Karnataka Times
Trending Stories, Viral News, Gossips & Everything in Kannada

Electric Tractor: ಒಮ್ಮೆ ಸಂಪೂರ್ಣ ಚಾರ್ಜ್ ಹಾಕಿದರೆ 8 ಎಕರೆ ಹೊಲವನ್ನು ಬಿಡುವಿಲ್ಲದೆ ಉಳುಮೆ ಮಾಡಬಹುದು! ಕಡಿಮೆ ಬೆಲೆಯ ಟ್ರಾಕ್ಟರ್

advertisement

ರೈತಾಪಿ ವರ್ಗದವರಿಗೆ ಹೆಚ್ಚು ಉಪಯೋಗಕ್ಕೆ ಬರುವಂತ ಟ್ರ್ಯಾಕ್ಟರ್ ಒಂದನ್ನು ಮಾರುಕಟ್ಟೆಗೆ ತಂದಿದ್ದು, ಇದರಿಂದ ಎಲ್ಲಾ ರೈತರು ತಮ್ಮ ಡೀಸೆಲ್ ಹಣ (Diesel Amount) ವನ್ನು ಸಂಪೂರ್ಣ ಉಳಿಸಿ ಹೆಚ್ಚು ಲಾಭವನ್ನು ಗಳಿಸಬಹುದು.

ಹೌದು ಗೆಳೆಯರೇ ಭಾರತೀಯ ಆಟೋ ಮೊಬೈಲ್ ಮಾರುಕಟ್ಟೆಗೆ ಪರಿಚಯಿಸಿರುವಂತಹ AUTONXT X45H2 ಟ್ರಾಕ್ಟರ್ ಸಂಪೂರ್ಣ ಎಲೆಕ್ಟ್ರಿಕ್ ವಾಹನವಾಗಿದೆ ಒಮ್ಮೆ ಚಾರ್ಜ್ ಮಾಡಿ ಗಂಟೆಗಟ್ಟಲೆ ನಿಮ್ಮ ಹೊಲದ ಕೆಲಸವನ್ನು ಬಹಳ ಆರಂಭದಾಯಕವಾಗಿ ಮುಗಿಸಿಕೊಳ್ಳಬಹುದು. ಹಾಗಾದ್ರೆ ಈ ಟ್ರಾಕ್ಟರ್ನ ಬೆಲೆ ಎಷ್ಟು? ಡೀಸೆಲ್ ಚಾಲಿತ ಟ್ರ್ಯಾಕ್ಟರ್ನಂತ ವೈಶಿಷ್ಟ್ಯತೆಗಳನ್ನು ಹೊಂದಿದೆಯೇ? ಎಂಬ ಎಲ್ಲ ಸಂಪೂರ್ಣ ವಿವರವನ್ನು ಈ ಪುಟದ ಮುಖಾಂತರ ತಿಳಿದುಕೊಳ್ಳಿ.

AUTONXT X45H2 – ಅದ್ಭುತ ಬ್ಯಾಟರಿ ಬ್ಯಾಕಪ್:

 

Image Source: IndiaMART

 

ಆಟೋ ನೆಕ್ಸ್ಟ್ ಸಂಪೂರ್ಣ ಎಲೆಕ್ಟ್ರಿಕ್ ಬ್ಯಾಟರಿಯಲ್ಲಿ ತನ್ನ ಕಾರ್ಯ ನಿರ್ವಹಿಸಲಿದೆ ಹೀಗಾಗಿ ಟ್ರ್ಯಾಕ್ಟರ್ (Tractor) ತಯಾರಿಕಾ ಕಂಪನಿಯ ಅದ್ಭುತ ಶಕ್ತಿ ಉತ್ಪಾದಿಸುವಂತಹ ಬ್ಯಾಟರಿಯನ್ನು ವಾಹನದಲ್ಲಿ ಅಳವಡಿಕೆ ಮಾಡಿದ್ದಾರೆ. AUTONXT X45H2 ನಲ್ಲಿ 32 kw ಶಕ್ತಿ ತುಂಬಿರುವಂತಹ ಬ್ಯಾಟರಿಯನ್ನು ಅಳವಡಿಕೆ ಮಾಡಲಾಗಿದ್ದು ಇದು ಬರೋಬ್ಬರಿ 45 HP ಇಂಧನದ ಶಕ್ತಿ (Engine Power) ಉತ್ಪಾದಿಸುತ್ತದೆ.‌

advertisement

ಸಂಪೂರ್ಣ ಚಾರ್ಜಾಗಲು ಬರೋಬ್ಬರಿ 8 ಗಂಟೆಗಳ ಕಾಲಾವಧಿಯನ್ನು ತೆಗೆದುಕೊಳ್ಳುವ ಈ ಎಲೆಕ್ಟ್ರಿಕ್ ಟ್ರ್ಯಾಕ್ಟರನ್ನು (Electric Tractor) ಒಮ್ಮೆ ಸಂಪೂರ್ಣ ಚಾರ್ಜ್ ಆದ ನಂತರ ಎಂಟು ಎಕ್ಕರೆ ಹೊಲವನ್ನು ಸುಲಭವಾಗಿ ಹೂಳಬಹುದು.

