Karnataka Times
Trending Stories, Viral News, Gossips & Everything in Kannada

Ration Cards: APL ಅಥವಾ BPL ಯಾವುದೇ ರೇಷನ್ ಕಾರ್ಡ್ ಇದ್ದವರಿಗೆ ಗುಡ್ ನ್ಯೂಸ್! ವಿಶೇಷ ಅಧಿಕಾರ ಕೊಟ್ಟ ಸರ್ಕಾರ!

advertisement

Ration Card Complaint Helpline: ನಮ್ಮ ಭಾರತ ಸರ್ಕಾರ ಆಧಾರ್ ಕಾರ್ಡ್ ಜೊತೆಗೆ ಇನ್ನು ಸಾಕಷ್ಟು ದಾಖಲೆಗಳನ್ನು ಸರ್ಕಾರದ ಯೋಜನೆಯನ್ನು ನೇರವಾಗಿ ತಲುಪಿಸುವ ನಿಟ್ಟಿನಲ್ಲಿ ಪರಿಚಯಿಸಿದೆ. ಅವುಗಳಲ್ಲಿ ರೇಷನ್ ಕಾರ್ಡ್(Ration card) ಕೂಡ ಒಂದು. ರೇಷನ್ ಕಾರ್ಡ್ ಅನ್ನು ಕೇವಲ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರವನ್ನು ಪಡೆದುಕೊಳ್ಳಲು ಮಾತ್ರವಲ್ಲದೆ ಇನ್ನೂ ಸಾಕಷ್ಟು ಸರ್ಕಾರಿ ಯೋಜನೆ ಹಾಗೂ ನಿಯಮಗಳ ಅನ್ವಯ ಜಾರಿಗೆ ತಲುಪಿಸುವಂತಹ ಕೆಲಸವನ್ನು ಮಾಡಿದೆ. ಆದರೆ ಬೇರೆಯಲ್ಲ ಕೆಲಸಗಳಿಗಿಂತ ಹೆಚ್ಚಾಗಿ ರೇಷನ್ ಕಾರ್ಡ್ ಅನ್ನು ಪಡಿತರ ವಿಚಾರಕ್ಕಾಗಿ ಹೆಚ್ಚಾಗಿ ಹಾಗೂ ಪ್ರಮುಖವಾಗಿ ಬಳಸಲಾಗುತ್ತದೆ.

ಪಡಿತರ ವಿತರಣೆಯಲ್ಲಿ ಈ ರೀತಿ ಅನ್ಯಾಯ ಮಾಡಿದರೆ ಇಲ್ಲಿದೆ ನೋಡಿ ಸುಲಭ ಪರಿಹಾರ

ಸರ್ಕಾರ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ರೇಷನ್ ಕಾರ್ಡ್ ನಲ್ಲಿ ಕೂಡ ಬೇರೆ ಬೇರೆ ರೀತಿಯ ವಿಧಗಳನ್ನು ಜಾರಿಗೆ ತಂದಿದೆ. ಬಡತನದ ರೇಖೆಗಿಂತ ಮೇಲಿರುವ ಜನರಿಗೆ ಎಪಿಎಲ್ ಕಾರ್ಡ್ ಹಾಗೂ ಬಡತನದ ರೇಖೆಗಿಂತ ಕೆಳಗಿರುವ ಜನರಿಗೆ ಬಿಪಿಎಲ್ ರೇಷನ್ ಕಾರ್ಡ್ ಅನ್ನು ನೀಡಲಾಗುತ್ತದೆ. ಆದರೆ ಇತ್ತೀಚಿನ ಕೆಲವು ವರ್ಷಗಳಲ್ಲಿ ನೀವು ಗಮನಿಸಿದರೆ ಬಿಪಿಎಲ್ ರೇಷನ್ ಕಾರ್ಡ್ ಅನ್ನು ಕೂಡ ಬಡತನದ ರೇಖೆಗಿಂತ ಮೇಲೆ ಇರುವ ಜನರೇ ಪಡೆದುಕೊಳ್ಳುತ್ತಿದ್ದಾರೆ.

