Karnataka Times
Trending Stories, Viral News, Gossips & Everything in Kannada

Ayushman Bharat: ಬಡ ವರ್ಗದವರಿಗೆ ಗುಡ್ ನ್ಯೂಸ್, ಸರ್ಕಾರದ ಈ ಯೋಜನೆಯಲ್ಲಿ ಸಿಗಲಿದೆ 10 ಲಕ್ಷ ರೂಪಾಯಿ ಸೌಲಭ್ಯ!

advertisement

ಕೇಂದ್ರ ಸರ್ಕಾರ ಈ ಆಯುಷ್ಮಾನ್ ಅಭಿಯಾನ ಆರಂಭ ಮಾಡಿದ್ದು ಈಗಾಗಲೇ ಹಲವು ಜನರು ಈ ಕಾರ್ಡ್‌ಗಳನ್ನು ಪಡೆದು ಕೊಂಡಿದ್ದಾರೆ. ಈ ಯೋಜನೆಯ ಮೂಲಕ‌ ಬಿಪಿಎಲ್‌ ಪಡಿತರ ಚೀಟಿ ಹೊಂದಿರುವ ಬಡ ಕುಟುಂಬಗಳು ವಾರ್ಷಿಕ 5 ಲಕ್ಷ ಮೌಲ್ಯದ ಚಿಕಿತ್ಸೆಯನ್ನು ಈ ಮೊದಲು ಪಡೆಯುತ್ತಿದ್ದರು. 2018 ರಲ್ಲಿ ‌ಆರಂಭವಾದ ಈ ಆಯುಷ್ಮಾನ್ ಯೋಜನೆ ಬಹಳಷ್ಟು ಬಡ ವರ್ಗದ ಜನತೆಗೆ ಸಹಾಯಕ ವಾಗಿದೆ. ಈ ಯೋಜನೆಯ ಮೂಲಕ ಸಾರ್ವಜನಿಕ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ದ್ವಿತೀಯ ಮತ್ತು ತೃತೀಯ ಆರೈಕೆ ಆಸ್ಪತ್ರೆಗೆ ದಾಖಲಾಗಲು ವಿಮೆ ಸೌಲಭ್ಯ ಒದಗಿಸುತ್ತದೆ.

ವಿಮೆ ಹೆಚ್ಚಳ

ಆರೋಗ್ಯ ವಿಮಾ ಯೋಜನೆ ಅಂದರೆ ಆಯುಷ್ಮಾನ್ ಭಾರತ್ (Ayushman Bharat)ಯೋಜನೆ ಪಡೆಯುವ ಫಲಾನುಭವಿಗಳಿಗೆ ಮತ್ತಷ್ಟು ಸಹಾಯ ಹಸ್ತ ನೀಡುತ್ತಿದೆ. ಇದರ ಮಿತಿಯನ್ನು ಪ್ರಸ್ತುತ 5 ಲಕ್ಷ ರೂ.ಗಳಿಂದ 10 ಲಕ್ಷ ರೂ.ಗೆ ಹೆಚ್ಚಳ ಮಾಡುವ ಕುರಿತಾಗಿ ಮಾಹಿತಿ ಸಿಕ್ಕಿದೆ. ಹೌದು 2024ರ ಸಂದರ್ಭದಲ್ಲಿ ಕೇಂದ್ರ ಬಜೆಟ್ ನಲ್ಲಿ ಆಯುಷ್ಮಾನ್ ಭಾರತ್ ಗೆ 7,200 ಕೋಟಿ ರೂ. ಹಣ ನಿಗದಿ ಪಡಿಸಿತ್ತು. ಇದೀಗ 2025ರ ಹಣಕಾಸು ವರ್ಷದಲ್ಲಿ ಸುಮಾರು 15,000 ಕೋಟಿ ರೂ.ಗೆ ದ್ವಿಗುಣಗೊಳ್ಳಬಹುದು ಎನ್ನಲಾಗಿದೆ.

advertisement

ನೀವು ಅರ್ಜಿ ಹಾಕಬಹುದು

ಪಿಎಂಜೆಎವೈ (PMJAY)  ಯೋಜನೆಗೆ ಈಗಾಗಲೇ ಸುಮಾರು 30 ಕೋಟಿ ಫಲಾನುಭವಿಗಳು ಕಾರ್ಡ್‌ಗಳನ್ನು ಹೊಂದಿದ್ದು ಬಿಪಿಎಲ್ ಕಾರ್ಡ್ (BPL Card) ಇದ್ದವರು ಈ ಯೋಜನೆಗೆ ಅರ್ಜಿ ಹಾಕಬಹುದು. ಆಯುಷ್ಮಾನ್ ಭಾರತ್ (Ayushman Bharat)ಯೋಜನೆಯ ಸೌಲಭ್ಯಗಳನ್ನು ಪಡೆಯಲು ನೀವು ಅದರ ವೆಬ್‌ಸೈಟ್‌ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಹಾಕಬಹುದು.

ಈ ಸೌಲಭ್ಯ ದೊರಕಲಿದೆ

ಯೋಜನೆಯ ಒಟ್ಟು ಅನುದಾನದ ಪಾಲಿನಲ್ಲಿ ರಾಜ್ಯ ಸರ್ಕಾರವು ಶೇ.66 ರಷ್ಟು ನೀಡುತ್ತಿದ್ದರೆ, ಕೇಂದ್ರ ಸರ್ಕಾರವು 34% ನೀಡಲಿದೆ.‌ ದೇಶದಾದ್ಯಂತ ನೋಂದಾಯಿಸಲ್ಪಟ್ಟ ಯಾವುದೇ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯಲು ಅವಕಾಶ ಇದ್ದು ಸರ್ಕಾರಿ ಆರೋಗ್ಯ ವಿಮಾ ಯೋಜನೆಯಲ್ಲಿ ಔಷಧಿಗಳು, ತಪಾಸಣೆ, ಆಸ್ಪತ್ರೆ ವೆಚ್ಚಗಳ ಸೌಲಭ್ಯ ದೊರಕುತ್ತದೆ. ಕ್ಯಾನ್ಸರ್, ಕೊರೋನರಿ ಆರ್ಟರಿ ಬೈಪಾಸ್ ಗ್ರಾಫ್ಟಿಂಗ್, ಸರ್ಜರಿ ಇತ್ಯಾದಿ ಗಳಿಗೆ ವೆಚ್ಚ ಸಿಗಲಿದೆ.

advertisement

Leave A Reply

Your email address will not be published.