Karnataka Times
Trending Stories, Viral News, Gossips & Everything in Kannada

ATM Card: ATM ಕಾರ್ಡ್ ಬಳಕೆದಾರರಿಗೆ ಸಿಹಿ ಸುದ್ದಿ! ಏನೆಲ್ಲಾ ಬೆನಿಫಿಟ್ಸ್ ಸಿಗಲಿದೆ ಗೊತ್ತಾ? ಕೂಡಲೇ ಚೆಕ್ ಮಾಡಿ

advertisement

ಇದು ಡಿಜಿಟಲ್ ಯುಗ ಅದರಲ್ಲೂ ಕೂಡ ಇಂದಿನ ಕಾಲದಲ್ಲಿ ಮೊಬೈಲ್ ನಲ್ಲೆ ಕುಳಿತು ಬೆರಳಿನ ತುದಿಯಲ್ಲೇ ಬ್ಯಾಂಕಿಂಗ್, ಶಾಪಿಂಗ್ ಎಲ್ಲ ಕೆಲಸಗಳು ಕ್ಷಣ ಮಾತ್ರದಲ್ಲಿಯೇ ಆಗುತ್ತಿವೆ. ದೇಶದ ಹೆಚ್ಚಿನ ಜನರು ಡೆಬಿಟ್ ಕಾರ್ಡ್ (Debit Card) ಬಳಸುತ್ತಿದ್ದು, ಹಿಂದಿನಂತೆ ಪರ್ಸ್ ಅಥವಾ ವ್ಯಾಲೆಟ್ ನಲ್ಲಿ ನಗದಿನ ಬದಲಿಗೆ ಆ ಜಾಗವನ್ನು ಡೆಬಿಟ್, ಕ್ರೆಡಿಟ್ ಕಾರ್ಡ್ ಗಳು ಭರ್ತಿ ಮಾಡಿವೆ.

ದೊಡ್ಡ ಪ್ರಮಾಣದ ಡೆಬಿಟ್ ಕಾರ್ಡ್ಗಳ ಬಳಕೆಯು ನಗದಿನ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿ ಡಿಜಿಟಲ್ ವ್ಯವಹಾರಗಳನ್ನು ಬೆಂಬಲಿಸಿದೆ. ಆದರೆ, ಡೆಬಿಟ್ ಕಾರ್ಡ್ ಹೊಂದಿದ್ದರು ಕೂಡ ಅದರಿಂದ ಲಭ್ಯವಿರುವ ಉತ್ತಮ ಸೌಲಭ್ಯದ ಬಗ್ಗೆ ಹೆಚ್ಚಿನವರಿಗೆ ತಿಳಿದಿಲ್ಲ. ಹಾಗಾದ್ರೆ, ಡೆಬಿಟ್ ಕಾರ್ಡ್ (Debit Card) ಶಾಪಿಂಗ್ ಅಥವಾ ಎಟಿಎಂನಿಂದ ಹಣವನ್ನ ಹಿಂಪಡೆಯುವ ಸೌಲಭ್ಯದ ಜೊತೆಗೆ ಬೇರೆ ಯಾವ ಸೌಲಭ್ಯ ದೊರೆಯಲಿದೆ ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತದೆ.

Debit Card Benefits:

 

Image Source: Visa

 

