Karnataka Times
Trending Stories, Viral News, Gossips & Everything in Kannada

Yuva Nidhi Scheme: ಯುವನಿಧಿ ಯೋಜನೆಯಲ್ಲಿ ಬಿಗ್ ಅಪ್ಡೇಟ್, ಇವರಿಗೆ ಮಾತ್ರ ಈ ಯೋಜನೆಯ ಹಣ ಸಿಗಲಿದೆ!

advertisement

ಕಾಂಗ್ರೆಸ್ ಸರಕಾರದ ಗ್ಯಾರಂಟಿ ಯೋಜನೆಗಳು (Guarantee Schemes) ಒಂದೊಂದಾಗಿ ಜಾರಿಗೆ ಬಂದಿದ್ದು ಇದೀಗ ಯುವನಿಧಿ ಯೋಜನೆ (Yuva Nidhi Scheme) ಯ ಬಗ್ಗೆಯು ಗುಡ್ ನ್ಯೂಸ್ ಸಿಕ್ಕಿದಂತಾಗಿದೆ. ಈಗಾಗಲೇ ನಿರುದ್ಯೋಗ ಯುವಕ ಯುವತಿಯರು ಈ ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಲು ಕಾಯುತ್ತಿದ್ದರು. ಇವರಿಗೆ ಆರ್ಥಿಕ ಸಹಾಯ ನೀಡುವ ನಿಟ್ಟಿನಲ್ಲಿ ಈ ಯೋಜನೆಯನ್ನು ಜಾರಿಗೆ ತರಲಾಗಿದೆ ಡಿಪ್ಲೋಮಾ ಮತ್ತು ಡಿಗ್ರಿ ಮಾಡಿದ ವಿದ್ಯಾರ್ಥಿಗಳು ನಿರುದ್ಯೋಗಿ ಗಳಾಗಿದ್ದಲ್ಲಿ ಈ ಯೋಜನೆ ಸಹಾಯವಾಗಲಿದೆ. ಈ ಮೂಲಕ ಪ್ರತಿ ತಿಂಗಳು ಭತ್ಯೆ ಪಡೆಯಬಹುದು. ಇದೀಗ ಈ ಬಗ್ಗೆ ಬಿಗ್ ಅಪ್ಡೇಟ್ ಇಲ್ಲಿದೆ.

ಇವರಿಗೆ ಮಾತ್ರ ಈ ಯೋಜನೆ:

2022- 23ನೇ ಸಾಲಿನಲ್ಲಿ ಉತ್ತೀರ್ಣರಾಗಿ 6 ತಿಂಗಳು ಉದ್ಯೋಗ ಸಿಗದ, ವೃತ್ತಿಪರ ಕೋರ್ಸ್‌ ಒಳಗೊಂಡ ಪದವೀಧರರಿಗೆ 3,000 ರೂ ಮತ್ತು ಡಿಪ್ಲೊಮಾ ಪದವೀಧರರಿಗೆ‌ 1,500 ರೂಪಾಯಿ ನಿರುದ್ಯೋಗ ಭತ್ಯೆ ಸಿಗಲಿದ್ದು ಕೆಲಸ ಸಿಕ್ಕ ನಂತರ ಈ ಯೋಜನೆಯ ಹಣ ಲಭ್ಯ ವಾಗುವುದಿಲ್ಲ

ಯಾವಾಗ ನೊಂದಣಿ ಆರಂಭ?

 

 

advertisement

ರಾಜ್ಯ ಸರ್ಕಾರದ 5ನೇ ಗ್ಯಾರಂಟಿ ಯುವನಿಧಿ ಯೋಜನೆ (Yuva Nidhi Scheme) ಯು ಡಿ. 26ರಿಂದ ನೋಂದಣಿ ಪ್ರಾರಂಭವಾಗಲಿದೆ. ಯುವನಿಧಿಗೆ (Yuva Nidhi) ಅರ್ಜಿ ಸ್ವೀಕಾರ ಆರಂಭ ದಿನಾಂಕ 21-12-2023 ಆಗಿದ್ದು ವೆಬ್‌ಸೈಟ್‌ ಮೂಲಕ ಅರ್ಜಿ ಸಲ್ಲಿಸಲು https://sevasindhu.karnataka.gov.in ಈ ಲಿಂಕ್ ಬಳಸಬಹುದಾಗಿದೆ.‌ ನೊಂದಣಿ ಮಾಡಿದವರಿಗೆ ಮೊದಲ ಕಂತಿನ ಹಣ ಜನವರಿ ತಿಂಗಳಿನಿಂದ ಸಿಗಲಿದೆ.

ಈ ದಾಖಲಾತಿ ಬೇಕು:

ಯುವನಿಧಿ ಯೋಜನೆ (Yuva Nidhi Scheme) ಗೆ ಅರ್ಜಿ ಸಲ್ಲಿಕೆ ಮಾಡಲು ನೀವು ಮತದಾರರ ಗುರುತಿನ ಚೀಟಿ, ಆಧಾರ್‌ ಕಾರ್ಡ್‌ ಪ್ರತಿ, ಬ್ಯಾಂಕ್‌ ಖಾತೆ ಮಾಹಿತಿ, ಪದವಿ ಅಂಕಪಟ್ಟಿ, ಡಿಪ್ಲೊಮಾ ಅಂಕಪಟ್ಟಿ, ಶೈಕ್ಷಣಿಕ ವಿವರ ಮಾಹಿತಿಗಳು ಬೇಕು.

ಡಿಬಿಟಿ ಮೂಲಕ ಹಣ ವರ್ಗಾವಣೆ:

ಯುವ ನಿಧಿ ಯೋಜನೆ (Yuva Nidhi Scheme) ಹಣವನ್ನು ಡಿಬಿಟಿ ಮೂಲಕ ನೇರವಾಗಿ ಒದಗಿಸಲಾಗುತ್ತದೆ. ಒಂದು ವೇಳೆ ಉದ್ಯೋಗ ಪಡೆದ ನಂತರ ಮಾಹಿತಿ ನೀಡದೆ ಘೋಷಿಸಲು ವಿಫಲವಾದರೆ ದಂಡ ತೆರೆಬೇಕಾಗುತ್ತದೆ. ಅಭ್ಯರ್ಥಿಗಳು ತಾವು ನಿರುದ್ಯೋಗಿಗಳೆಂದು ಸ್ವಯ ಘೋಷಣೆ ಮಾಡಿ ಪ್ರಮಾಣ ಪತ್ರವನ್ನು ಸಲ್ಲಿಸುವುದು ಸಹ ಕಡ್ಡಾಯ ವಾಗಿದೆ. ಒಟ್ಟಿನಲ್ಲಿ ಈ ಯೋಜನೆಯಿಂದ ಸುಮಾರು 5 ಲಕ್ಷ ಪದವೀಧರರ ಖಾತೆಗೆ ನೇರವಾಗಿ ಹಣ ತಲುಪಲಿದೆ.

advertisement

Leave A Reply

Your email address will not be published.