Karnataka Times
Trending Stories, Viral News, Gossips & Everything in Kannada

Ayushman Bharat: ಬಿ.ಪಿ.ಎಲ್. ಕಾರ್ಡ್ ದಾರರು 5 ಲಕ್ಷದ ವರೆಗೆ ಉಚಿತ ಚಿಕಿತ್ಸೆ ಪಡೆಯಲು ಈ ದಾಖಲೆಗಳು ಕಡ್ಡಾಯ!

advertisement

ಬಡವರಿಗೂ ವೈದ್ಯಕೀಯ ನೆರವು ಸಿಗಬೇಕೆಂಬ ಉದ್ದೇಶದಿಂದ ಕೇಂದ್ರ ಸರ್ಕಾರ ಆಯುಷ್ಮಾನ್ ಭಾರತ್ ಯೋಜನೆ ರೂಪಿಸಿ ಜಾರಿಗೊಳಿಸಿರುವುದು ತಿಳಿದಿರುವ ಸಂಗತಿಯೇ. ಆಯುಷ್ಮಾನ್ ಭಾರತ್- ಆರೋಗ್ಯ ಕರ್ನಾಟಕ ಎಂಬ ಯೋಜನೆಯನ್ನು ರಾಜ್ಯದಲ್ಲೂ ಅನುಷ್ಠಾನಗೊಳಿಸಲಾಗಿದೆ. ಬಿಪಿಎಲ್ ಪಡಿತರ ಕಾರ್ಡ್ ಹೊಂದಿರುವವರು ಹಾಗೂ ರಾಷ್ಟ್ರೀಯ ಸ್ವಾಸ್ಥ್ಯ ಭೀಮಾ ಯೋಜನೆಯಲ್ಲಿ ನೋಂದಾಯಿತವಾಗಿರುವ ಫಲಾನುಭವಿಗಳಿಗೆ ಒಂದು ವರ್ಷಕ್ಕೆ 5 ಲಕ್ಷ ರೂ.ವರೆಗೆ ಉಚಿತ ಚಿಕಿತ್ಸೆ ಲಭ್ಯವಿದೆ. ಇನ್ನು ಎಪಿಎಲ್ ಕಾರ್ಡ್ ದಾರರು ಅಥವಾ ಬಿಪಿಎಲ್ ಕಾರ್ಡ್ ಹೊಂದಿಲ್ಲದವರಿಗೂ ಸಹ ಪಾವತಿ ಆಧಾರದ ಮೇಲೆ ಸರ್ಕಾರಿ ಪ್ಯಾಕೇಜ್ ದರದ ಶೇ.30 ರಷ್ಟು ಚಿಕತ್ಸಾ ವೆಚ್ಚ ಲಭ್ಯವಿದ್ದು, ವಾರ್ಷಿಕ ಮಿತಿ ಪ್ರತಿ ಕುಟುಂಬಕ್ಕೆ 1.50 ಲಕ್ಷ ರೂ. ಇರುತ್ತದೆ. ಆದರೆ ರೋಗಿಗಳು ಚಿಕಿತ್ಸೆ ಪಡೆಯಲು ತಮ್ಮ ರೇಷನ್ ಕಾರ್ಡ್​ ಮತ್ತು ಆಧಾರ್ ಕಾರ್ಡ್ ಅನ್ನು ಹಾಜರುಪಡಿಸಬೇಕು.

ಆಯುಷ್ಮಾನ್ ಭಾರತ್ ಯೋಜನೆಗೆ ಆನ್‌ಲೈನ್‌ನಲ್ಲಿ ಹೆಸರು ನೋಂದಾಯಿಸುವುದು ಹೇಗೆ?

ಆಯುಷ್ಮಾನ್ ಭಾರತ್ ಯೋಜನೆ PMJAY ಯೋಜನೆ ಅಡಿಯಲ್ಲಿ ಗುರುತಿಸಲ್ಪಟ್ಟಿರುವ ಎಲ್ಲಾ ಫಲಾನುಭವಿಗಳಿಗೆ ಮತ್ತು RSBY ಯೋಜನೆಯ ಭಾಗವಾಗಿರುವವರಿಗೆ ಅನ್ವಯಿಸುತ್ತದೆ. ನೀವು PMJAY ಆನ್‌ಲೈನ್‌ನಲ್ಲಿ ನೋಂದಾಯಿಸಲು ಬಯಸಿದರೆ ನೀವು ಅನುಸರಿಸಬೇಕಾದ ಹಂತಗಳು ಇಲ್ಲಿವೆ.
ಹಂತ:1 ಮೊದಲಿಗೆ https://www.pmjay.gov.in ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
ಹಂತ:2 ನಂತರ ನಿಮ್ಮ ಮೊಬೈಲ್ ಸಂಖ್ಯೆ ಮತ್ತು ಸ್ಕ್ರೀನ್‌ ಮೇಲೆ ಪ್ರತಿಫಲಿಸುವ ಕ್ಯಾಪ್ಚಾ ಕೋಡ್ ಅನ್ನು ನಮೂದಿಸಿ.
ಹಂತ:3 ಇದೀಗ ನೀವು ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಲ್ಲಿ OTP ಅನ್ನು ಸ್ವೀಕರಿಸುತ್ತೀರಿ ಅದು ನಿಮ್ಮನ್ನು PMJAY ಲಾಗಿನ್ ಪೋರ್ಟಲ್‌ಗೆ ಕರೆದೊಯ್ಯುತ್ತದೆ
ಹಂತ:4 ನಂತರ, ನೀವು ಯೋಜನೆಗೆ ಅರ್ಜಿ ಸಲ್ಲಿಸುತ್ತಿರುವ ರಾಜ್ಯವನ್ನು ಆಯ್ಕೆಮಾಡಿ.
ಹಂತ:5 ಇದಾದ ನಂತರ ಮೊಬೈಲ್ ಸಂಖ್ಯೆ, ಹೆಸರು, ರೇಷನ್ ಕಾರ್ಡ್ ಸಂಖ್ಯೆ, ಅಥವಾ RSBY URN ಸಂಖ್ಯೆಯಲ್ಲಿ ಯಾವುದೇ ಆಯ್ಕೆಗಳಿಂದ ವಿವರಗಳನ್ನು ನಮೂದಿಸುವ ಮೂಲಕ ನಿಮ್ಮ ಅರ್ಹತೆಯನ್ನು ಆಯ್ಕೆ ಮಾಡಿ
ಹಂತ:6 ನೀವು ಅರ್ಹರಾಗಿದ್ದರೆ, ನಿಮ್ಮ ಹೆಸರು ಪುಟದ ಬಲಭಾಗದಲ್ಲಿ ಪ್ರತಿಫಲಿಸುತ್ತದೆ.
ಹಂತ:7 ಫಲಾನುಭವಿಯ ವಿವರಗಳನ್ನು ಪರಿಶೀಲಿಸಲು ನೀವು ಕುಟುಂಬ ಸದಸ್ಯರು ಟ್ಯಾಬ್ ಅನ್ನು ಕ್ಲಿಕ್ ಮಾಡಬಹುದು.

