Karnataka Times
Trending Stories, Viral News, Gossips & Everything in Kannada

Tata Car: ಇನೋವಾಗಿಂತ ಅರ್ಧ ಬೆಲೆಗೆ ಬರಲಿದೆ ಟಾಟಾದ 14 ಸೀಟರ್ ನ ಈ ಕಾರು! ದೇಶದ ಜನತೆಗೆ ಸಿಹಿಸುದ್ದಿ

advertisement

ನಿಮ್ಮದೇನಾದರೂ ಕೂಡು ಕುಟುಂಬವಾಗಿದ್ದರೆ ಅಥವಾ ಶಾಲಾ ಕಾಲೇಜು ಮಕ್ಕಳ ಡ್ರೈವರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ 14 ಸೀಟಿನ ಟಾಟಾ ವಿಂಗರ್(14 seater Tata Winger) ಕಾರು ನಿಮ್ಮ ಅತ್ಯುತ್ತಮ ಆಯ್ಕೆ. ಬಹಳ ವಿಶಾಲವಾದ ಒಳಾಂಗಣ, 14 ಜನರು ಆರಾಮದಾಯಕವಾಗಿ ಕುಳಿತು ಪ್ರಯಾಣಿಸಬಹುದಾದ ಸೌಲಭ್ಯ. ಗಾಳಿ ಆಡುವಂತಹ ಬೃಹತಾಕಾರದ ಕಿಟಕಿಗಳನ್ನು ಹೊಂದಿರುವ ಟಾಟಾ ವಿಂಗರ್ ಕಾರು ಇತ್ತೀಚಿಗಷ್ಟೇ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು, ಟಾಟಾ ಕಂಪನಿಯು(Tata Company) ಬೆಲೆ ಏರಿಕೆ ಮಾಡದೆ ಸಾಮಾನ್ಯ ಜನರ ಕೈಗೆಟಕುವಂತಹ ಬೆಲೆಗೆ ಅತ್ಯಾಕರ್ಷಕ ಬಣ್ಣ ವೈಶಿಷ್ಟ್ಯತೆ ಹಾಗೂ ಮೈಲೇಜ್ ಸಾಮರ್ಥ್ಯ(Mileage capacity) ವಿರುವ ಕಾರನ್ನು ನೀಡುತ್ತಿದ್ದಾರೆ.

ಟಾಟಾ ವಿಂಗರ್ ಬೆಲೆ

ಟಾಟಾ ಕಂಪನಿಯ ವಿಂಗರ್ 14 ಸೀಟಿನ ಕಾರಿನ ಬೆಲೆಯು ಒಂದು ಸಿಟಿಯಿಂದ ಮತ್ತೊಂದು ಸಿಟಿಗೆ ವಿಭಿನ್ನವಾಗಿದ್ದು, ದೆಹಲಿಯ ಎಕ್ಸ್ ಶೋರೂಮ್ ನಲ್ಲಿ 15 ಲಕ್ಷಕ್ಕೆ ಬೆಲೆಯನ್ನು ನಿಗದಿಪಡಿಸಬಹುದೆಂದು ಅಂದಾಜಿಸಲಾಗಿದೆ. ಟಾಪ್ ವೇರಿಯಂಟ್ಗಳ ಮೇಲಿನ ಬೆಲೆಯಲ್ಲಿ ಸ್ವಲ್ಪ ಏರಿಕೆ ಇರಲಿದೆ.

ಮೈಲೇಜ್ ಸಾಮರ್ಥ್ಯ

advertisement

ಸಾಮಾನ್ಯವಾಗಿ ಟಾಟಾ ಕಂಪನಿಯ ಎಲ್ಲಾ ಕಾರುಗಳು ಕೂಡ ಸಾಮಾನ್ಯ ಜನರ ಕೈಗೆಟುಕುವಂತಹ ಬೆಲೆಯಲ್ಲಿ ಇರಲಿದೆ. ಜೊತೆಗೆ ಅದ್ಭುತವಾದ ಮೈಲೇಜ್ ಸಾಮರ್ಥ್ಯವನ್ನು ಒದಗಿಸುತ್ತದೆ. ಅದರಂತೆ ಟಾಟಾ ವಿಂಗರ್(Tata Winger) ಕೂಡ ತನ್ನ ರೇಂಜ್ ನಲ್ಲಿ ಗ್ರಾಹಕರನ್ನು ಎಂದಿಗೂ ಬೇಸರಪಡಿಸುವುದಿಲ್ಲ, ವಿಂಗರ್ 17 Kmpl ಮೈಲೇಜ್ ನೀಡುವ ಸಾಮರ್ಥ್ಯವನ್ನು ಹೊಂದಿದ್ದು, ಇದರಿಂದಾಗಿ ಪ್ರತಿದಿನ ಡೀಸೆಲ್ ಹಣವನ್ನು ಉಳಿಸಬಹುದು.

Image Source: Cardekho

ಟಾಟಾ ವಿಂಗರ್ 14 ಸೀಟಿನ ಕಾರಿನಲ್ಲಿ ಎಣಿಸಲಾಗದಷ್ಟು ನೂತನ ಫೀಚರ್ಸ್ ಗಳನ್ನು ಅಳವಡಿಕೆ ಮಾಡಲಾಗಿದ್ದು, ಬಹಳ ಆರಾಮದಾಯಕವಾಗಿ ಕೂರಬಹುದಾದಂತಹ ಸೀಟುಗಳ ಅಳವಡಿಕೆ ಮಾಡಲಾಗಿದ್ದು, ದೂರದೂರುಗಳಿಗೆ ಪ್ರಯಾಣ ಬೆಳೆಸಿದರು ಯಾವುದೇ ಒತ್ತಡ ಉಂಟಾಗುವುದಿಲ್ಲ. ಇನ್ನೂ ಟಾಟಾ ವೆಂಗರ್ ನಲ್ಲಿ 2.2L ಟರ್ಬೊ ಚಾರ್ಗೆ ಡೀಸೆಲ್ ಇಂಜಿನ್(Turbocharge diesel engine) ವ್ಯವಸ್ಥೆಯಿದ್ದು ಇದು ಆಫ್ ರೋಡ್ ಮತ್ತು ಆನ್ ರೋಡ್ ಚಲನೆಗೆ ಸಹಕರಿಸುತ್ತದೆ.

ಸುರಕ್ಷತಾ ಕ್ರಮ

14 ಜನರು ಪ್ರಯಾಣಿಸಬಹುದಾದ ಟಾಟಾ ವಿಂಗರ್ ಕಾರಿನಲ್ಲಿ ಸಂಪೂರ್ಣ ಸುರಕ್ಷತೆಯ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಿದ್ದು, ಹಲವು ಏರ್ ಬ್ಯಾಗ್ಗಳೊಂದಿಗೆ ABS ಹಾಗೂ ರಿವರ್ಸ್ ಪಾರ್ಕಿಂಗ್ ಸೆನ್ಸರ್(Reverse Parking Sensor) ನಂತಹ ಸಾಕಷ್ಟು ಸೇಫ್ಟಿ ಫೀಚರ್ಸ್ ಗಳನ್ನು ಹಾಕಲಾಗಿದೆ. ಕಾರಿನ ಮೇಲ್ಭಾಗದ ರಚನೆಯನ್ನು ಬಲವಾಗಿ ಮಾಡಲಾಗಿದ್ದು ಇದು ವಾಹನಕ್ಕೆ ಸ್ಥಿರತೆ(Stability)ಯನ್ನು ನೀಡುತ್ತದೆ.

advertisement

Leave A Reply

Your email address will not be published.