How to lodge a complaint against ration dealer
Image Source: Hindustan Times

advertisement

ಬಡ ಜನರಿಗೆ ಸಿಗಬೇಕಾಗಿರುವಂತಹ ಆಹಾರ ಹಾಗೂ ಇನ್ನಿತರ ಸೌಲಭ್ಯಗಳನ್ನು ಕೂಡ ಅವರು ಪಡೆದುಕೊಳ್ಳುತ್ತಿರುವುದು ನಿಜಕ್ಕೂ ಕೂಡ ಶೋಚನೀಯ ವಿಚಾರವಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಬಿಪಿಎಲ್ ರೇಷನ್ ಕಾರ್ಡ್ ಅನ್ನು ಎಲ್ಲರಿಗೂ ಕೂಡ ನೀಡಲಾಗುತ್ತಿಲ್ಲ ಕೆಲವೊಂದು ಮಾನದಂಡಗಳ ಆಧಾರದ ಮೇಲೆ ಹಾಗೂ ವಾರ್ಷಿಕ ಆದಾಯದ ವಿಚಾರದಲ್ಲಿ ಲೆಕ್ಕಾಚಾರ ಮಾಡಿಯೇ ಕಟ್ಟುನಿಟಿನ ಕ್ರಮಗಳ ಜೊತೆಗೆ ಬಿಪಿಎಲ್ ರೇಷನ್ ಕಾರ್ಡನ್ನು ನೀಡಲಾಗುತ್ತಿದೆ.

ಪ್ರಮುಖವಾಗಿ ಮತ್ತೊಂದು ಸಮಸ್ಯೆ ಏನಂದರೆ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರವನ್ನು ನೀಡುವ ಸಂದರ್ಭದಲ್ಲಿ ಕೆಲವೊಮ್ಮೆ ಅಲ್ಲಿನ ಸಿಬ್ಬಂದಿಗಳು(Ration Dealer)  ಹಾಗೂ ಅಧಿಕಾರಿಗಳು ಸರಿಯಾದ ರೀತಿಯಲ್ಲಿ ಪಡಿತರವನ್ನು ನೀಡದೇ ಇರಬಹುದು ಅಥವಾ ಆ ಸಂದರ್ಭದಲ್ಲಿ ತಮ್ಮ ದರ್ಪವನ್ನು ತೋರುವ ಅಂತಹ ಕೆಲಸವನ್ನು ಮಾಡಬಹುದಾಗಿದೆ. ಕೆಲವೊಂದು ಕಡೆಗಳಲ್ಲಿ ಕಳಪೆ ಗುಣಮಟ್ಟದ ಪಡಿತರವನ್ನು ಕಾರ್ಡುದಾರರಿಗೆ ನೀಡುವಂತಹ ಪ್ರಕ್ರಿಯೆಗಳು ಕೂಡ ನಡೆಯುತ್ತಿವೆ. ಇದನ್ನು ಗಮನಿಸಿರುವಂಥ ಸರ್ಕಾರ ಸಾಮಾನ್ಯ ಜನರಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಕೆಲವೊಂದು ಸಹಾಯವಾಣಿಯನ್ನು ಜಾರಿಗೆ ತಂದಿದೆ.

How to lodge a complaint against ration dealer
Image Source: Hindustan Times

ಬೇರೆ ಬೇರೆ ರಾಜ್ಯಗಳಿಗೆ ಬೇರೆ ಬೇರೆ ರೀತಿಯ ಸಹಾಯವಾಣಿ(Ration Helpline)  ಕೇಂದ್ರವನ್ನ ಸ್ಥಾಪಿಸಿದ್ದು ಕರ್ನಾಟಕ ರಾಜ್ಯದವರು ಈ ರೀತಿ ಯಾವುದೇ ರೀತಿಯ ಸಮಸ್ಯೆಗಳನ್ನು ನ್ಯಾಯಬೆಲೆ ಅಂಗಡಿಯಲ್ಲಿ ನೋಡಿದ್ರೆ 1800 425 3 9339 ನಂಬರ್ ಗೆ ಕರೆ ಮಾಡುವ ಮೂಲಕ ಅವರ ವಿರುದ್ಧ ದೂರು ಸಲ್ಲಿಸಬಹುದಾಗಿದೆ. ಆದಷ್ಟು ಶೀಘ್ರದಲ್ಲಿ ಆಹಾರ ಇಲಾಖೆ ಈ ರೀತಿ ನಡೆದುಕೊಂಡಂತಹ ಅಧಿಕಾರಿಯ ವಿರುದ್ಧ ಅಥವಾ ನ್ಯಾಯಬೆಲೆ ಅಂಗಡಿಯ ವಿರುದ್ಧ ಸರಿಯಾದ ಕಠಿಣ ಕ್ರಮವನ್ನು ಕೈಗೊಳ್ಳಲಿದೆ.

advertisement

Leave A Reply

Your email address will not be published.