Karnataka Times
Trending Stories, Viral News, Gossips & Everything in Kannada

Bajaj: ಮೊದಲ ಸಿ ಎನ್ ಜಿ ಬೈಕ್ ಬಿಡುಗಡೆ ಮಾಡಲು ಮುಂದಾದ ಬಜಾಜ್! ಬೈಕ್ ಹೇಗಿದೆ ಗೊತ್ತಾ?

advertisement

ಪ್ರಸ್ತುತ ದೇಶದಲ್ಲಿ ದ್ವಿಚಕ್ರ ವಾಹನ ಹಾಗೂ ನಾಲ್ಕು ಚಕ್ರದ ವಾಹನಗಳನ್ನು ಒಂದಲ್ಲ ಒಂದು ಹೊಸ ರೂಪಾಂತರಗಳ ಮೂಲಕ ಗ್ರಾಹಕರಿಗೆ ನೀಡುತ್ತಿರುವ ಮೋಟಾರ್ ಕಂಪನಿಗಳಲ್ಲಿ ಬಜಾಜ್ (Bajaj) ಕೂಡ ಒಂದು. ಬಜಾಜ್ ವಾಹನಗಳು ಜನರಿಗೆ ಹೆಚ್ಚು ಹತ್ತಿರವಾಗುತ್ತವೆ. ಇದಕ್ಕೆ ಮುಖ್ಯ ಕಾರಣ ಕೈಗೆಟುಕುವ ಬೆಲೆಯಲ್ಲಿ ಬಜಾಜ್ ವಾಹನವನ್ನು ಒದಗಿಸುತ್ತದೆ.

ಈಗಾಗಲೇ ಬಜಾಜ್ ತನ್ನ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಮೂಲಕ ಜನರ ಗಮನ ಸೆಳೆದಿದೆ. ಆದರೆ ಈಗ ಮತ್ತೊಂದು ಸಾಧನೆ ಮುಖ ಮಾಡಿರುವ ಬಜಾಜ್ ಜನರಿಗೆ ಕೈಗೆಟುಕುವ ಬೆಲೆಯಲ್ಲಿ ಉತ್ತಮವಾಗಿರುವ ಸಿ ಎನ್ ಜಿ ಬೈಕ್ (CNG Bike) ನೀಡಲು ಹೊರಟಿದೆ.

CNG ಬೈಕ್ ಬಗ್ಗೆ ಮಾಹಿತಿ ನೀಡಿದ ಕಂಪನಿ:

 

advertisement

 

ಬಜಾಜ್ (Bajaj) ಅಹಮದಾಬಾದ್ ಫ್ಯಾಕ್ಟರಿಯಲ್ಲಿ ಈ ಬೈಕ್ ತಯಾರಾಗುತ್ತಿದೆ ಎಂದು ನಿರ್ದೇಶಕ ರಾಜೇಶ್ ಶರ್ಮ ಮಾಹಿತಿ ನೀಡಿದ್ದಾರೆ. ಶೀಘ್ರದಲ್ಲಿಯೇ ಅದ್ಭುತ ಬೈಕ್ ಗ್ರಾಹಕರ ಕೈ ಸೇರಲಿದೆ ಎಂದು ತಿಳಿಸಿದ್ದಾರೆ. ಸಿ ಎನ್ ಜಿ ಬೈಕ್ ನಿರ್ಮಾಣ ಮಾಡುವಂತ ಬಜಾಜ್ ಬಹಳ ಶೀಘ್ರ ಗತಿಯಲ್ಲಿ ಕೆಲಸ ಮಾಡುತ್ತಿದೆ ಹಾಗಾಗಿ ಮುಂಬರುವ ದಿನಗಳಲ್ಲಿ CNG ಬೈಕ್ ಗ್ರಾಹಕರಿಗೆ ತಲುಪಿಸಿದ ಮೊದಲ ಕಂಪನಿ ಬಜಾಜ್ ಎನಿಸಿಕೊಳ್ಳಲಿದೆ. ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಂತೆ ಬಜಾಜಿನ ಸಿ ಎನ್ ಜಿ ದ್ವಿಚಕ್ರ ವಾಹನ ಕೂಡ ಪೆಟ್ರೋಲ್ (Petrol) ಅಥವಾ ಡೀಸೆಲ್ (Diesel) ವಾಹನಗಳಿಗೆ ಹೋಲಿಸಿದರೆ ಅತ್ಯುತ್ತಮ ಕಾರ್ಯ ಕ್ಷಮತೆ ಹಾಗೂ ಕಡಿಮೆ ವೆಚ್ಚದಲ್ಲಿ ಗ್ರಾಹಕರು ಪಡೆದುಕೊಳ್ಳಬಹುದಾಗಿದೆ.

ಆರು ತಿಂಗಳು ಕಾಯಿರಿ ಸಾಕು:

ಬಜಾಜ್ (Bajaj) ನೀಡಿರುವ ಮಾಹಿತಿಯ ಪ್ರಕಾರ, ಇನ್ನು ಕೆಲವೇ ತಿಂಗಳುಗಳಲ್ಲಿ ಬಜಾಜ್ ನ ಸಿ ಎನ್ (CNG) ಜಿ ದ್ವಿಚಕ್ರವಾಹನ ಗ್ರಾಹಕರ ಮನೆ ತಲುಪಲಿದೆ. ಔರಂಗಾಬಾದ್ ನಲ್ಲಿ ಮೊದಲ ರೂಪಾಂತರ ಸಿದ್ಧವಾಗುತ್ತಿದ್ದು, ಇನ್ನೂ ಕೇವಲ ಆರು ತಿಂಗಳುಗಳಲ್ಲಿ ಗ್ರಾಹಕರಿಗೆ ಸಿಎನ್ಜಿ ದ್ವಿಚಕ್ರವಾಹನ ನೀಡಲು ಬಜಾಜ್ ಕಂಪನಿ ಬಹಳ ವೇಗವಾಗಿ ಕೆಲಸ ಮಾಡುತ್ತಿದೆ. ಸಿ ಎನ್ ಜಿ ದ್ವಿಚಕ್ರ ವಾಹನ ಬಗ್ಗೆ ಹೆಚ್ಚಿನ ಮಾಹಿತಿಗಳು ಲಭ್ಯವಾಗದೆ ಇದ್ದರೂ ಜನರಲ್ಲಿ ಕುತೂಹಲವನ್ನು ಮೂಡಿಸಿದ ಹಾಗಾಗಿ ಇನ್ನು ಕೇವಲ ಆರು ತಿಂಗಳಲ್ಲಿ ದ್ವಿಚಕ್ರವಾಹನ ಮೊದಲ ಬಾರಿಗೆ ಗ್ರಾಹಕರಿಗೆ ಬಜಾಜ್ ಮೂಲಕ ತಲುಪಲಿದೆ.

advertisement

Leave A Reply

Your email address will not be published.