Karnataka Times
Trending Stories, Viral News, Gossips & Everything in Kannada

Insurance Scheme: ಈ ಯೋಜನೆಯಲ್ಲಿ ಕೇವಲ 399 ರೂ. ಪ್ರೀಮಿಯಂ ಪಾವತಿ ಮಾಡಿದ್ರೆ ಸಾಕು, ಸಿಗುತ್ತೆ 10 ಲಕ್ಷ ರೂಪಾಯಿ!

advertisement

ಭಾರತೀಯರಿಗೆ ಹೆಲ್ತ್ ಇನ್ಸೂರೆನ್ಸ್ (Health Insurance), ಲೈಫ್ ಇನ್ಶೂರೆನ್ಸ್ (Life Insurance) ಅಂದ್ರೆ ತುಸು ದೂರ ಎನ್ನಬಹುದು. ಸುಮ್ನೆ ಯಾಕೆ ಹೆಲ್ತ್ ಇನ್ಸೂರೆನ್ಸ್ ಮಾಡಬೇಕು ನಾವು ಚೆನ್ನಾಗಿಯೇ ಇದ್ದೇವೆ ಎಂದು ಅಂದುಕೊಂಡು ಹಣವನ್ನು ಹಿಂಪಡೆಯುವಂತಹ ವಿಚಾರಗಳಲ್ಲಿ ಹೂಡಿಕೆ ಮಾಡುವವರು ಹೆಚ್ಚು. ಆದರೆ ಮನುಷ್ಯನ ಜೀವನ ಹೀಗೆ ಎಂದು ಯಾರೂ ನಿರ್ಧರಿಸಲು ಸಾಧ್ಯವಿಲ್ಲ ಅಂತಹ ಸಂದರ್ಭದಲ್ಲಿ ಆರ್ಥಿಕ ನೆರವು ನೀಡುವುದೇ ಈ ಆರೋಗ್ಯ, ಅಪಘಾತ, ಜೀವವಿಮೆಗಳು.

ಈ ವಿಚಾರವನ್ನು ಗಮನದಲ್ಲಿ ಇಟ್ಟುಕೊಂಡು ರಸ್ತೆ ಅಪಘಾತ ಆದಾಗ ಪ್ರಾಣ ಕಳೆದುಕೊಂಡಾಗ ಅಥವಾ ಅಪಘಾತದಲ್ಲಿ ಏನಾದರೂ ಅಂಗವೈಕಲ್ಯ ಉಂಟಾದಾಗ ಕುಟುಂಬದವರ ನೆರವಿಗೆ ಬರುವಂತೆ ಲೈಫ್ ಇನ್ಸೂರೆನ್ಸ್ ಮಾಡಿಸಿಕೊಳ್ಳುವುದು ಒಳ್ಳೆಯದು. ಅದೇ ರೀತಿ ಆಸ್ಪತ್ರೆಯ ಖರ್ಚನ್ನು ಸರಿದೂಗಿಸಲು ಹೆಲ್ತ್ ಇನ್ಸೂರೆನ್ಸ್ ಅಥವಾ ಆರೋಗ್ಯ ವಿಮೆ (Health Insurance) ಮಾಡಿಸಿಕೊಳ್ಳುವುದು ಒಳ್ಳೆಯದು ಹಾಗ್ ನೀವೇನಾದರೂ ಅಪಘಾತ ವಿಮೆ (Insurance) ಮಾಡಲು ಬಯಸಿದರೆ ಅಥವಾ ಅಪಘಾತ ಆರೋಗ್ಯ ವಿಮೆ ಪ್ರಾರಂಭಿಸಲು ಬಯಸಿದರೆ ಅಂಚೆ ಕಛೇರಿ ಉತ್ತಮ ಆಯ್ಕೆಯಾಗಿದೆ.

Post Office ಬಡವರಿಗಾಗಿ ಆರಂಭಿಸಿದೆ ಅಪಘಾತ ವಿಮೆ:

ಬಡವರಿಗಾಗಿ ಹಾಗೂ ಸಾಮಾನ್ಯ ಜನರಿಗಾಗಿಯೇ ಅಪಘಾತ ವಿಮೆಯನ್ನು ಅತಿ ಕಡಿಮೆ ಪ್ರೀಮಿಯಂ ಪಾವತಿ ಮಾಡಿಸಿಕೊಂಡು ಅತಿ ಹೆಚ್ಚು ಮೌಲ್ಯದ ವಿಮೆ ನೀಡುವ ಕೆಲಸವನ್ನು ಅಂಚೆ ಇಲಾಖೆ Tata Aig ಸಹಯೋಗದಲ್ಲಿ ಮಾಡುತ್ತಿದೆ.

advertisement

ಎಷ್ಟು ಪ್ರೀಮಿಯಂ ಪಾವತಿಸಬೇಕು:

