Karnataka Times
Trending Stories, Viral News, Gossips & Everything in Kannada

Ration Card: ರೇಷನ್ ಕಾರ್ಡ್ ನಲ್ಲಿ ಹೆಸರು ತೆಗೆದು ಹಾಕಿದ್ರೆ ಆನ್ಲೈನ್ ನಲ್ಲಿ ಈ ರೀತಿಯಾಗಿ ಸೇರಿಸಿಕೊಳ್ಳಬಹುದು

advertisement

ಕಡು ಬಡವರು, ಬಡತನ ರೇಖೆಗಿಂತ ಕೆಳಗಿರುವವರು ಯಾವುದೇ ಕಾರಣಕ್ಕೂ ಹಸಿವಿನಿಂದ ಇರಬಾರದು ಎನ್ನುವುದಕ್ಕಾಗಿ ಕೇಂದ್ರ ಸರ್ಕಾರ ರೇಷನ್ ಕಾರ್ಡ್ (Ration Card) ವಿತರಣೆ ಮಾಡಿತು. ಕೇಂದ್ರ ಸರ್ಕಾರದಿಂದ ಉಚಿತ ಪಡಿತರವನ್ನು ಪ್ರತಿ ರಾಜ್ಯದ ಫಲಾನುಭವಿಗಳಿಗೆ ನೀಡಲಾಗುತ್ತಿದೆ.

ರಾಜ್ಯ ಸರ್ಕಾರವು ಕೂಡ ಬಿಪಿಎಲ್ (BPL), ಎಪಿಎಲ್ (APL), ಅಂತ್ಯೋದಯ ಕಾರ್ಡ್ (Antyodaya Card) ಗಳನ್ನು ಫಲಾನುಭವಿಗಳಿಗೆ ವಿತರಣೆ ಮಾಡಿದ್ದು ನ್ಯಾಯಬೆಲೆ ಅಂಗಡಿಯಲ್ಲಿ ಉಚಿತವಾಗಿ ಅಕ್ಕಿ ಗೋಧಿ ಮೊದಲಾದ ಪಡಿತರ ವಸ್ತುಗಳನ್ನು ಪಡೆದುಕೊಳ್ಳಲು ಅವಕಾಶ ಮಾಡಿಕೊಟ್ಟಿದೆ. ಆದರೆ ಇಂದು ಅದೆಷ್ಟೋ ಜನ ರೇಷನ್ ಕಾರ್ಡ್ ನಿಂದ ವಂಚಿತರಾಗಿದ್ದಾರೆ ಎನ್ನಬಹುದು.

ರೇಷನ್ ಕಾರ್ಡ್ ನಿಮಗೆ ಸಿಕ್ಕಿಲ್ವಾ?

ರೇಷನ್ ಕಾರ್ಡ್ ಪಡೆದುಕೊಳ್ಳಲು ಕೆಲವು ಸರ್ಕಾರದ ಮಾನದಂಡಗಳನ್ನು ತಿಳಿದುಕೊಂಡಿರಬೇಕು ಈ ಮಾನದಂಡಗಳ ಒಳಗಡೆ ಬರುವವರಿಗೆ ಮಾತ್ರ, ವಿತರಣೆ ಮಾಡಲಾಗುವ ರೇಷನ್ ಕಾರ್ಡ್ ನ ಒಂದು ವಿಧವಾದ ಬಿಪಿಎಲ್ ಕಾರ್ಡ್ ವಿತರಣೆ ಮಾಡಲಾಗುತ್ತದೆ. ಆದರೆ ಉಳ್ಳವರು ಕೂಡ ಬಿಪಿಎಲ್ ಕಾರ್ಡ್ (BPL Card) ಹೊಂದಿರುವುದರಿಂದ ನಿಜವಾದ ಫಲಾನುಭವಿಗಳಿಗೆ ರೇಷನ್ ಕಾರ್ಡ್ ನ ಪ್ರಯೋಜನ ಸಿಗುತ್ತಿಲ್ಲ. ಇದಕ್ಕಾಗಿ ಆಹಾರ ಇಲಾಖೆ ಅನರ್ಹರ ಪಡಿತರ ಚೀಟಿ ರದ್ದುಪಡಿ ಮಾಡಲು ಮುಂದಾಗಿದೆ.

ರೇಷನ್ ಕಾರ್ಡ್ ನಲ್ಲಿ ನಿಮ್ಮ ಹೆಸರು ಸೇರ್ಪಡೆಗೊಂಡಿಲ್ಲ?