advertisement

ಆಯುಷ್ಮಾನ್ ಕಾರ್ಡ್ ಅನ್ನು ಡೌನ್‌ಲೋಡ್ ಮಾಡುವುದು ಹೇಗೆ?

ಹಂತ 1: ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
ಹಂತ 2: ನಿಮ್ಮ ಇಮೇಲ್‌ ಐಡಿ ಮೂಲಕ್ ಸೈನ್‌ಇನ್ ಆಗಿ ಪಾಸ್‌ವರ್ಡ್ ಕ್ರಿಯೇಟ್ ಮಾಡಿಕೊಳ್ಳಿ.
ಹಂತ 3: ಬಳಿಕ ಲಾಗಿನ್ ಆಗಿ ನಿಮ್ಮ ಆಧಾರ್ ಕಾರ್ಡ್ ಅನ್ನು ನಮೂದಿಸಿ.
ಹಂತ 4: ಅಧಿಕೃತ ಫಲಾನುಭವಿಗಳ ಆಯ್ಕೆಯನ್ನು ಮಾಡಿಕೊಳ್ಳಿ.
ಹಂತ 5: ಇದು ಗ್ರಾಹಕರ ಸೇವಾ ಕೇಂದ್ರಕ್ಕೆ ರಿಡೈರೆಕ್ಟ್ ಆಗಲಿದೆ.
ಹಂತ 6: ಸಿಎಸ್‌ಸಿಯಲ್ಲಿ ಪಾಸ್‌ವರ್ಡ್ ಹಾಗೂ ಪಿನ್ ಸಂಖ್ಯೆಯನ್ನು ನಮೂದಿಸಿ.
ಹಂತ 7: ಹೋಮ್‌ಪೇಜ್‌ಗೆ ರಿಡೈರೆಕ್ಟ್ ಆಗಲಿದೆ.
ಹಂತ 8: ಇಲ್ಲಿ ನಿಮಗೆ ಡೌನ್‌ಲೋಡ್ ಆಯ್ಕೆ ಲಭ್ಯವಾಗಲಿದೆ. ಇಲ್ಲಿ ನೀವು ಆಯುಷ್ಮಾನ್ ಭಾರತ್ ಗೋಲ್ಡನ್ ಕಾರ್ಡ್ ಅನ್ನು ಪಡೆಯಲು ಸಾಧ್ಯವಾಗಲಿದೆ.

ಯಾವೆಲ್ಲ ದಾಖಲೆಗಳು ಬೇಕು?

  •  ನಿಮ್ಮ ವಯಸ್ಸು ಹಾಗೂ ಗುರುತಿನ ಪುರಾವೆ (ಆಧಾರ್ ಕಾರ್ಡ್/ಪ್ಯಾನ್ ಕಾರ್ಡ್)
  •  ಸಂಪರ್ಕ ಮಾಹಿತಿ (ಮೊಬೈಲ್ ಫೋನ್, ವಿಳಾಸ, ಇಮೇಲ್ ಐಡಿ)
  •  ಜಾತಿ ಪ್ರಮಾಣಪತ್ರ
  •  ಆದಾಯ ಪ್ರಮಾಣಪತ್ರ (ವಾರ್ಷಿಕವಾಗಿ ಗರಿಷ್ಠ ಆದಾಯ ಮಿತಿ 5 ಲಕ್ಷ ರೂಪಾಯಿ)
  •  ನಿಮ್ಮ ಕುಟುಂಬದ ಬಗ್ಗೆ ಮಾಹಿತಿ (ಅವಿಭಾಜ್ಯ/ಅವಿಭಜಿತ)

ಒಂದುವೇಳೆ ನಿಮ್ಮಬಳಿ ಸೂಕ್ತ ದಾಖಲೆಗಳು ಇಲ್ಲವಾದರೆ ಅಂತಹ ಸಂದರ್ಭಗಳಲ್ಲಿ ನಿಮ್ಮ ಅರ್ಜಿಯನ್ನು ರದ್ದುಗೊಳಿಸಬಹುದು.

advertisement

Leave A Reply

Your email address will not be published.