Karnataka Times
Trending Stories, Viral News, Gossips & Everything in Kannada

Ration Card: 3 ತಿಂಗಳು ರೇಷನ್ ಪಡೆಯದಿದ್ದರೆ ಕಾರ್ಡ್ ಕ್ಯಾನ್ಸಲ್ ಆಗುತ್ತಾ? ಕೇಂದ್ರದಿಂದ ಹೊಸ ಸ್ಪಷ್ಟನೆ

advertisement

Ration Card News: ಸೋಶಿಯಲ್ ಮೀಡಿಯಾದಲ್ಲಿ ರೇಷನ್ ಕಾರ್ಡ್ ಬಗ್ಗೆ ಕೆಲವೊಂದು ಸುದ್ದಿಗಳು ಹರಿದಾಡುತ್ತಿವೆ. ಹೊಸದಾಗಿ ಜಾರಿಗೆ ಬರುತ್ತಿರುವ (One Nation One Ration) ಅಡಿಯಲ್ಲಿ ಮೂರು ತಿಂಗಳುಗಳ ಕಾಲ ರೇಷನ್ ಪಡೆಯದೆ ಹೋದಲ್ಲಿ ರೇಷನ್ ಕಾರ್ಡ್ ಅನ್ನು ಕ್ಯಾನ್ಸಲ್ ಮಾಡಲಾಗುತ್ತಿದೆ ಎನ್ನುವಂತಹ ಸುದ್ದಿಗಳು ಹರಿದಾಡುತ್ತಿವೆ. ಇದು ಎಷ್ಟರ ಮಟ್ಟಿಗೆ ನಿಜ ಅಥವಾ ಸುಳ್ಳು ಅನ್ನೋದನ್ನ ಇವತ್ತಿನ ಈ ಲೇಖನದ ಮೂಲಕ ನಿಮಗೆ ತಿಳಿಸಲು ಹೊರಟಿದ್ದೇವೆ.

ಈ ಸುದ್ದಿಯ ನಿಜಾಂಶ ಇಲ್ಲಿದೆ ನೋಡಿ

ಒನ್ ನೇಷನ್ ಒನ್ ರೇಷನ್ ಯೋಜನೆ ಅಡಿಯಲ್ಲಿ ಮೂರು ತಿಂಗಳುಗಳ ಕಾಲ ಒಂದು ವೇಳೆ ರೇಷನ್ ಪಡೆದುಕೊಳ್ಳದೆ ಹೋದಲ್ಲಿ ರೇಷನ್ ಕಾರ್ಡ್ ಅನ್ನು ಕ್ಯಾನ್ಸಲ್ ಮಾಡುತ್ತಾರೆ ಎನ್ನುವಂತಹ ರೂಲ್ಸ್ ಜಾರಿಗೆ ಬಂದಿದ್ದು ಎನ್ನುವುದಾಗಿ ಪೋಸ್ಟ್ಗಳು ಸೋಶಿಯಲ್ ಮೀಡಿಯಾದಲ್ಲಿ ಓಡಾಡುತ್ತಿದ್ದವು. ಆದರೆ ಈಗ PIB Fact Check ಸ್ಪಷ್ಟಪಡಿಸಿರುವಂತಹ ಮಾಹಿತಿ ಪ್ರಕಾರ ಇದು ಸಂಪೂರ್ಣ ಸುಳ್ಳು ಸುದ್ದಿಯಾಗಿದೆ ಎಂದು ತಿಳಿದು ಬಂದಿದೆ.

