Karnataka Times
Trending Stories, Viral News, Gossips & Everything in Kannada

Central Govt: ಕೇವಲ 7 ರೂಗೆ ಹೊಸ ಯೋಜನೆ ತಂದ ಕೇಂದ್ರ ಸರ್ಕಾರ! ಮುಗಿಬಿದ್ದ ಜನ

advertisement

ಇಂದು ಸೇವಿಂಗ್ ಅನ್ನೋದು ಪ್ರತಿಯೊಬ್ಬ ವ್ಯಕ್ತಿಗೂ ಬಹಳ ಮುಖ್ಯ. ಇಂದು ನಾವು ದುಡಿದ ಸ್ವಲ್ಪ ಹಣವನ್ನು ಉಳಿಸಿದ್ರೆ ಮುಂದಿನ ದಿನದ ಜೀವನಕ್ಕೆ ಬಹಳಷ್ಟು ಸಹಕಾರಿಯಾಗುತ್ತದೆ. ಹಾಗಾಗಿ ಕಷ್ಟ ಕಾಲ ಅಂತ ಬಂದಾಗ ನಮಗೆ ನೆರವಾಗುವುದು ನಾವು ಕೂಡಿಟ್ಟ ಹಣ, ಹೆಚ್ಚಿನ ಜನರು ತಮಗೆ ವೃದ್ಧಾಪ್ಯದ ಸಂದರ್ಭದಲ್ಲಿ ಆರ್ಥಿಕ ತೊಂದರೆಯಾಗಬಾರದು ಎಂದು ಈ ಮೊದಲೇ ಹಣ ಸೇವಿಂಗ್ ಮಾಡಿ ಇಟ್ಟಿರುತ್ತಾರೆ. ಹಾಗಾಗಿ ನೀವು ಚಿಕ್ಕ ವಯಸ್ಸಿನಿಂದಲೇ ಸಣ್ಣ ಮೊತ್ತವನ್ನು ಉಳಿಸುತ್ತಾ ಹೋದರೆ ನಿಮ್ಮ ವೃದ್ಧಾಪ್ಯದ ದಿನವನ್ನು ಆರ್ಥಿಕ ತೊಂದರೆ ಇಲ್ಲದೆ ಕಳೆಯಬಹುದು. ಇಂದು ಕೇಂದ್ರ ಸರ್ಕಾರ (Central Govt) ಹಣ ಉಳಿತಾಯ ಮಾಡುವ ಅನೇಕ ಯೋಜನೆಗಳನ್ನು ಪರಿಚಯಿಸಿದೆ. ಹೆಣ್ಣು ಮಕ್ಕಳಿಗೆ, ಮಹಿಳೆಯರಿಗೆ, ಅದೇ ರೀತಿ ಹಿರಿಯ ನಾಗರಿಕರಿಗೂ ಹಲವು ಯೋಜನೆ ರೂಪಿಸಿದ್ದು ಅಟಲ್ ಪಿಂಚಣಿ ಯೋಜನೆ (Atal Pension Yojana) ಯಲ್ಲಿ ಕಡಿಮೆ ಮೊತ್ತದ ಹೂಡಿಕೆ ಮಾಡುವ ಮೂಲಕ ವೃದ್ಧಾಪ್ಯದ ಸಂದರ್ಭದಲ್ಲಿ ನೀವು ಪಿಂಚಣಿ (Pension) ಪಡೆಯಬಹುದು.

ಹೇಗಿದೆ ಈ ಯೋಜನೆ?