ಯಾರಾದರೂ ಮೃತಪಟ್ಟರೆ ಕುಟುಂಬಕ್ಕೆ ವಿಮಾ ರಕ್ಷಣೆ ಸಿಕ್ಕರೆ ಆರ್ಥಿಕವಾಗಿ ಸಹಾಯವಾಗುತ್ತದೆ ಅದೇ ರೀತಿ ಅಪಘಾತಗಳಲ್ಲಿ ಗಾಯಗಳಾಗಿದ್ದಾಗ ಪರಿಹಾರದ ಮೊತ್ತ ಸಿಕ್ಕರೆ ಚಿಕಿತ್ಸೆಗೂ ಉಪಯೋಗ ಆಗುತ್ತೆ. ಈ ಕಾರಣಕ್ಕೆ ವಿಮೆ ಮಾಡಿಸಿಕೊಳ್ಳುವುದು ಬಹಳ ಮುಖ್ಯ. ವರ್ಷಕ್ಕೆ 299 ರೂಪಾಯಿಗಳಿಂದ 399 ರೂಪಾಯಿಗಳನ್ನು ಪಾವತಿಸಿದರೆ ಸಾಕು, ಮೃತಪಟ್ಟವರ ಕುಟುಂಬಕ್ಕೆ 10 ಲಕ್ಷ ರೂಪಾಯಿಗಳವರೆಗೆ ವಿಮೆ ಸಿಗುವಂತಹ ಯೋಜನೆ (Insurance Scheme) ಪ್ರಯೋಜನ ಅಂಚೆ ಕಚೇರಿಯಿಂದ ಪಡೆಯಬಹುದು.

Accident Insurance Benefit:

ಗಂಭೀರ ಗಾಯಗಳಾದರೆ ಇನ್ಸೂರೆನ್ಸ್ ಮಾಡಿಸಿದವರಿಗೆ 60 ಸಾವಿರ ರೂಪಾಯಿಗಳು ಸಿಗುತ್ತವೆ ಜೊತೆಗೆ 25,000ಗಳನ್ನು ಕೊಡಲಾಗುತ್ತದೆ. ಅದೇ ರೀತಿ 399 ರೂಪಾಯಿ ಅಥವಾ ಅದಕ್ಕಿಂತ ಕಡಿಮೆ ಹೂಡಿಕೆ ಮಾಡಿ ಗಳಿಸಿಕೊಂಡಿರುವ ಅಪಘಾತ ವಿಮೆಯಲ್ಲಿ ಅಪಘಾತವಾದಾಗ 30,000 ಹಾಗೂ ಟ್ರಾನ್ಸ್ಪೋರ್ಟಷನ್ ಚಾರ್ಜ್ – ಸಾರಿಗೆ ವೆಚ್ಚ 25,000ಗಳನ್ನು ಕೊಡಲಾಗುವುದು. ಅಷ್ಟು ಮಾತ್ರವಲ್ಲದೆ ನೀವು ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ನಲ್ಲಿ ಖಾತೆ ಹೊಂದಿದ್ದರೆ ಅಪಘಾತವಾಗಿ ಆಸ್ಪತ್ರೆಗೆ ದಾಖಲಾದರೆ ಚಿಕಿತ್ಸೆಯ ಸಂದರ್ಭದಲ್ಲಿ 10 ಸಾವಿರ ರೂಪಾಯಿಗಳವರೆಗೆ ವಿಮಾ ಸೌಲಭ್ಯ ಸಿಗುತ್ತದೆ.

ಈ ಎಲ್ಲಾ ಅಪಘಾತ ಸಂದರ್ಭದಲ್ಲಿ ಪ್ರಯೋಜನಗಳನ್ನು ಪಡೆದುಕೊಳ್ಳುವುದಕ್ಕೆ ನೀವು ತಕ್ಷಣವೇ ಹತ್ತಿರದ ಅಂಚೆ ಕಚೇರಿಗೆ ಹೋಗಿ ಈ ವಿಮೆ ಪಾಲಿಸಿ (Insurance Policy) ಮಾಡಿಸಿಕೊಳ್ಳಿ ಪ್ರೀಮಿಯಂ ಮೊತ್ತ ಬಹಳ ಕಡಿಮೆ ಇರುವುದರಿಂದ ನೀವು ಸುಲಭವಾಗಿ ಪಾವತಿ ಮಾಡಬಹುದು ಹಾಗೂ ಸಂಕಷ್ಟದ ಸಮಯದಲ್ಲಿ ಈ ವಿಮೆ ಪ್ರಯೋಜನ ಪಡೆದುಕೊಳ್ಳಬಹುದು ನಿಮ್ಮ ಕುಟುಂಬದವರಿಗೂ ಇದರಿಂದ ಸಹಾಯವಾಗುತ್ತೆ.

advertisement

Leave A Reply

Your email address will not be published.