Karnataka Times
Trending Stories, Viral News, Gossips & Everything in Kannada

Property Distribution: ಮಾತಿನ ಮೂಲಕ ಆಸ್ತಿ ಹಂಚಿಕೊಂಡವರಿಗೆ ಹೊಸ ರೂಲ್ಸ್! ಕೋರ್ಟ್ ಆದೇಶ

advertisement

ಬಹಳ ಹಿಂದೆ ಕಾನೂನಿನ ವ್ಯವಸ್ಥೆ ಬಗ್ಗೆ ಜನರಿಗೆ ಸರಿಯಾದ ಮಾಹಿತಿ ಒದಗಿರಲಿಲ್ಲ ಎನ್ನಬಹುದು. ಹಿಂದೆಲ್ಲ ಮನೆ ವ್ಯಾಜ್ಯ, ಆಸ್ತಿ ಹಂಚಿಕೆ (Property Distribution), ಹಕ್ಕಿನ ವರ್ಗಾವಣೆ ಎಲ್ಲವೂ ಯಾರೋ ಮನೆ ಯಜಮಾನರು ಅಥವಾ ಪಂಚಾಯ್ತಿ ಮಾಡಿ ಬಾಯಿ ಮಾತಿನ ಪ್ರಕಾರ ಹಂಚಿಕೆ ಮಾಡಲಾಗುತ್ತಿತ್ತು ಆದರೆ ಈಗ ಕಾನೂನಿಗೆ ಬಲ ಬಂದಿದೆ. ಹಿಂದೆ ಬಾಯಿ ಮಾತಿನ ಮೂಲಕ ಆಸ್ತಿ (Property) ವರ್ಗಾಯಿಸಲ್ಪಟ್ಟಿದ್ದರೆ ಅದಕ್ಕೆ ಸರಕಾರದ ಮಾನ್ಯತೆ ಇರುತ್ತದೆಯೇ ಕಾನೂನಿನಲ್ಲಿ ಈ ಬಗ್ಗೆ ನಿಯಮ ಏನಿದೆ ಎಂಬುದರ ಮಾಹಿತಿ ಇಲ್ಲಿದೆ.

ಈಗ ಆಸ್ತಿ ಪಾಸ್ತಿ ಬೆಲೆ ಅಧಿಕವಾಗುತ್ತಿದೆ ಸಂಬಂಧಗಳಿಗೆ ಬೆಲೆಯೆ ಇಲ್ಲವಾಗುತ್ತಿದೆ. ಕುಟುಂಬ ಎಂಬ ಪರಿಕಲ್ಪನೆ ಮಾಯವಾಗುತ್ತಿದೆ. ಅಣ್ಣ ತಮ್ಮಂದಿರ ನಡುವೆ, ಅಪ್ಪ ಮಕ್ಕಳ ನಡುವೆ ಆಸ್ತಿ ಹಂಚಿಕೆ (Property Distribution) ವಿಚಾರವಾಗಿ ಜಗಳ ಕೂಡ ನಡೆಯುತ್ತಿರುತ್ತದೆ. ಹೀಗಾಗಿ ಕೋರ್ಟ್ ನಲ್ಲಿ ಕೇಸ್ ಹೂಡುವವರ ಸಂಖ್ಯೆ ಕೂಡ ಅಧಿಕವಾಗಿದೆ. ಆಸ್ತಿಗಳು ಬಹಳ ಹಿಂದಿನದ್ದಾಗಿದ್ದು ನೋಂದಣಿ ಆಗದೆ ಇದ್ದರೆ ಆಗ ಅಧಿಕ ಪಾಲು ಸಿಗುತ್ತೆ ಎಂಬ ಕಾರಣಕ್ಕೆ ಕೂಡ ವ್ಯಾಜ್ಯ ಮಾಡಿದವರನ್ನು ಸಹ ನಾವು ಕಾಣಬಹುದು.

ಹಿಂದೆಲ್ಲ ಹೇಗಿತ್ತು?

 

Image Source: Housing

 

