EPFO: ದೇಶಾದ್ಯಂತ PF ಅಕೌಂಟ್ ಇದ್ದವರಿಗೆ ಬೆಳ್ಳಂಬೆಳಿಗ್ಗೆ ಗುಡ್ ನ್ಯೂಸ್! ನಿಯಮ ಬದಲಿಸಿದ ಸರ್ಕಾರ
EPF Rule Change: ಉದ್ಯೋಗಿಗಳ ಭವಿಷ್ಯನಿಧಿ ಸಂಸ್ಥೆ ಮೂಲಕ EPFO ಯೋಜನೆಯು ಅನೇಕ ಜನರಿಗೆ ಭವಿಷ್ಯದ ಅಪಾಯ ತಡೆಗಟ್ಟುವ ಸಲುವಾಗಿ ಬಹಳ ಸಹಕಾರಿ ಆಗಲಿದೆ. ಭವಿಷ್ಯದಲ್ಲಿ ನಿಮಗೆ ಪಿಂಚಣಿ ರೂಪದಲ್ಲಿ ಹಣ ಸಿಗುವ ಜೊತೆಗೆ ವೈದ್ಯಕೀಯ ಸೌಲಭ್ಯ ಕೂಡ ಸಿಗಲಿದೆ. ಈಗ ಆ ವೈದ್ಯಕೀಯ ಸೌಲಭ್ಯದ ಮೊತ್ತ ಮಿತಿಯನ್ನು ವಿಸ್ತರಣೆ ಮಾಡಲಾಗಿದ್ದು ಅನೇಕ ಚಿಕಿತ್ಸಾ ವೆಚ್ಚ ಬರಿಸಲು ಈ ಮೊತ್ತ ದೊಡ್ಡ ಮಟ್ಟದ ಕೊಡುಗೆ ನೀಡಲಿದೆ ಎಂದು ಹೇಳಬಹುದು.
EPFO ಯೋಜನೆಯು ನಿಮಗೆ ಭವಿಷ್ಯದಲ್ಲಿ ಸಿಗುವುದೇ ಆಗಿದ್ದರೂ ಅದಕ್ಕೂ ಮುನ್ನ ಠೇವಣಿ ಇರಿಸಿದ್ದ ಹಣ ಹಿಂಪಡೆಯುವ ಆಯ್ಕೆ ಇದೆ. ಮಕ್ಕಳ ಶಿಕ್ಷಣ, ಮದುವೆ ಅಥವಾ ವೈದ್ಯಕೀಯ ಸೌಲಭ್ಯ ಪಡೆಯುವ ಸಂದರ್ಭದಲ್ಲಿ EPFO ಯೋಜನೆ ಬಹಳ ಚಾಲ್ತಿಯಲ್ಲಿ ಇದೆ ಎನ್ನಬಹುದು. ಹಾಗಾಗಿ ಇಪಿಎಫ್ ನಲ್ಲಿ 8G ಕ್ಲೈಂ ಅರ್ಹತೆ ಮಿತಿಯನ್ನು ನಿಗಧಿಸಲಾಗಿದೆ. ಹಾಗಾಗಿ ಭಾಗಶಃ ಹಿಂಪಡೆಯುವ ಮೊತ್ತದಲ್ಲಿ ಭಾರೀ ಮಟ್ಟದ ಬದಲಾವಣೆ ಆಗಿದೆ ಎಂದು ಹೇಳಬಹುದು.
