Karnataka Times
Trending Stories, Viral News, Gossips & Everything in Kannada

IPL 2024: RCB ಗೆಲ್ಲೋದಕ್ಕೆ ಹೆಲ್ಪ್ ಮಾಡಿ ಎಂದ ಅಭಿಮಾನಿ ಪ್ರಶ್ನೆಗೆ ಧೋನಿ ನೇರವಾಗಿ ಹೇಳಿದ್ದೇನು ಗೊತ್ತಾ? ಉತ್ತರ ವೈರಲ್

advertisement

Dhoni On RCB Team: ಇತ್ತೀಚಿಗಷ್ಟೇ ಸಿ ಎಸ್ ಕೆ ತಂಡದ ಗಾಡ್ ಫಾದರ್(CSK Team) ಮಹೇಂದ್ರ ಸಿಂಗ್ ಧೋನಿ(Mahendra Singh Dhoni) ಕಾರ್ಯಕ್ರಮ ಒಂದರಲ್ಲಿ ಭಾಗಿಯಾಗಿದ್ದರು. ಅಲ್ಲಿ ನಡೆದಿದ್ದಂತಹ ಆರ್ಸಿಬಿ ಅಭಿಮಾನಿಯೊಬ್ಬ ಆರ್ ಸಿ ಬಿ(RCB)  ಮುಂಬರುವ ಸೀಸನ್ನಲ್ಲಿ ಕಪ್ ಗೆಲ್ಲೋದಕ್ಕೆ ಒಂದು ಸಲಹೆ ನೀಡಿ ಎಂದು ಕೇಳಿದಕ್ಕೆ ಮಹೇಂದ್ರ ಸಿಂಗ್ ಧೋನಿ ಯಾರು ನಿರೀಕ್ಷಿಸದ ರೀತಿ ಉತ್ತರ ಕೊಟ್ಟಿದ್ದಾರೆ. ಅಷ್ಟಕ್ಕೂ ಎಂಎಸ್ ಧೋನಿ ಆರ್ಸಿಬಿಯ ಕುರಿತು ಹೇಳಿದಾದರೂ ಏನು? ಧೋನಿ ನೀಡಿದ ಸಲಹೆ ಬೆಂಗಳೂರು ತಂಡಕ್ಕೆ ವರ್ಕ್ ಆಗುತ್ತಾ ಎಂಬ ಸಂಕ್ಷಿಪ್ತ ವಿವರವನ್ನು ಈ ಪುಟ್ಟದ ಮುಖಂತರ ತಿಳಿದುಕೊಳ್ಳಿ.

ಕಪ್ ಗೆಲ್ಲಲು ಆರ್ಸಿಬಿ ತಂಡಕ್ಕೆ MSD ಸಲಹೆ

ಕಳೆದ ಕೆಲವು ದಿನಗಳ ಹಿಂದೆ, ಖಾಸಗಿ ಕಾರ್ಯಕ್ರಮ ಒಂದರಲ್ಲಿ ಭಾಗಿಯಾದಂತಹ ಮಹೇಂದ್ರ ಸಿಂಗ್ ಧೋನಿ, ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಬಳಿಕ ಅಭಿಮಾನಿಗಳ ಜೊತೆಗೆ ಮಾತುಕತೆ ನಡೆಸಿದರು. ಆ ಸಮಯದಲ್ಲಿ ಅಲ್ಲಿ ನೆರೆದ್ದಿದಂತಹ ಅಪ್ಪಟ ಆರ್ಸಿಬಿ ಅಭಿಮಾನಿ(Rcb’s Die Hard Fan) ಅವರ ಅದ್ಭುತ ನಾಯಕತ್ವದ ಕೌಶಲ್ಯವನ್ನು ಹಾಡಿ ಹೊಗಳಿದರು, ಜೊತೆಗೆ ನೀವು ನಮ್ಮ ತಂಡಕ್ಕೆ ಒಮ್ಮೆಯಾದರೂ ಬಂದು ಸಪೋರ್ಟ್ ಮಾಡಿ ಕಪ್ ಗೆಲ್ಲಲು ಸಲಹೆ ನೀಡಿ ಎಂದು ಕೇಳಿಕೊಂಡಿದ್ದಾರೆ.

