Karnataka Times
Trending Stories, Viral News, Gossips & Everything in Kannada

Gold Loan: ಚಿನ್ನದ ಮೇಲೆ ಸಾಲ ತಗೆದು ಕಟ್ಟಿಲ್ಲ ಅಂದರೆ ಏನಾಗುತ್ತೆ? ಬಂತು ಹೊಸ ನಿಯಮ

advertisement

ಗೋಲ್ಡ್ ಲೋನ್ (Gold Loan) ಸಾಮಾನ್ಯವಾಗಿ ಅತ್ಯಂತ ಸುರಕ್ಷಿತ ಲೋನ್ ಆಗಿರುತ್ತದೆ ಯಾಕಂದ್ರೆ ಬ್ಯಾಂಕುಗಳು ಅಥವಾ ಎನ್‌ಬಿಎಫ್ಸಿ ಕಂಪನಿಗಳು ಚಿನ್ನವನ್ನು ಅಡಮಾನಕ್ಕೆ ಇಟ್ಟುಕೊಂಡು ಹಣವನ್ನು ನೀಡುತ್ತಾರೆ. ಇನ್ನು ಇದನ್ನು ಕೂಡ ಸರಿಯಾದ ರೀತಿಯಲ್ಲಿ ಸರಿಯಾದ ಸಮಯಕ್ಕೆ ಮರುಪಾವತಿ ಮಾಡಬೇಕಾಗಿರುವುದು ಅತ್ಯಂತ ಪ್ರಮುಖವಾಗಿರುತ್ತದೆ. ಇದರಲ್ಲಿ ಕಂತುಗಳಲ್ಲಿ ಹಣವನ್ನು ಮರುಪಾವತಿ ಮಾಡುವಂತಹ ಹಾಗೂ ಕೊನೆಯಲ್ಲಿ ಬಡ್ಡಿಯನ್ನು ಮರುಪಾವತಿ ಮಾಡುವಂತಹ ಎರಡು ಆಪ್ಷನ್ ಗಳು ಕೂಡ ಲಭ್ಯವಿದೆ.

ಕೆಲವೊಮ್ಮೆ ಇರುವಂತಹ ವೈಯಕ್ತಿಕ ಕಾರಣಗಳಿಂದಾಗಿ ಕಂತುಗಳನ್ನು ಮರುಪಾವತಿ ಮಾಡಲು ಸಾಧ್ಯವಾಗಿರುವುದಿಲ್ಲ ಹಾಗೂ ಕೆಲವೊಮ್ಮೆ ದೀರ್ಘಕಾಲದವರಿಗೆ ಲೋನ್ ಅನ್ನು ಮರುಪಾವತಿ ಮಾಡುವುದಿಲ್ಲ ಆ ಸಂದರ್ಭದಲ್ಲಿ ಯಾವ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಅನ್ನುವುದನ್ನು ತಿಳಿಯೋಣ ಬನ್ನಿ.

ಗೋಲ್ಡ್ ಲೋನ್ ಮರುಪಾವತಿ ಮಾಡದೆ ಇದ್ದಲ್ಲಿ ಆಗುವಂತಹ ಪರಿಣಾಮಗಳು:

 

Image Source: ffreedom app

 

advertisement

  • ಅಗ್ರಿಕಲ್ಚರ್ ಲೋನ್ ಹೊರತುಪಡಿಸಿ ಬೇರೆ ಯಾವುದೇ ರೀತಿಯಲ್ಲಿ ಕೂಡ ಗೋಲ್ಡ್ ಲೋನ್ (Gold Loan) ಮಾಡಿದ್ರೆ ಆ ಸಂದರ್ಭದಲ್ಲಿ ನೀವು ಸರಿಯಾದ ಸಮಯಕ್ಕೆ ಮರುಪಾವತಿಯನ್ನು ಮಾಡದೆ ಹೋದಲ್ಲಿ ಆ ಸಂದರ್ಭದಲ್ಲಿ ನಿಮ್ಮ ಬಡ್ಡಿಯ ಮೇಲೆ ಹೆಚ್ಚುವರಿ ಶುಲ್ಕ ವಿಧಿಸಲಾಗುತ್ತದೆ.
  • ಈ ಸಂದರ್ಭದಲ್ಲಿ ನಿಮಗೆ ಲೋನ್ (Loan) ನೀಡಿರುವಂತಹ ಕಂಪನಿ, ಫೋನ್ ಕರೆ ಮೆಸೇಜ್ ಹಾಗೂ ಇಮೇಲ್ ಗಳ ಮುಖಾಂತರ ಕೂಡ ನೀವು ಇನ್ನೂ ಹಣವನ್ನು ಮರುಪಾವತಿ ಮಾಡಿಲ್ಲ ಎನ್ನುವಂತಹ ರಿಮೈಂಡರ್ ಗಳನ್ನು ಸಂಸ್ಥೆಯಿಂದ ಕಳಿಸಲಾಗುತ್ತದೆ. ಈ ಸಂದರ್ಭದಲ್ಲಿ ಕೂಡ ನೀವು ಕಚೇರಿಗೆ ಹೋಗಿ ಕಟ್ಟಬೇಕಾಗಿರುವಂತಹ ಹಣವನ್ನು ಕಟ್ಟಿ ಬರಬಹುದಾಗಿದೆ.
  • ಒಂದು ವೇಳೆ ನೀವು ಇಷ್ಟೆಲ್ಲ ಎಚ್ಚರಿಕೆಗಳನ್ನು ನೀಡಿದ ನಂತರ ಕೂಡ ಸರಿಯಾದ ಸಮಯಕ್ಕೆ ಹಣವನ್ನು ಕಟ್ಟದೆ ಹೋದಲ್ಲಿ ಆ ಸಂದರ್ಭದಲ್ಲಿ ಬ್ಯಾಂಕುಗಳು ಹಾಗೂ NBFC ಕಂಪನಿಗಳು ನೀವು ಅಡ ಇಟ್ಟಿರುವಂತಹ ಚಿನ್ನವನ್ನು ಹರಾಜು ಪ್ರಕ್ರಿಯೆಯಲ್ಲಿ ಮಾರಾಟ ಮಾಡಿ ತನ್ನ ಹಣವನ್ನು ಪಡೆದುಕೊಳ್ಳುತ್ತದೆ. ಹರಾಜು ಮಾಡುವುದಕ್ಕಿಂತ ಎರಡು ವಾರಗಳ ಮುಂಚೆ ಇದರ ಬಗ್ಗೆ ನಿಮಗೆ ಮುನ್ಸೂಚನೆ ನೀಡುತ್ತದೆ. ಒಂದು ವೇಳೆ ಈ ಸಂದರ್ಭದಲ್ಲಿ ಲೋನ್ (Loan) ಹಣಕ್ಕಿಂತ ಹೆಚ್ಚಿನ ಹಣ ಚಿನ್ನವನ್ನ ಹರಾಜು ಪ್ರಕ್ರಿಯೆಯಲ್ಲಿ ಮಾರಾಟ ಮಾಡುವುದರಿಂದ ಪಡೆದುಕೊಂಡರೆ ಒಂದು ಅದನ್ನು ಬೇರೆ ಲೋನ್ ನಲ್ಲಿ ಸಮ ಗೊಳಿಸುತ್ತದೆ ಇಲ್ಲವೇ ಉಳಿದಿರುವಂತಹ ಹಣವನ್ನು 30 ದಿನಗಳ ಒಳಗಾಗಿ ಗ್ರಾಹಕರಿಗೆ ಮರುಕಳಿಸುತ್ತದೆ.

