕಿಕೊಂಡಿದೆಯಂತೆ. ಒಟ್ಟಾರೆಯಾಗಿ ಪ್ರಯಾಣಿಕರಿಗೆ ಸುರಕ್ಷಿತ ಹಾಗೂ ಕಂಫರ್ಟೆಬಲ್ ಆಗುವಂತಹ ಡ್ರೈವಿಂಗ್ ಎಕ್ಸ್ಪೀರಿಯನ್ಸ್ ನೀಡುವಂತಹ ಯೋಜನೆಯನ್ನು ಕಂಪನಿ ಹೊಂದಿದೆ. ಮುಂದೆ ಹಾಗೂ ಹಿಂದಿನ ಚಕ್ರಗಳೆರಡರಲ್ಲೂ ಕೂಡ ಡಿಸ್ಕ್ ಬ್ರೇಕ್ ಅನ್ನು ಅಳವಡಿಸುವಂತಹ ನಿರ್ಧಾರಕ್ಕೆ ಕಂಪನಿ ಬಂದಿದೆ.

ಹೊಸ Rajdoot Bike ಭಾರತದ ಮಾರುಕಟ್ಟೆಯಲ್ಲಿ 70 ದಶಕಗಳ ಕಾಲದಲ್ಲಿ ಮೆರೆದಾಡಿದ್ದ ಸೂಪರ್ ಹಿಟ್ ಬೈಕ್ ಆಗಿತ್ತು ಆದರೆ ಈಗ ಹೊಸ ಅವತಾರದಲ್ಲಿ ಇದು ಯಾವ ರೀತಿಯಲ್ಲಿ ಕಾಣಿಸಿಕೊಳ್ಳುತ್ತದೆ ಎಂಬುದನ್ನು ನೋಡಲು ಭಾರತದ ಗ್ರಾಹಕರು ಕಾತರರಾಗಿದ್ದಾರೆ. ಭಾರತದಲ್ಲಿ ಇದು ಮಾರುಕಟ್ಟೆಗೆ ಲಾಂಚ್ ಆದರೆ 1.30 ಲಕ್ಷ ರೂಪಾಯಿಗಳ ಎಕ್ಸ್ ಶೋರೂಮ್ ಬೆಲೆಯಲ್ಲಿ ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳಬಹುದು ಎಂಬುದಾಗಿ ಅಂದಾಜು ಮಾಡಲಾಗಿದೆ.

advertisement

Leave A Reply

Your email address will not be published.