Karnataka Times
Trending Stories, Viral News, Gossips & Everything in Kannada

Arecanut Cultivation: ಅಡಿಕೆ ಸಸಿ ನೆಟ್ಟು 7-8 ವರ್ಷವಾದರೂ ಇನ್ನೂ ಇಳುವರಿ ಬಂದಿಲ್ಲ ಅಂದರೆ ಅದಕ್ಕೆ ಕಾರಣ ಏನು ಗೊತ್ತಾ?

advertisement

ಅಡಿಕೆ ಕೃಷಿ (Arecanut Cultivation) ಇಂದು ಒಳ್ಳೆಯ ಲಾಭದಾಯಕ ಬೆಳೆ ಎಂಬ ಮಾತಿದೆ‌. ಅಡಿಕೆ ಕೃಷಿ ಮಾಡಿ ಲಕ್ಷಾಂತರ ರೂಪಾಯಿ ಲಾಭ ಪಡೆಯಬಹುದು ಎಂದು ಕೆಲ ಅಗತ್ಯ ಮಾರ್ಗದರ್ಶನದ ಸಹಿತ ಸಸಿ ಹಾಕಿ ಪೋಷಣೆ ಮಾಡಿದರೂ ಎಲ್ಲರಿಗೂ ಏಕಕಾಲಕ್ಕೆ ಇಳುವರಿ ಬರುತ್ತದೆ ಎಂದು ಹೇಳಲಾಗದು. ಕೆಲವರಿಗೆ ಸಸಿ ಹಾಕಿ 2-3ವರ್ಷಕ್ಕೆ ಇಳುವರಿ ಆರಂಭ ಆದರೆ ಇನ್ನೂ ಕೆಲವರು ಅಡಿಕೆ ಸಸಿ (Arecanut Sapling) ಹಾಕಿ 7-8 ವರ್ಷಗಳ ಕಾಲ ಫಸಲಿಗಾಗಿ ಕಾದು ಕಂಗಾಲಾಗುತ್ತಿದ್ದಾರೆ. ಅಡಿಕೆ ಸಸಿಯಲ್ಲಿ ಇಳುವರಿ ಬರದೆ ಇರಲು ಕಾರಣ ಏನಿರಬಹುದು? ಎನ್ನುವ ಮಾಹಿತಿ ಇಲ್ಲಿದೆ

ಅಡಿಕೆಯನ್ನು (Arecanut) ರಾಜ್ಯದ ಅನೇಕ ಭಾಗದಲ್ಲಿ ನೆಟ್ಟು ಹಣ ಸಂಪಾದನೆ ಮಾಡುತ್ತಿದ್ದಾರೆ. ಮಣ್ಣಿನ ಫಲವತ್ತತೆ ಹಾಗೂ ಅಡಿಕೆ ಸಸಿಯ ಪೋಷಣೆ ಆಧಾರದ ಮೇಲೆ ಅಡಿಕೆಯಿಂದ ಸಿಗುವ ಇಳುವರಿ ಹೆಚ್ಚು ಕಮ್ಮಿ ಆಗುವ ಸಾಧ್ಯತೆ ಇರಲಿದೆ. ಅಧಿಕ ಇಳುವರಿಯ ನಿರೀಕ್ಷೆ ಮೇಲೆ ಅನೇಕ ಸಲ ರೈತರೇ ತಮ್ಮ ಕೃಷಿ ಭೂಮಿ ಮೇಲೆ ಅವೈಜ್ಞಾನಿಕ ಕ್ರಮ ಅನುಸರಿಸುತ್ತಾರೆ. ಇದು ಇಳುವರಿ ಕುಂಟಿತವಾಗಲು ಅಥವಾ ಬರದೇ ಇರುವ ಸಾಧ್ಯತೆ ಇದೆ.

ಮಣ್ಣಿನ ಜೀವಿಗಳು ಬೇಕು?

ಅನೇಕ ಕಡೆ ಅಡಿಕೆ ತೋಟದ (Arecanut Plantation) ಮಣ್ಣು ಬಹಳ ಗಡುಸಾಗಿರುವುದು ನಾವು ಕಾಣಬಹುದು ಅದಕ್ಕೆ ಮುಖ್ಯ ಕಾರಣ ಮಣ್ಣಿನಲ್ಲಿ ಎರೆಹುಳು ಹಾಗೂ ಇತರ ಸೂಕ್ಷ್ಮಾಣು ಜೀವಿಗಳು ಇಲ್ಲದಿರುವುದು ಎನ್ನಬಹುದು. ಸೂಕ್ಷ್ಮಾಣು ಜೀವಿಗಳು ಹೇರಳವಾಗಿ ಇರಬೇಕು ಎಂದು ಬಯಸುವುದಾದರೆ ಆ ಮಣ್ಣು ಪೋಷಕಾಂಶ ಯುಕ್ತವಾಗಿ ಇರಬೇಕು ಅದಕ್ಕೆ ರಾಸಾಯನಿಕ ಅತೀ ಹೆಚ್ಚು ಬಳಕೆ ಮಾಡಿದರೆ ಸೂಕ್ಷ್ಮಾಣು ಜೀವಿಗಳು ಸಾಯಲಿವೆ‌. ಈ ಬಗ್ಗೆ ಮೊದಲೇ ಗಮನಿಸುವುದು ಬಹಳ ಮುಖ್ಯ. ಹಾಗಾಗಿ ಸಾವಯವ ವಿಧಾನದ ಮೂಲಕ ಅಡಿಕೆ ತೋಟದ ನಿರ್ವಹಣೆ ಮಾಡಬೇಕು.