ಡೆಬಿಟ್ ಕಾರ್ಡ್ (Debit Card) ಮೂಲಕ ಉಚಿತ ವಿಮೆಯೂ ಲಭ್ಯವಿದ್ದು, ಆದರೆ, ಈ ಮಾಹಿತಿ ಬಗ್ಗೆ ತಿಳಿಯದೆ ಇರುವುದರಿಂದ ಹೆಚ್ಚಿನ ಜನರು ಉಚಿತವಾಗಿ ದೊರೆಯುವ ಅಗತ್ಯ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ.ಬ್ಯಾಂಕ್ ಗ್ರಾಹಕರಿಗೆ Debit / ATM Card ನೀಡಿದ ತಕ್ಷಣ, ಅದರೊಂದಿಗೆ ಗ್ರಾಹಕರು ಅಪಘಾತ ವಿಮೆ ಅಥವಾ ಜೀವ ವಿಮೆಯ ಸೌಲಭ್ಯ ಕೂಡ ದೊರೆಯುತ್ತದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವೆಬ್ಸೈಟ್ ಮಾಹಿತಿಯ ಅನ್ವಯ, ವೈಯಕ್ತಿಕ ಅಪಘಾತ ವಿಮೆ, ವಾಯುರಹಿತ ವಿಮೆಯು ಡೆಬಿಟ್ ಕಾರ್ಡ್ ಹೊಂದಿರುವವರಿಗೆ ಅಕಾಲಿಕ ಮರಣದ ವಿರುದ್ಧ ವಿಮೆಯನ್ನು ನೀಡಲಾಗುತ್ತದೆ. ಡೆಬಿಟ್ ಕಾರ್ಡ್ ಹೊಂದಿರುವವರು ಅಪಘಾತದಲ್ಲಿ ಸತ್ತರೆ, ಅವರ ನಾಮಿನಿ ಸಂಬಂಧಪಟ್ಟ ಬ್ಯಾಂಕ್ಗೆ ಹೋಗಿ ವಿಮೆಯನ್ನು ಪಡೆಯಬಹುದಾಗಿದೆ.

ಯಾರು ಈ ಪ್ರಯೋಜನ ಪಡೆಯಬಹುದು?

advertisement

ನಿಮ್ಮ ಬಳಿ ATM ಇದ್ದು ಅದನ್ನು ನೀವು 45 ದಿನಗಳಿಂದ ಬಳಸಿರಬೇಕು, ಇದೊಂದೇ ಕಂಡೀಷನ್ ಆಗಿದೆ. 45 ದಿನಗಳ ಕಾಲ ATM ಬಳಸಿದ್ದರೆ ನೀವು ಫ್ರೀ ಆಗಿ ವಿಮೆಯ ಸೌಲಭ್ಯ ಪಡೆಯಬಹುದು. ATM ಕಾರ್ಡ್ ಇದ್ದವರಿಗೆ ಈ ಸೌಲಭ್ಯದಲ್ಲಿ ಅಪಘಾತಕ್ಕೆ (Accident Insurance) ಮತ್ತು ಜೀವ ರಕ್ಷಣೆಗೆ ವಿಮೆ ದೊರೆಯುತ್ತದೆ, ಇಂಥ ಎರಡು ದುರ್ಘಟನೆಯ ಸಮಯದಲ್ಲಿ ನೀವು ಇನ್ಷುರೆನ್ಸ್ ಕ್ಲೇಮ್ ಮಾಡಿಕೊಳ್ಳಬಹುದು.

ನಿಮ್ಮ ಬಳಿ ಯಾವ ಕಾರ್ಡ್ ಇದೆ ಎನ್ನುವುದ ಮೇಲೆ ಇನ್ಷುರೆನ್ಸ್ ನ ಮೊತ್ತ ನಿರ್ಧಾರ ಆಗುತ್ತದೆ. ಕ್ಲಾಸಿಕ್ ಎಟಿಎಂ ಕಾರ್ಡ್ (Classic ATM Card) ಬಳಕೆದಾರರಿಗೆ 1 ಲಕ್ಷ ವಿಮೆ, ಪ್ಲಾಟಿನಂ ಎಟಿಎಂ ಕಾರ್ಡ್ (Platinum ATM Card) ಹೊಂದಿರುವವರಿಗೆ 2 ಲಕ್ಷ ವಿಮೆಯ ಹಣ. ವೀಸಾ ಕಾರ್ಡ್ ಹೊಂದಿರುವವರಿಗೆ 1.5 ಇಂದ 2 ಲಕ್ಷದವರೆಗು ವಿಮೆಯ ಹಣ ಕ್ಲೇಮ್ ಮಾಡಬಹುದು. ಮಾಸ್ಟರ್ ಕಾರ್ಡ್ (Master Card) ಹೊಂದಿರುವವರಿಗೆ 50 ಸಾವಿರದ ವರೆಗು ಇನ್ಷುರೆನ್ಸ್ ಕ್ಲೇಮ್ ಮಾಡಬಹುದಾದ ಅವಕಾಶ ಇದೆ.

