Karnataka Times
Trending Stories, Viral News, Gossips & Everything in Kannada

RBI: ಸಾಲದ EMI ಕಟ್ಟುತ್ತಿದ್ದವರಿಗೆ ರಿಸರ್ವ್ ಬ್ಯಾಂಕ್ ಸಿಹಿಸುದ್ದಿ

advertisement

ಅಮೆರಿಕಾದ ಯು ಎಸ್ ಫೆಡರಲ್ ರಿಸರ್ವ್ ಮಾಡಿದಂತೆಯೇ ಆರ್‌ ಬಿ ಐ (RBI) ಕೂಡ ಇಂಟರೆಸ್ಟ್ ರೇಟ್ ಗಳನ್ನು ಜುಲೈ ತನಕ ಯಾವುದೇ ಬದಲಾವಣೆ ಇಲ್ಲದೆ, ಈಗಿರುವ ದರಗಳಲ್ಲಿ ಮುಂದುವರೆಸಿಕೊಂಡು ಹೋಗಲಿದೆ ಎನ್ನಲಾಗಿದೆ. ಈ ಅಭಿಪ್ರಾಯವನ್ನು ಹೆಚ್ಚಿನ ಆರ್ಥಿಕ ತಜ್ಞರು ನೀಡಿದ್ದಾರೆ. ಆರ್ಥಿಕವಾಗಿ ಬೆಳೆಯುತ್ತಿರುವ ಎಕಾನಮಿಯ ಹಿನ್ನೆಲೆಯಲ್ಲಿ ಈ ನಿರ್ಧಾರ ಬರಲಿದೆ ಎನ್ನಲಾಗಿದೆ.

ತಜ್ಞರ ಮತ್ತು ಆರ್ ಬಿ ಐ (RBI) ನಿರೀಕ್ಷೆಗೂ ಮೀರಿದ ಅಕ್ಟೋಬರ್ – ಡಿಸೆಂಬರ್ ಜಿ ಡಿ ಪಿ

ಅಕ್ಟೋಬರ್ – ಡಿಸೆಂಬರ್ ಅವಧಿಯ ಗ್ರಾಸ್ ಡೊಮೆಸ್ಟಿಕ್ ಪ್ರಾಡಕ್ಟ್ (ಜಿ ಡಿ ಪಿ) ಆರ್‌ ಬಿ ಐ ಮತ್ತು ಆರ್ಥಿಕ ತಜ್ಞರ ನಿರೀಕ್ಷೆಯನ್ನು ಮೀರಿ 8.4% ಆಗಿತ್ತು. ಇದು ಹೆಚ್ಚಿನ ದೇಶಗಳಿಗೆ ಹೋಲಿಸಿದರೆ ತುಂಬಾ ಹೆಚ್ಚಿನ ಬೆಳವಣಿಗೆಯಾಗಿತ್ತು. ಇದರ ಜೊತೆಗೆ ಇನ್ ಫ್ಲೇಷನ್ ದರಗಳು ಅಥವಾ ಹಣದುಬ್ಬರ ಆರ್‌ ಬಿ ಐ (RBI) ನ ಟೂ ಪರ್ಸೆಂಟ್ – ಸಿಕ್ಸ್ ಪರ್ಸೆಂಟ್ ಟಾರ್ಗೆಟ್ ನ ಮೇಲಿನ ಹಂತದಲ್ಲಿ ಇರುವುದರಿಂದ ಇದು ಕೂಡ ಬಡ್ಡಿಯ ದರ ಕಡಿತಕ್ಕೆ ಯಾವುದೇ ಬೆಂಬಲ ನೀಡುವುದಿಲ್ಲ.

ರಾಯ್ಟರ್ಸ್ ಪೋಲ್ ನಲ್ಲಿ ಆರ್ಥಿಕ ತಜ್ಞರ ಒಮ್ಮತದ ಅಭಿಪ್ರಾಯ

ರಾಯ್ಟರ್ಸ್ ನಡೆಸಿದ ಪೋಲ್ ನಲ್ಲಿ 56 ಆರ್ಥಿಕ ತಜ್ಞರು ಭಾಗವಹಿಸಿದ್ದರು. ಇದು ಮಾರ್ಚ್ 15 ರಿಂದ 22 ರ ನಡುವಲ್ಲಿ ನಡೆದಿತ್ತು. ಇದರಲ್ಲಿ ಬಂದಿರುವ ಅಭಿಪ್ರಾಯದಂತೆ ಆರ್‌ ಬಿ ಐ ತನ್ನ ಈಗಿನ ರೆಪೋ ದರವಾದ 6.5 % ಮುಂದುವರಿಸಿಕೊಂಡು ಹೋಗಲಿದೆ. ಏಪ್ರಿಲ್ ಮೂರರಿಂದ ಐದರವರೆಗೆ ನಡೆಯಲಿರುವ ಸಭೆಯಲ್ಲಿ ಯಾವುದೇ ಬದಲಾವಣೆಗಳ ನಿರೀಕ್ಷೆ ಮಾಡಲಾಗುತ್ತಿಲ್ಲ. ಹೆಚ್ಚಿನ ಆರ್ಥಿಕ ತಜ್ಞರು ಹೇಳುವಂತೆ ಮೊದಲ ಕಡಿತ ಸೆಪ್ಟೆಂಬರ್ ನಲ್ಲಿ ಬರಬಹುದಾಗಿದ್ದು ಆಗ ರೆಪೋ ದರಗಳನ್ನು 6.25 ಶೇಕಡಾ ಮಾಡುವ ಸಾಧ್ಯತೆ ಇದೆ.

