Karnataka Times
Trending Stories, Viral News, Gossips & Everything in Kannada

ICICI Bank: ICICI ಬ್ಯಾಂಕ್ ನಲ್ಲಿ ಹಣ ಇಟ್ಟ ಎಲ್ಲಾ ಗ್ರಾಹಕರಿಗೆ ಸೂಚನೆ, ಮೇ 1 ರಿಂದ ಈ ನಿಯಮ!

advertisement

ಇಂದು ಬ್ಯಾಂಕ್ ಗಳಲ್ಲಿ ಗ್ರಾಹಕರ ವಹಿವಾಟು ಗಳು ಹೆಚ್ಚಾಗಿದೆ.ಹಾಗಾಗಿ ಅರ್ ಬಿ ಐ ಕೂಡ ಗ್ರಾಹಕರ ಹಿತಾಸಕ್ತಿಯ ಮೇರೆಗೆ ಹಲವು ರೀತಿಯ ಹೊಸ ಹೊಸ ನಿಯಮಗಳನ್ನು ಜಾರಿಗೆ ತರುತ್ತಲೆ ಇರುತ್ತದೆ. ಗ್ರಾಹಕರ ಸುರಕ್ಷತೆ ಕಾಪಾಡುವ ನಿಟ್ಟಿನಲ್ಲಿ ಬದಲಾವಣೆ ಮಾಡುತ್ತ ಎಚ್ಚರಿಕೆ ಯ ನೋಟಿಸ್ ಗಳನ್ನು ಸಹ ಬ್ಯಾಂಕ್ ನೀಡುತ್ತ ಇರುತ್ತದೆ.

ಮೊನ್ನೆ ಯಷ್ಟೆ ಕೆಲವೊಂದು ಬ್ಯಾಂಕ್ ಗಳು ಗ್ರಾಹಕರಿಗೆ ಅನಧಿಕೃತ ವಾಗಿ ರವಾನೆಯಾಗುವ ಸಂದೇಶಗಳಿಗೆ ಪ್ರತಿಕ್ರಿಯೆ ನೀಡಬಾರದು ಎಂದು ಸೂಚನೆಯ ಎಚ್ಚರಿಕೆಯನ್ನು ನೀಡಿತ್ತು.‌ ಅದೇ ರೀತಿ‌ ದೇಶದ ಪ್ರಮುಖ ಖಾಸಗಿ ಬ್ಯಾಂಕ್‌ಗಳಲ್ಲಿ ಒಂದಾಗಿರುವ ಐಸಿಐಸಿಐ ಬ್ಯಾಂಕ್‌ (ICICI Bank) ಕೂಡ ಒಂದಾಗಿದ್ದು ಹೆಚ್ಚು ಖಾತೆ ದಾರರನ್ನು ಒಳಗೊಂಡಿದೆ.‌‌ ಇದೀಗ ಐಸಿಐಸಿಐ ಬ್ಯಾಂಕ್ ಹೊಸ ಸೂಚನೆ ನೀಡಿದೆ.

ಈ ಬಗ್ಗೆ ಗಮನ ವಹಿಸಿ:

ಇದೀಗ ಐಸಿಐಸಿಐ ಬ್ಯಾಂಕ್‌ (ICICI Bank ) ಬ್ಯಾಂಕ್ ತನ್ನ ಖಾತೆದಾರರಿಗೆ ಹಲವು ಹೊಸ ನಿಯಮಗಳನ್ನು ಜಾರಿಗೆ ತರಲು ಮುಂದಾಗಿದೆ. ಹಾಗಾಗಿ ಈ ಬ್ಯಾಂಕ್ ನಲ್ಲಿ ಖಾತೆಯನ್ನು ಹೊಂದಿರುವ ಗ್ರಾಹಕರು ಈ ಬಗ್ಗೆ ಗಮನ ವಹಿಸುವುದು ಬಹಳ ಮುಖ್ಯವಾಗುತ್ತದೆ. ಇದೀಗ ಗ್ರಾಹಕರ ಸೇವಾ ಶುಲ್ಕ, ಐಎಂಪಿಎಸ್ ವಹಿವಾಟು ಸೇರಿದಂತೆ ಹಲವು ನಿಯಮಗಳಲ್ಲಿ ಬದಲಾವಣೆ ಮಾಡಲಾಗಿದೆ.

