Karnataka Times
Trending Stories, Viral News, Gossips & Everything in Kannada

Ration Card: ರೇಷನ್ ಕಾರ್ಡ್ ಇದ್ದವರಿಗೆ ಗುಡ್ಈ ನ್ಯೂಸ್! ಈ ಲಿಸ್ಟ್ ನಲ್ಲಿ ನಿಮ್ಮ ಹೆಸರಿದ್ದರೆ 5 ಲಕ್ಷವರೆಗಿನ ಉಚಿತ ಚಿಕಿತ್ಸೆ!!

advertisement

Ayushman Beneficiary  List: ಸ್ನೇಹಿತರೆ ಕೇಂದ್ರ ಸರ್ಕಾರವು ಭಾರತದ ಪ್ರತಿ ಬಡ ಕುಟುಂಬಗಳಿಗೆ ಸಹಾಯ ಮಾಡುವ ಸಲುವಾಗಿ ನಾನಾ ರೀತಿಯಾದಂತಹ ಯೋಜನೆಗಳನ್ನು(Various Schemes) ಜಾರಿಗೆ ತಂದಿದೆ. ಕಾಯಿಲೆಯಿಂದ ಬಳಲುತ್ತಿರುವಂತಹ ಯಾವುದೇ ಭಾರತೀಯ ಸಾರ್ವಜನಿಕರು ಕೂಡ ಪ್ರಾಥಮಿಕ ಚಿಕಿತ್ಸೆಯಿಂದ ವಂಚಿತರಾಗಬಾರದೆಂಬ ಕಾರಣಕ್ಕೆ ಆಯುಷ್ಮಾನ್ ಭಾರತ್ ಯೋಜನೆ(Ayushman Bharat Scheme) ಯನ್ನು ಜಾರಿಗೆ ತಂದಿದ್ದು, ಭಾರತೀಯ ನಾಗರಿಕರು ಈ ಯೋಜನೆಯಿಂದ ಲಾಭ ಪಡೆದುಕೊಳ್ಳುವುದು ಹೇಗೆ? ಸರ್ಕಾರ ಪ್ರಕಟಣೆ ಮಾಡಿರುವಂತಹ ಹೊಸ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೇ ಪರಿಶೀಲಿಸುವುದು ಹೇಗೆ? ಎಂಬ ಸಂಪೂರ್ಣ ವಿವರವನ್ನು ಈ ಪುಟದ ಮುಖಾಂತರ ತಿಳಿದುಕೊಳ್ಳಿ.

ಆಯುಷ್ಮಾನ್ ಭಾರತ್ ಯೋಜನೆ

ಭಾರತ ಸರ್ಕಾರವು 2018ರಲ್ಲಿ ಆಯುಷ್ಮಾನ್ ಭಾರತ್ ಯೋಜನೆಯನ್ನು ಜಾಲಿಗೊಳಿಸಿತು. ಭಾರತವು ಅತಿ ಹೆಚ್ಚಿನ ಜನಸಂಖ್ಯೆ ಹೊಂದಿರುವಂತಹ ದೇಶವಾದರೆ ನೂರರಲ್ಲಿ 40% ನಷ್ಟು ಕೆಳ ವರ್ಗದ ಜನರು(Lower Class People) ಸಾಮಾನ್ಯ ಸೌಲಭ್ಯಗಳಿಂದ ವಂಚಿತರಾಗಿ ನಡೆಸುತ್ತಿದ್ದಾರೆ ಕಾಯಿಲೆಯಿಂದ ನರಳುತ್ತಿದ್ದರು ಕೂಡ ಚಿಕಿತ್ಸೆ ಪಡೆದುಕೊಳ್ಳಲು ಅವರ ಬಳಿ ಹಣವಿರುವುದಿಲ್ಲ, ಇಂತಹ ಬಡವರು, ನಿರ್ಗತಿಕರನ್ನು ಗಮನದಲ್ಲಿಟ್ಟುಕೊಂಡು ಭಾರತ ಸರ್ಕಾರವು ಈ ಆಯುಷ್ಮಾನ್ ಭಾರತ್ ಯೋಜನೆಯನ್ನು ಜಾರಿಗೆ ತಂದಿದ್ದಾರೆ. ಈ ಯೋಜನೆ ಅಡಿಯಲ್ಲಿ ಬಡ ಕುಟುಂಬಗಳಿಗೆ 5 ಲಕ್ಷ ಆರೋಗ್ಯ ವಿಮೆ(Health Insurance) ಯನ್ನು ನೀಡಲಾಗುತ್ತದೆ. ಆಯುಷ್ಮನ್ ಯೋಜನೆಗೆ ಅರ್ಜಿ ಸಲ್ಲಿಸಿ ಇದರ ಪ್ರಯೋಜನವನ್ನು ಇಡೀ ಕುಟುಂಬ ಸದಸ್ಯರು ಪಡೆದುಕೊಳ್ಳಬಹುದು.

