Karnataka Times
Trending Stories, Viral News, Gossips & Everything in Kannada

Gold Loan: ಮನೆಯಲ್ಲಿ ಬಂಗಾರ ಇದ್ದವರಿಗೆ ಸಿಹಿಸುದ್ದಿ ಕೊಟ್ಟ ಈ ಬ್ಯಾಂಕುಗಳು! ಅತೀ ಕಡಿಮೆ ಬಡ್ಡಿಗೆ ಸಾಲ

advertisement

ಚಿನ್ನ (Gold) ಎಂಬುದು ಇಂದು ಅತೀ ಅಗತ್ಯವಾದ ವಸ್ತುವಾಗಿದ್ದು ಹೂಡಿಕೆಯ ಒಂದು ಮುಖ್ಯ ವಿಧಾನವಾಗಿದೆ. ಚಿನ್ನಕ್ಕೆ ಯಾವತ್ತಿದ್ದರೂ ಬೇಡಿಕೆ ಕಮ್ಮಿ ಯಾಗೋದಿಲ್ಲ. ಹಾಗಾಗಿ ಚಿನ್ನ ಖರೀದಿ (Gold Purchase) ಮಾಡಲು ಹೆಚ್ಚಿನ ಜನರು ಆಸಕ್ತಿಯನ್ನು ವಹಿಸುತ್ತಾರೆ. ಇಂದು ಚಿನ್ನವನ್ನು ಧರಿಸುವುದಕ್ಕಿಂತಲೂ ಹೆಚ್ಚಾಗಿ ಕಷ್ಟ ಕಾಲದ ಸಂದರ್ಭದಲ್ಲಿ ಹೆಚ್ಚು ಚಿನ್ನ ನೆರವಾಗಬಹುದು ಎಂಬ ಉದ್ದೇಶದಿಂದ ಚಿನ್ನವನ್ನು ಖರೀದಿ ಮಾಡುತ್ತಾರೆ. ಹಿಂದಿನ ಕಾಲದಿಂದಲೂ ಈ ಚಿನ್ನಕ್ಕೆ ಹೆಚ್ಚಿನ ಬೇಡಿಕೆ ಇದ್ದು, ಇದೀಗ ಬೆಲೆಯಂತು ದಿನದಿಂದ ದಿನಕ್ಕೆ ದುಪ್ಪಟ್ಟು ಆಗಿದೆ ಎನ್ನಬಹುದು. ಇಂದು ಚಿನ್ನ ಇಡುವ ಮೂಲಕ ಬ್ಯಾಂಕ್ ನಲ್ಲಿ ಸಾಲ (Gold Loan) ಪಡೆಯುವ ಅನೇಕ ಮಂದಿ ಇದ್ದಾರೆ. ಹಾಗಿದ್ದಲ್ಲಿ ಯಾವ ಬ್ಯಾಂಕ್ ನಲ್ಲಿ ಚಿನ್ನದ ಮೇಲೆ ಕಡಿಮೆ ಬಡ್ಡಿದರದ ಸಾಲ ದೊರೆಯುತ್ತದೆ ಎಂಬ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಚಿನ್ನದ ಸಾಲ (Gold Loan)ಕ್ಕೆ ಬೇಡಿಕೆ:

 

Image Source: lovehbcumk.live

 

advertisement

ಇಂದು ಹೆಚ್ಚಿನ ಜನರು ಚಿನ್ನ ಒತ್ತೆ ಇಟ್ಟು ಚಿನ್ನದ ಸಾಲ (Gold Loan) ಪಡೆಯುತ್ತಾರೆ. ತುರ್ತು ಸಾಲದ ಅವಶ್ಯಕತೆಗಾಗಿ ಚಿನ್ನದ ಸಾಲ ತೆಗೆದುಕೊಳ್ಳುವುದು ಸೂಕ್ತ, ಅನೇಕ ಬ್ಯಾಂಕುಗಳು ಕೂಡ ವಾರ್ಷಿಕ ಶೇ.8 ಕ್ಕಿಂತ ಕಡಿಮೆ ಬಡ್ಡಿದರದೊಂದಿಗೆ ಚಿನ್ನದ ಸಾಲಗಳನ್ನು (Gold Loan) ನೀಡುತ್ತವೆ. ಅಷ್ಟೆ ಅಲ್ಲದೆ, ಚಿನ್ನದ ಸಾಲಗಳು ಸುರಕ್ಷಿತ ಸಾಲ. ಆದ್ದರಿಂದ ವೈಯಕ್ತಿಕ ಸಾಲ (Personal Loan) ಗಳಿಗೆ ಹೋಲಿಸಿದರೆ ಚಿನ್ನದ ‌ಸಾಲವು ಕಡಿಮೆ ಬಡ್ಡಿದರ ಹೊಂದಿದೆ. ಇದು ಸೆಕ್ಯೂರ್ಡ್​ ಲೋನ್ ಹಾಗಾಗಿ ಕ್ರೆಡಿಟ್​ ಸ್ಕೋರ್ (Credit Score)​ ಮೇಲೆ ನಕಾರಾತ್ಮಕ ಪರಿಣಾಮ ಬೀರುವುದಿಲ್ಲ ಎನ್ನಬಹುದು.