ಅರ್ಹತೆ ಮಿತಿ
ಇಪಿಎಫ್ಒ ಅಂದರೆ ಉದ್ಯೋಗಿ ಭವಿಷ್ಯ ನಿಧಿ ಅಡಿಯಲ್ಲಿ PF ಮೊತ್ತವನ್ನು ಭಾಗಶಃ ಹಿಂಪಡೆಯಲು ನಿಗಧಿತ ಮೊತ್ತ ಇತ್ತು. 50,000 ರೂಪಾಯಿ ತನಕ ವೈದ್ಯಕೀಯ ಸೌಲಭ್ಯ ಪಡೆಯುವ ಕಾರಣಕ್ಕೆ ಹಣ ವಾಪಾಸ್ಸು ಪಡೆಯಬಹುದಾಗಿತ್ತು. ಆದರೆ ಈಗ ಈ ಮಿತಿಯನ್ನು 50,000 ರೂಪಾಯಿ ಯಿಂದ 1 ಲಕ್ಷ ರೂಪಾಯಿ ತನಕ ಹೆಚ್ಚಿಸಲಾಗಿದೆ.ಈ ಬಗ್ಗೆ ಜನರಿಗೆ ಮಾಹಿತಿ ನೀಡುವ ಸಲುವಾಗಿ EPFO ಸಂಸ್ಥೆಯ ಮೂಲಕ ಸುತ್ತೋಲೆಯಲ್ಲಿ ಎಪ್ರಿಲ್ 16ರಿಂದ ಈ ಬಗ್ಗೆ ಅಧಿಕೃತ ಆದೇಶ ನೀಡಲಾಗಿದೆ.
ಫಾರ್ಮ್ 31ರ ಅಡಿಯಲ್ಲಿ ಅನುಮತಿ
ಪಿಂಚಣಿ ಮೊತ್ತ ಮರುಪಡೆಯುವ ವಿಚಾರಕ್ಕೆ ಸಂಬಂಧಿಸಿದಂತೆ ಈಗಾಗಲೇ ಅನೇಕ ಅಂಶ ಬದಲಾವಣೆ ಆಗಿದೆ. 2010 ಎಪ್ರಿಲ್ 10ರಂದು ಅಪ್ಲಿಕೇಶನ್ ಸಾಫ್ಟ್ವೇರ್ ನಲ್ಲಿ ಮಹತ್ವದ ಬದಲಾವಣೆ ಮಾಡಿದೆ. ಇದಕ್ಕೆ ಭವಿಷ್ಯ ನಿಧಿ ಆಯುಕ್ತರಿಂದ ಅನುಮತಿ ಸಹ ಸಿಕ್ಕಿದೆ. ಹಾಗಾಗಿ ಜನರ ಭವಿಷ್ಯ ನಿಧಿ ಹಣವನ್ನು ಹಲವಾರು ಉದ್ದೇಶಕ್ಕೆ ಹಿಂಪಡೆಯುವ ಕುರಿತು ಫಾರ್ಮ್ 31ರಲ್ಲಿ ಭವಿಷ್ಯ ನಿಧಿ ಹಣ ಹಿಂಪಡೆಯುವ ಹಕ್ಕನ್ನು ಉಲ್ಲೇಖಿಸಲಾಗುತ್ತಿದ್ದು ಅದರ ಪ್ರಕಾರ ಅಗತ್ಯ ಬದಲಾವಣೆ ಮಾಡಿ ಆಯುಕ್ತರಿಂದ ಅನುಮತಿ ಕೂಡ ಪಡೆದಿದೆ.
ಸಹಿ ಅಗತ್ಯ
ಅನಾರೋಗ್ಯ ಕಾರಣ ಎಂದು ನೆಪವೊಡ್ಡಿ ಹಣ ಹಾಗೆಯೇ ಪಡೆಯುವಂತಿಲ್ಲ ಅದರ ಬದಲು ಸೂಕ್ತ ದಾಖಲೆ ಕೂಡ ಅಗತ್ಯ. ಅನಾರೋಗ್ಯ ಎಂಬುದೇ ಆಗಿದ್ದರೆ ವೈದ್ಯಕೀಯ ದಾಖಲೆ ಜೊತೆ ಡಾಕ್ಟರ್ ಸಹಿ ಹೊಂದಿರುವುದು ಅವಶ್ಯಕ ವಾಗಿದೆ. ಫಾರ್ಮ್ 31ರ ಅನ್ವಯ ಉದ್ಯೋಗಿ ಅಥವಾ ಚಂದಾದಾರರ ಸಹಿ ಜೊತೆಗೆ ವೈದ್ಯರ ಸಹಿ ಕೂಡ ಅಗತ್ಯವಾಗಿ ಇರಬೇಕು.ಈ ಮೂಲಕ ಬದಲಾವಣೆ ಅನೇಕ ಆರೋಗ್ಯ ಸಂಬಂಧಿತ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಹಣಕಾಸಿನ ನೆರವಾಗಲಿದೆ.