Karnataka Times
Trending Stories, Viral News, Gossips & Everything in Kannada

UPI Payment: ಇಂಟರ್ನೆಟ್ ಇಲ್ಲದಿದ್ದರೂ UPI ಪೇಮೆಂಟ್ ಮಾಡಬಹುದು, ಈ ಒಂದು ಕಂಡೀಷನ್ ಅಪ್ಲೈ!

advertisement

ಇದು ಡಿಜಿಟಲ್ ಇಂಡಿಯಾ! ನಾವು ಇಂಟರ್ನೆಟ್ ಒಂದು ಇದ್ರೆ ಸಾಕು ಸ್ಮಾರ್ಟ್ಫೋನ್ ಮೂಲಕವೇ ಎಲ್ಲಾ ವ್ಯವಹಾರಗಳನ್ನು ಎಲ್ಲಾ ಹಣಕಾಸಿನ ಪೇಮೆಂಟ್ ಗಳನ್ನು ಮಾಡಿ ಮುಗಿಸುತ್ತೇವೆ. ಈಗ ಮೊದಲಿನಂತೆ ಬ್ಯಾಂಕುಗಳಿಗೆ ಅಲೆದಾಡುವ ಪರಿಸ್ಥಿತಿ ಇಲ್ಲ. ಯಾವುದೇ ಸಣ್ಣ ಪೆಮೆಂಟ್ (Small Payment) ಇರಲಿ ಅಥವಾ ದೊಡ್ಡ ಪೇಮೆಂಟ್ (Big Payment) ಆಗಿರಲಿ ಕ್ಷಣಮಾತ್ರದಲ್ಲಿ ಕುಳಿತಲಿಂದಲೇ ಪೇಮೆಂಟ್ ಮಾಡಿ ಮುಗಿಸಬಹುದು ಅದಕ್ಕೆ ಸರಿಯಾಗಿ ಯುಪಿಐ (UPI) ಕೂಡ ಸುಲಭವಾಗಿ ಪೇಮೆಂಟ್ ಮಾಡುವ ಅವಕಾಶ ಮಾಡಿಕೊಟ್ಟಿದೆ.

ಇಷ್ಟೆಲ್ಲ ಇದ್ದರೂ ಕೆಲವೊಮ್ಮೆ ಕಷ್ಟ ಎದುರಿಸಬೇಕಾಗುತ್ತದೆ ನೋಡಿ. ಅರ್ಜೆಂಟ್ ಪೇಮೆಂಟ್ (Urgent Payment) ಮಾಡಬೇಕು ಎಂದುಕೊಂಡಾಗ ನೆಟ್ವರ್ಕ್ ಸರಿಯಾಗಿ ಸಿಗದೇ ಇರಬಹುದು ಅಥವಾ ನೆಟ್ವರ್ಕ್ ಇಲ್ಲದೆ ಇರಬಹುದು ಇಂತಹ ಸಂದರ್ಭದಲ್ಲಿ ಪೇಮೆಂಟ್ ಮಾಡಲು ಸಾಧ್ಯವಿಲ್ಲ ಎಂದು ಎಲ್ಲರೂ ಬೇಸರ ವ್ಯಕ್ತಪಡಿಸುತ್ತಾರೆ ಆದರೆ ಇನ್ನು ಮುಂದೆ ನೀವು ಈ ಚಿಂತೆಯನ್ನು ಬಿಟ್ಟುಬಿಡಿ ಆನ್ಲೈನಲ್ಲಿ ಮಾತ್ರವಲ್ಲ ಆಫ್ ಲೈನ್ (Offline) ಮೂಲಕ ಕೂಡ ಪೇಮೆಂಟ್ ಮಾಡಿಕೊಳ್ಳಲು ಸಾಧ್ಯವಿದೆ.

ಆಫ್ ಲೈನ್ ಮೂಲಕವೇ ಮಾಡಿ UPI Payment:

 

 

National Payment Corporation of India:

advertisement

NPCI ಇದೀಗ ಆನ್ಲೈನ್ ಮೂಲಕ ಮಾತ್ರವಲ್ಲದೆ ಆಫ್ಲೈನ್ ಮೂಲಕವೂ ಹಣ ಪಾವತಿ ಮಾಡಲು ಅವಕಾಶ ಮಾಡಿಕೊಟ್ಟಿದೆ. ಇನ್ನು ಮುಂದೆ ಇಂಟರ್ನೆಟ್ ಮಾತ್ರವಲ್ಲ ನಿಮ್ಮ ಬಳಿ ಸ್ಮಾರ್ಟ್ ಫೋನ್ ಇಲ್ದೆ ಇದ್ದರೂ ನೀವು ಪೇಮೆಂಟ್ (UPI Payment) ಮಾಡಬಹುದು. ಇದಕ್ಕಾಗಿ ನಿಮಗೆ ಬೇಕಾಗಿರುವುದು ಕೀಪ್ಯಾಡ್ ಮೊಬೈಲ್ ಹಾಗೂ ನಿಮ್ಮ ಮೊಬೈಲ್ ಸಂಖ್ಯೆಗೆ ಬ್ಯಾಂಕ್ ಖಾತೆ ಲಿಂಕ್ ಆಗಿರಬೇಕು.

ಆಫ್ಲೈನ್ ಮೂಲಕ ಪೇಮೆಂಟ್ ಮಾಡುವುದು ಹೇಗೆ?

