Karnataka Times
Trending Stories, Viral News, Gossips & Everything in Kannada

MG Comet EV: 230Km ರೇಂಜ್ ಕೊಡುವ ಈ ಎಲೆಕ್ಟ್ರಿಕ್ ಕಾರಿನ ಮೇಲೆ 65,000 ರೂ ರಿಯಾಯಿತಿ, ಖರೀದಿಯ ಸಂಖ್ಯೆಯು ಹೆಚ್ಚಳ!

advertisement

ಇಂದು ಕಾರು ಖರೀದಿ ಮಾಡುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳ ವಾಗಿದೆ. ಅದರಲ್ಲೂ ಯುವಕರಿಗಂತೂ ಕಾರು ಖರೀದಿ ಮಾಡುವ ಕ್ರೇಜ್ ಹೆಚ್ಚು. ಇದೀಗ ಎಲೆಕ್ಟ್ರಿಕ್ ವಾಹನಗಳನ್ನು ಖರೀದಿ ಮಾಡುವ ಸಂಖ್ಯೆ ಯು ಹೆಚ್ಚಾಗಿದ್ದು ಇದರ ಬೇಡಿಕೆ ಸಹ ಹೆಚ್ಚಾಗಿದೆ. ಎಲೆಕ್ಟ್ರಿಕ್ ವಾಹನ (Electric Vehicle) ಕ್ಷೇತ್ರದಲ್ಲಿ ಪ್ರತಿ ದಿನ ಬಹಳಷ್ಟು ಆವಿಷ್ಕಾರ ಹೆಚ್ಚುತ್ತಿದ್ದು ಸುಸಜ್ಜಿತ ತಂತ್ರಜ್ಞಾನ ಬಳಕೆ ಮಾಡಲಾಗುತ್ತಿದೆ. ಇದರ ಪರಿಣಾಮ ಉತ್ತಮ ಮೈಲೇಜ್ ಹಾಗೂ ಸುಲಭ ಚಾರ್ಜಿಂಗ್ ವ್ಯವಸ್ಥೆ ಯು ಲಭ್ಯವಾಗುತ್ತಿದೆ. ಪೆಟ್ರೋಲ್ (Petrol) ಮತ್ತು ಡೀಸೆಲ್‌ (Diesel) ವಾಹನಗಳಿಗೆ ಹೋಲಿಸಿದರೆ ಎಲೆಕ್ಟ್ರಿಕ್‌ ವಾಹನಗಳನ್ನು ಖರೀದಿ ಮಾಡಲು ಹೆಚ್ಚು ಲಾಭದಾಯಕವೇ ಆಗಿದೆ. ಇನ್ನು‌ ಪರಿಸರ ಸಂರಕ್ಷಣೆ ಯೊಂದಿಗೆ ‌ಕಡಿಮೆ ಬೆಲೆಯಲ್ಲಿಯು ಖರೀದಿ‌ಮಾಡಬಹುದು.

ಯಾವ ಕಾರು?

 

 

ಇಂದು ಎಲೆಕ್ಟ್ರಿಕ್ ಕಾರು (Electric Car) ಗಳ ಬೆಲೆಯು ಅಧಿಕ ವಾಗಿದ್ದು ಪ್ರಸ್ತುತ, ದೇಶದಲ್ಲಿ ಅತ್ಯಂತ ಕೈಗೆಟುಕುವ ಎಲೆಕ್ಟ್ರಿಕ್ ಕಾರು MG Comet EV ಖರೀದಿ ಮಾಡಲು ಲಭ್ಯವಿದೆ. ಈ ಕಾರು 4 ಆಕರ್ಷಕ ಬಣ್ಣಗಳಲ್ಲಿ ಲಭ್ಯವಿದ್ದು ಇತರ ಕಾರು ಗಳೊಂದಿಗೆ ಸ್ಪರ್ಧೆ ನೀಡಲಿದೆ.

advertisement

ಖರೀದಿಯಲ್ಲೂ ಹೆಚ್ಚಳ

ಇಂದು ಈ ಕಂಪನಿಯ ಖರೀದಿ ಸಂಖ್ಯೆ ಹೆಚ್ಚಳ ವಾಗಿದೆ, ಇದೀಗ MG Comet EV ಖರೀದಿಯ ಮೇಲೆ ಸುಮಾರು‌ 65,000 ರೂ. ರಿಯಾಯಿತಿಯನ್ನು ಘೋಷಣೆ ಮಾಡಿದ್ದು ಕಾರು ಪ್ರೀಯರಿಗೆ ಖುಷಿ ಸುದ್ದಿ ಸಿಕ್ಕಿದೆ. ಇದರ ಬೆಲೆ ರೂ. 7.98 ಲಕ್ಷದಿಂದ ಆರಂಭವಾಗಿ ರೂ. 10.63 ಲಕ್ಷದವರೆಗೆ ಇರುತ್ತದೆ.

ಪೀಚರ್ಸ್ ಹೇಗಿದೆ?

ಈ ಕಾರು ನೋಡಲು ಕೂಡ ಬಹಳ ಆಕರ್ಷಕವಾಗಿದ್ದು ಇದು 10.25-ಇಂಚಿನ ಟಚ್ ಸ್ಕ್ರೀನ್, ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್‌ (Steering Mounted Control) ಗಳನ್ನು ‌ಹೊಂದಿದೆ. ಡ್ರೈವ್ ಮಾಡಲು ಸಹ ಆರಾಮದಾಯಕ ಅನುಭವ ವನ್ನು ನೀಡಿದೆ. ಇದರಲ್ಲಿ‌ ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು (Dual Front Air Bag), ಸೆನ್ಸಾರ್‌ನಂತಹ ವೈಶಿಷ್ಟ್ಯಗಳು ಕೂಡ ಇದೆ. ಇದು ಬ್ಯಾಟರಿಯನ್ನು ಶೇ 100 ರಷ್ಟು ಚಾರ್ಜ್ ಮಾಡಲು 7 ಗಂಟೆಗಳನ್ನು ತೆಗೆದುಕೊಂಡು ಹೆಚ್ಚಿನ ಬ್ಯಾಟರಿ ಪ್ಯಾಕ್ ಆಫ್ (Battery Backup) ನೀಡುತ್ತದೆ. ಅದೇ ರೀತಿ 17.3kWh ಪ್ಯಾಕ್‌ನೊಂದಿಗೆ ಒಮ್ಮೆ ಚಾರ್ಜ್ ಮಾಡಿದ್ರೆ 230 ಕಿ.ಮೀಗಳ ಡ್ರೈವ್ ಶ್ರೇಣಿಯನ್ನು ನೀಡುತ್ತದೆ.ಇದು ಮನೆಯಲ್ಲೇ ಸುಲಭವಾಗಿ ಲಭ್ಯವಿರುವ ಸಾಕೆಟ್ ಮೂಲಕ ಚಾರ್ಜ್ ಮಾಡುವ ಅವಕಾಶವು ಇದ್ದು ಇದರ ಖರೀದಿ‌ ಪ್ರಮಾಣ ಮತ್ತಷ್ಟು ಹೆಚ್ಚಾಗಬಹುದು.

advertisement

Leave A Reply

Your email address will not be published.