Karnataka Times
Trending Stories, Viral News, Gossips & Everything in Kannada

Ration Card List 2024: ಎಪ್ರಿಲ್ ತಿಂಗಳ ರದ್ದಾದ ರೇಷನ್ ಕಾರ್ಡ್ ಲಿಸ್ಟ್ ಬಿಡುಗಡೆ! ಈ ಡೈರೆಕ್ಟ್ ಲಿಂಕ್ ಮೂಲಕ ತಿಳಿದುಕೊಳ್ಳಿ

advertisement

ರೇಷನ್ ಕಾರ್ಡ್ (Ration Card) ಎಂಬುದು ಪ್ರತಿಯೊಬ್ಬರಿಗೂ ಬಹಳ ಮುಖ್ಯ ವಾದ ದಾಖಲೆ ಯಾಗಿದ್ದು ಈ ಕಾರ್ಡ್ ಮೂಲಕ ಉಚಿತ ಆಹಾರ ಧಾನ್ಯಗಳನ್ನು ಜನರು ಪಡೆಯುತ್ತಿದ್ದಾರೆ.‌ ಅದರ ಜೊತೆ ಈ ಕಾರ್ಡ್ ಇದ್ದರೆ ಸರಕಾರದಿಂದಲೂ ಅನೇಕ ರೀತಿಯ ಸೌಲಭ್ಯ ಗಳು ಜನತೆಗೆ ಸಿಗುತ್ತಿದೆ.

ಅದರಲ್ಲೂ ಬಡ ವರ್ಗದ ಜನತೆಗೆ ಈ ಕಾರ್ಡ್ ಬಹಳ ನೇರವಾಗುತ್ತಿದ್ದು ಇಂದು ಆಹಾರ ಧಾನ್ಯಗಳ ಜೊತೆ ಮನೆಯ ಯಜಮಾನನ ಖಾತೆಗೆ ಹಣ ಕೂಡ ಜಮೆಯಾಗುತ್ತಿದೆ.‌ ಈ ಕಾರ್ಡ್ ಹೊಂದಲು ಕೆಲವೊಂದು ಮಾನದಂಡಗಳಿದ್ದು ಆ ಅರ್ಹತೆ ಇದ್ದರೆ ಮಾತ್ರ ದೊರೆಯಲಿದೆ.ಆದ್ರೆ ಇಂದು ಈ ಕಾರ್ಡ್ ಅನ್ನು ಇಂದು ದುರುಪಯೋಗ ಮಾಡುವ ಸಂಖ್ಯೆ ಕೂಡ ಹೆಚ್ಚಾಗಿದೆ

ಕಾರ್ಡ್ ರದ್ದು:

 

Image Source: Times of India

 

ಈಗಾಗಲೇ ರೇಷನ್ ಕಾರ್ಡ್ ಅನ್ನು ಬಿಪಿಎಲ್ (BPL Ration Card), ಅಂತ್ಯೋದಯ (Antyodaya), ಎಪಿಎಲ್ (APL Ration Card) ಎಂದು ಮೂರು ವಿಧಗಳಾಗಿ ವಿಂಗಡಣೆ ಮಾಡಲಾಗಿದ್ದು ಈ ಕಾರ್ಡ್ ಅನ್ನು ದುರುಪಯೋಗ ಮಾಡಿಕೊಂಡಿರುವ ಸಂಖ್ಯೆ ಹೆಚ್ಚಾಗಿದೆ.