ಒಂದು ಕುಟುಂಬಕ್ಕೆ ಒಂದು ರೇಷನ್ ಕಾರ್ಡ್ ವಿತರಣೆ ಮಾಡಲಾಗುತ್ತದೆ. ಹಾಗೂ ಆ ರೇಷನ್ ಕಾರ್ಡ್ ನಲ್ಲಿ ಮನೆಯ ಎಲ್ಲಾ ಸದಸ್ಯರ ಹೆಸರುಗಳನ್ನು ಕೂಡ ಸೇರಿಸಲು ಅವಕಾಶವಿದೆ. ಒಂದು ವೇಳೆ ಕುಟುಂಬದ ಯಾವುದಾದರೂ ಸದಸ್ಯರ ಹೆಸರು ಬಿಟ್ಟು ಹೋಗಿದ್ದರೆ ಅಥವಾ ಆಹಾರ ಇಲಾಖೆಯ ನಿರ್ಲಕ್ಷದಿಂದಾಗಿ ಹೆಸರು ಸೇರ್ಪಡೆಗೊಂಡಿರದೇ ಇದ್ದರೆ. ನೀವು ಸರ್ಕಾರದ ಯೋಜನೆಗಳಿಂದ ವಂಚಿತರಾಗುತ್ತೀರಿ. ಹಾಗಂತಾ ಹೆಚ್ಚು ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ. ನೀವು ಕೆಲವೇ ಕ್ಷಣಗಳಲ್ಲಿ ಆನ್ಲೈನ್ ಮೂಲಕವೇ ಹೆಸರು ಸೇರ್ಪಡೆ ಮಾಡಬಹುದು.

advertisement

ರೇಷನ್ ಕಾರ್ಡ್ ನಲ್ಲಿ ತಪ್ಪಿ ಹೋದ ಹೆಸರು ಸೇರ್ಪಡೆ ಮಾಡುವುದು ಹೇಗೆ?

 

 

nfsa.gov.in/Default.aspx ಈ ವೆಬ್ ಸೈಟ್ ಮೇಲೆ ಕ್ಲಿಕ್ ಮಾಡಿ. ನಿಮಗೆ ರೇಷನ್ ಕಾರ್ಡ್ ಎನ್ನುವ ಆಯ್ಕೆ ಕಾಣಿಸುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ. ನಂತರ ರಾಜ್ಯ ಪೋರ್ಟಲ್ ಗಳಲ್ಲಿ ರೇಷನ್ ಕಾರ್ಡ್ ಎನ್ನುವ ಆಯ್ಕೆಯನ್ನು ಕ್ಲಿಕ್ ಮಾಡಬೇಕು.

ಇಲ್ಲಿ ನಿಮ್ಮ ರಾಜ್ಯ ಜಿಲ್ಲೆ, ತಾಲೂಕು ಹೋಬಳಿ ಮೊದಲಾದವುಗಳನ್ನು ಆಯ್ಕೆ ಮಾಡಿ ಭರ್ತಿ ಮಾಡಬೇಕು. ಪ್ರತಿ ತಿಂಗಳು ಪಡಿತರವನ್ನು ಯಾವ ನ್ಯಾಯಬೆಲೆ ಅಂಗಡಿಯಿಂದ ಪಡೆದುಕೊಳ್ಳುತ್ತಿರೋ ಆ ಸ್ಥಳವನ್ನು ಕೂಡ ಆಯ್ಕೆ ಮಾಡಬೇಕು. ಒಂದು ವೇಳೆ ನಿಮ್ಮ ಹೆಸರು ಈ ಲಿಸ್ಟ್ ನಲ್ಲಿ ಇಲ್ಲದೆ ಇದ್ದರೆ ರೇಷನ್ ಕಾರ್ಡ್ ನಲ್ಲಿ ನಿಮ್ಮ ಹೆಸರನ್ನು ತೆಗೆದುಹಾಕಲಾಗಿದೆ ಎಂದು ಅರ್ಥ.

ಈಗ ನಿಮ್ಮ ಹೆಸರನ್ನು ರೇಷನ್ ಕಾರ್ಡ್ ನಲ್ಲಿ ಮತ್ತೆ ಸೇರಿಸಿಕೊಳ್ಳಲು ಹೀಗೆ ಮಾಡಿ:

ಪಡಿತರ ವಿತರಕರನ್ನು ಭೇಟಿಯಾಗಬಹುದು ಅಥವಾ ಸ್ಥಳೀಯ ಆಹಾರ ಸರಬರಾಜು ಇಲಾಖೆಗೆ ಭೇಟಿ ನೀಡಿ ಮತ್ತೆ ಪುನಃ ಹೆಸರು ಸೇರಿಸಿಕೊಳ್ಳಬಹುದು. ಇದಕ್ಕೆ ನೀವು ಒಂದು ಅರ್ಜಿ ನಮೂನೆ ಭರ್ತಿ ಮಾಡಬೇಕಾಗುತ್ತದೆ. ಹಾಗೂ ಅಗತ್ಯ ಇರುವ ದಾಖಲೆಗಳನ್ನು ಕೊಡಬೇಕಾಗುತ್ತದೆ. ನೀವು ಕೊಟ್ಟಿರುವ ದಾಖಲೆಗಳು ಸರಿಯಾಗಿ ಇದ್ದಲ್ಲಿ ತಕ್ಷಣ ರೇಷನ್ ಕಾರ್ಡ್ ನಲ್ಲಿ ಹೆಸರು ಸೇರ್ಪಡೆ ಮಾಡಲಾಗುವುದು.

advertisement

Leave A Reply

Your email address will not be published.