RATION CARD CANCEL RULES
Credits: India Today

advertisement

ಈಗಾಗಲೇ ಒಂಬತ್ತು ರಾಜ್ಯಗಳಲ್ಲಿ ಈ ರೀತಿಯ ಒನ್ ನೇಷನ್ ಒನ್ ರೇಷನ್ ಯೋಜನೆಯನ್ನು ಜಾರಿಗೊಳಿಸಲಾಗಿದ್ದು ದೇಶದ ಪ್ರತಿಯೊಂದು ಭಾಗದಲ್ಲಿಯೂ ಕೂಡ ರೇಷನ್ ಅನ್ನು ಭಾರತದ ನಾಗರಿಕ ಪಡೆದುಕೊಳ್ಳಬಹುದಾಗಿದೆ. ಆಂಧ್ರಪ್ರದೇಶ ಗೋವಾ ಹರಿಯಾಣ ಕರ್ನಾಟಕ ಕೇರಳ ತೆಲಂಗಾಣ ತ್ರಿಪುರ ಹಾಗೂ ಉತ್ತರ ಪ್ರದೇಶದಲ್ಲಿ ಈ ನಿಯಮವನ್ನು ಜಾರಿಗೆ ತರಲಾಗಿದೆ. ಈ ಯೋಜನೆ ಅಡಿಯಲ್ಲಿ ದೇಶದ ಯಾವುದೇ ಮೂಲೆಯಲ್ಲಿ ಕೂಡ ಭಾರತ ದೇಶದ ನಾಗರಿಕ ತನ್ನ ರೇಷನ್ ಕಾರ್ಡ್ ಅನ್ನು ಬಳಸಿಕೊಳ್ಳುವ ಮೂಲಕ ಯಾವುದೇ ನ್ಯಾಯ ಬೆಲೆ ಅಂಗಡಿಗಳಲ್ಲಿ ತನ್ನ ಪಡಿತರವನ್ನು ಪಡೆದುಕೊಳ್ಳಬಹುದಾಗಿದೆ.

ಒನ್ ನೇಷನ್ ಒನ್ ರೇಷನ್ ಕಾರ್ಡಿನ ಲಾಭಗಳು

ಈ ಯೋಜನೆ ಅಡಿಯಲ್ಲಿ ಸರ್ಕಾರ ನ್ಯಾಷನಲ್ ಫುಡ್ ಸೆಕ್ಯೂರಿಟಿ ಆಕ್ಟ್ ಪ್ರಕಾರ ಫಲಾನುಭವಿಗಳಿಗೆ ಸಿಗಬೇಕಾಗಿರುವಂತಹ ಆಹಾರ ಧಾನ್ಯಗಳನ್ನು ನೀಡುವಂತಹ ಕೆಲಸವನ್ನು ಮಾಡಲಿದೆ. ಈ ನಿಯಮಗಳ ಮೂಲಕ ಭಾರತೀಯರು ಅಕ್ಕಿ ಪ್ರತಿ ಕೆಜಿಗೆ ಮೂರು ರೂಪಾಯಿ ಹಾಗೂ ಗೋಧಿ ಪ್ರತಿ ಕೆಜಿಗೆ ಎರಡು ರೂಪಾಯಿಗಳ ಬೆಲೆಯಲ್ಲಿ ಅರ್ಹ ನಾಗರಿಕರಿಗೆ ನೀಡಬೇಕಾಗಿರುತ್ತದೆ.

RATION CARD CANCEL RULES
Image Source: National News Analysis

ಹೀಗಾಗಿ ಸೋಶಿಯಲ್ ಮೀಡಿಯಾದಲ್ಲಿ ಮೂರು ತಿಂಗಳವರೆಗೆ ರೇಷನ್ ಪಡೆದುಕೊಳ್ಳದೇ ಹೋದಲ್ಲಿ ರೇಷನ್ ಕಾರ್ಡ್ ಕ್ಯಾನ್ಸಲ್ ಆಗುತ್ತದೆ ಎನ್ನುವಂತಹ ಮಾಹಿತಿಗಳು ಸುಳ್ಳು ಅನ್ನೋದನ್ನ ನಾವು ಈ ಮೂಲಕ ತಿಳಿದುಕೊಳ್ಳಬಹುದಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಆಗಾಗ ಈ ರೀತಿಯ ಸತ್ಯಕ್ಕೆ ದೂರವಾಗಿರುವ ಮಾತುಗಳು ಕೇಳಿ ಬರಬಹುದು ಆ ಸಂದರ್ಭದಲ್ಲಿ ಸರ್ಕಾರಿ ಮೂಲಗಳಿಂದ ಆ ಮಾತುಗಳನ್ನು ಕ್ರಾಸ್ ಚೆಕ್ ಮಾಡಿಕೊಳ್ಳಬೇಕಾಗಿರುತ್ತದೆ.

advertisement

Leave A Reply

Your email address will not be published.