ರಾಸಾಯನಿಕ ಅಗತ್ಯವೇ?

 

Image Source: YouTube

 

advertisement

ಅಡಿಕೆ ತೋಟಕ್ಕೆ (Arecanut Cultivation) ಕೆಮಿಕಲ್ ಸಿಂಪಡಣೆ ಮಾಡುವವರು ಈಗಲಾದರೂ ಎಚ್ಚೆತ್ತುಕೊಳ್ಳಬೇಕು. ಕೆಮಿಕಲ್ ಅಥವಾ ಮಾರುಕಟ್ಟೆ ರಾಸಾಯನಿಕ ಗೊಬ್ಬರ ಹಾಕಿದರೆ ಅದು ಮಣ್ಣಿನ ಫಲವತ್ತತೆ ಕಸಿಯಲಿದೆ. ಇದರ ಬಳಕೆ ಹೇರಳವಾಗುತ್ತಿದ್ದಂತೆ ಅಡಿಕೆ ಗಿಡದ ಬೇರಿಗೆ ಬೇಕಾದ ಪೋಷಕಾಂಶ ಸಿಗದಾಗುತ್ತದೆ.

ಅಡಿಕೆ ತೋಟಕ್ಕೆ ರೋಗ ತಟ್ಟಬಾರದು ಎಂದು ಬಳಸುವ ರಾಸಾಯನಿಕಗಳೆ ನಿಮ್ನ ಇಳುವರಿ ಕುಂಟಿತ ಗೊಳಿಸಲಿದೆ ಹಾಗಾಗಿ ರಾಸಾಯನಿಕ ಮುಕ್ತ ಜೈವಿಕ ಸಾವಯವ ಗೊಬ್ಬರದ ಬಳಕೆ ಮಾಡುವುದು ಹೆಚ್ಚು ಸೂಕ್ತ.

ಸಾವಯವ ತ್ಯಾಜ್ಯ ಅಗತ್ಯ:

 

Image Source: The Hindu

 

ಮಣ್ಣಿನ ಉತ್ತಮ ಪೋಷಣೆ ಮಾಡಲು ಮೊದಲು ಸಾವಯವ ತ್ಯಾಜ್ಯವನ್ನು ಸೃಷ್ಟಿ ಮಾಡಬೇಕು. ಅಡಿಕೆ ಸಸಿಯ ಸುತ್ತ ಮುತ್ತಲು ಬೆಳೆಯುವ ಕಾಟು ಗಿಡಗಳನ್ನು ಗೊಬ್ಬರವಾಗಿ ಬಳಸಬೇಕು. ಇದರೊಂದಿಗೆ ಅಡಿಕೆ ತೋಟದಲ್ಲಿಯೇ ಸಮಗ್ರ ಕೃಷಿ ಮಾಡಿ ಅದರಿಂದ ಸಾವಯವ ಅಂಶವನ್ನು ಪೋಷಣೆ ಮಾಡಬೇಕು.

ಬಾಳೆ ಗಿಡ ಗುಂಪಾಗಿ ನೆಟ್ಟು ಅದರಿಂದ ಲಾಭ ಸಿಗಲಿದೆ. ಹಾಗೂ ಒಣ ಬಾಳೆ ಎಲೆ ಇತರ ಕಸ ಅಡಿಕೆ ಬುಡಕ್ಕೆ ಹಾಕಿದರೆ ಅದು ಸಹ ಪೋಷಣೆಯಾಗಲಿದೆ. ಸಾವಯವದಲ್ಲಿ ದ್ವಿದಳ ಧಾನ್ಯಗಳನ್ನು ನೆಟ್ಟು ಬಳಿಕ ಸಾವಯವ ಗೊಬ್ಬರ ಮಾಡಿದರೆ ಅಡಿಕೆ ಸಸಿ ಉತ್ತಮ ಫಸಲು ನೀಡಲಿದೆ.

advertisement

Leave A Reply

Your email address will not be published.