  • ಮೊದಲು ನಿಮ್ಮ ಮೊಬೈಲ್ ಕೈಗೆತ್ತಿಕೊಳ್ಳಿ SMS ವಿಭಾಗದಲ್ಲಿ *99# ಸಂಖ್ಯೆಗೆ ಡಯಲ್ ಮಾಡಿ.
  • ಈಗ ಅದು ಹೇಳುತ್ತಾ ಹೋಗುವ ಇನ್ಸ್ಟ್ರಕ್ಷನ್ ನೀವು ಫಾಲೋ ಮಾಡಬೇಕು ಮೊದಲು ಒಂದನ್ನು ಒತ್ತಿ. ಹಣ ಕಳುಹಿಸು ಎನ್ನುವ ಆಯ್ಕೆ ಮಾಡಬೇಕು.
  • ಬಳಿಕ ನೀವು ಯಾರ ಖಾತೆಗೆ ಹಣವನ್ನು ಹಾಕಬೇಕು ಅವರ UPI ID ಯನ್ನು ನಮೂದಿಸಬೇಕು ಇಲ್ಲಿ ಬೇಕಿದ್ದರೆ ನೀವು ನಿಮ್ಮ ಮೊಬೈಲ್ ಸಂಖ್ಯೆ ಕೂಡ ಹಾಕಬಹುದು.
  • ಈಗ ನೀವು ಎಷ್ಟು ಪೇಮೆಂಟ್ ಮಾಡಬೇಕು ಎನ್ನುವ ಮೊತ್ತವನ್ನು ಟೈಪ್ ಮಾಡಬೇಕು. ಆದರೆ ಐದು ಸಾವಿರಕ್ಕಿಂತ ಕಡಿಮೆ ಹಣವನ್ನು ಮಾತ್ರ ಆಫ್ಲೈನ್ ನಲ್ಲಿ ಕಳುಹಿಸಲಾಗುತ್ತದೆ ಎಂಬುದನ್ನು ನೆನಪಿಡಿ.
  • ಕೊನೆಯಲ್ಲಿ ನಿಮ್ಮ ಯುಪಿಐ ಪಿನ್ ಸಂಖ್ಯೆಯನ್ನು ಹಾಕಿದ್ರೆ ಪೇಮೆಂಟ್ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ ನೀವು ಯಾರಿಗೆ ಹಣ ಪೇಮೆಂಟ್ ಮಾಡಬೇಕಿತ್ತು ಅವರಿಗೆ ಹಣ ಸಂದಾಯವಾಗಿರುತ್ತದೆ.

ನೀವು ಹೀಗೆ ಹಣ ವರ್ಗಾವಣೆಯನ್ನು ಆಫ್ಲೈನ್ ಮೂಲಕ ಮಾಡುವುದಕ್ಕೂ ಮೊದಲು ನಿಮ್ಮ ಯುಪಿಐ ಪೇಮೆಂಟ್ (UPI Payment) ಐಡಿಯಲ್ಲಿ ಆಫ್ಲೈನ್ ಮೋಡ್ ಸೆಟ್ ಮಾಡಿಕೊಳ್ಳಬೇಕು. ಇದನ್ನು ನೀವು ಆನ್ಲೈನ್ ನಲ್ಲಿ ಮಾಡಿಕೊಳ್ಳಬೇಕು.

99# ಈ ಸಂಖ್ಯೆಗೆ ಡಯಲ್ ಮಾಡಿ ಭಾಷೆಯನ್ನು ಆಯ್ದುಕೊಳ್ಳಿ ನಂತರ ಅಲ್ಲಿ ಕೇಳಲಾಗುವ ಎಲ್ಲ ಮಾಹಿತಿಯನ್ನು ಒದಗಿಸಬೇಕು ನಿಮ್ಮ ಬ್ಯಾಂಕ್ ನ IFSC Code ನಮೂದಿಸಬೇಕಾಗುತ್ತದೆ. ಬ್ಯಾಂಕ್ ಖಾತೆಗೆ ಲಿಂಕ್ ಮಾಡಲು ಒಂದು ಅಥವಾ ಎರಡನ್ನು ಪ್ರೆಸ್ ಮಾಡಿ ಎನ್ನುವ ಆಯ್ಕೆಯನ್ನು ಮಾಡಬೇಕು. ನಂತರ 6 ಸಂಖ್ಯೆಗಳಿರುವ ನಿಮ್ಮ ಡೆಬಿಟ್ ಕಾರ್ಡ್ (Debit Card) ಸಂಖ್ಯೆಯನ್ನು ನಮೂದಿಸಬೇಕು. ಡೆಬಿಟ್ ಕಾರ್ಡ್ ಮುಕ್ತಾಯದ ದಿನವನ್ನು ನಮೂದಿಸಬೇಕು. ಈಗ ನಿಮ್ಮ ಆಫ್ಲೈನ್ ವಹಿವಾಟು ಸಕ್ರಿಯಗೊಳ್ಳುತ್ತದೆ. ಇದಾದ ಬಳಿಕ ನೀವು ಎಲ್ಲಿಗೆ ಬೇಕಾದರೂ ಇಂಟರ್ನೆಟ್ ಇಲ್ಲದೆ ಆಫ್ಲೈನ್ ಮೂಲಕ ರೂಪಾಯಿ 5,000 ಒಳಗೆ ಪೇಮೆಂಟ್ ಮಾಡಿಕೊಳ್ಳಲು ಸಾಧ್ಯವಿದೆ.

advertisement

Leave A Reply

Your email address will not be published.