Karnataka Times
Trending Stories, Viral News, Gossips & Everything in Kannada

Property: ಬೆಂಗಳೂರಲ್ಲಿ ಆಸ್ತಿ ಜಾಗ ಇದ್ದವರಿಗೆ ಹೊಸ ರೂಲ್ಸ್!

advertisement

ಇಂದು ನಗರ ಪ್ರದೇಶಗಳಲ್ಲಿ ಆಸ್ತಿ ಖರೀದಿ, ನಿವೇಶನ ಮಾರಾಟ, ಮನೆ ಖರೀದಿ ಇತ್ಯಾದಿ ಹೆಚ್ಚಳವಾಗಿದೆ. ಅದರಲ್ಲೂ ಬೆಂಗಳೂರಿನಂತಹ ಸಿಟಿ ಪ್ರದೇಶದಲ್ಲಿ ಬದುಕು ಕಟ್ಟಿಕೊಳ್ಳುವ ಜನರ ಸಂಖ್ಯೆ ಹೆಚ್ಚಾಗಿದ್ದು ಆಸ್ತಿ ತೆರಿಗೆ, ಆಸ್ತಿ ನೊಂದಣಿ ಕುರಿತಂತೆ ನಿಯಮ ಬದಲಾವಣೆ ವಿಚಾರವಾಗಿ ಡಿಸಿಎಂ ಡಿ.ಕೆ. ಶಿವಕುಮಾರ್ (D.K. Shivakumar) ಮಾಹಿತಿ‌ನೀಡಿದ್ದಾರೆ.ವಿಧಾನಸೌಧದಲ್ಲಿ ಮಾಧ್ಯಮಗೋಷ್ಠಿ ನಡೆಸುವ ಮೂಲಕ ಈ ಬಗ್ಗೆ ಸ್ಪಷ್ಟನೆ ‌ನೀಡಿದ್ದಾರೆ.

ಈ ಪರಿಹಾರ ಕಲ್ಪಿಸಿದೆ:

ಬೆಂಗಳೂರಿನಲ್ಲಿ ಇದೀಗ ಆಸ್ತಿ (Property) ಗಾಗಿ ಎ ಅಥವಾ ‘ಬಿ’ ಖಾತಾವನ್ನು ಪಡೆಯಲು ಸಾಧ್ಯವಾಗದ ನಿವಾಸಿಗಳಿಗೆ ಸಹಾಯ ಮಾಡಲು ಪರಿಹಾರವನ್ನು ಕೂಡ ಸರಕಾರ ಕಲ್ಪಿಸಿದೆ. ಯಾರೆಲ್ಲಾ ಆಸ್ತಿ ತೆರಿಗೆ (Property Tax) ಪಾವತಿಗೆ ತಮ್ಮನ್ನು ತಾವು ಘೋಷಣೆ ಮಾಡಿಕೊಂಡಿಲ್ಲವೋ ಅವರಿಗೆ ಮತ್ತೊಂದು ಅವಕಾಶ ನೀಡುವ ಮೂಲಕ ನಾಗರಿಕರು ತಮ್ಮ ಆಸ್ತಿ (Property) ಯನ್ನು ಸ್ವಯಂ ನೊಂದಣಿ ಮಾಡಬಹುದಾಗಿದೆ.

 

 

ನಂಬಿಕೆ ನಕ್ಷೆ:

