Karnataka Times
Trending Stories, Viral News, Gossips & Everything in Kannada

Gruha Lakshmi: ಈ ತಪ್ಪು ನೀವು ಮಾಡಿದರೆ ಗೃಹಲಕ್ಷ್ಮೀ ಹಣ ಬರಲು‌ ಸಾಧ್ಯವೆ‌ ಇಲ್ಲ, ಕೂಡಲೇ ಚೆಕ್ ಮಾಡಿಕೊಳ್ಳಿ.

advertisement

ಗೃಹಲಕ್ಷ್ಮೀ ಯೋಜನೆ (Gruha Lakshmi Yojana) ಯೂ ಈಗ ಕರ್ನಾಟಕದಲ್ಲಿ ಬಹಳ ಚಿರಪರಿಚಿತವಾದ ಯೋಜನೆಯಾಗಿದೆ. ಕುಟುಂಬದ ಯಜಮಾನಿಗೆ ಪಡಿತರ ರೇಶನ್ ಕಾರ್ಡ್ ಗುರುತಿನನ್ವಯ ಪ್ರತೀ ತಿಂಗಳು ಎರಡು ಸಾವಿರ ಮೊತ್ತ ನೀಡಲಾಗುತ್ತಿದೆ. ಈ ಮೂಲಕ ಹಣ ಒಂದು ಕಂತಿನಲ್ಲಿ ಕೂಡ ಬಂದಿಲ್ಲ ಎಂಬ ದೂರು ಕೂಡ ಕೇಳಿ ಬರುತ್ತಲಿದ್ದು ಸದ್ಯ ಆ ಬಗ್ಗೆ ಕೂಡ ಚಿಂತನೆ ನಡೆಸಲಾಗುತ್ತಿದೆ. ಹೀಗಾಗಿ ಹಣ ಬಂದಿಲ್ಲ ಎಂಬ ಮಹಿಳೆಯರ ಬ್ಯಾಂಕ್ ಖಾತೆ ಹಾಗೂ ದಾಖಲಾತಿ ಸ್ಥಿತಿ ಸಹ ಅರಿತು ಅಂಗನವಾಡಿ ಹಾಗೂ ಆಶಾ ಕಾರ್ಯ ಕರ್ತೆಯರ ಮೂಲಕ ಮನದಟ್ಟು ಮಾಡುವ ಪ್ರಯತ್ನ ಮಾಡಲಾಗುತ್ತಿದೆ.

ಅದೇ ರೀತಿ ಹಣ ಮಂಜೂರು ಕಳೆದ ಕಂತಿನಲ್ಲಿ ಬಂದರೂ ಈ ಒಂದು ಸಂಗತಿಯಲ್ಲಿ ನೀವು ವಿಫಲರಾದರೇ ಗೃಹಲಕ್ಷ್ಮೀ (Gruha Lakshmi) ಭಾಗ್ಯ ನಿಮಗೆ ಸಿಗದಿರುವ ಸಾಧ್ಯತೆ ಇದೆ. ಗೃಹಲಕ್ಷ್ಮೀ ಯೋಜನೆ ಜಾರಿಗೆ ತರುವಾಗಲೇ ಮನೆ ಹಿರಿಯ ಮಹಿಳೆಯರಿಗೆ ಎಂದು ತಿಳಿಸಲಾಗಿತ್ತು. ಅನ್ನಭಾಗ್ಯ (Anna Bhagya) ಮತ್ತು ಗೃಹಲಕ್ಷ್ಮೀ (Gruha Lakshmi) ಎರಡು ಹಣವನ್ನು ಸಹ ಮನೆ ಹಿರಿಯ ಮಹಿಳೆಗೆ ನೀಡಬೇಕೆಂದು ಮೊದಲೇ ತಿಳಿಸಲಾಗಿದೆ ಹಾಗಾಗಿ ನೀವು ಮನೆಯ ಯಜಮಾನಿ ಸ್ಥಾನದಲ್ಲಿ ಪಡಿತರ ಕಾರ್ಡ್ ಮುಖೇನ ದಾಖಲೆ ಸ್ಪಷ್ಟವಾಗಿರಬೇಕು.