PM Jan Dhan Yojana:

 

Image Source: SSBCrack

 

(Pradhan Mantri Jan Dhan Scheme) ಮೂಲಕ, ಈಗಾಗಲೇ ತಿಳಿಸಿದ ಹಾಗೆ ಇದು ದೇಶದ ಜನರಿಗೆ ಉಚಿತವಾಗಿ ಲಭ್ಯವಿರುವ ಇನ್ಷುರೆನ್ಸ್ ಆಗಿದೆ.. ಈ ಇನ್ಷುರೆನ್ಸ್ (Insurance) ಮೂಲಕ ನೀವು 1.5 ಇಂದ 2 ಲಕ್ಷ ರೂಪಾಯಿಯವರೆಗು ವಿಮೆಯ ಸೌಲಭ್ಯ ಪಡೆದುಕೊಳ್ಳಬಹುದು.. ಇಷ್ಟು ಮಾತ್ರವಲ್ಲದೆ, ನಿಮಗೆ ಸಿಗುವ ವಿಮೆಯ ಸಹಾಯ ಎಷ್ಟಿರುತ್ತದೆ ಎಂದರೆ, ಅಪಘಾತ ಆದರೆ 1 ಲಕ್ಷ, ಯಾವುದಾದರೂ ಆಂಗ ವೈಕಲ್ಯಾ ಉಂಟಾದರೆ 50,000 ಸಾವಿರ ರೂಪಾಯಿ ವ್ಯಕ್ತಿಯ 2 ಕಾಲುಗಳು ಅಥವಾ 2 ಕೈಗಳಿಗೆ ತೊಂದರೆ ಆದರೆ 1 ಲಕ್ಷದವರೆಗು ಪರಿಹಾರ, ಒಂದು ವೇಳೆ ಮರಣ ಹೊಂದಿದರೆ ಕುಟುಂಬದವರಿಗೆ 1 ರಿಂದ 2 ಲಕ್ಷದವರೆಗು ಪರಿಹಾರ ಸಿಗುತ್ತದೆ.

Claim ಮಾಡೋದು ಹೇಗೆ ?

ಡೆಬಿಟ್ ಕಾರ್ಡ್ (Debit Card) ಹೊಂದಿರುವವರ ಆಕಸ್ಮಿಕ ಮರಣದ ಸಂದರ್ಭದಲ್ಲಿ ನಾಮಿನಿ ವಿಮೆಯನ್ನು ಪಡೆಯಬಹುದು. ನೀವು ಸಂಬಂಧಪಟ್ಟ ಬ್ಯಾಂಕ್‌ಗೆ ಹೋಗಿ ವಿಮೆಗಾಗಿ ಅರ್ಜಿ ಸಲ್ಲಿಸಬಹುದು. ಬ್ಯಾಂಕ್ ಅರ್ಜಿ, ಮರಣ ಪ್ರಮಾಣಪತ್ರ, ಎಫ್‌ಐಆರ್ ಪ್ರತಿ, ಅವಲಂಬಿತ ಪ್ರಮಾಣಪತ್ರದಂತಹ ದಾಖಲೆಗಳು ಅಗತ್ಯವಿದೆ. ಅದೇ ಎಸ್‌ಬಿಐ ಡೆಬಿಟ್ ಕಾರ್ಡ್ (SBI Debit Card) ಬಳಸುವವರು ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದರೆ, ಅವರ ಕುಟುಂಬಗಳಿಗೆ ಹೆಚ್ಚಿನ ವಿಮೆ ಸಿಗುತ್ತವೆ. ಆದರೆ ವ್ಯಕ್ತಿ 45 ದಿನಗಳಲ್ಲಿ ಒಮ್ಮೆಯಾದರೂ ಎಟಿಎಂ ಕಾರ್ಡ್ ಬಳಸಿರಬೇಕು.

advertisement

Leave A Reply

Your email address will not be published.