ಮೇ 1 ರಿಂದ ಬದಲಾವಣೆ:

 

Image Source: Mint

 

ಐಸಿಐಸಿಐ ಬ್ಯಾಂಕ್‌ ಉಳಿತಾಯ ಖಾತೆಯ (ICICI Bank Saving Account) ಸೇವಾ ಶುಲ್ಕಗಳನ್ನು ನವೀಕರಣ ಮಾಡಿದ್ದ ಶುಲ್ಕಗಳಲ್ಲಿ ಬದಲಾವಣೆ ಆಗಲಿದ್ದು ಮೇ 1, 2024 ರಿಂದ ಹೊಸ ನಿಯಮಗಳು ಜಾರಿಗೆ ಬರಲಿದೆ.

ಈ ನಿಯಮ ಇರಲಿದೆ:

advertisement

ಶುಲ್ಕ ಬದಲಾವಣೆ:

ಡೆಬಿಟ್ ಕಾರ್ಡ್ (Debit Card) ಶುಲ್ಕ ಬದಲಾವಣೆ ಮಾಡಿದ್ದು ಸಾಮಾನ್ಯ ಸ್ಥಳಗಳಿಗೆ ರೂ 200 ಮತ್ತು ಗ್ರಾಮೀಣ ಸ್ಥಳಗಳಿಗೆ ರೂ 99 ಶುಲ್ಕ ವಿಧಿಸಲಾಗಿದೆ.

ನಗದು ವಹಿವಾಟು ಶುಲ್ಕಗಳಲ್ಲಿ:

ತಿಂಗಳಿಗೆ ಮೊದಲ 3 ಉಚಿತ ನಗದು ವಹಿವಾಟುಗಳ ನಂತರ ಪ್ರತಿ ವಹಿವಾಟಿಗೆ 150 ರೂ. ಮೊತ್ತ ಇರಲಿದ್ದು ತಿಂಗಳಿಗೆ 1 ಲಕ್ಷದ ಉಚಿತ ಮಿತಿಯನ್ನು ಮೀರಿ 1,000ಕ್ಕೆ ರೂ 5 ಹೀಗೆ ಏರಿಕೆ ಮಾಡಿದೆ,

ಇನ್ನು ಚೆಕ್‌ ಬುಕ್‌ ರೂಲ್ಸ್‌ ಬದಲಾವಣೆ ಮಾಡಿದ್ದು:

ವಾರ್ಷಿಕ ಮೊದಲ 25 ಚೆಕ್‌ಗಳಿಗೆ ಯಾವುದೇ ಶುಲ್ಕ ವಿಧಿಸುವುದಿಲ್ಲ‌ ಬಳಿಕ ಪ್ರತಿ ಚೆಕ್‌ಗೆ ರೂ 4 ವಿಧಿಸಲಿದ್ದು ವಹಿವಾಟಿನ ಮಿತಿ 25,000.ಆಗಿದೆ

ಗೃಹೇತರ ಶಾಖೆಗೆ ದಿನಕ್ಕೆ ರೂ 25,000 ಅಥವಾ ಹೆಚ್ಚಿನ ವಹಿವಾಟುಗಳಿಗೆ ರೂ 1,000ಕ್ಕೆ ರೂ 5 ಹೀಗೆ ಶುಲ್ಕ ವಿಧಿಸಲಿದೆ.

IMPS ಶುಲ್ಕ 1,000 ರೂ. ವರೆಗೆ: ಪ್ರತಿ ವಹಿವಾಟಿಗೆ ರೂ 2.50 ಮತ್ತು 1,001 ರೂ. ರಿಂದ ರೂ 25,000 ಪ್ರತಿ ವಹಿವಾಟಿಗೆ ರೂ 5 ಮತ್ತು 25,000 ರೂ. ರಿಂದ 5 ಲಕ್ಷಕ್ಕಿಂತ ಹೆಚ್ಚು ವಹಿವಾಟು ಗೆ ಪ್ರತಿ ವಹಿವಾಟಿಗೆ Rs15. ಹೀಗೆ ವಿಧಿಸಲಿದೆ.

advertisement

Leave A Reply

Your email address will not be published.