MS DHONI STATEMENT ON RCB
Image Source: Aaj Tak

RCBಯನ್ನು ಉತ್ತಮ ತಂಡ ಎಂಬ ಧೋನಿ

advertisement

ಇದಕ್ಕೆ ಉತ್ತರ ಕೊಟ್ಟಂತಹ MSD, “ರಾಯಲ್ ಚಾಲೆಂಜರ್ಸ್ ಬೆಂಗಳೂರು ಒಂದು ಉತ್ತಮ ತಂಡ ಎಂಬುದು ನಿಮ್ಮೆಲ್ಲರಿಗೂ ಗೊತ್ತೇ ಇದೆ. ನೀವು ಯೋಚನೆ ಮಾಡಬೇಕಾಗಿರೋದು ಏನಂದ್ರೆ ಕೆಲವು ಸಮಯದಲ್ಲಿ ನಮ್ಮ ಯೋಜನೆಯಂತೆ ಯಾವುದು ನಡೆಯೋದಿಲ್ಲ. ಐಪಿಎಲ್ನಲ್ಲಿ ಇರುವಂತಹ ಎಲ್ಲಾ 10 ತಂಡಗಳು ಉತ್ತಮ ಹಾಗೂ ಬಲಿಷ್ಠ ಆಟಗಾರರನ್ನು ಒಳಗೊಂಡ ಶಕ್ತಿಶಾಲಿ ತಂಡಗಳಾಗಿದೆ.

ಆದರೆ ಕೆಲವೊಂದು ಸಾರಿ ಗಾಯದ ಸಮಸ್ಯೆಯಿಂದ ಆಟಗಾರರು ಅಲಭ್ಯವಾದಾಗ ಸಮಸ್ಯೆ ಉಂಟಾಗುತ್ತದೆ. ಸದ್ಯಕ್ಕೆ ನನ್ನದೇ ತಂಡದಲ್ಲಿ ನಾನು ಯೋಚನೆ ಮಾಡಬೇಕಾಗಿರುವ ಸಾಕಷ್ಟು ಸಂಗತಿಗಳಿವೆ. ನಾನು ಒಂದು ತಂಡದಲ್ಲಿ ಭಾಗಿಯಾಗಿ ಮತ್ತೊಂದು ತಂಡಕ್ಕೆ ಹೆಲ್ಪ್ ಮಾಡಿದರೆ ನಮ್ಮ ತಂಡದ ಅಭಿಮಾನಿಗಳಿಗೆ ಬೇಸರವಾಗುತ್ತದೆ. ಆದರೆ ಎಲ್ಲಾ ತಂಡಗಳಿಗೂ ಒಳ್ಳೆಯದಾಗಲಿ ಎಂದು ನಾನು ಬಯಸುತ್ತೇನೆ” ಎಂದು ಧೋನಿ ಹೇಳಿದ್ದಾರೆ. ಧೋನಿ RCB ಕುರಿತು ಈ ರೀತಿ ಮಾತನಾಡಿರುವ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ.

MS DHONI STATEMENT ON RCB
Image Source: Aaj Tak

ಕಳಪೆ ಬೌಲಿಂಗ್ ನಿಂದ RCBಗೆ ಆರು ಸೋಲು

ಐಪಿಎಲ್ ಸೀಸನ್ 17 ಪ್ರಾರಂಭವಾಗಿ ಹಲವು ದಿನಗಳು ಕಳೆದಿದ್ದು, ಎಲ್ಲ ತಂಡಗಳು ತಮ್ಮ ಎದುರಾಳಿ ತಂಡಗಳ ಮುಂದೆ ಯಶಸ್ವಿಯಾಗಿ ಪ್ರದರ್ಶನ ನೀಡುತ್ತ, ಟ್ರೋಫಿ ಗೆಲ್ಲಲು ಸೆಣೆಸಾಡುತ್ತಿದೆ. ಆದರೆ RCB ಪಾಯಿಂಟ್ಸ್ ಟೇಬಲ್ನ ಕೆಳ ಪಟ್ಟಿಯಲ್ಲಿ ಖಾಯಂ ಸ್ಥಾನವನ್ನು ಪಡೆದುಕೊಂಡು ಬಿಟ್ಟಿದೆ. ಆಡಿರುವಂತಹ ಏಳು ಪಂದ್ಯಗಳಲ್ಲಿ ಬೌಲರ್ಸ್ ಗಳ ಕಳಪೆ ಪ್ರದರ್ಶನದಿಂದ ಆರು ಪಂದ್ಯಗಳಲ್ಲಿ ಸೋತಿರುವಂತಹ ಆರ್ಸಿಬಿ, ಮುಂದಿನ ಪಂದ್ಯಗಳಲ್ಲಾದರೂ ಎಚ್ಚೆತ್ತುಕೊಳ್ಳಲಿದ್ದಾರಾ? ಎಂಬುದನ್ನು ಅಭಿಮಾನಿಗಳು ಎದುರು ನೋಡುತ್ತಿದ್ದಾರೆ.

advertisement

Leave A Reply

Your email address will not be published.