Karnataka Times
Trending Stories, Viral News, Gossips & Everything in Kannada

AnnaBhagya: ಅನ್ನ ಭಾಗ್ಯ ಯೋಜನೆ ಬಗ್ಗೆ ಬಿಗ್ ಅಪ್ಡೇಟ್, ಈ ರೀತಿಯಾಗಿ ಹಣದ ಸ್ಟೇಟಸ್ ಚೆಕ್ ಮಾಡಿಕೊಳ್ಳಿ.

advertisement

ಅನ್ನಭಾಗ್ಯ (AnnaBhagya) ಯೋಜನೆಯ ಅಡಿಯಲ್ಲಿ ಕರ್ನಾಟಕದ ಜನತೆಗೆ ಉಚಿತ ಹತ್ತು ಕೆಜಿ ಅಕ್ಕಿ ನೀಡುವ ಭರವಸೆ ನೀಡಲಾಗಿದ್ದು ಬಳಿಕ ಐದು ಕೆಜಿ ಅಕ್ಕಿ ಮತ್ತು ಐದು ಕೆಜಿ ಅಕ್ಕಿಯ ಬದಲಿಗೆ ಹಣವನ್ನು ನೀಡುವ ವ್ಯವಸ್ಥೆ ಜಾರಿಗೊಳಿಸಲಾಯಿತು.ಆ ಪ್ರಕಾರ ಮನೆಯ ಪ್ರತಿಯೊಬ್ಬ ಸದಸ್ಯರಿಗೆ ಪಡಿತರ ವಿತರಣೆ ಜಾರಿ ಮಾಡುವ ಮೂಲಕ ಅಕ್ಕಿಯ ಬದಲು ಹಣವನ್ನು ಮನೆಯ ಯಜಮಾನರ ಖಾತೆಗೆ ಜಮಾ ಮಾಡಲಾಗುತ್ತಿದೆ. ಹಾಗಾಗಿ ಹೊಸ ಸದಸ್ಯರ ಸೇರ್ಪಡೆಗೆ ರೇಶನ್ ಕಾರ್ಡ್ (Ration Card) ತಿದ್ದುಪಡಿ ಪ್ರಕ್ರಿಯೆಗೆ ಅಧಿಕ ಬೇಡಿಕೆ ಬರುತ್ತಿದೆ.

ಅನ್ನಭಾಗ್ಯ ಯೋಜನೆಯೂ ಕಾಂಗ್ರೆಸ್ ಆಡಳಿತ ಅವಧಿಯಲ್ಲಿಯೇ ಜಾರಿಗೆ ಬಂದಿದ್ದಾಗಿದ್ದು ಬಹಳ ಹಿಂದಿನಿಂದಲೇ ಜನಪ್ರಿಯವಾಗಿದೆ. ಅನ್ನಭಾಗ್ಯ ಯೋಜನೆಯನ್ನು 2023ರ ಜುಲೈ 10ರಿಂದ ಆರಂಭವಾಗಿದ್ದು ಪ್ರತಿ ಕೆಜಿ ಅಕ್ಕಿಗೆ 34ರೂಪಾಯಿನಂತೆ ಒಟ್ಟು 5kg ಗೆ 170ರೂಪಾಯಿನಂತೆ ಫಲಾನುಭವಿಗಳಿಗೆ ಹಣ ಮಂಜೂರು ಮಾಡಲಾಗಿದೆ. ಈ ಮೂಲಕ ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ಹಣ ನೀಡುವ ಬದಲು ಪೂರ್ತಿ ಅಕ್ಕಿ ನೀಡಬೇಕು ಎಂದು ವಿಪಕ್ಷಗಳು ಪಟ್ಟು ಹಿಡಿದಿದೆ. ಹಾಗಾಗಿ ಈ ಬಗ್ಗೆ ಕೂಡ ರಾಜ್ಯ ಸರಕಾರ ಅನೇಕ ಬಾರಿ ಕೇಂದ್ರ ಸರಕಾರಕ್ಕೆ ಮನವಿ ಮಾಡಿದರೂ ಅಕ್ಕಿ ಮಾತ್ರ ಲಭ್ಯವಾಗಿಲ್ಲ ಹಾಗಾಗಿ ಈ ಸಲ ಕೂಡ ಅನ್ನಭಾಗ್ಯದ ಹಣ ಖಾತೆಗೆ ಜಮೆ ಆಗಲಿದೆ.

ಈ ಸಲ ಹಣ ಬಂದಿದೆಯಾ?

ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ಕಂತಿನ ಅನ್ವಯ ಹಣ ಮಂಜೂರು ಮಾಡಲಾಗುತ್ತಿದ್ದು ಡಿಸೆಂಬರ್ ನಂದು ಹಣ ಬಂದಿದೆಯೇ ಇಲ್ಲವೇ ಎಂಬ ಗೊಂದಲ ಉಂಟಾಗಬಹುದು. ಹಾಗಾಗಿ ನೀವು ಕರ್ನಾಟಕ ಆಹಾರ ಇಲಾಖೆಯ ವೆಬ್ಸೈಟ್ (ahara.kar.nic.in) ಗೆ ಭೇಟಿ ನೀಡಿ. ಹೋಂ ಪೇಜ್ ನ ಇ ಸೇವಾ ಟ್ಯಾಬ್ ನಲ್ಲಿ ಡಿಬಿಟ್ ಸ್ಟೇಟಸ್ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಈ ವರ್ಷದ ಯಾವ ತಿಂಗಳು ಮತ್ತು ನಿಮ್ಮ ಪಡಿತರ RR ಸಂಖ್ಯೆ ನಮೋದಿಸಬೇಕು. ಬಳಿಕ ಈ ಬಾರಿ ಹಣದ ಪ್ರಸಂಟ್ ಸ್ಟೇಟಸ್ ಬಗ್ಗೆ ನಿಮಗೆ ಮಾಹಿತಿ ದೊರೆಯಲಿದೆ.

advertisement

ಸಚಿವರು ಹೇಳಿದ್ದೇನು?

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಸಚಿವರಾದ ಕೆ. ಎಚ್. ಮುನಿಯಪ್ಪ (K.H. Muniyappa)ಅವರು ಮಾಧ್ಯಮದ ಮುಂದೆ ಮಾತನಾಡಿದ್ದಾರೆ. ರಾಜ್ಯದಲ್ಲಿ ಈ ಬಾರಿ ಕೃಷಿ ಮುಂಗಾರಿನ ಅಭಾವದಿಂಸ ಕಷ್ಟಕರವಾಗಿದೆ ಹಾಗಾಗಿ ಅನ್ಯ ರಾಜ್ಯಗಳಿಗೆ ಅಕ್ಕಿ ರಫ್ತಿನ ಪ್ರಮಾಣ ಕಡಿಮೆ ಮಾಡಲಾಗುವುದು. ಸೆಪ್ಟೆಂಬರ್ ನಲ್ಲಿ ಅನ್ನಭಾಗ್ಯ ಹಣ ಮಂಜೂರು ಮಾಡಿದ್ದು ಬಳಿಕ ಪೂರ್ತಿ ಅಕ್ಕಿ ನೀಡಿ ಎಂಬ ಮನವಿ ಬಂದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಬೇರೆ ಬೇರೆ ರಾಜ್ಯಕ್ಕೆ ಈ ಬಗ್ಗೆ ಬೇಡಿಕೆ ಸಲ್ಲಿಸಿದ್ದೇವೆ ಶೀಘ್ರವೇ ಈ ಸಮಸ್ಯೆ ನಿವಾರಿಸಿ ಅಕ್ಕಿ ನೀಡ್ತೇವೆ ಎಂದು ಅವರು ಹೇಳಿದರು.

ಈ ಬಾರಿ ಭತ್ತದ ಬೆಳೆಯ ಪ್ರಮಾಣ ಗಣನೀಯವಾಗಿ ಕುಸಿಯುತ್ತಿದೆ. ಅಕಾಲಿಕ ಮಳೆ ಮತ್ತು ಪ್ರಾಕೃತಿಕ ವಿಪತ್ತಿನಿಂದಾಗಿ ಅನೇಕ ಸಮಸ್ಯೆ ಆಗುತ್ತಿದೆ. 35%ನಷ್ಟು ಭತ್ತದ ಬೆಳೆ ಪ್ರಮಾಣ ಕುಂಠಿತವಾಗುತ್ತದೆ. ಹಾಗಾಗಿ ಈ ಬಾರಿ ಅಕ್ಕಿ ಬೆಲೆಯಲ್ಲಿ ಬಾರೀ ಮಟ್ಟದ ಏರಿಕೆ ಕಂಡುಬರುವ ಸಾಧ್ಯತೆ ಇದೆ. ಇದು ಖಾಸಗಿ ಮಾತ್ರವಲ್ಲದೇ ಸರಕಾರಿ ಯೋಜನೆಗೂ ತೊಂದರೆ ಆಗಲಿದೆ. ಅನ್ನಭಾಗ್ಯ ಯೋಜನೆ ಅಡಿ ಅಕ್ಕಿ ಪೂರೈಕೆಗೆ ಸಹ ಸಮಸ್ಯೆ ಆಗಲಿದೆ ಎಂದು ಅವರು ಹೇಳಿದರು‌.

advertisement

Leave A Reply

Your email address will not be published.