advertisement

Image Source: Zee Business

ರಷ್ಯಾ – ಉಕ್ರೇನ್ ಯುದ್ಧದಿಂದ ಹೆಚ್ಚಿದ ಬೆಲೆಗಳು

ರಷ್ಯಾ – ಉಕ್ರೇನ್ ಯುದ್ಧವು ಸರಕುಗಳ ಬೆಲೆಗಳಲ್ಲಿ, ಅದರಲ್ಲೂ ವಿಶೇಷವಾಗಿ ತೈಲದ ಬೆಲೆಯಲ್ಲಿ ತೀಕ್ಷ್ಣವಾದ ಏರಿಕೆಗೆ ಕಾರಣವಾಯಿತು. ಇದೇ ಏರಿಕೆ ಬೇರೆ ಸರಕು ಹಾಗೂ ವಸ್ತುಗಳ ಮೇಲು ಕೂಡ ಆಗಿದೆ. ಇದು ಹಣದುಬ್ಬರವನ್ನು ಗಮನಾರ್ಹವಾಗಿ ನಿಯಂತ್ರಣದಲ್ಲಿ ಇಡಲು ಕಾರಣವಾಗಿತ್ತು. ಪ್ರಮುಖ ಕೇಂದ್ರ ಬ್ಯಾಂಕುಗಳಾದ ಅಮೆರಿಕ ಮತ್ತು ಯುರೋಪಿಯನ್ ಸೆಂಟ್ರಲ್ ಬ್ಯಾಂಕ್ ಗಳ ನಂತರ ಭಾರತ ತನ್ನ ನೀತಿಯನ್ನು ಬಿಗಿಗೊಳಿಸಿ, ಮೇ 2022 ರಲ್ಲಿ ರೆಪೋ ದರಗಳನ್ನು ನಿಗದಿ ಮಾಡಿತ್ತು.

Image Source: Tribune India

ಭಾರತ ಮತ್ತು ಅಮೆರಿಕ ನಡುವಿನ ದರ ವ್ಯತ್ಯಾಸವು ಈಗ 100 ಬಿ ಪಿ ಎಸ್ ಪಾಯಿಂಟ್ ಗಳಾಗಿದೆ. ಇದು ಐತಿಹಾಸಿಕ ಮಟ್ಟಗಳಿಗಿಂತ ಗಣನೀಯವಾಗಿ ಕಡಿಮೆ ಇದೆ. ಇದಕ್ಕೆ ಕಾರಣ ಯು ಎಸ್ ಫೆಡ್ ಆರ್ ಬಿ ಐ ಗಿಂತ ದರಗಳನ್ನು ಹೆಚ್ಚಿನ ಮಟ್ಟದಲ್ಲಿ ಹೆಚ್ಚಿಸಿರುವುದು. ಕಡಿಮೆ ದರದ ವ್ಯತ್ಯಾಸವು ವಿದೇಶಿ ಹೂಡಿಕೆದಾರರಿಗೆ ಕಡಿಮೆ ಪ್ರೀಮಿಯಂ ಅನ್ನು ಸೂಚಿಸುತ್ತದೆ ಮತ್ತು ಇದರಿಂದಾಗಿ ಕಡಿಮೆ ವಿದೇಶಿ ಒಳಹರಿವು ಕಾಣಬಹುದು. ಆದರೆ ಇದು ಭಾರತದ ಮಟ್ಟಿಗೆ ಇದು ನಿಜ ಎಂದು ಅನಿಸುತ್ತಿಲ್ಲ. ಅದೇನೇ ಇರಲಿ ರೆಪೋ ದರದ ಸ್ಥಿರತೆಯಿಂದಾಗಿ ಬ್ಯಾಂಕುಗಳಲ್ಲಿ ಯಾವುದೇ ಸಾಲದ ಬಡ್ಡಿದರ ಜಾಸ್ತಿ ಆಗುವುದಿಲ್ಲ ಹಾಗಾಗಿ ಗ್ರಾಹಕರು ಚಿಂತೆಪಟ್ಟುಕೊಳ್ಳಬೇಕಾದ ಅಗತ್ಯ ಇಲ್ಲ ಎಂದು ಆರ್ ಬಿ ಐ ತಿಳಿಸಿದೆ.

advertisement

Leave A Reply

Your email address will not be published.