ಲೋನ್ ಡೀಫಾಲ್ಟರ್ ಆಗುವುದರಿಂದ ತಪ್ಪಿಸಿಕೊಳ್ಳುವುದು ಹೇಗೆ?

  • ಒಂದು ವೇಳೆ ಸರಿಯಾದ ಸಂದರ್ಭದಲ್ಲಿ ನಿಮಗೆ ಲೋನ್ ಹಣವನ್ನು ಮರುಪಾವತಿ ಮಾಡಲು ಸಾಧ್ಯವಾಗುತ್ತಿಲ್ಲ ಎಂದಾದಲ್ಲಿ ಆ ಸಂದರ್ಭದಲ್ಲಿ ಲೋನ್ ಅಧಿಕಾರಿಗೆ ನಿಮ್ಮ ಹಣವನ್ನು ಪಾವತಿ ಮಾಡುವಂತಹ ಸಮಯಾವಧಿಯನ್ನು ಹೆಚ್ಚಿಸುವುದಕ್ಕೆ ಕೋರಿಕೊಳ್ಳಬಹುದಾಗಿದೆ. ಹೀಗಾಗಿ ಬಾಕಿ ಉಳಿದಿರುವಂತಹ ಹಣ ಇದ್ರೆ ಈ ಸಂದರ್ಭದಲ್ಲಿ ಈ ಮೂಲಕ ನೀವು ಕಟ್ಟಬಹುದಾಗಿದೆ.
  • ಇನ್ನು ಅಧಿಕಾರಿಗಳ ಜೊತೆಗೆ ಮಾತನಾಡುವುದರ ಮೂಲಕ ಮೂಲ ಬಡ್ಡಿಯ ಹಣ ಪಾವತಿಯಲ್ಲಿ ಕೆಲವು ಭಾಗ ಹಣವನ್ನು ಪಾವತಿ ಮಾಡುವಂತಹ ವಿಚಾರವನ್ನು ಮಾತನಾಡಿ ಬಗೆಹರಿಸಿಕೊಳ್ಳಬಹುದಾಗಿದೆ.

ಗೋಲ್ಡ್ ಲೋನ್ (Gold Loan) ಪಡೆದುಕೊಳ್ಳುವಂತಹ ಪ್ರತಿಯೊಬ್ಬರು ಕೂಡ ತಿಳಿದುಕೊಳ್ಳಬೇಕಾಗಿರುವ ಒಂದು ಪ್ರಮುಖ ವಿಚಾರ ಅಂದ್ರೆ ಎಲ್ಲರೂ ಕೂಡ ಸರಿಯಾದ ರೀತಿಯಲ್ಲಿ ಹಣವನ್ನು ಪಾವತಿ ಮಾಡುವ ಮೂಲಕ ಬ್ಯಾಂಕಿನ ನಿಯಮಗಳನ್ನು ಸರಿಯಾಗಿ ಪಾಲನೆ ಮಾಡಬೇಕು ಇಲ್ಲವಾದಲ್ಲಿ ಡಿಫಾಲ್ಟರ್ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಇವಾಗ ಈ ವಿಚಾರವನ್ನು ಗೋಲ್ಡ್ ಲೋನ್ ಪಡೆದುಕೊಳ್ಳುವ ಪ್ರತಿಯೊಬ್ಬರೂ ಕೂಡ ತಿಳಿದುಕೊಳ್ಳಬೇಕು.

advertisement

Leave A Reply

Your email address will not be published.