Karnataka Times
Trending Stories, Viral News, Gossips & Everything in Kannada

Gold: ಚಿನ್ನ ಖರೀದಿ ಹಾಗೂ ಮಾರಾಟಕ್ಕೆ ಹೊಸ ರೂಲ್ಸ್! ಧೀಡಿರ್ ಆದೇಶ

advertisement

ಚಿನ್ನ (Gold) ಬಹು ಬೇಡಿಕೆಯ ವಸ್ತುವಾಗಿದ್ದು, ಬೆಲೆ ಹೆಚ್ಚಿದ್ದರೂ ಕಡಿಮೆ ಇದ್ದರೂ ಅವಶ್ಯಕತೆ ಇದೆ ಎಂದಾಗ ಖರೀದಿ ಮಾಡಿಯೇ ಮಾಡುತ್ತೇವೆ. ಅದರಲ್ಲೂ ಇನ್ನೇನು ಮದುವೆ ಶುಭರಂಭಗಳು ಹೆಚ್ಚು ಪ್ರಾರಂಭ ವಾಗುವುದರಿಂದ ಚಿನ್ನಕ್ಕೆ ಬೇಡಿಕೆ ಹೆಚ್ಚು ಇದೆ. ಅದರಲ್ಲೂ ಚಿನ್ನಕ್ಕೆ ಬೆಲೆ ಕಡಿಮೆ ಇದೆ ಎಂದಾಗ ಖರೀದಿ ಮಾಡಲು ಹೆಚ್ಚು ಆಸಕ್ತಿಯನ್ನು ತೋರುತ್ತೇವೆ. ಇನ್ನೇನೂ ಲೋಕಸಭೆ ಚುನಾವಣೆ (Loakasabha Election) ಗೆ ದಿನಾಂಕ ಕೂಡ ನಿಗದಿಯಾಗಿದ್ದು ರಾಜ್ಯದಲ್ಲಿ ಚುನಾವಣಾ ನೀತಿ ಸಂಹಿತೆ ಕೂಡ ಜಾರಿಯಲ್ಲಿದೆ. ಈ ನಿಟ್ಟಿನಲ್ಲಿ‌ ಇದೀಗ ಜ್ಯುವೆಲ್ಲರಿ ಶಾಪ್ ಮಾಲೀಕರಿಗೂ ಕೂಡ ಕೆಲವೊಂದು ಸೂಚನೆಗಳನ್ನು ನೀಡಲಾಗಿದೆ.

ಏನು ಸೂಚನೆ?

ಚುನಾವಣೆ ನೀತಿ ಸಂಹಿತೆ‌ ಇರುವ ಕಾರಣ ಲೆಕ್ಕಕ್ಕಿಂತ ಹೆಚ್ಚು ಚಿನ್ನ (Gold) ವನ್ನು ಖರೀದಿ ಮಾಡುವಂತಿಲ್ಲ. ಖರೀದಿ ಮಾಡಿದ್ರು ದಾಖಲೆ ನೀಡಬೇಕು. ಯಾಕಂದ್ರೆ ಚುನಾವಣಾ ಸಂದರ್ಭದಲ್ಲಿ ಜನರಿಗೆ ಉಚಿತ ಕೊಡುಗೆ ನೀಡಲು ವಸ್ತುಗಳನ್ನು ಖರೀದಿ ಮಾಡುವ ಸಂಭವ ಹೆಚ್ಚು ಇರುವುದರಿಂದ ಚಿನ್ನ ಖರೀದಿ ಮಾಡುವ ಗ್ರಾಹಕರ ಬಿಲ್ ಗಳನ್ನು ಇಟ್ಟಿರಬೇಕು. ಯಾವುದೇ ಅಂಗಡಿಗೆ ವಾಣಿಜ್ಯ ತೆರಿಗೆ ಅಧಿಕಾರಿಗಳು ಬಂದಾಗ ಎಲ್ಲಾ ದಾಖಲೆಗಳನ್ನು ಇಟ್ಟುಕೊಂಡು ಪರಿಶೀಲನೆಗೆ ಸಹಕಾರ ನೀಡಬೇಕು ಎಂಬ ಸೂಚನೆಯನ್ನು ನೀಡಲಾಗಿದೆ.

advertisement

ಇನ್ನೂ ಯಾವುದೇ ಮಾಲೀಕರು ಯಾರು ಒಂದೇ ತರಹದ ವಸ್ತುಗಳನ್ನು ಖರೀದಿಸುವರು ಅಂತಹವರ ವಿವರವನ್ನು ಕೂಡ ನೀಡಬೇಕು, ಯಾವುದೇ ವಸ್ತು ಖರೀದಿ ಮಾಡಿದ್ದರೂ ಸಹ ಜಿಎಸ್‌ಟಿ ಬಿಲ್ ನೀಡುವುದು ಕೂಡ ಕಡ್ಡಾಯ ವಾಗಿ ಇರುತ್ತದೆ.

ಈ ನಿಯಮವು ಕಡ್ಡಾಯ

  • ಯಾವುದೇ ವ್ಯಕ್ತಿಯು 50 ಸಾವಿರಕ್ಕೂ ಹೆಚ್ಚು ಮೊತ್ತ ತೆಗೆದುಕೊಂಡು ಹೋಗುವಂತಿಲ್ಲ. ಹೋದರೂ ಅದಕ್ಕೆ ದಾಖಲೆಗಳನ್ನು ತೋರಿಸಬೇಕು.
  • ಇನ್ನೂ ಯಾವುದೇ ಕಾರಣಕ್ಕೂ ಅನಧಿಕೃತ ಹಣ, ನಿರ್ಬಂಧಿತ ವಸ್ತುಗಳ ಸಾಗಾಣಿಕೆಗೆ ಅವಕಾಶ ಇರುವುದಿಲ್ಲ.
  • ಚುನಾವಣಾ ಸಂದರ್ಭದಲ್ಲಿ ಜನರಿಗೆ ಉಚಿತ ಭಾಗ್ಯ ನೀಡಲು ಸೀರೆ ಹಂಚಿಕೆ, ಕಿಚನ್ ವಸ್ತುಗಳ ಹಂಚಿಕೆ, ಬೆಳ್ಳಿ ಬಂಗಾರ ಇತ್ಯಾದಿ ಖರೀದಿ ಮಾಡುವ ಬಗ್ಗೆ ವಿಚಾರ ತಿಳಿದು ಬಂದರೆ ಮಾಲೀಕರು ಅಂತಹವರ ವಿವರವನ್ನು ನೀಡಬೇಕಾಗುತ್ತದೆ.
  • ಇನ್ನು ಕೋಮು ಸಂಘರ್ಷಕ್ಕೆ ಕಾರಣ ಆಗುವಂತಹ ಯಾವುದೇ ರೀತಿಯ ಘೋಷಣೆ ಹೊರಡಿಸಬಾರದು.
  • ಮನೆಯಲ್ಲಿ ಲೆಕ್ಕಕ್ಕಿಂತ ಹೆಚ್ಚಿನ ಹಣ ಇಟ್ಟುಕೊಂಡಿದ್ದರೂ ಅದಕ್ಕೆ ಮೂಲ ದಾಖಲೆಗಳು ಇರಬೇಕು.

advertisement

Leave A Reply

Your email address will not be published.