How do I check my ayushman list?How can I check my pmjay status online?
How to download Ayushman Bharat card list?
What is ayushman ID number?
Image Source: India Today

ಆಯುಷ್ಮಾನ್ ಕಾರ್ಡ್

ಆಯುಷ್ಮಾನ್ ಯೋಜನೆಗೆ ಅರ್ಜಿ ಸಲ್ಲಿಸಿ ನಿಮ್ಮ ಅರ್ಜಿಯನ್ನು ಅನುಮೋದಿಸಿದ ನಂತರ ಸರ್ಕಾರದಿಂದ ನಿಮಗೆ ಆಯುಷ್ಮಾನ್ ಕಾರ್ಡ್ ಲಭ್ಯವಾಗುತ್ತದೆ. ಇದರಿಂದಾಗಿ ಸರ್ಕಾರಿ ಅಥವಾ ಖಾಸಗಿ ಆಸ್ಪತ್ರೆಗಳಲ್ಲಿ ಫಲಾನುಭವಿಗಳು 5 ಲಕ್ಷ ವರೆಗೂ ಉಚಿತ ಚಿಕಿತ್ಸೆಯನ್ನು ಪಡೆದುಕೊಳ್ಳಬಹುದು. ಪ್ರತಿ ವರ್ಷವೂ ಆಯುಷ್ಮಾನ್ ಕಾರ್ಡನ್ನು ನವೀಕರಿಸುವ ಮೂಲಕ ಯಾವುದೇ ಖರ್ಚಿಲ್ಲದೆ ನಿಮ್ಮ ಎಲ್ಲಾ ಆರೋಗ್ಯ ಸಮಸ್ಯೆಗಳಿಗೂ ಉಚಿತ ಚಿಕಿತ್ಸೆಯನ್ನು ಪಡೆದುಕೊಳ್ಳಬಹುದು. ಈ ಕಾರ್ಡನ್ನು ಉಪಯೋಗಿಸದೆ ಹೋದರೆ ನಿಮ್ಮ 5 ಲಕ್ಷ ಹಣವು ಲ್ಯಾಪ್ಸ್ ಆಗುತ್ತದೆ, ಜೊತೆಗೆ ಆಸ್ಪತ್ರೆಗಳಲ್ಲಿ ಹೊರತು ಪಡಿಸಿ ಕಾರ್ಡ್ ನಲ್ಲಿ ಲಭ್ಯವಿರುವಂತಹ ಹಣವನ್ನು ಬೇರೆ ಕಾರ್ಯಗಳಿಗೆ ಅಥವಾ ಕ್ಯಾಶ್ ರೂಪದಲ್ಲಿ ಉಪಯೋಗಿಸಲಾಗುವುದಿಲ್ಲ.

