Karnataka Times
Trending Stories, Viral News, Gossips & Everything in Kannada

Tata Nano EV: ಎಲ್ಲ ಇವಿ ವಾಹನಗಳಿಗೆ ಸೆಡ್ಡು ಹೊಡೆಯಲಿದೆ ಟಾಟಾ ನ್ಯಾನೋ ಎಲೆಕ್ಟ್ರಿಕ್ ಕಾರು, ಕಡಿಮೆ ಬೆಲೆ ಹಾಗೂ 300Km ಮೈಲೇಜ್!

advertisement

ಭಾರತೀಯ ಮಾರುಕಟ್ಟೆಯಲ್ಲಿ ಟಾಟಾ ಮೋಟರ್ಸ್ (Tata Motors) ಕಾರು ತಯಾರಕ ಕಂಪೆನಿಯೂ ತನ್ನದೇ ಆದ ಅಧಿಪತ್ಯವನ್ನು ಸಾಧಿಸಿದ್ದು, ಹೊಸ ಹೊಸ ಕಾರುಗಳನ್ನು ಮಾರುಕಟ್ಟೆಗೆ ಪರಿಚಯಿಸುವಲ್ಲಿ ಯಶಸ್ವಿಯಾಗಿದೆ. ಇದೀಗ ಕಂಪೆನಿಯೂ ಟಾಟಾ ನ್ಯಾನೋ ದ ಎಲೆಕ್ಟ್ರಿಕ್ ಆವೃತ್ತಿ (Tata Nano EV) ಯನ್ನು ಪರಿಚಯಿಸಲು ಸಜ್ಜಾಗಿದ್ದು ಈ ಇವಿಯೂ ಇದೇ ವರ್ಷದ ಅಂದರೆ 2023 ರ ಅಂತ್ಯದ ವೇಳೆಗೆ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆಯಂತೆ. ಹಾಗಾದ್ರೆ ಈ ಕಾರಿನ ವಿಶೇಷತೆಗಳು ಹಾಗೂ ಬೆಲೆ ಎಷ್ಟಿರಬಹುದು ಎನ್ನುವ ಮಾಹಿತಿಗಾಗಿ ಈ ಲೇಖನವನ್ನು ಓದಿ ತಿಳಿದುಕೊಳ್ಳಿ.

Tata Nano EV Specs and Price:

 

advertisement

 

ಟಾಟಾ ನ್ಯಾನೋದ ಎಲೆಕ್ಟ್ರಿಕ್ ಆವೃತ್ತಿ (Tata Nano EV) ಯೂ 17 kWh ಬ್ಯಾಟರಿಯನ್ನು ಹೊಂದಿದ್ದು, ಒಂದೇ ಚಾರ್ಜ್‌ನಲ್ಲಿ 300 ಕಿಲೋಮೀಟರ್‌ಗಳ ವ್ಯಾಪ್ತಿಯನ್ನು ಹೊಂದಿದೆ. ಟಾಟಾ ನ್ಯಾನೋ EV 40 kW ಎಲೆಕ್ಟ್ರಿಕ್ ಮೋಟರ್ ಅನ್ನು ಹೊಂದಿದ್ದು ಇದು 10 ಸೆಕೆಂಡುಗಳಲ್ಲಿ 0-100 ಕಿಮೀ ವೇಗವನ್ನು ಹೆಚ್ಚಿಸಲು ಸಹಾಯಕವಾಗಿದೆ.

ಈ ಕಾರಿನ ಗರಿಷ್ಠ ವೇಗ 80 ಕಿಮೀ ವಾಗಿದ್ದು, ಟಾಟಾ ನ್ಯಾನೋ EV ಎಲೆಕ್ಟ್ರಿಕ್ ವಾಹನ ಮಾರುಕಟ್ಟೆಯಲ್ಲಿ ಬಲವಾದ ಕಾರ್ಯಕ್ಷಮತೆಯನ್ನು ಹೊಂದಿದೆ. ಒಂದು ಸಲ ಬ್ಯಾಟರಿ ಪೂರ್ಣ ಚಾರ್ಜ್‌ ಮಾಡಿದರೆ 300 ಕಿಲೋಮೀಟರ್‌ಗಳವರೆಗೆ ಕ್ರಮಿಸಬಹುದು. ಇನ್ನು ಉಳಿದಂತೆ ಈ ಇವಿಯಲ್ಲಿ ಪವರ್ ಕಂಡಿಷನರ್, Anti-Lock Braking System ಮತ್ತು ಪವರ್ ಸ್ಟೀರಿಂಗ್‌ನಂತಹ ಸುಧಾರಿತ ವೈಶಿಷ್ಟ್ಯ ಗಳು ಇರಲಿದೆ. ಈ ಟಾಟಾ ನ್ಯಾನೋ ಇವಿಯೂ ಆರಂಭಿಕ ಬೆಲೆಯೂ 5 ಲಕ್ಷ ರೂ ಎನ್ನಲಾಗಿದ್ದು, ಇತರ ಇವಿ ಕಾರಿನೊಂದಿಗೆ ಸ್ಪರ್ಧಿಸುವುದರಲ್ಲಿ ಯಾವುದೇ ಸಂದೇಹವಿಲ್ಲ.

advertisement

Leave A Reply

Your email address will not be published.