advertisement

ಹಿಂದೆಲ್ಲ ಕೂಡ ಕುಟುಂಬ ಪರಿಕಲ್ಪನೆ ಹೆಚ್ಚಾಗಿ ಇದ್ದು ಮನೆ ಹೆಣ್ಣು ಮಕ್ಕಳು ಆಸ್ತಿ (Property) ಪಡೆಯದೆ ತಮ್ಮ ಪಾಲಿನದ್ದನ್ನು ಅಣ್ಣ ತಮ್ಮಂದಿರಿಗೆ ನೀಡುತ್ತಿದ್ದರು. ಬಾಯಿ ಮಾತಿಗೆ ಹಕ್ಕು ಬಿಟ್ಟು ಕೊಟ್ಟಿರುತ್ತಾರೆ. ಆಗ ಸಂಬಂಧ ಪಟ್ಟ ಆಸ್ತಿಯ ಖಾತೆಯನ್ನು ಅಣ್ಣ ತಮ್ಮಂದಿರು ತಮ್ಮ ಹೆಸರಲ್ಲೇ ಮಾಡಿ ಬಿಡುತ್ತಾರೆ ಕಾಲ ಕಳೆದಂತೆ ಆಸ್ತಿ ಮೌಲ್ಯ ಹೆಚ್ಚಾಗಿ ಹೆಣ್ಣುಮಕ್ಕಳು ತಮ್ಮ ಪಾಲಿನ ಆಸ್ತಿ ನೀಡುವಂತೆ ಹಕ್ಕಿನ ಪ್ರಶ್ನೆ ಮಾಡುತ್ತಾರೆ. ಹಾಗಾದರೆ ಕಾನೂನಲ್ಲಿ ಇದೆಕ್ಕೆ ನಿಯಮ ಏನಿದೆ ಎಂಬುದನ್ನು ನೀವು ತಿಳಿದಿರಿ.

ಕಾನೂನು ಏನು ಹೇಳುತ್ತೆ?

ಬಾಯಿ ಮಾತಿನ ಮೂಲಕ ಹಕ್ಕು ವರ್ಗಾವಣೆ ಆದರೆ ಆಗ ಈ ಒಂದು ವಿಚಾರವು Principal of Estoppel ಆ್ಯಕ್ಟ್ ಅಡಿಯಲ್ಲಿ ಬರಲಿದೆ. ಒಮ್ಮೆ ಬಾಯಿ ಮಾತಿನಿಂದ ಹಕ್ಕಿನ ಪ್ರಕಾರವೇ ಆಸ್ತಿ (Property) ಕೊಟ್ಟ ಮೇಲೆ ಅದೇ ಆಸ್ತಿ ನಂಬಿ ಅನೇಕ ವರ್ಷ ಜೀವನ ಮಾಡಿರುತ್ತಾರೆ. ಆಗ ಆಸ್ತಿ ಮರಳಿ ನೀಡುವಂತೆ ಹೇಳಿದರೆ ಆ ವ್ಯಕ್ತಿಗೆ ಕಷ್ಟ ಆಗಲಿದೆ ಎಂಬ ಕಾರಣಕ್ಕೆ ಈ ಸಿದ್ಧಾಂತ ಅಳವಡಿಸಲಾಗಿದೆ. ಆದರೆ ಎಲ್ಲ ಸಂದರ್ಭದಲ್ಲಿ ಇದು ಅನ್ವಯ ಆಗಲಾರದು.

ಸಾಬೀತಾಗಬೇಕು?

ಬಾಯಿ ಮಾತಿನ ಒಪ್ಪಂದ ಸಾಬೀತಾದರೆ ಅಂತಹ ಆಸ್ತಿ ಮರಳಿ ನೀಡುವ ಅಗತ್ಯ ಇಲ್ಲ ಎಂದು ಹೇಳಲಾಗುವುದು. ಈಗಿನ ಕಾನೂನು ಪ್ರಕಾರ ಎಲ್ಲ ಆಸ್ತಿಗೂ ಸರಿಯಾದ ದಾಖಲೆ ಇರಬೇಕು, ನೋಂದಣಿ ಮಾಡಿರಬೇಕು. ಅನೇಕ ಸಲ ಬರವಣಿಗೆ ಮೂಲಕ ಹಕ್ಕು ಬಿಟ್ಟು ಕೊಟ್ಟರೂ, ಹಕ್ಕಿನ ರಿಜಿಸ್ಟ್ರೇಶನ್ ಆಗಿರಲಾರದು ಅಂತಹ ಎಷ್ಟೋ ಪ್ರಕರಣಗಳಲ್ಲಿ ಪ್ರಿನ್ಸಿಪಲ್‌ ಆಫ್ ಎಸ್ಟೊಪೆಲ್ ಪ್ರಕಾರ ಕೇಸ್ ಗೆದ್ದ ಉದಾಹರಣೆ ಸಹ ಇದೆ. ಹಾಗಿದ್ದರೂ ಹೆಣ್ಣು ಮಕ್ಕಳ ಕಾನೂನಿಗಾಗಿ ಬಾಯಿ ಮಾತಿನ ಹಕ್ಕಿನ ವರ್ಗಾವಣೆ ನಡೆಯಲಾರದು. ಯಾವುದೆ ಆಸ್ತಿ ಯಾಗಿದ್ದರು ರಿಜಿಸ್ಟ್ರೇಶನ್ ದಾಖಲಾತಿ ಹೊಂದಿರುವುದು ಅತ್ಯವಶ್ಯಕವಾಗಿದೆ.

advertisement

Leave A Reply

Your email address will not be published.