Karnataka Times
Trending Stories, Viral News, Gossips & Everything in Kannada

Gold Price: 2017 ರಲ್ಲಿ ಬಂಗಾರದ ಬೆಲೆ ಎಷ್ಟಾಗಿತ್ತು ಗೊತ್ತೆ! 6 ವರ್ಷದಲ್ಲಿ ಏರಿದ್ದೆಷ್ಟು?

advertisement

ಚಿನ್ನಕ್ಕೆ ಹಿಂದಿನ ಕಾಲದಿಂದಲೂ ವಿಶೇಷ ವಾದ ಬೇಡಿಕೆ ಇದ್ದೆ ಇದೆ‌‌. ಇಂದು ಚಿನ್ನದ ಹೂಡಿಕೆಗಾಗಿ ಜನರು ಹೆಚ್ಚಿನ ಆಸಕ್ತಿಯನ್ನು ತೋರುತ್ತಾರೆ. ಚಿನ್ನದ ಹೂಡಿಕೆ ಲಾಭವೇ ಹೊರತು ನಷ್ಟ ಅಲ್ಲ‌‌‌. ಹಾಗಾಗಿ ಹೂಡಿಕೆ ಅಂತ ಬಂದಾಗ ಚಿನ್ನಕ್ಕೆ ಹೆಚ್ಚಿನ ಪ್ರಶ್ಯಾಸ್ತ ವನ್ನು ನೀಡಲಾಗುತ್ತದೆ. ಚಿನ್ನದ ಆಕರ್ಷಣೆಯು ಯಾವಾಗಲೂ ಉಳಿಯುವ ಜೊತೆಗೆ ಮತ್ತು ಅದು ಸಮಯಕ್ಕೆ ತಕ್ಕಂತೆ ಉತ್ತಮ ಆದಾಯವನ್ನು ನೀಡುತ್ತದೆ.

ಕಷ್ಟಕಾಲಕ್ಕೆ ಸಹಾಯಕವಾಗುವ ವಸ್ತು

ಅನೇಕರು ಮದುವೆ ಸಮಾರಂಭ ಮಾತ್ರವಲ್ಲದೇ ಕಷ್ಟಕಾಲಕ್ಕೆ ಕೂಡ ಚಿನ್ನವನ್ನು ಹೂಡಿಕೆ ಮಾಡುತ್ತಾರೆ. ಚಿನ್ನ ತೊಡುವ ಬದಲಿಗೆ ಬಿಸ್ಕೆಟ್‌, ಚಿನ್ನದ ಬಾಂಡ್ ಖರೀದಿಸಿದರೆ ಅದು ಒಂದು ರೀತಿಯ ಲಾಭಕರ ಹೂಡಿಕೆಯೇ ಆಗಿದೆ. ಇದನ್ನು ನೀವು ಹಿಂದೆ ಖರೀದಿ ಮಾಡಿದ್ದರೂ ನೀವು ಇಂದಿನ ದಿನದ ಚಿನ್ನದ ದರದ ಮೊತ್ತವನ್ನು ಪಡೆಯಬಹುದಾಗಿದೆ. ಬಹು ವರ್ಷಗಳ ನಂತರವೂ ನೀವು ಉತ್ತಮ ದರವನ್ನು ಪಡೆಯಬಹುದು.

Image Source: iStock

ಇಂದಿನ Gold Price:

advertisement

ಇಂದು ಚಿನ್ನದ ಬೆಲೆ (Gold Price) ನಿನ್ನೆಗಿಂತ 1 ರೂ. ಮಾತ್ರ ಕಡಿಮೆಯಾಗಿದ್ದು ಇಂದು 1 ಗ್ರಾಂ ಚಿನ್ನದ ಬೆಲೆ 6,134 ರೂ ಆಗಿದ್ದು 8 ಗ್ರಾ, ಚಿನ್ನಕ್ಕೆ ಇಂದು 49,072 ರೂ. 10 ಗ್ರಾಂ ಚಿನ್ನಕ್ಕೆ 61,340 ರೂ. ಆಗಿದೆ.

ಬೇರೆ ರಾಜ್ಯದಲ್ಲಿ ಹೇಗಿದೆ?

ಇಂದು ಚೆನ್ನೈನಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 61,990 ರೂ. ಹಾಗೂ 24 ಕ್ಯಾರೆಟ್‌ಗೆ 67,630 ಮುಂಬೈನಲ್ಲಿ 22 ಕ್ಯಾರೆಟ್‌ಗೆ 61,340 ರೂ 24 ಕ್ಯಾರೆಟ್‌ಗೆ 66,920 ರೂ. ದೆಹಲಿಯಲ್ಲಿ 22 ಕ್ಯಾರೆಟ್‌ಗೆ 61,490 ರೂ. 24 ಕ್ಯಾರೆಟ್‌ಗೆ 67,070 ರೂ. ಆಗಿದ್ದು ಸದ್ಯ ಮದುವೆ ಹಾಗೂ ಶುಭ ಕಾರ್ಯಗಳು ಜರುಗಲಿದ್ದು ಚಿನ್ನ ಬೆಳ್ಳಿಗಳಿಗೆ ಭರ್ಜರಿ ಬೇಡಿಕೆ ಇದೆ.

Image Source: Quora

2017 ರಲ್ಲಿ Gold Price ಹೇಗಿತ್ತು?

2017 ರಲ್ಲಿ ಚಿನ್ನದ ಬೆಲೆ ಎಷ್ಟಿತ್ತು ಎಂಬ ಕ್ಯುರಾಸಿಟಿ ನಿಮ್ಮಲ್ಲಿ ಇರಬಹುದು. ಹೌದು 2017 ರಲ್ಲಿ ಚಿನ್ನದ ದರ ಬಹಳಷ್ಟು ಕಡಿಮೆ ಇತ್ತು. ಹಿಂದಿನ ಕಾಲದಲ್ಲಿ ಚಿನ್ನ ಕಡಿಮೆ ಬೆಲೆಗೆ ಸಿಗುತ್ತಿತ್ತು ಆದರೆ ಇಂದು ಚಿನ್ನದ ಬೆಲೆ ಅದರ ಡಬಲ್ ಆಗಿದೆ. 2017 ರಲ್ಲಿ 10 ಗ್ರಾಂ ಚಿನ್ನದ ಬೆಲೆ 29,667.50 ರೂಪಾಯಿ ಆಗಿದ್ದು, 2016 ರಲ್ಲಿ, 10 ಗ್ರಾಂ ಚಿನ್ನದ ಬೆಲೆ 28,623.50 ರೂಪಾಯಿ ಆಗಿತ್ತು. 2017 ಮತ್ತು ಈ ವರ್ಷಕ್ಕೆ ಬಹಳಷ್ಟು ವ್ಯತ್ಯಾಸ ಇರುವುದನ್ನು ಕಾಣಬಹುದು.

advertisement

Leave A Reply

Your email address will not be published.