ಆಯುಷ್ಮಾನ್ ಯೋಜನೆಯ ಹೊಸ ಪಟ್ಟಿ ಬಿಡುಗಡೆ

advertisement

2023-24ನೇ ಸಾಲಿನ ಆಯುಷ್ಮಾನ್ ಯೋಜನೆಗೆ ಅರ್ಜಿ ಸಲ್ಲಿಸಿರುವಂತಹ ಫಲಾನುಭವಿಗಳ ಹೆಸರನ್ನು ಪಟ್ಟಿಯಲ್ಲಿ ಬಿಡುಗಡೆ ಮಾಡಲಾಗಿದೆ, ಈ ಕೆಳಗಿನ ಕ್ರಮ ಅನುಸರಿಸುವ ಮೂಲಕ ಪಟ್ಟಿಯಲ್ಲಿ ನಿಮ್ಮ ಹೆಸರು ಕೂಡ ಬಂದಿದೆಯೇ? ಎಂಬುದನ್ನು ಒಮ್ಮೆ ಪರಿಶೀಲಿಸಿ.

•ಗೂಗಲ್ ನಲ್ಲಿ ಲಭ್ಯವಿರುವಂತಹ www.pmjay.gov.in ಎಂಬ ಅಧಿಕೃತ ವೆಬ್ಸೈಟ್ ಗೆ ಹೋಗಿ ಕೇಳಲಾಗುವಂತಹ ದಾಖಲಾತಿಗಳನ್ನೆಲ್ಲ ಸರಿಯಾಗಿ ನಮೂದಿಸಿ.

•ಪ್ರಧಾನ ಮಂತ್ರಿ ಆಯುಷ್ಮಾನ್ ಭಾರತ್ ಯೋಜನೆಗೆ ಅರ್ಜಿ ಸಲ್ಲಿಸಬಹುದು ನಂತರ ಅದೇ ವೆಬ್ಸೈಟ್ನಲ್ಲಿ ಲಭ್ಯವಿರುವ ಗೋ ಟು ಮೆನ್ಯೂ(go to menu) ಎಂಬ ಆಪ್ಷನ್ ಅನ್ನು ಕ್ಲಿಕ್ ಮಾಡಿ.

How do I check my ayushman list?How can I check my pmjay status online?
How to download Ayushman Bharat card list?
What is ayushman ID number?
Image Source: India Today

•(Portals) ಆಯ್ಕೆಯಲ್ಲಿ ಬರುವಂತಹ ವಿಲೇಜ್ ಲೆವೆಲ್ SECC Data(Village Level SECC Data) ಆಯ್ಕೆಯನ್ನು ಕ್ಲಿಕ್ ಮಾಡಿದರೆ ಹೊಸ ಪುಟ ಒಂದು ತೆರೆದು ಅಲ್ಲಿ ನಿಮ್ಮ ಮೊಬೈಲ್ ನಂಬರ್ ಮತ್ತು ಒಟಿಪಿಯನ್ನು ನಮೂದಿಸುವಂತೆ ಸೂಚಿಸುತ್ತಾರೆ.

* ನಿಮ್ಮ ಮೊಬೈಲ್ ದೂರವಾಣಿ ಸಂಖ್ಯೆ ಹಾಗೂ SMS ರೂಪದಲ್ಲಿ ಬಂದಂತಹ ಓಟಿಪಿಯನ್ನು ಹಾಕಿದರೆ, ಸ್ಟೇಟ್ ಡಿಸ್ಟ್ರಿಕ್ಟ್ ಮತ್ತು ಬ್ಲಾಕ್(State District And Block) ಎನ್ನುವ ಆಪ್ಷನ್ಗಳು ಕಾಣಿಸುತ್ತದೆ.

•ಆ ಪಟ್ಟಿಯ ಕೆಳಗಡೆ ಲಭ್ಯವಾಗುವ PDF ಅನ್ನು ನಿಮ್ಮ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿದರೆ ಆಯುಷ್ಮಾನ್ ಭಾರತ್ ಯೋಜನೆ(Ayushman Bharat Scheme) ಯ ಪಟ್ಟಿಯಲ್ಲಿ ನಿಮ್ಮ ಹೆಸರು ಲಭ್ಯವಾಗಿದೆಯೇ ಎಂಬುದನ್ನು ಹುಡುಕಬಹುದು.

advertisement

Leave A Reply

Your email address will not be published.