Karnataka Times
Trending Stories, Viral News, Gossips & Everything in Kannada

Land: ನಿಮ್ಮ ಜಮೀನನ್ನು ಬೇರೆಯವರು ಅತಿಕ್ರಮಿಸಿದ್ದರೆ ಅದನ್ನು ಮೊಬೈಲ್ ನಲ್ಲಿಯೇ ಈ ರೀತಿಯಾಗಿ ಅಳತೆ ಮಾಡಿ

advertisement

ಸಾಮಾನ್ಯವಾಗಿ ಜನರು ಜಮೀನು (Loan) ಹೊಂದಿದ್ದರೆ ಅದು ನಿಮ್ಮದೇ ಜಮೀನು ಎನ್ನುವುದಕ್ಕೆ ಇರುವ ದಾಖಲೆಯೇ ಆರ್.ಟಿಸಿ ಅಥವಾ ಪಹಣಿ (RTC). ಆದರೆ ಈ ಆರ್ ಟಿಸಿಯನ್ನು ಪಡೆಯುಲು ರೈತರು ನಾಡಕಚೇರಿಗಳ ಮುಂದೆ ಗಂಟೆಗಟ್ಟಲೇ ಸರತಿಯಲ್ಲಿ ನಿಲ್ಲಬೇಕಾಗಿತ್ತು. ಅದಲ್ಲದೇ ನಿಮ್ಮ ಜಮೀನನ್ನು ಅಳತೆ ಮಾಡಿಸಲು ಸರ್ವೇ (Survey) ಮಾಡುವವರನ್ನು ಕರೆಸಿಕೊಳ್ಳಬೇಕಾಗಿತ್ತು. ಆದರೆ ಇದೀಗ ರೈತರ ಈ ಕೆಲಸವನ್ನು ಮತ್ತಷ್ಟು ಸುಲಭವನ್ನಾಗಿಸಿದೆ. ಹೌದು, ಕೈಯಲ್ಲಿ ಮೊಬೈಲ್ (Mobile) ಒಂದಿದ್ದರೆ ನಿಮ್ಮ ಆರ್ ಟಿಸಿಯ ಮಾಹಿತಿಯ ಜೊತೆಗೆ ಕುಳಿತಲ್ಲಿಯೇ ಜಮೀನಿನ ಅಳತೆಯನ್ನು ಮಾಡಬಹುದು.

 

 

ಈ ಆಪ್ ನಿಂದ ಜಮೀನು (Land) ಅಳತೆ ಸಾಧ್ಯ

advertisement

ನಿಮ್ಮ ಜಮೀನನ್ನು (Land) ಅಳತೆ ಮಾಡಲು ಮೀಸರ್ ಆಪ್ (Measure App) ಡೌನ್ಲೋಡ್ ಮಾಡಿಕೊಳ್ಳಬೇಕು. ಈ ಆಪ್ ಅನ್ನು ಓಪನ್ ಮಾಡಿ ಕೈಯಲ್ಲಿ ಹಿಡಿದುಕೊಂಡು ನಿಮ್ಮ ಹೊಲ ಸುತ್ತಲೂ ಒಂದು ಬಾರಿ ಸುತ್ತಾಡಿದರೆ ಸಾಕು ನಿಮ್ಮ ಹೊಲ ಎಷ್ಟು ಎಕರೆ ಇದೆ ಎನ್ನುವುದು ತಿಳಿಯುತ್ತದೆ. ನಿಮ್ಮ ಹೊಲವನ್ನು ಯಾರಾದರೂ ಒತ್ತುವರಿ ಮಾಡಿಕೊಂಡು, ನಿಮ್ಮ ಜಮೀನಿನಲ್ಲಿ ಅವರು ತಮ್ಮ ಬೆಳೆಗಳನ್ನು ಬೆಳೆದುಕೊಳ್ಳುತ್ತಿದ್ದರೆ, ಅದನ್ನು ಈ ಆಪ್ ಸಹಾಯದಿಂದ ತಿಳಿದುಕೊಳ್ಳಬಹುದು. ಹೀಗೆ ಮಾಡುವುದರಿಂದ ನಿಮ್ಮ ಹೊಲವನ್ನು ಬೇರೆಯವರು ಆಕ್ರಮಣ ಮಾಡಿಕೊಳ್ಳಲು ಆಗುವುದಿಲ್ಲ.

ಆಪ್ ನಿಂದ ಅಳತೆ ಮಾಡುವುದು ಹೇಗೆ?

  • ಮೊದಲಿಗೆ ರೈತರು ನಿಮ್ಮ ಹೊಲದ ಒಂದು ಮೂಲೆಯಲ್ಲಿ ನಿಂತು, ಸ್ಟಾರ್ಟ್ (Start) ಎಂಬ ಆಯ್ಕೆ ಮೇಲೆ ನೀವು ಕ್ಲಿಕ್ ಮಾಡಬೇಕು. ಆ ತಕ್ಷಣ ಈ ಆ್ಯಪ್ ಅಳತೆ ಮಾಡಲು ಪ್ರಾರಂಭ ಮಾಡುತ್ತದೆ.
  • ನೀವು ಏರಿಯ (Area) ಎಂಬ ಆಯ್ಕೆಯಲ್ಲಿ ಎಕರೆ (Acre) ಎಂಬ ಆಯ್ಕೆಯನ್ನು ಆಯ್ದುಕೊಳ್ಳಬೇಕು.
  • ಅಲ್ಲಿ ನಂತರ ನೀವು ನಿಮ್ಮ ಹೊಲದ ಇನ್ನೊಂದು ಮೂಲೆಗೆ ಹೋಗಬೇಕು, ಆ ಬಳಿಕ ಮೂರು ಮೂಲೆಯನ್ನು ಸುತ್ತಿ ಕೊನೆಗೆ ಮೊದಲು ನಿಂತ ಸ್ಥಾನಕ್ಕೆ ಬರಬೇಕು. ಇಲ್ಲಿ ನಿಮ್ಮ ಹೊಲದ ಸುತ್ತಲೂ ಒಮ್ಮೆ ಈ ಫೋನ್ ಹಿಡಿದುಕೊಂಡು ನಾಲ್ಕು ಮೂಲೆಯನ್ನು ಸುತ್ತಿದಾಗ ನಿಮ್ಮ ಹೊಲದ ಸಂಪೂರ್ಣ ಅಳತೆ ಆಗುತ್ತದೆ.
  • ಕೊನೆಗೆ ನೀವು ಸ್ಟಾಪ್ (Stop) ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿದಾಗ ಪ್ರಕ್ರಿಯೆಯು ಮುಗಿಯುತ್ತದೆ. ಏರಿಯ (Area) ಎಂಬ ಜಾಗದಲ್ಲಿ ನಿಮ್ಮ ಹೊಲ ಎಷ್ಟು ಎಕರೆ ಇದೆ ಎನ್ನುವುದು ಕಾಣುತ್ತದೆ.

 

advertisement

Leave A Reply

Your email address will not be published.