ಬೆಂಗಳೂರು ಮಹಾನಗರ ಪಾಲಿಕೆ ನಕ್ಷೆ ಮಂಜೂರಾತಿ ಕಾರ್ಯಕ್ರಮದಲ್ಲಿ ನಂಬಿಕೆ ನಕ್ಷೆ ಅಂದರೆ ಹೊಸ ಆಸ್ತಿ ತೆರಿಗೆ (Property Tax) ವ್ಯವಸ್ಥೆ ಸ್ವಯಂ ಘೋಷಣೆ ಆಧಾರಿತ ತಾತ್ಕಾಲಿಕ ಆಸ್ತಿ (Property), ಖಾತಾ ವಿತರಣೆ ಯೋಜನೆ ಇತ್ಯಾದಿ ಬಗ್ಗೆ ಮಾತನಾಡಿದ ಡಿಕೆ ಶಿವ ಕುಮಾರ್ (D.K. Shivakumar) ಅವರು ಬೆಂಗಳೂರಿನಲ್ಲಿ 50 x 80 ಅಡಿ ವಿಸ್ತೀರ್ಣದ ತನಕ ಅಲ್ಲಿ ಖರೀದಿ ಮಾಡಿದ್ದ ನಿವೇಶನಗಳಲ್ಲಿ 4 ಯುನಿಟ್ ಮನೆ ಕಟ್ಟಿಸಿ ಕೊಳ್ಳುವವರು ನೊಂದಾಯಿತ ಇಂಜಿನಿಯರ್ ಗಳ ಮೂಲಕ ತಮ್ಮ ಕಟ್ಟಡದ ನಕ್ಷೆಗಳಿಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಕೆ ಮಾಡಲು ನಂಬಿಕೆ ನಕ್ಷೆ ಯೋಜನೆಯನ್ನು ಜಾರಿಗೆ ತರಲಾಗಿದೆ ಎಂದರು.

advertisement

ಅನ್ ಲೈನ್ ಅವಕಾಶ:

BBMP ಯು ಸುರಕ್ಷಿತ ಅನೈನ್ ವ್ಯವಸ್ಥೆಯನ್ನು ಪ್ರಾರಂಭಿಸುತ್ತಿದ್ದು, ಇಲ್ಲಿ ಸುಲಭವಾಗಿ ನೊಂದಣಿ ಮಾಡಬಹುದಾಗಿದೆ. ಇದರಲ್ಲಿ ನಾಗರೀಕರು BBMP ಯ ಆಸ್ತಿ ತೆರಿಗೆ ನೋಂದಣಿ ಯಲ್ಲಿ ತಮ್ಮ ಆಸ್ತಿಗಳನ್ನು ನಮೂದಿಸಲು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದು. ತದನಂತರ ತಮ್ಮ ಆಸ್ತಿ ತೆರಿಗೆಯನ್ನು ತಕ್ಷಣವೇ ಪಾವತಿಸ ಬಹುದು ಮತ್ತು ತಾತ್ಕಾಲಿಕ ಆಸ್ತಿತೆರಿಗೆ ಸಂಖ್ಯೆಯನ್ನು ಪಡೆಯಬಹುದಾಗಿದೆ.

ಜನರಿಗೆ ಅನುಕೂಲವಾಗಲಿದೆ:

 

 

ಈ ಯೋಜನೆ ಜಾರಿಗೆ ತಂದಿದ್ದರಿಂದ ಜನತೆಗೆ ಬಹಳಷ್ಟು ಅನುಕೂಲ ಕರವಾಗಲಿದೆ‌. ಸಾರ್ವಜನಿಕರು ತಮ್ಮ ಕಟ್ಟಡದ ನಕ್ಷೆಗಾಗಿ ಅನುಮತಿ ಪಡೆಯಲು ಕಚೇರಿಗಳನ್ನು ಅಲೆಯಬೇಕಾಗಿಲ್ಲ. ಸುಲಭವಾಗಿ ಅನ್ ಲೈನ್ ಮೂಲಕ ಮಾಡಬಹುದಾಗಿದೆ.

ಅವ್ಯವಹಾರ ಮಾಡುವಂತಿಲ್ಲ:

ಆಸ್ತಿ ತೆರಿಗೆ (Property Tax) ಪಾವತಿಸಲು ಮತ್ತು ವಿವರಗಳನ್ನು ಪರಿಶೀಲಿಸಲು ಕೂಡ ಹೆಚ್ಚಿನ ಅವಕಾಶ ನೀಡುತ್ತೇವೆ. ಫೈಲಿಂಗ್ ಸರಿಯಾಗಿದ್ದರೆ,ದಾಖಲೆ ಗಳು ಸರಿಯಾಗಿ ಇದ್ದಲ್ಲಿ ಯಾವುದೇ ಸಮಸ್ಯೆ ಇರುವುದಿಲ್ಲ. ಅವ್ಯವಹಾರ ನಡೆದರೆ ಕಾನೂನು ಕೈಗೊಳ್ಳುತ್ತೇವೆ ಎಂದಿದ್ದಾರೆ.

advertisement

Leave A Reply

Your email address will not be published.