ಈ ಬ್ಯಾಂಕ್ ನಲ್ಲಿ ಸಾಲ ಪಡೆಯಬಹುದು:

 

Image Source: informalnewz

 

  • HDFC Bank ಇಂದು ಸಾಲ ಸೌಲಭ್ಯಕ್ಕೆ ಪ್ರತಿಷ್ಟಿತ ಬ್ಯಾಂಕ್ ಎಂದೆನಿಸಿಕೊಂಡಿದ್ದು ಇಲ್ಲಿ ಚಿನ್ನದ ಸಾಲಕ್ಕೆ ಉತ್ತಮ ಆಯ್ಕೆ ಇದೆ. ಇಲ್ಲಿ ಎರಡು ವರ್ಷಗಳ ಅವಧಿಯೊಂದಿಗೆ ರೂ 5 ಲಕ್ಷ ಚಿನ್ನದ ಸಾಲದ ಮೇಲೆ ಶೇಕಡಾ 8.5 ರ ಬಡ್ಡಿ ದರವನ್ನು ನೀಡಲಿದ್ದು ಈ ಬ್ಯಾಂಕ್ ನಲ್ಲಿ ಚಿನ್ನದ ಸಾಲ (Gold Loan) ವನ್ನು ನೀವು ಪಡೆಯಬಹುದು‌
  • ಬ್ಯಾಂಕ್ ಆಫ್ ಇಂಡಿಯಾ (Bank of India) ದಲ್ಲಿ ಸಹ ನೀವು ಚಿನ್ನ ಅಡಮಾನ ಇಟ್ಟು ಸಾಲ ಪಡೆಯಬಹುದಾಗಿದೆ. ಇಲ್ಲಿ ಎರಡು ವರ್ಷಗಳ ಅವಧಿಯೊಂದಿಗೆ ರೂ 5 ಲಕ್ಷ ಚಿನ್ನದ ಸಾಲದ ಮೇಲೆ ಶೇಕಡಾ 8.8 ರ ಬಡ್ಡಿ ದರವನ್ನು ನೀಡಲಿದೆ
  • ಪಂಜಾಬ್ ನ್ಯಾಷನಲ್ ಬ್ಯಾಂಕ್ (Punjab National Bank) ನಲ್ಲಿಯು ಇಂದು ಸಾಲ ಪಡೆಯಲು ಅರ್ಹ ಬ್ಯಾಂಕ್ ಎಂದೆನಿಸಿಕೊಂಡಿದ್ದು ಇಲ್ಲಿ ಎರಡು ವರ್ಷಗಳ ಅವಧಿಯೊಂದಿಗೆ ರೂ 5 ಲಕ್ಷ ಚಿನ್ನದ ಸಾಲಗಳ ಮೇಲೆ ಶೇಕಡಾ 9.25 ರ ಬಡ್ಡಿ ದರವನ್ನು ಈ ಬ್ಯಾಂಕ್ ನೀಡಲಿದೆ
  • ಐಸಿಐಸಿಐ ಬ್ಯಾಂಕ್ (ICICI Bank) ನಲ್ಲೂ ನೀವು ಚಿನ್ನದ ಸಾಲ (Gold Loan) ಪಡೆಯಬಹುದಾಗಿದೆ. ಇಲ್ಲಿ ಎರಡು ವರ್ಷಗಳ ಅವಧಿಯೊಂದಿಗೆ ರೂ 5 ಲಕ್ಷದ ಚಿನ್ನದ ಸಾಲದ ಮೇಲೆ ಶೇಕಡಾ 10 ರಷ್ಟು ಬಡ್ಡಿಯನ್ನು ನೀಡಲಿದ್ದು ಚಿನ್ನದ ಸಾಲ ಇಲ್ಲೂ ನೀವು ಆಯ್ಕೆ ಮಾಡಬಹುದಾಗಿದೆ.
  • ಅದೇ ರೀತಿ ಬ್ಯಾಂಕ್ ಆಫ್ ಬರೋಡಾ ಎರಡು ವರ್ಷಗಳ ಅವಧಿಯಲ್ಲಿ ರೂ 5 ಲಕ್ಷದ ಚಿನ್ನದ ಸಾಲದ ಮೇಲೆ ಶೇಕಡಾ 9.4 ರ ಬಡ್ಡಿ ದರವನ್ನು ಇಲ್ಲಿ ನೀಡುತ್ತದೆ.

advertisement

Leave A Reply

Your email address will not be published.