Karnataka Times
Trending Stories, Viral News, Gossips & Everything in Kannada

UPI Daily Limit: ಯುಪಿಐ ಮೂಲಕ ದಿನದಲ್ಲಿ ಎಷ್ಟು ಹಣ ಕಳುಹಿಸಬಹುದು ಗೊತ್ತ?

advertisement

ನಾವು ಇಂದು ಪ್ರತಿಯೊಂದು ಕೆಲಸಕ್ಕೂ ಮೊಬೈಲ್ ಅನ್ನು ಅವಲಂಬಿಸಿದ್ದೇವೆ. ಅದರಲ್ಲೂ ಯಾವುದೇ ರೀತಿಯ ಹಣಕಾಸಿನ ವ್ಯವಹಾರಕ್ಕೆ ಮೊಬೈಲ್ ಬಹಳ ಪ್ರಯೋಜನಕಾರಿಯಾಗಿದೆ ಎನ್ನಬಹುದು. ಯಾಕಂದ್ರೆ ಈಗ ಸುಲಭವಾಗಿ ಯಾವುದೇ ಬ್ಯಾಂಕ್ ಗೆ ಹೋಗದೆ, ಡಿಜಿಟಲ್ ಪಾವತಿಯ ಮೂಲಕ ನಮ್ಮ ಪೇಮೆಂಟ್ ವ್ಯವಹಾರವನ್ನು ಕೂಡ ನಡೆಸಿಕೊಳ್ಳಬಹುದು. ಯಾವುದೇ ವಸ್ತುವನ್ನು ಖರೀದಿಸಿದರೆ ಪೇಮೆಂಟ್ ಮಾಡುವುದೇ ಆಗಿರಬಹುದು ಅಥವಾ ಯಾವುದೇ ವ್ಯಕ್ತಿಯ ಖಾತೆಗೆ ನೇರವಾಗಿ ಹಣವನ್ನು ಪಾವತಿ ಮಾಡುವುದೇ ಆಗಿರಬಹುದು. ಎಲ್ಲದಕ್ಕೂ ಕೂಡ ಯುಪಿಐ ಮೂಲಕ ಪೇಮೆಂಟ್ ಮಾಡುತ್ತೇವೆ.

ಇತ್ತೀಚಿನ ದಿನಗಳಲ್ಲಿ ಹಣ ವರ್ಗಾವಣೆಗೆ ಬ್ಯಾಂಕ್ ಗಳಿಗೆ ಹೋಗುವ ಅಗತ್ಯವೇ ಇಲ್ಲ. ನೆಟ್ ಬ್ಯಾಂಕಿಂಗ್ ಬಳಸಿ ಯುಪಿಐ (UPI) ಮೂಲಕ ಸುಲಭವಾಗಿ ಪೇಮೆಂಟ್ ಮಾಡಬಹುದು. ಸಣ್ಣಪುಟ್ಟ ಅಂಗಡಿಯಿಂದ ಹಿಡಿದು ದೊಡ್ಡ ಹಣಕಾಸಿನ ವ್ಯವಹಾರವನ್ನು ಕೂಡ UPI ಮೂಲಕ ಮಾಡಲು ಅವಕಾಶ ಇದೆ.

ಯುಪಿಐ ವಹಿವಾಟಿನ ದೈನಂದಿನ ಮಿತಿ ಎಷ್ಟು?

 

 

advertisement

ನಮ್ಮ ದೇಶದಲ್ಲಿ Google Pay, Phone Pe, Amazon Pay ಮೊದಲಾದ ಅಪ್ಲಿಕೇಶನ್ ಗಳ ಮೂಲಕ ಪೇಮೆಂಟ್ ಮಾಡಿಕೊಳ್ಳಬಹುದು. ಇನ್ನು UPI Payment ಗಾಗಿ ನಾವು ಬೇರೆ ಬೇರೆ ಅಪ್ಲಿಕೇಶನ್ ಬಳಸುತ್ತೇವೆ. ಈ ಅಪ್ಲಿಕೇಶನ್ ಗಳಲ್ಲಿ ಎಷ್ಟು ಹಣವನ್ನು ದಿನಕ್ಕೆ ಕಳುಹಿಸಬಹುದು ಎನ್ನುವುದಕ್ಕೆ ಮಿತಿ ಕೂಡ ಇದೆ.

ಸಾಮಾನ್ಯವಾಗಿ ಒಂದು ಅಪ್ಲಿಕೇಶನ್ ನಿಂದ ಒಂದು ಲಕ್ಷ ರೂಪಾಯಿಗಳವರೆಗೆ ಒಂದು ದಿನಕ್ಕೆ ವಹಿವಾಟು ನಡೆಸಬಹುದು. ಹಾಗಂತ ಮಾತ್ರಕ್ಕೆ ನಿಮ್ಮ ಬಳಿ ಎರಡು UPI ಪೇಮೆಂಟ್ ಅಪ್ಲಿಕೇಶನ್ ಇದ್ದು, ಒಂದೊಂದು ಅಪ್ಲಿಕೇಶನ್ಗಳಲ್ಲಿ ಒಂದೊಂದು ಲಕ್ಷ ರೂಪಾಯಿಗಳ ವ್ಯವಹಾರ ಮಾಡುತ್ತೇವೆ ಎಂದರೆ ಅದು ಸಾಧ್ಯವಿಲ್ಲ. ಒಟ್ಟಾರೆಯಾಗಿ ನಿಮ್ಮ ಹಣಕಾಸಿನ ಮಿತಿ ಒಂದು ದಿನಕ್ಕೆ ಒಂದು ಲಕ್ಷ ರೂಪಾಯಿ ಆಗಿರುತ್ತದೆ.

ಭಾರತದಲ್ಲಿ UPI ಹೆಚ್ಚು ಮುಂಚೂಣಿಯಲ್ಲಿದೆ!

ದೇಶದಲ್ಲಿ 2016 ರಿಂದ UPI Payment ವ್ಯವಸ್ಥೆ ಚಾಲ್ತಿಯಲ್ಲಿ ಇದೆ. ಭಾರತವನ್ನು ಹೊರತುಪಡಿಸಿ ಯುಎಇ, ಸಿಂಗಾಪುರ್, ನೇಪಾಳ, ಶ್ರೀಲಂಕಾ, ಓಮನ್, ಕತಾರ್, ರಷ್ಯಾ, ಭೂತಾನ್ ಹಾಗೂ ಮೋರಿಷಸ್ ನಂತಹ ದೇಶಗಳಲ್ಲಿಯೂ ಕೂಡ ಯುಪಿಐ ವ್ಯವಸ್ಥೆ ಇದೆ. ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಯುಪಿಐ ಅನ್ನು ನಿಯಂತ್ರಿಸುತ್ತದೆ. ಒಂದು ಅಂಕಿ ಅಂಶದ ಪ್ರಕಾರ 2022ರಲ್ಲಿ ಭಾರತದಲ್ಲಿ ಯುಪಿಐ ಮೂಲಕ ಆಗಿರುವ ವಹಿವಾಟು ಸುಮಾರು $1.53 ಟ್ರಿಲಿಯನ್ ಎಂದರೆ ಭಾರತದಲ್ಲಿ ಯುಪಿಐ ವ್ಯವಸ್ಥೆ ಎಷ್ಟು ಮುಂಚೂಣಿಯಲ್ಲಿದೆ ಎಂಬುದನ್ನು ನೀವೇ ಅರ್ಥ ಮಾಡಿಕೊಳ್ಳಿ.

advertisement

Leave A Reply

Your email address will not be published.