Karnataka Times
Trending Stories, Viral News, Gossips & Everything in Kannada

Arecanut: ಅಡಿಕೆಗಿಂತ ಹೆಚ್ಚು ಲಾಭ ನೀಡುತ್ತಿದೆ ಈ ಕೃಷಿ! ಗಿಡ ಖರೀದಿಗೆ ಮುಗಿಬಿದ್ದ ಜನ

advertisement

ಜನಸಂಖ್ಯೆಯಲ್ಲಿ ಮೊದಲ ಸ್ಥಾನದಲ್ಲಿ ಇರುವ ನಮ್ಮ ದೇಶದಲ್ಲಿ ನಿರುದ್ಯೋಗದ ಸಂಖ್ಯೆ ಗಣನೀಯವಾಗಿ ಹೆಚ್ಚಾಗುತ್ತಿದೆ. ಹಾಗಾಗಿ ಸರಕಾರವು ಕೂಡ ಇದಕ್ಕೆ ಜನರಿಗೆ ಸ್ವ ಉದ್ಯೋಗ ಮಾಡಲು ಬೆಂಬಲ ನೀಡುತ್ತಿದೆ. ಇದರ ನಡುವೆ ಕೃಷಿ ಕಾರ್ಯ ಚಟುವಟಿಕೆಗೆ ಉತ್ತೇಜನ ನೀಡುವ ಸಲುವಾಗಿ ಸಬ್ಸಿಡಿ ಸಹಾಯಧನ ಸಹ ಸಿಗುತ್ತಿದೆ. ಸರಕಾರದಿಂದ ಕೃಷಿ ಚಟುವಟಿಕೆಗೆ ಸಾಲಸೌಲಭ್ಯ ಇದ್ದರೂ ಯಾವ ಬೆಳೆ ಬೆಳೆಯಬೇಕು, ಕಡಿಮೆ ಖರ್ಚು ಅಧಿಕ ಲಾಭ ಸಿಗುವ ಬೆಳೆ ಯಾವುದು ಅನ್ನೊರಿಗೆ ಈ ಮಾಹಿತಿ ಅಗತ್ಯವಾಗುತ್ತದೆ.

ಇದರಲ್ಲಿ ಇದೆ ಅಧಿಕ ಲಾಭ:

ಭಾರತದ ಸಾಂಬಾರು ಬೆಳೆ (Sambar Crop) ಪದಾರ್ಥದಲ್ಲಿ ಚಕ್ಕೆಗೆ ಪ್ರಮುಖ ಸ್ಥಾನ ಮಾನ ಇದೆ‌. ಸಸ್ಯಹಾರ ಅಥವಾ ಮಾಂಸಾಹಾರ ಎರಡಕ್ಕೂ ಇದರ ಬಳಕೆ ಇದ್ದೇ ಇರಲಿದೆ. ಸಸ್ಯಹಾರಕ್ಕಿಂತಲೂ ಮಾಂಸಾಹಾರದ ಬಹುತೇಕ ರೆಸಿಪಿ ಇದನ್ನೆ ಅವಲಂಬನೆ ಮಾಡಿದ್ದ ಕಾರಣಕ್ಕೆ ಚಕ್ಕೆ (Cinnamon) ಗೆ ಅಧಿಕ ಬೇಡಿಕೆ ಇದೆ. ಮೊಗ್ಗು, ಪಲಾವು ಎಲೆ ಮತ್ತು ಚಕ್ಕೆ ಇವು ಮೂರು ಒಂದರಲ್ಲೆ ಸಿಗುವ ಕಾರಣ ಬೆಳೆಯುವ ಪ್ರತಿ ಅಂಶವು ನಿಮಗೆ ಲಾಭವನ್ನೇ ನೀಡಲಿದೆ. ಶ್ರೀಲಂಕಾದಲ್ಲಿ ಚಕ್ಕೆ ಬೆಳೆ ಹೇರಳವಾಗಿದ್ದು ಶಲೋನ್ ತಳಿ ಬೆಳೆಗೆ kg ಮೇಲೆ 4,500 ರೂಪಾಯಿ ಇರಲಿದೆ. ಹಾಗಾಗಿ ನೀವು ಲಕ್ಷಾಂತರ ರೂಪಾಯಿ ಲಾಭ ಪಡೆಯಬಹುದು.