advertisement

  • 6 ತಿಂಗಳಿಂದ ಪಡಿತರ ಪಡೆಯದ ಇದ್ದ ಬಳಕೆದಾರರ ಕಾರ್ಡ್ ಅನ್ನು ಸರಕಾರ ರದ್ದು ಮಾಡಿದೆ.ಆಹಾರ ಧಾನ್ಯಗಳನ್ನು ಪಡೆಯದೇ ಕೇವಲ ಸರಕಾರಿ ಸೌಲಭ್ಯ ಪಡೆಯಲು ಕಾರ್ಡ್ ಬಳಕೆ ಮಾಡಿಕೊಂಡಿದ್ದರೆ ಕಾರ್ಡ್ ರದ್ದು ಆಗಲಿದೆ.
  • ಅದೇ ರೀತಿ ಅರ್ಹರಲ್ಲದ ಜನರು, ಸರಕಾರಿ ಉದ್ಯೋಗ ಮಾಡುವ ಫಲಾನುಭವಿಗಳು ಸುಳ್ಳು ದಾಖಲೆ ನೀಡಿ ಬಿಪಿಎಲ್ ಕಾರ್ಡ್ ಮಾಡಿಕೊಂಡಿದ್ದರೆ ಅಂತಹ ಕಾರ್ಡ್ ಗಳನ್ನು ರದ್ದು ಮಾಡಲಾಗುತ್ತದೆ.
  • ಸರಕಾರ ನಿಗದಿ ಪಡಿಸಿದ ಆದಾಯ ಮೀರಿಯು ರೇಷನ್ ಕಾರ್ಡ್ (Ration Card) ‌ಹೊಂದಿದ್ದರೆ ಇಂತಹ ಕಾರ್ಡ್ ಅನ್ನು ಸಹ ರದ್ದು ಮಾಡಲಿದೆ.

ಕಾರ್ಡ್ ರದ್ದು ಆಗಿದೆಯೇ?

ನೀವು https://ahara.kar.nic.in ಈ ಲಿಂಕ್ ಕ್ಲಿಕ್ ಮಾಡಿ, ಇ ಪಡಿತರ ಚೀಟಿ ಎಂಬ ಆಪ್ಚನ್ ಕ್ಲಿಕ್ ಮಾಡಿ‌ ಇದರಲ್ಲಿ ರದ್ದು ಮಾಡಲಾದ, ತಡೆಹಿಡಿಯಲಾದ ಆಯ್ಕೆ ಇರಲಿದ್ದು ನಿಮ್ಮ ಹೆಸರು, ಕಾರ್ಡ್ ನಂ ನಮೂದಿಸಿ. ನಂತರದಲ್ಲಿ ನಿಮ್ಮ ಜಿಲ್ಲೆ, ತಾಲೂಕನ್ನು ಆಯ್ಕೆ ಮಾಡಿಕೊಳ್ಳಿ. ಇದರಲ್ಲಿ ಕಾರ್ಡ್ (Ration Card) ರದ್ದು ಆದ ಮಾಹಿತಿ ನಿಮಗೆ ಸಿಗಲಿದೆ.

ಹೊಸ ರೇಷನ್ ಕಾರ್ಡ್:

 

Image Source: DNA India

 

ಈಗಾಗಲೇ ಕಾಂಗ್ರೆಸ್ ಸರಕಾರದ ಗ್ಯಾರಂಟಿ ಯೋಜನೆಗಳಿಗೆ ರೇಷನ್ ಕಾರ್ಡ್ (Ration Card) ಎಂಬುದು ಬಹಳ ಕಡ್ಡಾಯ ವಾಗಿದ್ದು ಹಾಗಾಗಿ ಹೊಸ ಕಾರ್ಡ್ ಪಡೆಯಲು ಹೆಚ್ಚಿನ ಜನರು ಕಾತುರದಿಂದ ಕಾಯುತ್ತಿದ್ದು ಸರಕಾರ ಎಪ್ರಿಲ್ ‌ಒಂದರಿಂದ ಆಪ್ಲೈ ಮಾಡಲು ಅವಕಾಶ ನೀಡಿದೆ. ಅದೇ ರೀತಿಸಾಕಷ್ಟು ಜನ ಹಣಕ್ಕಾಗಿ ನಕಲಿ ರೇಷನ್ ಕಾರ್ಡ್ ಕೂಡ ತಯಾರು ಮಾಡಿಕೊಳ್ಳುತ್ತಿದ್ದಾರೆ, ಇದಕ್ಕಾಗಿ ಆಹಾರ ಇಲಾಖೆಯು ಸೂಕ್ಷ್ಮ ವಾಗಿ ಕಣ್ಣಿಟ್ಟಿದೆ ಎಂದು ಹೇಳಬಹುದು.

advertisement

Leave A Reply

Your email address will not be published.