 

ಈ ಕೆಲಸ ಮಾಡುವುದು ಅಗತ್ಯ:

advertisement

ಪಡಿತರ ಕಾರ್ಡ್ (Ration Card) ನಲ್ಲಿ ಯಜಮಾನಿ ಸ್ಥಾನದಲ್ಲಿ ಮಹಿಳೆ ಇರುವ ಜೊತೆಗೆನೇ ಆಧಾರ್ ಕಾರ್ಡ್ ಲಿಂಕ್ (Aadhaar Card Link) ಅಂದರೆ ಸೀಡಿಂಗ್ ಮಾಡುವುದು ಕಡ್ಡಾಯವಾಗಿದೆ. ಹೀಗೆ ಮಾಡದಿದ್ದಲ್ಲಿ ನಿಮ್ಮ ಚಿಕ್ಕ ತಪ್ಪಿಗೆ ಸರಕಾರಿ ಯೋಜನೆಯ ಫಲವಂಚಿತರು ನೀವಾಗಬೇಕಾಗುತ್ತದೆ. ಡಿಸೆಂಬರ್ 30 ರವರೆಗೆ ಇದಕ್ಕಾಗಿ ಸಾಕಷ್ಟು ಸಮಯಾವಕಾಶ ನೀಡಲಾಗಿದ್ದು ಬ್ಯಾಂಕಿನ ಖಾತೆಗೆ ಆಧಾರ್ ಲಿಂಕ್ ಮಾಡದಿದ್ದರೆ ಮತ್ತು ಅರ್ಧಕ್ಕೆ ಈ ಪ್ರಕ್ರಿಯೆ ಬಾಕಿ ಉಳಿಸಿಕೊಂಡರೆ ನಿಮಗೆ ತೊಂದರೆ ಆಗಲಿದೆ.

ಪರಿಶೀಲನೆ ಮಾಡಿ:

ಆಧಾರ್ ಸೀಡಿಂಗ್ (Aadhaar Seeding) ಮಾಡದೆ ಇದ್ದವರಿಗೆ ಈಗ ದೊಡ್ಡ ತಾಪತ್ರಯ ಉಂಟಾಗಲಿದೆ. ಈ ಹಿಂದಿನಿಂದಲೂ ಸಾಕಷ್ಟು ಸಮಯಾವಕಾಶ ನೀಡಲಾಗಿದ್ದು ಡಿಸೆಂಬರ್ 31ರೊಳಗೆ ಆಧಾರ್ ಅಪ್ಡೇಟ್ ಸೀಡಿಂಗ್ ಮಾಡುವುದು ಕಡ್ಡಾಯವಾಗಿದೆ ತಪ್ಪಿದ್ದಲ್ಲಿ ಗೃಹಲಕ್ಷ್ಮೀ (Gruha Lakhsmi) ಹಾಗೂ ಅನ್ನಭಾಗ್ಯ (Anna Bhagya) ಯೋಜನೆ ಹಣ ಬರಲಾರದು. ಹಾಗಾಗಿ ಈ ಬಗ್ಗೆ ಪರಿಶೀಲನೆ ಮಾಡುವುದು ಅತ್ಯವಶ್ಯಕವಾಗಿದೆ. ಇದನ್ನು ಪರಿಶೀಲನೆ ಮಾಡಲು ಈ ಕೆಳಗಿನ ವಿಧಾನ ಅನುಸರಿಸಿ.

ಹೀಗೆ ಮಾಡಿ:

https://uidai.gov.in/ ವೆಬ್ಸೈಟ್ ಗೆ ಭೇಟಿ ನೀಡಬೇಕು ಆಗ ನೀವು ಆಧಾರ್ ಸರ್ವಿಅ್ ಒಳಗೆ ನಿಮ್ಮ ಆಧಾರ್ ಕಾರ್ಡ್ (Aadhaar Card) ಅನ್ನು ಫೀಡ್ ಮಾಡಬೇಕು. ಸೆಕ್ಯೂರಿಟಿ ಕೋಡ್ ಒಳಗೆ OTP ಜನರೆಟ್ ಮಾಡಿ ಅದು ನಿಮ್ಮ ಮೊಬೈಲ್ ಗೆ ಬರಲಿದೆ. ಆಗ ಆಧಾರ್ ಕಾರ್ಡ್ ಲಿಂಕ್ ಆದ ಬ್ಯಾಂಕ್ ನ ವಿವರ ಒಂದು ವೇಳೆ ಲಿಂಕ್ ಆಗದಿದ್ದರೆ ಅದರ ಮಾಹಿತಿ ಸಹ ಇಲ್ಲೆ ನೀವು ಪಡೆದುಕೊಳ್ಳ ಬಹುದು. ಒಂದು ವೇಳೆ ಆಧಾರ್ ಲಿಂಕ್ ಆಗದಿದ್ದರೆ ಬ್ಯಾಂಕ್ ಶಾಖೆಗೆ ಹೋಗಿ ಶೀಘ್ರವೇ ಆಧಾರ್ ಮತ್ತು ಬ್ಯಾಂಕ್ ಖಾತೆ ಲಿಂಕ್ ಮಾಡಿಸಿ.

advertisement

Leave A Reply

Your email address will not be published.