 

Image Source: Spice Trekkers

 

ಎಲ್ಲಿ ಅಧಿಕ ಗಿಡ ಸಿಗಲಿದೆ?

advertisement

ಕೇರಳದಲ್ಲಿ ಇದರ ಅಧಿಕ ಗಿಡ ಸಿಗಲಿದೆ. ಗಿಡಕ್ಕೆ 120ರೂಪಾಯಿ ನಂತೆ ಇದನ್ನು ಮಾರಾಟ ಮಾಡಲಾಗುವುದು. ಇದರಲ್ಲಿ ಶಲನೊ ಮತ್ತು ಕ್ಯಾಶ್ಯೋ ಎಂಬ ಪ್ರತ್ಯೇಕ ತಳಿ ಇದೆ. ಇದರಲ್ಲಿ ಶಲನೋ ತಳಿ ಅಧಿಕ ಲಾಭ ಕಡಿಮೆ ಖರ್ಚಿಗೆ ಸಿಗಲಿದೆ. ಇದಕ್ಕೆ ಮಣ್ಣಿನ ಗುಣಮಟ್ಟ ಪರಿಶೀಲಿಸುವ ಅಗತ್ಯ ಇಲ್ಲ. ಭೂಮಿಯಿಂದ ಅರ್ಧ ಅಡಿ ಕೊಂಬೆ ಕಡಿಯುತ್ತಾ ಹೋಗಬೇಕು. ಮೂರು ವರ್ಷಕ್ಕೆ ಫಸಲು ಸಿಗುವ ಕಾರಣ ಚಕ್ಕೆ, ಮೊಗ್ಗು ,ಎಲೆ ಎಲ್ಲವೂ ನಿಮಗೆ ಲಾಭ ಸಿಗಲಿದೆ.

ಆಯುರ್ವೇದಿಕ್ ಗೂ ಬಳಕೆ:

ಚಕ್ಕೆ ಮರದ ಎಲೆಯಲ್ಲಿ ಎಣ್ಣೆ ಕೂಡ ತೆಗೆಯುತ್ತಾರೆ. ಇಂತಹ ಎಣ್ಣೆ ಹೆಚ್ಚು ಆಯುರ್ವೇದದಲ್ಲಿ ಬಳಕೆ ಮಾಡಲಾಗುತ್ತಿದೆ. ನೀವು ಮಾರುಕಟ್ಟೆಯಲ್ಲಿ ಖರೀದಿ ಮಾಡುವ ಬಹುತೇಕ ಎಣ್ಣೆ ಈ ಚಕ್ಕೆ ಮರದ ಎಣ್ಣೆಯೇ ಆಗಿದೆ. ಈಗಂತೂ ಮಳೆ ಕೂಡ ಇಲ್ಲ ಅಡಿಕೆ ತೆಂಗು ಕೃಷಿ ಮಾಡಿದ್ದ ರೈತರಿಗೆ ಫಸಲು ಇಲ್ಲದೆ ನಷ್ಟ ಬಂದಿದೆ ಆದರೆ ಈ ಚಕ್ಕೆ ಬೆಳೆಯಲ್ಲಿ ಯಾವುದೇ ವಿಧವಾಗಿ ಅಧಿಕ ನೀರಿನ ಅಗತ್ಯವು ಇಲ್ಲ.

ಸಮಗ್ರ ಕೃಷಿ ಮಾಡಬಹುದು:

ಅಡಿಕೆ (Arecanut) ಅಥವಾ ತೆಂಗಿನ ಕೃಷಿ (Coconut Cultivation) ನಡುವೆ ಕೂಡ ಚಕ್ಕೆ ಬೆಳೆಯಬಹುದು. ಈ ಸಮಗ್ರ ಕೃಷಿಯೂ ನಿಮ್ಮ ಆಪತ್ಕಾಲಕ್ಕೆ ದೊಡ್ಡ ಮಟ್ಟದ ನೆರವು ಸಹ ನೀಡಲಿದೆ. ಏಲಕ್ಕಿಯನ್ನು ಸಹ ಬೆಳೆಯಬಹುದು. ಇದಕ್ಕೆ ನೀರು ನೀಡದಿದ್ದರು ಗಿಡ ಒಣಗಲಾರದು ಬಿಸಿಲಿದ್ದರೂ ಹಸಿರಾಗೆ ಇರಲಿದೆ. ಇದಕ್ಕೆ ರೋಗ ಬಾಧೆ ಕಡಿಮೆ, ಹಾಗೂ ದನ ಕರು ಮೇಯುತ್ತೆ ಅನ್ನೊ ಚಿಂತೆ ಕೂಡ ಬೇಡ. ಹೀಗಾಗಿ ಅಧಿಕ ಲಾಭ ಪಡೆಯುವ ಚಕ್ಕೆ ಕೃಷಿ ಮಾಡಿದರೆ ನಿಮಗೆ ಅಧಿಕ ಲಾಭ ಸಿಗುವುದು ಗ್ಯಾರೆಂಟಿ.

advertisement

Leave A Reply

Your email address will not be published.