Karnataka Times
Trending Stories, Viral News, Gossips & Everything in Kannada

Bajaj Chetak EV: ಓಲಾ ಸ್ಕೂಟಿಗೆ ಪೈಪೋಟಿ ನೀಡುತ್ತಿದೆ ಬಜಾಜ್ ಕಂಪನಿಯ ಎಲೆಕ್ಟ್ರಿಕ್ ಬೈಕ್, 127km ರೇಂಜ್ ಹಾಗೂ ಕಡಿಮೆ ಬೆಲೆ!

advertisement

ಇಂದು ದಿನದಿತ್ಯದ ಸಂಚಾರಕ್ಕೆ ಸ್ವಂತದಾದ ವಾಹನಗಳ ಅವಶ್ಯಕತೆ ಇದ್ದೆ ಇರುತ್ತದೆ.ಅದರಲ್ಲೂ ಪ್ರಯಾಣದ ಜೊತೆಗೆ ಮನೆಗೆ ಬೇಕಾದ ಸಾಮಗ್ರಿಗಳನ್ನು ಕೊಂಡ್ಯೊಯಲು ಬೈಕ್ ಗಿಂತ ಸ್ಕೂಟರ್ ಉತ್ತಮ ಆಯ್ಕೆ. ಇಂದು ಹೆಚ್ಚಿನ ‌ಜನರು ಎಲೆಕ್ಟ್ರಿಕ್ ಸ್ಕೂಟರ್ ನತ್ತ ಹೆಚ್ಚು ಮುಖ ಮಾಡಿದ್ದಾರೆ. ಯಾಕಂದ್ರೆ ಖರ್ಚು ‌ಕಮ್ಮಿಯೊಂದಿಗೆ ಬಾಳಿಕೆಯು ಹೆಚ್ಚು. ಇದೀಗ ದ್ವಿಚಕ್ರ ವಾಹನ ತಯಾರಕ ಪ್ರತಿಷ್ಠಿತ ಕಂಪನಿಯಾದ ಬಜಾಜ್ ಹೊಸ ಎಲೆಕ್ಟ್ರಿಕ್ ಸ್ಕೂಟರ್ (Electric Scooter) ಅನ್ನು ಬಿಡುಗಡೆ ಮಾಡಿದ್ದು ವೈಶಿಷ್ಟ್ಯ ಗಳು ಗ್ರಾಹಕರನ್ನು ಗಮನ ಸೆಳೆಯುತ್ತಿದೆ

ಉತ್ತಮ ಆಯ್ಕೆ

ಬಜಾಜ್ ಚೇತಕ್ EV (Bajaj Chetak EV) ಈ ಸ್ಕೂಟರ್ ವೈಶಿಷ್ಟ್ಯ ದಲ್ಲಿ ವಿಭಿನ್ನ ವಾಗಿದ್ದು ಹೆಚ್ಚಿನ ವೇಗ ಮತ್ತು ಉತ್ತಮ ರೈಡ್ ಅನುಭವ ನೀಡುತ್ತದೆ. ಅದರ ಜೊತೆ ಇದರ ಬೆಲೆಯು ಕಡಿಮೆ ಇದ್ದು ಬ್ಯಾಟರಿ ಪ್ಯಾಕ್ ಆಫ್ ನಿರ್ಧಿಷ್ಟ ಸಮಯದ ವರೆಗೆ ಬರಲಿದೆ

advertisement

ಹೇಗಿದೆ‌ ವೈಶಿಷ್ಟ್ಯ

  • ಇದರ ವಿನ್ಯಾಸ ಬಹಳಷ್ಟು ಕ್ರೇಜ್ ಹುಟ್ಟಿಸಿದೆ. ಎಲ್ಇಡಿ ಟೆಕ್ ಲೈಟ್ ನೊಂದಿಗೆ ಟ್ರಿಪ್ ಮೀಟರ್ ಮತ್ತು ಡಿಜಿಟಲ್ ಓಡೋಮೀಟರ್ ಹೊಂದಿದೆ
  • ಮ್ಯೂಸಿಕ್ ಕಂಟ್ರೋಲ್, ಕಾಲ್ ಅಲರ್ಟ್ ಹಾಗೂ ಡಿಸ್ಪ್ಲೇ ಥೀಮ್ ರೀತಿಯ ಹಲವು ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ.
  • ಇದು 5-ಇಂಚಿನ ಟಿಎಫ್‌ಟಿ ಡಿಸ್ಪ್ಲೇ ಟೆಕ್‌ಪ್ಯಾಕ್ ಪ್ಯಾಕೇಜ್ ನೊಂದಿಗೆ ದೊರೆಯುತ್ತದೆ.
  • ಈಗಾಗಲೇ ಮಾರುಕಟ್ಟೆಯಲ್ಲಿ ಹಲವು ಎಲೆಕ್ಟ್ರಿಕ್ ಸ್ಕೂಟರ್‌ಗಳು ಲಭ್ಯವಿದ್ದು ಇತರ ಸ್ಕೂಟರ್ ಗಳಿಗೆ ಪೈಪೋಟಿ ನೀಡುತ್ತಿವೆ.
  • 2024ರ ಬಜಾಜ್ ಚೇತಕ್ ಪ್ರೀಮಿಯಂ ವೇರಿಯೆಂಟ್ 3 ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದ್ದು ಇಂಡಿಗೋ ಬ್ಲೂ, ಬ್ರೂಕ್ಲಿನ್ ಬ್ಲಾಕ್ ಮತ್ತು ಹ್ಯಾಝೆಲ್ನಟ್ ಬಣ್ಣದಲ್ಲಿ ಲಭ್ಯವಿದೆ.
  • ಅದೇ ರೀತಿ 4.2kWh BLCD ಬ್ಯಾಟರಿ ಸಾಮರ್ಥ್ಯ ಹೊಂದಿದ್ದು ಒಂದು ಬಾರಿ ಚಾರ್ಜ್ ಮಾಡಿದ್ರೆ ಸಾಕು ಸುಮಾರು 127 ಕಿಲೋಮೀಟರ್ ವ್ಯಾಪ್ತಿವರೆಗೆ ಚಲಿಸುತ್ತದೆ.
  • ಅದೇ ರೀತಿ ಗಂಟೆಗೆ 73 ಕಿಲೋಮೀಟರ್ ವೇಗವನ್ನು ತಲುಪಲು‌ ಸಾಧ್ಯವಿದ್ದು ಕೇವಲ 4.5 ಗಂಟೆಗಳಲ್ಲಿ ಮನೆಯಲ್ಲಿ ಸಂಪೂರ್ಣವಾಗಿ ಚಾರ್ಜ್ ಮಾಡಬಹುದಾಗಿದೆ.

ಬೆಲೆ ಹೇಗಿದೆ?

ಈ ಬಜಾಜ್ ಚೇತಕ್ EV ವೈಶಿಷ್ಟ್ಯ ದೊಂದಿಗೆ ಖರೀದಿಗೂ ಸೂಕ್ತ ವೆನಿಸಿದೆ. ಇದರ ಬೆಲೆ ರೂ 1.15 ಲಕ್ಷ, 1.35 ಲಕ್ಷ ವರೆಗೆ ಇರಲಿದೆ. ಯುವಕರಿಗೆ ಈ ಸ್ಕೂಟರ್ ದಿನನಿತ್ಯ ಸಂಚಾರ ಮಾಡಲು ಸೂಕ್ತ ಎನಿಸಿದೆ.

advertisement

Leave A Reply

Your email address will not be published.