ವೈಶಿಷ್ಟ್ಯತೆಗಳು:

 

Image Source: cimetieresoublies.com

 

  • AUTONXT X45H2 ಆಟೋಮೆಟಿಕ್ ಗೇರ್ ಬಾಕ್ಸ್ ಸಿಸ್ಟಮ್ (Automatic Gearbox System) ಅನ್ನು ಅಳವಡಿಕೆ ಮಾಡಿರುವುದರಿಂದ ರೈತರಿಗೆ ಹೊಲದಲ್ಲಿ ಕೆಲಸ ಮಾಡುವುದು ಬಹಳ ಸುಲಭದಾಯಕವಾಗಿರುತ್ತದೆ.
  • ಅತ್ಯುತ್ತಮ ಫಾರ್ವರ್ಡ್ ಸ್ಪೀಡ್ ಟೆಕ್ನಾಲಜಿಯನ್ನು (Forward Speed Technology) ಇದರಲ್ಲಿ ಅಳವಡಿಸಿದ್ದಾರೆ.
  • ಭಾರತದಲ್ಲಿ ತಯಾರಾದ ಮೋಟರ್ರನ್ನು ಉಪಯೋಗಿಸಲಾಗಿದೆ.
  • ಆಟೋ ನೆಕ್ಸ್ಟ್ ನಲ್ಲಿ ಅತ್ಯುತ್ತಮ ಲಿಫ್ಟಿಂಗ್ ಕೆಪ್ಯಾಸಿಟಿ (Lifting Capacity) ಇದ್ದು, ಇದರಿಂದ ಸುಮಾರು 1800 ಕೆಜಿ ಭಾರವನ್ನು ಸುಲಭವಾಗಿ ಎತ್ತಿ ಬೇರಡೆಗೆ ವರ್ಗಾಯಿಸಬಹುದು.
  • ಅಷ್ಟೇ ಅಲ್ಲದೆ ಕ್ರಾಪ್ ಹೆಲ್ತ್ ಅನಾಲಿಸಿಸ್ (Crop Health Analysis) ನಂತಹ ಸ್ಮಾರ್ಟ್ ಫೀಚರ್ಸ್ (Smart Features) ಗಳನ್ನು ಅಳವಳಿಕೆ ಮಾಡಲಾಗಿದೆ, ಇದರಿಂದ ರೈತರಿಗೆ ತಾವು ಬೆಳೆದಿರುವಂತಹ ಬೆಳೆಯ ಗುಣಮಟ್ಟ ಹಾಗೂ ಆರೋಗ್ಯದ ಕುರಿತಾದ ಮಾಹಿತಿ ದೊರಕುತ್ತದೆ.

ರೈತರ ಕೈಗೆಟಕುವ ಬೆಲೆಯಲ್ಲಿ ಲಭ್ಯವಿದೆ AUTO NXT X45H2:

ಸ್ನೇಹಿತರೆ AUTO NXT X45H2 ಟ್ರ್ಯಾಕ್ಟರ್ನ ಬೆಲೆಯು ರೈತಾಪಿ ವರ್ಗದವರ ಬಜೆಟ್ ನಲ್ಲಿ ದೊರಕುವಂತಿದ್ದು, ಈ ಕುರಿತಾದಂತಹ ಮಾಹಿತಿಯನ್ನು ಕಂಪನಿ ಗುಟ್ಟಾಗಿರಿಸಿದ್ದು ನೀವೇನಾದರೂ ಈ ಅತ್ಯುತ್ತಮ ವೈಶಿಷ್ಟ್ಯತೆಗಳನ್ನು ಒಳಗೊಂಡಿರುವ ಟ್ರ್ಯಾಕ್ಟರ್ ಬೆಲೆ ಸುಮಾರು 7 ಲಕ್ಷದೊಳಗೆ. ಇರಲಿದೆ ಎನ್ನಲಾಗಿದೆ

advertisement

Leave A Reply

Your email address will not be published.