2015 ರಲ್ಲಿಯೇ ಕೇಂದ್ರ ಸರ್ಕಾರ ಅಟಲ್ ಪಿಂಚಣಿ ಯೋಜನೆ (Atal Pension Scheme) ಯನ್ನು ಪ್ರಾರಂಭ ಮಾಡಿದ್ದು, ಗಂಡ ಮತ್ತು ಹೆಂಡತಿ ಇಬ್ಬರೂ ಈ ಪಿಂಚಣಿ ಯೋಜನೆ (Pension Scheme) ಯ ಸೌಲಭ್ಯ ಪಡೆಯಬಹುದು‌. ಕನಿಷ್ಠ ಮೊತ್ತದ ಹೂಡಿಕೆಯೊಂದಿಗೆ ಹೆಚ್ಚಿನ ಲಾಭ ಗಳಿಕೆ ಮಾಡುವ ಯೋಜನೆ ಇದಾಗಿದೆ. 18 ವರ್ಷದಿಂದ 40 ವರ್ಷದೊಳಗಿನ ಯಾವುದೇ ವ್ಯಕ್ತಿ ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಅವಕಾಶ ಇದ್ದು ಕನಿಷ್ಠ 20 ವರ್ಷಗಳವರೆಗೆ ಈ ಯೋಜನೆಯಲ್ಲಿ ಹೂಡಿಕೆ ಮಾಡುವುದು ಕಡ್ಡಾಯವಾಗಿದೆ.

 

Image Source: Business League

 

advertisement

ಲಾಭವೇನು?

ಹಿರಿಯ ನಾಗರಿಕರಿಗೆ ಸಾಮಾಜಿಕ ಭದ್ರತಾ ವ್ಯವಸ್ಥೆಯನ್ನು ನೀಡಲು ಅಟಲ್ ಪಿಂಚಣಿ ಯೋಜನೆ (Atal Pension Scheme) ಯನ್ನು ಜಾರಿ ಮಾಡಲಾಗಿದ್ದು ಹಣವನ್ನು ಮಾಸಿಕ, ತ್ರೈಮಾಸಿಕ ಅಥವಾ ಅರ್ಧ ವಾರ್ಷಿಕ ಹೂಡಿಕೆಯ ಆಯ್ಕೆ ಮಾಡಬಹುದಾಗಿದ್ದು ಈ ಯೋಜನೆಯಲ್ಲಿ‌ ಆದಾಯ ತೆರಿಗೆಯ ಸೆಕ್ಷನ್ 80CCD ಅಡಿಯಲ್ಲಿ ತೆರಿಗೆ ವಿನಾಯಿತಿ ಇದೆ. ಖಾತೆ ದಾರನು 60 ವರ್ಷಗಳ ಮೊದಲು ಅಥವಾ ನಂತರ ಮರಣಹೊಂದಿದರೆ  ಪಿಂಚಣಿ ಮೊತ್ತವನ್ನು ನಾಮಿನಿಗೆ ನೀಡಲಾಗುತ್ತದೆ. ಇದಕ್ಕಾಗಿ, ಅರ್ಜಿದಾರರು ಬ್ಯಾಂಕ್ ಅಥವಾ ಅಂಚೆ ಕಚೇರಿಯಲ್ಲಿ ಉಳಿತಾಯ ಖಾತೆಯನ್ನು ಹೊಂದಿರಬೇಕು.

ಕೇವಲ 7 ರೂಪಾಯಿ ಹೂಡಿಕೆ ಮಾಡಿ:

ನೀವು ಕೇಂದ್ರ ಸರ್ಕಾರದ (Central Govt) ಈ ಯೋಜನೆಯ ಮೂಲಕ ದಿನಕ್ಕೆ ಏಳು ರೂ ಹೂಡಿಕೆ ಮಾಡಿದ್ರೆ ಸಾಕು. ಅಂದ್ರೆ ಪ್ರತಿ ತಿಂಗಳು ಕೇವಲ 210 ರೂಪಾಯಿ ಪಾವತಿಸಿದರೆ 60 ವರ್ಷಗಳ ನಂತರ ಪ್ರತಿ ತಿಂಗಳು 5,000 ರೂ. ಪಿಂಚಣಿ (Pension) ಸಿಗುತ್ತದೆ. ಪತಿ ಪತ್ನಿ ಜಂಟಿಯಾಗಿ ಮಾಡಿದ್ರೆ ಪ್ರತಿ ತಿಂಗಳು ರೂ 10,000 ಪಿಂಚಣಿ (Pension) ಪಡೆಯಬಹುದು.

advertisement

Leave A Reply

Your email address will not be published.